Latest Updates
-
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ!
ಸೆನ್ಸಿಟೀವ್ ಹಲ್ಲುಗಳ ರಕ್ಷಣೆ ಹೇಗೆ?
ಹಲ್ಲುಗಳು ಸೌಂದರ್ಯದ ಪ್ರತೀಕ. ನಮ್ಮ ಸೌಂದರ್ಯ ಅಡಗಿರುವುದು ಹಲ್ಲುಗಳಲ್ಲೇ. ಹುಳುಕಿರುವ ದಂತಕುಳಿಯ ಹಲ್ಲುಗಳು ಸೌಂದರ್ಯವನ್ನು ಹಾಳುಗೆಡವುತ್ತವೆ. ಇದಕ್ಕಾಗಿ ವಿಶೇಷ ಕಾಳಜಿಯನ್ನು ನಾವು ತೆಗೆದುಕೊಳ್ಳಲೇಬೇಕು. ಹಲ್ಲುಗಳ ಸಂರಕ್ಷಣೆ ನಮ್ಮ ಕೈಯಲ್ಲಿದೆ. ದಿನವೂ ಹಲ್ಲುಗಳನ್ನು ಸ್ವಚ್ಛವಾಗಿಡುವುದರಿಂದ ಹಲ್ಲಿನ ಹಲವಾರು ಸಮಸ್ಯೆಗಳನ್ನು ದೂರವಿಡಬಹುದು. ಅದರಲ್ಲೂ ಸೂಕ್ಷ್ಮ ಹಲ್ಲುಗಳು ಅಥವಾ ಸೆನ್ಸಿಟೀವ್ ಹಲ್ಲುಗಳ ಕಾಳಜಿಗೆ ಹೆಚ್ಚು ಗಮನ ನೀಡಬೇಕು.
ಬಿಸಿಯಾದ ಕಾಫಿ, ತಂಪಾದ ಜ್ಯೂಸ್, ಐಸ್‌ಕ್ರೀಂ ಅನ್ನು ಸೇವಿಸುವಾಗ ನಮಗೆ ಈ ಸೆನ್ಸಿಟೀವ್ ಹಲ್ಲಿನ ಕಿರಿಕಿರಿಯ ಅನುಭವವಾಗುತ್ತದೆ. ಈ ಸಮಸ್ಯೆಗೆ ಹಲವಾರು ಕಾರಣಗಳಿವೆ. ಅತಿಯಾಗಿ ಬ್ರಷ್ ಮಾಡುವುದೂ ಕೂಡ ಸೆನ್ಸಿಟೀವ್ ಹಲ್ಲಿಗೆ ಕಾರಣವಾಗುತ್ತದೆ. ನಿಮ್ಮ ದಂತಕವಚಕ್ಕೆ ಹಾನಿ ಉಂಟು ಮಾಡಿ ನಿಮ್ಮ ಹಲ್ಲುತಿಕ್ಕುವಿಕೆ ಹಲ್ಲಿನ ಬೇರಿಗೆ ಗಮನ ನೀಡುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹಲ್ಲುಗಳು ಹಳದಿಯಾಗದಂತೆ ತಡೆಯಬೇಕೆ?
ದಂತಕುಳಿಗಳು ಬ್ಯಾಕ್ಟೀರಿಯಾವನ್ನುಂಟು ಮಾಡುತ್ತದೆ. ಮತ್ತು ಇದರಿಂದ ಹಲ್ಲು ಸೆನ್ಸಿಟೀವ್ ಆಗಿ ಮಾರ್ಪಡುತ್ತದೆ. ನಿಮ್ಮ ಹಲ್ಲನ್ನು ಬಿಗಿಹಿಡಿಯುವುದು ಸಹ ಸೆನ್ಸಿಟೀವ್‌ಗೆ ಕಾರಣವಾಗುತ್ತದೆ. ಸೆನ್ಸಿಟೀವ್ ಹಲ್ಲಿಗೆ ಮತ್ತೊಂದು ಮುಖ್ಯ ಕಾರಣ ವಯಸ್ಸಾಗುವುದು. ನಿಮ್ಮ ಹಲ್ಲನ್ನು ಬಿಳಿಯಾಗಿಸುವ ಬೇಕಿಂಗ್ ಸೋಡಾ ಅಥವಾ ಇತರ ಉತ್ಪನ್ನಗಳು ಸಹ ಸ್ವಲ್ಪ ಸಮಯದ ನಂತರ ಸೆನ್ಸಿಟೀವ್ ಹಲ್ಲಿಗೆ ಕಾರಣವಾಗುತ್ತವೆ.
ದಂತಕ್ಷಯ ಕೂಡ ಸೆನ್ಸಿಟೀವ್ ಹಲ್ಲಿಗೆ ಕಾರಣವಾಗುತ್ತದೆ. ಸೆನ್ಸಿಟೀವ್ ಸಮಸ್ಯೆ ಉಂಟಾದಾಗ ನಿಮ್ಮ ದಂತವೈದ್ಯರನ್ನು ಕಾಣುವುದು ಉತ್ತಮ ಪರಿಹಾರವಾಗಿದೆ. ಈ ಹಲ್ಲಿನ ಸಮಸ್ಯೆಯನ್ನು ಹೋಗಲಾಡಿಸುವ ಹಲವಾರು ಮನೆಮದ್ದುಗಳಿವೆ. ನಿಮ್ಮ ಈ ಬಗೆಯ ಹಲ್ಲಿನ ಸಮಸ್ಯೆಯನ್ನು ಪರಿಹರಿಸುವ ಕೆಲವು ಉಪಾಯಗಳು ಈ ಕೆಳಗಿನಂತಿವೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹೊಳೆಯುವ ಹಲ್ಲಿಗೆ ಇಲ್ಲಿವೆ 20 ಟಿಪ್ಸ್

ಒಳ್ಳೆಯ ಮೌಖಿಕ ನೈರ್ಮಲ್ಯ
ನಿಯಮಿತ ಹಾಗೂ ಉತ್ತಮ ಬಾಯಿಯ ನೈರ್ಮಲ್ಯವನ್ನು ಸೆನ್ಸಿಟೀವ್ ಹಲ್ಲಿನ ಕಾಳಜಿ ಒಳಗೊಂಡಿದೆ. ಅದಕ್ಕಾಗಿ ನಿಮ್ಮ ಹಲ್ಲನ್ನು ದಿನಕ್ಕೆರಡು ಬಾರಿ ನೀವು ತೊಳೆದುಕೊಳ್ಳಬೇಕು. ಇದರೊಂದಿಗೆ ನಿಮ್ಮ ನಾಲಗೆಯನ್ನೂ ಸ್ವಚ್ಛಗೊಳಿಸಬೇಕು. ನೀವೇನಾದರೂ ತಿಂದ ಕೂಡಲೇ ಮೌತ್ ವಾಶ್ ಅನ್ನು ಬಳಸಲೇಬೇಕು. ಇದರಿಂದ ನೀವು ತಿಂದ ಆಹಾರದ ತುಣುಕು ನಿಮ್ಮ ಹಲ್ಲಿಗೆ ಅಂಟಿಕೊಳ್ಳುವುದಿಲ್ಲ.

ಸೆನ್ಸಿಟಿವಿಟಿ ಟೂತ್‌ಪೇಸ್ಟ್
ನಿಮ್ಮ ಸೆನ್ಸಿಟೀವ್ ಹಲ್ಲಿಗೆ ಉತ್ತಮ ಪರಿಹಾರವನ್ನು ಸೆನ್ಸಿಟಿವಿಟಿ ಟೂತ್‌ಪೇಸ್ಟ್ ನೀಡುತ್ತದೆ. ಮಾರುಕಟ್ಟೆಗಳಲ್ಲಿ ಇಂತಹ ಬಗೆಯ ಟೂತ್‌ಪೇಸ್ಟ್‌ಗಳು ಸಾಕಷ್ಟಿದ್ದು ನಿಮ್ಮ ದಂತವೈದ್ಯರ ಸಲಹೆಯ ಮೇರೆಗೆ ಅವುಗಳನ್ನು ನೀವು ಬಳಸಬಹುದು. ನಿಯಮಿತವಾಗಿ ಈ ಟೂತ್‌ಪೇಸ್ಟ್ ಅನ್ನು ಬಳಸುವುದು ನಿಮ್ಮ ಸೆನ್ಸಿಟೀವ್ ಹಲ್ಲಿನ ಸಮಸ್ಯೆಯನ್ನು ದೂರಮಾಡುತ್ತದೆ.

ಮೃದುವಾದ ಬ್ರಶ್‌ಗಳು
ಗಟ್ಟಿ ಬ್ರಶ್‌ಗಳನ್ನು ನಿಮ್ಮ ಹಲ್ಲುಗಳಿಗೆ ಬಳಸುವುದು ಸೆನ್ಸಿಟೀವ್ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ. ನಿಮ್ಮ ಹಲ್ಲು ಹಾಗೂ ವಸಡನ್ನು ಕಾಳಜಿ ವಹಿಸುವ ಮೃದುವಾದ ಬ್ರಶ್‌ಗಳನ್ನು ನೀವು ಬಳಸಬೇಕು.

.ಬಿರುಸಾಗಿ ಬ್ರಶ್ ಮಾಡಬೇಡಿ
ನೀವು ಬಿರುಸಾಗಿ ಬ್ರಶ್ ಮಾಡುವುದರಿಂದ ಸೆನ್ಸಿಟೀವ್ ಸಮಸ್ಯೆ ಹೆಚ್ಚಾಗುತ್ತದೆ. ಈ ರೀತಿ ಬ್ರಷ್ ಮಾಡುವುದು ನಿಮ್ಮ ಹಲ್ಲು ವಸಡುಗಳಲ್ಲಿ ನೋವನ್ನುಂಟು ಮಾಡಿ ಸೆನ್ಸಿಟಿವಿಟಿಯನ್ನು ಹೆಚ್ಚಾಗಿಸುತ್ತದೆ.

ಏಸಿಡ್ ಅಂಶವುಳ್ಳ ಆಹಾರಗಳು
ಏಸಿಡ್ ಅಂಶವುಳ್ಳ ಆಹಾರಗಳಾದ ವಿನೇಗರ್, ಜ್ಯೂಸ್‌ಗಳು, ಸಲಾಡ್ ಇತ್ಯಾದಿಗಳು ನಿಮ್ಮ ಹಲ್ಲಲ್ಲಿ ಸೆನ್ಸಿಟಿವಿಟಿಯನ್ನುಂಟು ಮಾಡಬಹುದು. ನಿಮ್ಮ ಬಾಯಿಯನ್ನು ನೀರು ಅಥವಾ ಮೌತ್ ವಾಶ್‌ನಿಂದ ತೊಳೆದುಕೊಳ್ಳಬೇಕು. ನಿಮ್ಮ ಹಲ್ಲಲ್ಲಿ ಅಂಟಿಕೊಂಡಿರುವ ಆಹಾರ ತುಣುಕುಗಳನ್ನು ಇದು ಹೋಗಲಾಡಿಸಿ ಹಲ್ಲಿಗೆ ಸಂಭವಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ.

ಫ್ಲೋರೀಡ್‌ಯುಕ್ತ ಉತ್ಪನ್ನಗಳನ್ನು ಹಲ್ಲಿಗೆ ಬಳಸಿ
ಫ್ಲೋರೀಡ್‌ಯುಕ್ತ ಉತ್ಪನ್ನಗಳನ್ನು ಹಲ್ಲಿಗೆ ಬಳಸಿ ಸೆನ್ಸಿಟೀವ್ ಹಲ್ಲಿನ ಸಮಸ್ಯೆಯಿಂದ ಮುಕ್ತಿ ಪಡೆಯಿರಿ. ಫ್ಲೋರೀಡ್ ಅಂಶವುಳ್ಳ ಮೌತ್ ವಾಶ್‌ಗಳು, ಟೂತ್‌ಪೇಸ್ಟ್‌ಗಳ ಬಳಕೆಯನ್ನು ಮಾಡುವುದು ಹಲ್ಲಿನ ಬೇರಿನ ಸುದೃಢತೆಗೆ ಕಾರಣವಾಗುತ್ತದೆ. ಇದರಿಂದ ನಿಮ್ಮ ಹಲ್ಲಿನ ಸಂವೇದನಾಶೀಲತೆ ಸಮಸ್ಯೆ ಕಡಿಮೆಯಾಗುತ್ತದೆ. ನಿಮ್ಮ ಹಲ್ಲಿನ ಉತ್ಪನ್ನಗಳಲ್ಲಿ ಫ್ಲೋರೀಡ್ ಅಂಶವನ್ನು ಬಳಸಿಕೊಳ್ಳಿ.

ಬೆಚ್ಚಗಿನ ನೀರಿನಿಂದ ಬಾಯಿ ಮುಕ್ಕಳಿಸಿ
ಶೀತಲ ಅಥವಾ ಐಸ್‌ಕ್ರೀಂ ನಿಂದ ನಿಮ್ಮ ಹಲ್ಲು ಸೆನ್ಸಿಟೀವ್‌ನಿಂದ ಬಳಲುತ್ತಿದ್ದರೆ ಬೆಚ್ಚಗಿನ ನೀರನ್ನು ಬಾಯಿ ಮುಕ್ಕಳಿಸಲು ಬಳಸಿಕೊಳ್ಳಿ. ಇದರಿಂದ ನಿಮ್ಮ ಹಲ್ಲಿಗೆ ಶೀತಲೀ ಅಂಶದಿಂದ ಯಾವುದೇ ಬಗೆಯ ತೊಂದರೆಯಾಗುವುದಿಲ್ಲ.

ಟೂತ್‌ಪೇಸ್ಟ್ ಅನ್ನು ಮದ್ದಿನಂತೆ ಬಳಸಿ
ಸಣ್ಣ ಪ್ರಮಾಣದಲ್ಲಿ ಟೂತ್‌ಪೇಸ್ಟ್ ಅನ್ನು ಸೆನ್ಸಿಟೀವ್ ಹಲ್ಲಿಗೆ ಬಳಸುವುದರಿಂದ ಕೂಡ ಸೆನ್ಸಿಟೀವ್ ಸಮಸ್ಯೆ ನಿವಾರಣೆಯಾಗುತ್ತದೆ. ದಂತವೈದ್ಯರನ್ನು ನಿಯಮಿತವಾಗಿ ಭೇಟಿ ಮಾಡುವುದೂ ಅವರ ಸಲಹೆ ಪಡೆದುಕೊಳ್ಳುವುದೂ ಸಹ ಸೆನ್ಸಿಟೀವ್ ಹಲ್ಲಿಗೆ ಉತ್ತಮ ಉಪಾಯವಾಗಿದೆ.



Click it and Unblock the Notifications