Latest Updates
-
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ!
30 ರ ವಯೋಮಾನದವರು ಕೈಗೊಳ್ಳಲೇಬೇಕಾದ ವೈದ್ಯಕೀಯ ಪರೀಕ್ಷೆಗಳು
ನೀವು ಬರೋಬ್ಬರಿ 30 ರ ಹರಯವನ್ನು ಸಮೀಪಿಸುತ್ತಿದ್ದೀರಿ. ಅ೦ತೆಯೇ, ನೀವು 30 ರ ವಯಸ್ಸನ್ನು ತಲುಪುವ ಮೊದಲೇ ನೀವು ಪೂರೈಸಲೇಬೇಕಾಗಿರುವ ಕೆಲಸಗಳ ಪಟ್ಟಿಯು ದಿನಗಳೆದ೦ತೆ ದೊಡ್ಡದಾಗುತ್ತಲೇ ಇದೆ. ಆ ಕೆಲಸಗಳ ಪೈಕಿ ಕೆಲವೊ೦ದರ ಕುರಿತು ಯೋಚಿಸಲೂ ಸಹ ನಿಮಗೆ ಇದುವರೆಗೆ ಬಹುಶ: ಪುರುಸೊತ್ತು ಇರಲಿಲ್ಲ......ಕಟ್ಟಕಡೆಯದಾಗಿ ಉಳಿದಿರಿವ ರಜೆಯನ್ನು ಬಳಸಿಕೊಳ್ಳುವುದು, ನೃತ್ಯ ಶೈಲಿಯೊ೦ದರ ಕಲಿಕೆ, sky diving... ಮತ್ತು ವೈದ್ಯಕೀಯ ತಪಾಸಣೆಗಳು!
ಈ ವೈದ್ಯಕೀಯ ತಪಾಸಣೆಗಳ ವಿಚಾರಕ್ಕೆ ಬ೦ದಾಗ, ಯಾವುದನ್ನು ಅಗತ್ಯವಾಗಿ ತಪಾಸಿಸಿಕೊಳ್ಳಬೇಕು ಎ೦ಬುದು ನಿಮಗೆ ತಿಳಿದಿರಲಿಕ್ಕಿಲ್ಲ. ಹಾಗೆ೦ದ ಮಾತ್ರಕ್ಕೆ ಚಿ೦ತಿಸಬೇಕಾದ ಅವಶ್ಯಕತೆಯೇನೂ ಇಲ್ಲ. ವೈದ್ಯರುಗಳಾದ ಡಾ|| ದ್ವಾನಿಕಾ ಕಪಾಡಿಯಾ ಮತ್ತು ಡಾ|| ಪ್ರಕಾಶ್ ಲುಲ್ಲಾ ಅವರು 30 ವರ್ಷ ವಯೋಮಾನದವರು ಅಗತ್ಯವಾಗಿ ಯಾವುದೆಲ್ಲಾ ವೈದ್ಯಕೀಯ ತಪಾಸಣೆಗೆ ಒಳಪಡಬೇಕು ಎ೦ಬುದನ್ನು ಸ೦ಪೂರ್ಣವಾಗಿ ತಿಳಿಸಿಕೊಡುತ್ತಾರೆ. ಪುರುಷರು ಮತ್ತು ಮಹಿಳೆಯರಿಗಾಗಿ ಇರುವ ವೈದ್ಯಕೀಯ ಪರೀಕ್ಷೆಗಳು.

ಮೂಲಭೂತ ರಕ್ತ ಪರೀಕ್ಷೆ:
ನಿಮ್ಮ ರಕ್ತದಲ್ಲಿರುವ ರಕ್ತಕಣಗಳ ಸ೦ಖ್ಯೆ, ಹಿಮೋಗ್ಲೋಬಿನ್ ನ ಮಟ್ಟ, ಮತ್ತು ಬಿಳಿ ರಕ್ತಕಣಗಳ ಸ೦ಖ್ಯೆಯನ್ನು ತಿಳಿದಿರುವುದು ಅತೀ ಮುಖ್ಯ. ಇಷ್ಟು ಮಾತ್ರವಲ್ಲದೇ, ರಕ್ತ ಪರೀಕ್ಷೆಯು ಅನ್ನಾ೦ಗ B12 ಅಥವಾ D3 ನ೦ತಹ ಅನ್ನಾ೦ಗಗಳ ಕೊರತೆಯಿದ್ದರೆ ಆ ಮಾಹಿತಿಯನ್ನೂ ಸಹ ರಕ್ತ ಪರೀಕ್ಷೆಯು ಬಹಿರ೦ಗಪಡಿಸುತ್ತದೆ.

ರಕ್ತದ ಸಕ್ಕರೆಯ ಪರೀಕ್ಷೆ:
ಮಧುಮೇಹವಿಲ್ಲದಿರುವುದನ್ನು ಖಚಿತಪಡಿಸಿಕೊಳ್ಳಲು ಈ ಪರೀಕ್ಷೆಯು ಅಗತ್ಯ. ಹೀಮೋಗ್ಲೋಬಿನ್ ನ glycation ಮಟ್ಟವನ್ನು ಈ ಪರೀಕ್ಷೆಯ ಮೂಲಕ ತಿಳಿದುಕೊಳ್ಳಬೇಕು (ರಕ್ತದಲ್ಲಿ ಪ್ಲಾಸ್ಮಾ ಗ್ಲುಕೋಸ್ ನ ಪ್ರಬಲತೆಯನ್ನು ಇದು ಸೂಚಿಸುತ್ತದೆ). ಹೀಮೋಗ್ಲೋಬಿನ್ ನ glycation, ಮಧುಮೇಹ ಹಾಗೂ ಹೃದಯ ಸ೦ಬ೦ಧೀ ರೋಗಗಳೊ೦ದಿಗೆ ನಿಕಟ ಸ೦ಬ೦ಧವನ್ನು ಹೊ೦ದಿದೆ.

ಮೂತ್ರ ಪರೀಕ್ಷೆ:
ಯಾವುದೇ ತೆರನಾದ ಸೋ೦ಕಿನ ಸಾಧ್ಯತೆಯನ್ನು ಅಲ್ಲಗಳೆಯಲು ಈ ಪರೀಕ್ಷೆಯನ್ನು ಶಿಫಾರಸು ಮಾಡಲಾಗುತ್ತದೆ.

ಯೂರಿಕ್ ಆಮ್ಲದ ಪತ್ತೆಗಾಗಿ ಮೂತ್ರ ಪರೀಕ್ಷೆ:
ವಿಶೇಷವಾಗಿ ನಿಮಗೆ ಕೀಲು ನೋವಿದ್ದರೆ ಈ ಪರೀಕ್ಷೆ ಅಪೇಕ್ಷಣೀಯ. ಮೂತ್ರದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಯೂರಿಕ್ ಆಮ್ಲದ ಅ೦ಶವಿದ್ದರೆ, ಇದು ಗೌಟ್ (ಕೀಲುಗಳ ಉರಿಯೂತ) ರೋಗಕ್ಕೆ ನಾ೦ದಿಯಾಗಬಹುದು. ಈ ರೋಗವು ಯುವ ಪುರುಷರಲ್ಲಿ ಸಾಮಾನ್ಯವಾಗಿರುತ್ತದೆ.

ಯಕೃತ್ ಮತ್ತು ಮೂತ್ರಪಿ೦ಡಗಳ ಪರೀಕ್ಷೆ:
ಇವುಗಳ ಸಮರ್ಪಕ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಈ ಪರೀಕ್ಷೆಯು ಅಗತ್ಯ. ಈ ಪರೀಕ್ಷೆಯು ನಿಮ್ಮ ದೇಹದ ಹಾರ್ಮೋನುಗಳ ಮಟ್ಟವನ್ನು ಶ್ರುತಪಡಿಸುತ್ತವೆ ಹಾಗೂ ನಿಮ್ಮ ದೇಹದ ಕಿಣ್ವಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತವೆಯೇ ಅಥವಾ ಇಲ್ಲವೇ ಎ೦ಬುದನ್ನೂ ಸಹ ಬಹಿರ೦ಗಪಡಿಸುತ್ತವೆ.

creatinine ನ ಮಟ್ಟವನ್ನು ಪರೀಕ್ಷಿಸಿಕೊಳ್ಳಿ:
ನಿಮ್ಮ ಮೂತ್ರಪಿ೦ಡಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಅಥವಾ ಇಲ್ಲವೇ ಎ೦ಬುದನ್ನು ತಿಳಿಯಲು ಈ ಪರೀಕ್ಷೆಯು ಸಹಕಾರಿ. creatinine ನ ಮಟ್ಟವನ್ನು ತಿಳಿದುಕೊಳ್ಳಲು ನೀವು creatinine clearance test ಎ೦ಬ ಹೆಸರಿನ ರಕ್ತಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ.

ಲಿಪಿಡ್ (ಕೊಬ್ಬಿನ ಮಟ್ಟ) ಮತ್ತು ECG ಪರೀಕ್ಷೆಗಳು:
"ನೀವು ದೈಹಿಕವಾಗಿ ಅಷ್ಟೇನೂ ಚಟುವಟಿಕೆಯವರಲ್ಲವಾಗಿದ್ದರೆ, ಒಮ್ಮೆ ನಿಮ್ಮ ದೇಹದ ಲಿಪಿಡ್ ಗಳ ಸ್ಥಿತಿಗತಿಗಳ ಕುರಿತ ಮಾಹಿತಿ ಪಡೆಯಿರಿ" ಎ೦ದು ಸಲಹೆ ಮಾಡುತ್ತಾರೆ ಡಾ|| ಕಪಾಡಿಯಾ. ರಕ್ತದಲ್ಲಿನ ಟ್ರೈಗ್ಲಿಸರೈಡ್ ಗಳು ಮತ್ತು ಕೊಲೆಸ್ಟೆರಾಲ್ ನ ಮಟ್ಟಗಳ ಕುರಿತು ಆರ೦ಭದಿ೦ದಲೇ ನಿಗಾವಹಿಸುವುದರಿ೦ದ, ಭವಿಷ್ಯದಲ್ಲಿ ಹೃದಯ ಸ೦ಬ೦ಧೀ ತೊ೦ದರೆಗಳು ಸ೦ಭವಿಸುವುದನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ. ನಿಮಗೆ ಅತಿಯಾದ ತಲೆಸುತ್ತು, ವಿಪರೀತವಾಗಿ ಬೆವರುವುದು, ಉದ್ವೇಗ, ಮತ್ತು ಎದೆನೋವುಗಳಿದ್ದರೆ ಮಾತ್ರ ECG (EchoCardiogram) ಪರೀಕ್ಷೆಗೆ ಒಳಪಡಬೇಕು ಎ೦ದೂ ಸಹ ಡಾ|| ಕಪಾಡಿಯಾ ಸೇರಿಸುತ್ತಾರೆ. ಭವಿಷ್ಯದಲ್ಲಿ ಸ೦ಭವಿಸಬಹುದಾದ ಗ೦ಭೀರ ಸ್ವರೂಪದ ಸಮಸ್ಯೆಗಳ ಕುರಿತ ಮುನ್ಸೂಚಕವಾಗಿ ಮಾತ್ರ ಈ ಪರೀಕ್ಷೆಗೆ ಒಳಪಡಬೇಕಾಗುತ್ತದೆ.

ಸಾಮಾನ್ಯ ದೈಹಿಕ ಪರೀಕ್ಷೆ:
ಇತರ ಅತೀ ಪ್ರಮುಖ ಅ೦ಕಿಅ೦ಶಗಳಾದ ರಕ್ತದೊತ್ತಡ ಮತ್ತು ದೇಹ ತೂಕದ ಬಗ್ಗೆ ಈ ಪರೀಕ್ಷೆಯ ಮೂಲಕ ತಿಳಿದುಕೊಳ್ಳಿರಿ.ಸ್ತ್ರೀಯರಿಗಾಗಿ ವಿಶೇಷವಾದ ವೈದ್ಯಕೀಯ ಪರೀಕ್ಷೆಗಳು:

ಥೈರಾಯಿಡ್ ಪರೀಕ್ಷೆ:
ಥೈರಾಯಿಡ್ ಗ್ರ೦ಥಿಯ ಸಮಸ್ಯೆಯು ಸ್ತ್ರೀಯರಲ್ಲಿ ಸಾಮಾನ್ಯವಾಗಿ ಕ೦ಡುಬರುವ ಒ೦ದು ಸಮಸ್ಯೆ. ಥೈರಾಯಿಡ್ ಗ್ರ೦ಥಿಯು ಸಾಕಷ್ಟು ಪ್ರಮಾಣದಲ್ಲಿ ಹಾರ್ಮೋನನ್ನು ಉತ್ಪಾದಿಸಲು ವಿಫಲವಾದರೆ ಅಥವಾ ಅತೀ ಹೆಚ್ಚಿನ ಪ್ರಮಾಣದಲ್ಲಿ ಹಾರ್ಮೋನನ್ನು ಉತ್ಪಾದಿಸಿದರೆ, ಥೈರಾಯಿಡ್ ನ ಸಮಸ್ಯೆ ಅಥವಾ ಥೈರಾಯಿಡ್ ನ ರೋಗವು ತಲೆದೋರುತ್ತದೆ. ಈ ರೋಗವು ತ್ವರಿತಗತಿಯಲ್ಲಿ ತೂಕ ಗಳಿಸಿಕೊಳ್ಳುವಿಕೆ ಅಥವಾ ಕ್ಷಿಪ್ರವಾದ ತೂಕ ನಷ್ಟಕ್ಕೆ ಕಾರಣವಾಗಬಹುದು. ಆದ್ದರಿ೦ದ, ನಿಮಗೆ ಒ೦ದು ವೇಳೆ ತಲೆಸುತ್ತು ಬರುವುದು ಅಥವಾ ಅತಿಯಾದ ತೂಕ ಹೊ೦ದಿದಲ್ಲಿ ಅಥವಾ ವಿಪರೀತ ತೂಕ ನಷ್ಟವಾದರೆ, ನೀವೊಮ್ಮೆ ಥೈರಾಯಿಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದೊಳಿತು.

ಸೊನೋಗ್ರಾಫಿ:
ನಿಮ್ಮ ಯಕೃತ್, ಮೂತ್ರಪಿ೦ಡಗಳು, ಅ೦ಡಾಶಯಗಳು, ಮತ್ತು ಗರ್ಭಕೋಶವು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಅಥವಾ ಇಲ್ಲವೇ ಎ೦ಬುದನ್ನು ಸೋನೋಗ್ರಾಫಿ ಪರೀಕ್ಷೆಯು ತಿಳಿಸುತ್ತದೆ. ಮಾತ್ರವಲ್ಲದೇ, ಈ ಪರೀಕ್ಷೆಯು ನಿಮ್ಮ ದೇಹದ ಎಲ್ಲಾ ಕಿಣ್ವಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಅಥವಾ ಇಲ್ಲವೇ ಎ೦ಬುದನ್ನೂ ಸಹ ತಿಳಿಸುತ್ತವೆ. ಈ ಪರೀಕ್ಷೆಯು Polycystic Ovarian Disease (PCOD) ಅಥವಾ ಅ೦ಡಾಶಯದ ಕುರಿತೂ ಸಹ ಮಾಹಿತಿ ನೀಡಬಲ್ಲುದು.



Click it and Unblock the Notifications