Latest Updates
-
ಬಿಸಿಗಾಳಿಯ ಅಬ್ಬರ: ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸದಿದ್ದರೆ ಕಾದಿದೆ ದೊಡ್ಡ ಅಪಾಯ! -
ಸಲಿಂಗ ಜೋಡಿಗಳಿಗೆ ಸಿಕ್ತು ಭದ್ರತೆ: ಹೈಕೋರ್ಟ್ನ ಈ ತೀರ್ಪು ನಿಮ್ಮ ಬದುಕನ್ನೇ ಬದಲಿಸಬಹುದು! -
ಸುಡುವ ಬಿಸಿಲಿಗೆ ಸುಸ್ತಾದ್ರಾ? ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ನಕಲಿ ಜಿಮ್ ಸಪ್ಲಿಮೆಂಟ್ ಬಳಸುತ್ತಿದ್ದೀರಾ? ದೆಹಲಿಯ ಈ ದಾಳಿ ನಿಮ್ಮ ಕಣ್ಣು ತೆರೆಸುತ್ತದೆ! -
40 ಡಿಗ್ರಿ ಬಿಸಿಲಲ್ಲೂ ಫ್ರೆಶ್ ಆಗಿರಬೇಕಾ? ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ! -
ಹೀಟ್ವೇವ್ ಅಲರ್ಟ್: ಬಿಸಿಲ ಬೇಗೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲಿ ಡೇಟಿಂಗ್ ಪ್ಲಾನ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಬೇಡಿ! -
ಬಿಸಿಗಾಳಿಯ ಅಬ್ಬರ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಉಪಾಯಗಳು -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮ ಪಾಲಿಸಿ -
ಫ್ಯಾಶನ್ ರೆವಲ್ಯೂಷನ್ ಡೇ: ಬಟ್ಟೆಯನ್ನು ಉಲ್ಟಾ ಧರಿಸಿ ಫೋಟೋ ಹಾಕುತ್ತಿರುವುದೇಕೆ? ಈ ಟ್ರೆಂಡ್ ಹಿಂದಿದೆ ದೊಡ್ಡ ಕಥೆ!
ನಿಮ್ಮ ಹೆಂಡತಿಗೆ ಉತ್ತಮ ಲೈಂಗಿಕ ಸುಖವನ್ನು ನೀಡುತ್ತಿದ್ದೀರಾ?
ನೀವು ನಿಮ್ಮ ಹೆಂಡತಿಗೆ ಉತ್ತಮ ಲೈಂಗಿಕ ಸುಖವನ್ನು ನೀಡುತ್ತಿದ್ದೀರಾ? ನಿಮ್ಮ ಸಂಗಾತಿ ನಿಮ್ಮಿಂದ ತೃಪ್ತಿಯನ್ನು ಪಡೆದಿದ್ದಾರಾ? ಎಂಬುದನ್ನು ತಿಳಿಯಲು ಸ್ವಲ್ಪ ಸಂಕೋಚವಾಗುತ್ತದೆ. ಆದರೂ ಸಹ ನೀವು ಇದರ ಬಗ್ಗೆ ಸ್ವಲ್ಪ ಹೆಚ್ಚಿನ ಮುತುವರ್ಜಿಯನ್ನುವಹಿಸಬೇಕು. ನಿಮ್ಮ ಸಂಗಾತಿಯನ್ನು ತೃಪ್ತಿಗೊಳಿಸಲು ನೀವು ಕೆಲವು ಮಾರ್ಗಗಳನ್ನು ಹುಡುಕಲೇಬೇಕು. ಸ್ತ್ರೀಯರಲ್ಲಿ ಕಾಮಾಸಕ್ತಿಯನ್ನು ಕೆರಳಿಸುವಲ್ಲಿ ಲಿಬಿಡೊದ ಪ್ರಮಾಣವು ಪ್ರಧಾನ ಪಾತ್ರವನ್ನು ನಿರ್ವಹಿಸುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಚುಂಬನದ ಬಗ್ಗೆ ಕೆಲ ಇಂಟರೆಸ್ಟಿಂಗ್ ಅಂಶಗಳು
ಒಂದು ವೇಳೆ ನೀವು ನಿಮ್ಮ ಮತ್ತು ನಿಮ್ಮ ಸಂಗಾತಿಯ ಲೈಂಗಿಕ ಬಯಕೆಗಳನ್ನು ಪೂರೈಸುವಲ್ಲಿ ವಿಫಲವಾದಲ್ಲಿ, ಅದು ಮುಂದೆ ಗುರುತರವಾದ ವೈವಾಹಿಕ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಅದಕ್ಕೆ ಉದಾಹರಣೆಯಾಗಿ ನೀವು ನಿಮ್ಮ ಸುತ್ತ-ಮುತ್ತಲಿನ ಸಮಾಜದ ವಿಚ್ಛೇಧನದ ಪ್ರಮಾಣವನ್ನು ಒಮ್ಮೆ ಗಮನಿಸಬಹುದು. ಅದನ್ನು ನೋಡಿ ನಿಮಗೆ ಭಯವುಂಟಾಗದಿದ್ದಲ್ಲಿ ಕೇಳಿ.
ಅತೃಪ್ತ ಲೈಂಗಿಕ ಜೀವನವು ಸಹ ವಿಚ್ಛೇಧನಕ್ಕೆ ದಾರಿ ಮಡಿಕೊಡುತ್ತದೆ ಎಂಬುದನ್ನು ಮರೆಯಬೇಡಿ. ಹಲವು ತಙ್ಞರ ಪ್ರಕಾರ ಹೆಂಗಸರಲ್ಲಿ ಲಿಬಿಡೊದ ಪ್ರಮಾಣವು ಕಡಿಮೆಯಾಗುವುದರಿಂದ, ಅವರು ತಮ್ಮ ಗಂಡಂದಿರನ್ನು ಇಚ್ಛೆಯನ್ನು ಪೂರೈಸಲು ವಿಫಲರಾಗುತ್ತಾರಂತೆ.
ಸಂಬಂಧವನ್ನು ಕಡಿದುಕೊಳ್ಳುವುದು ಮುಂದೆ ಭಯಾನಕ ಅಸ್ಥಿರತೆಗೆ ಕಾರಣವಾಗುತ್ತದೆ. ನಿಮ್ಮ ಸಂಬಂಧವು ಶಾಶ್ವತವಾಗಿ , ಸಂತೋಷದಿಂದ ಕೂಡಿರಬೇಕು ಎಂದಾದಲ್ಲಿ ಲಿಬಿಡೊವನ್ನು ಹೆಚ್ಚಿಸಿಕೊಳ್ಳುವುದು ಕಟ್ಟ ಕಡೆಯ ಆಯ್ಕೆಯಾಗಿರುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಹಣ್ಣುಗಳ ರಾಜ ಮಾವಿನ ವಿವಿಧ ಅವತಾರಗಳು!
ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಕೆರಳಿಸುವ ಲಿಬಿಡೊವನ್ನು ಹೆಚ್ಚಿಸುವ ಮಾರ್ಗಗಳು:
ಬಹುಶಃ ನೀವು ಮಹಿಳೆಯರಲ್ಲಿ ಕಾಮಾಸಕ್ತಿಯನ್ನು ಕೆರಳಿಸುವ ಹಲವಾರು ಆಹಾರಗಳ ಕುರಿತಾಗಿ ಕೇಳಿರಬೇಕು ಅಥವಾ ಸೇವಿಸಿರಬೇಕು. ಸ್ವಾಭಾವಿಕವಾಗಿ ದೊರೆಯುವ ಈ ಆಹಾರಗಳು ವೈವಾಹಿಕ ಜೀವನದಲ್ಲಿ ಆನಂದವನ್ನು ತರಲು ಪರಿಣಾಮಕಾರಿಯಾಗಿ ನೆರವಾಗುತ್ತವೆ. ಅಂತಹ ಕೆಲವೊಂದು ಆಹಾರ ಪದಾರ್ಥಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ ಓದಿಕೊಳ್ಳಿ.

ಸೆಲರಿ:
ಇದೊಂದು ಬಗೆಯ ಆಹಾರ ಪದಾರ್ಥವಾಗಿದ್ದು ಭಾರತದ ಮಾರುಕಟ್ಟೆಗಳಲ್ಲಿ ಮತ್ತು ಅಡುಗೆ ಮನೆಗಳಲ್ಲಿ ಸ್ಥಾನವನ್ನು ಸಂಪಾದಿಸಿದೆ. ಈ ಆಹಾರ ಪದಾರ್ಥದಲ್ಲಿ ಅಂಡ್ರೋಸ್ಟಿರೋನ್ ಎಂಬ ಉತ್ತೇಜನಕಾರಿಯು ಇರುತ್ತದೆ. ಇದು ಲೈಂಗಿಕ ಚಟುವಟಿಕೆಗೆ ಅಗತ್ಯ ಉತ್ತೇಜನವನ್ನು ನೀಡುತ್ತದೆ. ಇದೊಂದು ವಾಸನೆ ರಹಿತ ಹಾರ್ಮೋನ್ ಆಗಿದ್ದು, ಲೈಂಗಿಕ ಚಟುವಟಿಕೆಯಲ್ಲಿ ಪರಿಣಾಮಕಾರಿ ಉತ್ತೇಜನಕಾರಿಯಾಗಿ ಕೆಲಸ ಮಾಡುತ್ತದೆ.

ಅವಕಾಡೊ:
ಮಹಿಳೆಯರಿಗೆ ಆಗತ್ಯವಾಗಿರುವ ಆಮ್ಲಗಳಲ್ಲಿ ಫೋಲಿಕ್ ಆಮ್ಲವು ಸಹ ಒಂದು. ಪುರುಷರಿಗೆ ಹೋಲಿಸಿದರೆ ಮಹಿಳೆಯರು ದೈಹಿಕವಾಗಿ ಮತ್ತು ಮಾನಸಿಕವಾಗಿ ದುರ್ಬಲರಾಗಿರುತ್ತಾರೆ. ಅವರ ದೇಹಕ್ಕೆ ಅಗತ್ಯ ಶಕ್ತಿ ಮತ್ತು ಚೈತನ್ಯವನ್ನು ಪಡೆಯಲು ಫೋಲಿಕ್ ಆಮ್ಲವು ಅವರಿಗೆ ನೆರವಾಗುತ್ತದೆ. ಇದರ ಜೊತೆಗೆ ಅವಕಾಡೊನಲ್ಲಿ ವಿಟಮಿನ್ ಬಿ6 ಮತ್ತು ಪೊಟಾಶಿಯಂ ಯಥೇಚ್ಛ ಪ್ರಮಾಣದಲ್ಲಿರುತ್ತದೆ.

ಓಯಿಸ್ಟರ್:
ಮಹಿಳೆಯರಲ್ಲಿ ಲಿಬಿಡೊವನ್ನು ಹೆಚ್ಚಿಸಲು ಇರುವ ಮತ್ತೊಂದು ಉತ್ತಮ ಆಹಾರವೆಂದರೆ ಅದು ಓಯಿಸ್ಟರ್. ಇದರಲ್ಲಿರುವ ಯಥೇಚ್ಛ ಪ್ರಮಾಣದ ಸತುವು ಲಿಬಿಡೊಗೆ ಸಂಬಂಧಿಸಿದ ಹಾರ್ಮೋನುಗಳನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ಇದನ್ನು ಸೇವಿಸುವುದರಿಂದ ಪುರುಷರ ವೀರ್ಯಾಣುಗಳ ಪ್ರಮಾಣವು ಸಹ ಅಧಿಕವಾಗುತ್ತದೆ.

ಮೊಟ್ಟೆಗಳು:
ಮೊಟ್ಟೆಗಳು ಮದುವೆಯಾದವರಿಗು ಮತ್ತು ಆಗದಿರುವವರು ಇಬ್ಬರಿಗು ಉಪಯೋಗಕಾರಿಯಾದ ಆಹಾರ ಪದಾರ್ಥವಾಗಿದೆ. ಇದರಲ್ಲಿ ವಿಟಮಿನ್ ಬಿ5 ಮತ್ತು ಬಿ6ಗಳು ಯಥೇಚ್ಛವಾಗಿರುತ್ತವೆ. ಇವುಗಳು ಹಾರ್ಮೋನುಗಳ ಸಮತೋಲನವನ್ನು ಸಾಧಿಸಲು ಉಪಯೋಗಕ್ಕೆ ಬರುತ್ತವೆ. ಇವುಗಳು ಹೆಚ್ಚಾಗುವುದರೊಂದಿಗೆ ಲಿಬಿಡೊ ಮತ್ತು ಕಾಮಾಸಕ್ತಿಯು ಸಹ ಹೆಚ್ಚುತ್ತದೆ.



Click it and Unblock the Notifications