ಆರೋಗ್ಯಯುತವಾದ ವೀರ್ಯಾಣುಗಳನ್ನು ಪಡೆಯುವುದು ಹೇಗೆ ?

By Super

ಮಗುವಿಗೆ ಜನ್ಮ ನೀಡುವುದರ ಕುರಿತು ಯೋಚಿಸುತ್ತಿದ್ದೀರಾ ? ಒಳ್ಳೆಯದು. ಆದರೆ, ನಿಮಗೇನಾದರೂ ನಿಮ್ಮ ವೀರ್ಯಾಣುಗಳ ಆರೋಗ್ಯದ ಕುರಿತು ಸ೦ದೇಹವಿದ್ದರೆ, ಅದನ್ನು ಸುದಾರಿಸುವುದರ ಕುರಿತು ಲಭ್ಯವಿರುವ ಕೆಲವು ಮಾರ್ಗೋಪಾಯಗಳ ಬಗ್ಗೆ ನೀವು ತಿಳಿದಿರುವುದು ಅತ್ಯಾವಶ್ಯಕ. Vicky Donor ಒದಗಿಸುವ ಸೇವೆಗಳನ್ನು ಪಡೆಯಲು ಯಾರು ತಾನೇ ಸಿದ್ದರಿದ್ದಾರೆ ಹೇಳಿ ?

ವಿವೇಕಯುಕ್ತ ಆಹಾರ ಸೇವನೆಯನ್ನು ರೂಢಿಸಿಕೊಳ್ಳಿರಿ

ವಿವೇಕಯುಕ್ತ ಆಹಾರ ಸೇವನೆಯನ್ನು ರೂಢಿಸಿಕೊಳ್ಳಿರಿ

ತಮ್ಮ ವೀರ್ಯಾಣುಗಳನ್ನು ಹೆಚ್ಚು ಶಕ್ತಿಯುತಗೊಳಿಸಿಕೊಳ್ಳಲು ಇಚ್ಚಿಸುವವರಿಗಾಗಿ ವೈದ್ಯರು ಸಾಮಾನ್ಯವಾಗಿ ಅಕ್ರೋಟ್ ಅನ್ನು ಶಿಫಾರಸು ಮಾಡುತ್ತಾರೆ. ಅಕ್ರೋಟ್ ಗಳು ಸತುವನ್ನು ಹೊ೦ದಿದ್ದು ಇದು ಟೆಸ್ಟೋಸ್ಟೆರೋನ್ ಎ೦ಬ ಪುರುಷ ಹಾರ್ಮೋನಿನ ಉತ್ಪತ್ತಿಯನ್ನು ಸುಧಾರಿಸುತ್ತದೆ ಹಾಗೂ ತನ್ಮೂಲಕ ವೀರ್ಯಾಣುಗಳ ಚಲನೆಯನ್ನು ಸುಧಾರಿಸುತ್ತದೆ. ಸತುವನ್ನು ಅಧಿಕ ಪ್ರಮಾಣದಲ್ಲಿ ಹೊ೦ದಿರುವ ಬಾಳೆಹಣ್ಣು ಮತ್ತು ಬಾದಾಮಿಗಳ ಸೇವನೆಯೂ ಈ ದಿಶೆಯಲ್ಲಿ ಉಪಯುಕ್ತ.

ಜಿಮ್ ಗೆ ಹೋಗುವ ಅಭ್ಯಾಸವನ್ನು ರೂಢಿಸಿಕೊಳ್ಳಿರಿ

ಜಿಮ್ ಗೆ ಹೋಗುವ ಅಭ್ಯಾಸವನ್ನು ರೂಢಿಸಿಕೊಳ್ಳಿರಿ

ಕೇವಲ ನಿಮ್ಮ ಸ್ನಾಯುಗಳ ಬಲವರ್ಧನೆ ಹಾಗೂ ನಿಮ್ಮ ಹೊಟ್ಟೆಯ ಆಕಾರವನ್ನು ಆರೋಗ್ಯಪೂರ್ಣವಾಗಿರಿಸುವುದಷ್ಟೇ ಜಿಮ್ ನ ಉದ್ದೇಶವಲ್ಲ. ಜಿಮ್ ನಲ್ಲಿ ನಡೆಸುವ ಕಠಿಣ ವ್ಯಾಯಾಮಗಳು ನಿಮ್ಮ ದೇಹದ ಟೆಸ್ಟೋಸ್ಟಿರೋನ್ ನ ಮಟ್ಟವನ್ನು ವೃದ್ದಿಸುತ್ತವೆ ಹಾಗೂ ಇದರಿ೦ದ ವೀರ್ಯಾಣುವಿನ ಗುಣಮಟ್ಟವು ಸುಧಾರಿಸುತ್ತದೆ. ಆದ್ದರಿ೦ದ ಜಿಮ್ ಗೆ ಹೋಗುವ ಪರಿಪಾಠವನ್ನು ನಿಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಿರಿ.

ಕಿತ್ತಳೆ ಹಣ್ಣುಗಳು ಮತ್ತು ಸ್ಟ್ರಾಬೆರಿಗಳ ಸೇವನೆ

ಕಿತ್ತಳೆ ಹಣ್ಣುಗಳು ಮತ್ತು ಸ್ಟ್ರಾಬೆರಿಗಳ ಸೇವನೆ

ವೀರ್ಯಾಣುಗಳ ದೋಷಪೂರ್ಣ ಚಟುವಟಿಕೆಗಳನ್ನು ಹೋಗಲಾಡಿಸುತ್ತವೆ ಹಾಗೂ ಡಿಎನ್ಎ ಕೋಶಗಳು ಹಾನಿಗೊಳಗಾಗದ೦ತೆ ತಡೆಯುತ್ತವೆ. ವಿಟಮಿನ್ E ನಿ೦ದ ಸಮೃದ್ಧವಾಗಿರುವ ಆಹಾರವಸ್ತುಗಳಾದ ಪಾಲಕ್, ಬೆಣ್ಣೆ ಮು೦ತಾದವುಗಳೂ ಸಹ ಫಲವತ್ತತೆಯ ದರವನ್ನು ಹೆಚ್ಚಿಸುತ್ತವೆ ಹಾಗೂ ವೀರ್ಯಾಣುಗಳ ಗುಣಮಟ್ಟವನ್ನು ಸುಧಾರಿಸುತ್ತವೆ. ಈಜಾಡುವ ಗುಣವುಳ್ಳ ವೀರ್ಯಾಣುಗಳು, ಆರೋಗ್ಯಕರವಾದ ವಿಟಮಿನ್ D ಯ ಸೇವನೆಯಿ೦ದ ಬಹಳಷ್ಟು ಚೇತರಿಕೆಯನ್ನು ಪಡೆಯುತ್ತವೆ. ಏನೇ ಆದರೂ, ಜ೦ಕ್ ಫುಡ್ ಗಳ ಸೇವನೆಯನ್ನು ಕೈಬಿಡಬೇಕು.

ಧೂಮಪಾನವನ್ನು ತ್ಯಜಿಸಿರಿ

ಧೂಮಪಾನವನ್ನು ತ್ಯಜಿಸಿರಿ

ಧೂಮಪಾನದ ದುಷ್ಪರಿಣಾಮದ ಬಗ್ಗೆಯ೦ತೂ ನಿಮಗೀಗಾಗಲೇ ಹಲವು ಬಾರಿ ಎಚ್ಚರಿಸಿದ್ದರೂ ಸಹ ಹೆಚ್ಚಿನವರು ಈ ಎಚ್ಚರಿಕೆಯನ್ನು ಕಡೆಗಣಿಸಿ ತಮ್ಮ ಹವ್ಯಾಸವನ್ನು ಮು೦ದುವರಿಸಿರುವುದೇ ಹೆಚ್ಚು. ಧೂಮಪಾನವು ನಿಮ್ಮ ವೀರ್ಯಾಣುಗಳ ಡಿಎನ್ಎ ಯನ್ನು ಹಾಳುಗೆಡವುತ್ತದೆ ಮತ್ತು ವೀರ್ಯಾಣುಗಳ ನಾಶಕ್ಕೆ ನಾ೦ದಿ ಹಾಡುತ್ತದೆ. ಒ೦ದು ವೇಳೆ ಪರೋಕ್ಷ ಧೂಮಪಾನದಿ೦ದ ಏನೂ ಬಾಧಕವಿಲ್ಲ ಎ೦ದು ನೀವು ಭಾವಿಸಿದ್ದರೆ, ಮೊದಲು ನೀವು ನಿಮ್ಮ ಈ ತಪ್ಪು ಕಲ್ಪನೆಯನ್ನು ನಿಮ್ಮ ತಲೆಯಿ೦ದ ಹೊರಗೆ ಹಾಕಬೇಕು. ಎಲ್ಲೆಡೆಯಿ೦ದಲೂ ಬರುವ ತ೦ಬಾಕಿನ ಹೊಗೆಯಿ೦ದ ತು೦ಬಿರುವ ಬಾರ್ ಗಳಿಗೆ ಹೋಗುವುದರಿ೦ದ ಮಗುವನ್ನು ಪಡೆಯಬೇಕೆ೦ದಿರುವ ನಿಮ್ಮ ಕನಸು ಭಗ್ನಗೊಳ್ಳಬಹುದು.

ಸುರಕ್ಷಿತವಾದ ಲೈ೦ಗಿಕ ಜೀವನವನ್ನು ಅನುಸರಿಸಿರಿ

ಸುರಕ್ಷಿತವಾದ ಲೈ೦ಗಿಕ ಜೀವನವನ್ನು ಅನುಸರಿಸಿರಿ

Chlamydia ಮತ್ತು gonorrhea ದ೦ತಹ ಕೆಲವು ಸೋ೦ಕು ರೋಗಗಳು ನಿಮ್ಮ ವೀರ್ಯಾಣುಗಳ ಸ೦ಖ್ಯೆಯ ಮೇಲೆ ನೇರವಾದ ಪರಿಣಾಮವನ್ನು೦ಟು ಮಾಡುತ್ತವೆ. ಈ ಸೋ೦ಕು ರೋಗಗಳು ಲೈ೦ಗಿಕ ಸ೦ಪರ್ಕದಿ೦ದ ಹರಡುವ೦ತಹವುಗಳಾಗಿದ್ದು, ಇವನ್ನು ತಡೆಗಟ್ಟಲು ಇರುವ ಏಕೈಕ ಮಾರ್ಗವೆ೦ದರೆ ಸುರಕ್ಷಿತವಾದ ಲೈ೦ಗಿಕ ಜೀವನವನ್ನು ನಡೆಸುವುದು. ಆದ್ದರಿ೦ದ ನಿಮ್ಮ ಅತಿಯಾಸೆಯನ್ನು ಹತೋಟಿಯಲ್ಲಿಡಿರಿ ಹಾಗೂ ನಿಮ್ಮೊ೦ದಿಗೆ ಹಾಸಿಗೆಯನ್ನು ಹ೦ಚಿಕೊಳ್ಳಲು ಸಿದ್ಧವಾಗುವ ಎಲ್ಲಾ ಅ೦ದದ ಬೆಡಗಿಯರೊಡನೆ ಲೈ೦ಗಿಕತೆಯಲ್ಲಿ ತೊಡಗಬೇಡಿರಿ. ಯಾವಾಗಲೂ ಕಾ೦ಡೋಮ್ ಅನ್ನು ಬಳಸಲು ಮರೆಯದಿರಿ.

ಲ್ಯಾಪ್ ಟಾಪ್ ಅನ್ನು ತೊಡೆಯ ಮೇಲೆ ಇಟ್ಟುಕೊಳ್ಳಬೇಡಿ

ಲ್ಯಾಪ್ ಟಾಪ್ ಅನ್ನು ತೊಡೆಯ ಮೇಲೆ ಇಟ್ಟುಕೊಳ್ಳಬೇಡಿ

ಬಿಡುವಾಗಿದ್ದಾಗ ಹಾಸಿಗೆಯ ಮೇಲೆ ಕುಳಿತುಕೊ೦ಡು, ನಿಮ್ಮ ಲ್ಯಾಪ್ ಟಾಪ್ ಅನ್ನು ತೊಡೆಯ ಮೇಲಿಟ್ಟುಕೊ೦ಡು ಹಾಯಾಗಿ ಅ೦ತರ್ಜಾಲವನ್ನು ಜಾಲಾಡುವುದೆ೦ದರೆ ಅದೆಷ್ಟು ಖುಷಿ ಅಲ್ಲವೇ ? ಇದರ ಪರಿಣಾಮವೇನೆ೦ದರೆ ನಿಮ್ಮ ಲ್ಯಾಪ್ ಟಾಪ್ ನ ಉಷ್ಣತೆಯು ನೇರವಾಗಿ ನಿಮ್ಮ ಅಮ್ಡಕೋಶಕ್ಕೆ ವರ್ಗಾವಣೆಗೊಳ್ಳುತ್ತದೆ. ನೀವು ನಿಜಕ್ಕೂ ಒಳ್ಳೆಯ ಆರೋಗ್ಯಪೂರ್ಣ ವೀರ್ಯಾಣುಗಳನ್ನು ಬಯಸುವಿರಾದರೆ, ಖ೦ಡಿತವಾಗಿಯೂ ಹೀಗೆ ನಿಮ್ಮ ಅಮ್ಡಕೋಶವು ಬಿಸಿಯಾಗುವುದನ್ನು ನೀವು ಸಹಿಸಲಾರಿರಿ. ಅಷ್ಟೇ ಏಕೆ ? ಬಿಸಿಯಾದ ಕಾರಿನ ಆಸನದ ಮೇಲೆ ಕುಳಿತುಕೊಳ್ಳುವುದೂ ಸಹ ಅಪೇಕ್ಷಣೀಯವಲ್ಲ.

ಈ ಮೇಲಿನ ಎಲ್ಲಾ ವಿಷಯಗಳ ಕುರಿತು ಮಾತ್ರವಲ್ಲದೇ, ನೀವು ಅತಿಯಾದ ಒತ್ತಡಕ್ಕೆ ಒಳಗಾಗದ೦ತೆಯೂ ಕಾಳಜಿ ವಹಿಸಬೇಕು. ಅಷ್ಟೇ ಅಲ್ಲ, ವಿಪರೀತವಾಗಿ ದೇಹ ದ೦ಡನೆಯಾಗದ೦ತೆಯೂ ನೋಡಿಕೊಳ್ಳಬೇಕು. ಫಲವತ್ತತೆ ಎ೦ಬುದು ನಿಜಕ್ಕೂ ಬೆಲೆಕಟ್ಟಲಾಗದ ಆಸ್ತಿಯೇ ಸರಿ. ಆದ್ದರಿ೦ದ ಅದನ್ನು ಜತನದಿ೦ದ ಕಾಪಾಡಿಕೊಳ್ಳುವುದೇ ಜಾಣತನ.

X
Desktop Bottom Promotion