Latest Updates
-
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ!
ಸೆಲ್ ಫೋನ್ ಗಳ ಗೀಳನ್ನು ಹೋಗಲಾಡಿಸಲು ಸಲಹೆಗಳು
ನೀವು ಯಾವಾಗಲೂ ಸ್ನೇಹಿತರ ಜೊತೆ ಮೊಬೈಲ್ ನಲ್ಲಿ ಮಾತನಾಡುತ್ತಲೇ ಇರುತ್ತೀರಾ?ಮೆಸೇಜ್ ಕಳಿಸುವುದು , ಡೌನ್ಲೋಡ್ ಮಾಡುವುದು ಹೀಗೆ ಹೆಚ್ಚಿನ ಸಮಯ ಸೆಲ್ ಫೋನ್ ನೊಂದಿಗೆಯೇ ಕಳೆಯುತ್ತಿದ್ದೀರಾ? ಹಾಗಿದ್ದಲ್ಲಿ ನೀವು ಸೆಲ್ ಫೋನ್ ಗೆ ಅಡಿಕ್ಟ್ ಆಗಿದ್ದೀರಾ ಎಂದೇ ಅರ್ಥ.ಇದರಿಂದ ಹೊರಬರಲು ಮತ್ತು ಸೆಲ್ ಫೋನ್ ಬಳಕೆ ಕಡಿಮೆ ಮಾಡಲು ಈ ಕೆಳಗಿನ ಲೇಖನ ಓದಿ ನೋಡಿ.
1.ನಿಮ್ಮನ್ನು ನೀವು ಬ್ಯುಸಿಯಾಗಿಟ್ಟುಕೊಳ್ಳಿ. ಬಿಡುವಿನ ಸಮಯದಲ್ಲಿ ಹೊಸ ಹವ್ಯಾಸ ರೂಡಿಸಿಕೊಳ್ಳಿ. ನಿಟ್ಟಿಂಗ್, ಹೊಲಿಗೆ, ಮ್ಯೂಸಿಕ್ ಕಲಿಯುವುದು, ಹೀಗೆ ಸಮಯ ಕಳೆಯಿರಿ.ನೀವು ಮುಗಿಸಲೇಬೇಕು ಎನಿಸುವ ಕೆಲಸವನ್ನು ಕೈಗೆತ್ತಿಕೊಳ್ಳಿ ಆಗ ಸೆಲ್ ಫೋನ್ ಕಡೆಗೆ ಗಮನ ಹೋಗುವುದಿಲ್ಲ.ಕುಟುಂಬದವರ ಜೊತೆ ಹೊರಗೆಹೋಗಿ ಅವರೊಂದಿಗೆ ಸಮಯ ಕಳೆಯಿರಿ.
2.ನೀವು ನಿಮ್ಮ ಸೆಲ್ ಫೋನ್ ಅನ್ನು ಏಕೆ ಅಷ್ಟು ಇಷ್ಟಪಡುತ್ತೀರಿ ಎಂಬುದರ ಬಗ್ಗೆ ಯೋಚಿಸಿ.ನೀವು ನಿಮ್ಮ ಮೊಬೈಲ್ ನಲ್ಲಿ ಯಾವ ಅಂಶವನ್ನು ಬಹಳ ಇಷ್ಟಪಡುತ್ತೀರಿ ಎಂಬುದನ್ನು ಯೋಚಿಸಿ,ನಂತರ ಅದು ಡಿಲಿಟ್ ಆಗಿದೆ ಎಂದು ತಿಳಿದುಕೊಳ್ಳಿ. ನಿಮ್ಮ ಫೋನ್‌ನಲ್ಲಿ ಎಲ್ಲಾ ಅಂಶಗಳು ನಿಮಗೆ ಇಷ್ಟ ಎಂದಾದಲ್ಲಿ ಇದನ್ನು ಎಮೆರ್ಜೆನ್ಸಿ ಎಂದು ತಿಳಿಯಿರಿ.ಅಂತಹ ಸಮಯದಲ್ಲಿ ಮಾತ್ರ ಬಳಸುವುದು ರೂಡಿಸಿಕೊಳ್ಳಿ.

3.ಕಾಲ್ಸ್‌ಗೆ ಮಿತಿಯಿರಲಿ. ನಿಮ್ಮ ಸ್ನೇಹಿತರಿಗೆ ನೀವು ಅಡಿಕ್ಟ್ ಆಗಿರುವುದರ ಬಗ್ಗೆ ಹೇಳಿ ಮತ್ತು ಫೋನ್ ನಲ್ಲಿ ಮಾತನಾಡುವುದು ಕಡಿಮೆ ಮಾಡುವಂತೆ ನೋಡಿಕೊಳ್ಳಿ.
ನಿಶ್ಯಕ್ತಿಗೆ ಇವುಗಳು ಕಾರಣವಿರಬಹುದೇ?
4. ಮೊಬೈಲ್ ಫೀಚರ್ಸ್ ಅನ್ನು ನಿಷ್ಕ್ರಿಯಗೊಳಿಸಿಬಿಡಿ. ಅಂದರೆ ಮೆಸೇಜ್ ಪ್ಯಾಕ್, ರಿಂಗ್ಟೋನ್ ಇವುಗಳನ್ನು ಡಿಆಕ್ಟಿವೇಟ್ ಮಾಡಿಸಿಬಿಡಿ. ಒಂದು ಮೆಸೇಜ್ ಕಳಿಸಲು ಸಾಮಾನ್ಯವಾಗಿ ೧೦ ಪೈಸೆ ಇರುತ್ತದೆ,ಸಾಕಷ್ಟು ಮೆಸೇಜ್ ಕಳಿಸುವುದರಿಂದ ನಿಮ್ಮ ಹಣ ಕಡಿತವಾಗುವುದು ನಿಮ್ಮ ಗಮನಕ್ಕೆ ಬರುತ್ತದೆ ಇದರಿಂದ ನೀವೇ ಮೆಸೇಜ್ ಕಳಿಸುವುದರಿಂದ ದೂರ ಉಳಿಯುತ್ತೀರಿ.
5. ನೀವು ಮನೆಯಲ್ಲಿದ್ದಾಗ ಅಂದರೆ ಶಾಲೆ,ಕಾಲೇಜ್ ನಿಂದ ಬಂದ ತಕ್ಷಣ,ಊಟದ ನಂತರ, ವಾರಾಂತ್ಯಗಳಲ್ಲಿ ಫೋನ್ ಅನ್ನು ನಿಮ್ಮ ಪೋಷಕರಿಗೆ ಕೊಟ್ಟುಬಿಡಿ.
6.ಪಿ ಯಾಸ್ ಯು ಗೋ ಹಾಕಿಸಿಕೊಳ್ಳಿ, ಆಗ ನೀವು ಅಧಿಕವಾಗಿ ಮಾತನಾಡಿದಾಗ ತಾನಾಗಿಯೇ ನಿಮ್ಮ ಮೊಬೈಲ್ ಕಾಲ್ಸ್ ಮತ್ತು ಮೆಸೇಜ್ ಹೋಗುವುದಿಲ್ಲ. ಆಗ ನೀವು ಇದರ ಬಳಕೆ ಕಡಿಮೆ ಮಾಡಬಹುದು.
ತೂಕ ಹೆಚ್ಚಿಸುವ ದೈನಂದಿನ ಅಭ್ಯಾಸಗಳು
7. ಬಿಟ್ಟುಬಿಡಿ, ಸೆಲ್ ಫೋನ್ ಬಳಕೆಯನ್ನು ಸಂಪೂರ್ಣವಾಗಿ ಅಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಬಳಕೆ ಕಡಿಮೆ ಮಾಡಿ. ನಿಮಗೆ ಮೆಸೇಜ್ ಮಾಡಬೇಕು ಎಂದೆನಿಸಿದರೂ ಕೂಡ ನೀವು ಅದರ ಬಗ್ಗೆ ಈಗಲೇ ಕಾಲ್ ಅಥವಾ ಮೆಸೇಜ್ ನ ಅವಶ್ಯಕತೆ ಇದೆಯೇ ಎಂಬುದನ್ನು ಯೋಚಿಸಿ ನಂತರ ಮುಂದುವರಿಯಿರಿ. ಇಷ್ಟಾದರೂ ಕೂಡ ನೀವು ನಿಮ್ಮ ಸೆಲ್ ಫೋನ್ ಅನ್ನು ಬಿಟ್ಟಿರಲು ಆಗದಿದ್ದರೆ,ನೀವು ಸೆಲ್ ಫೋನ್ ಇಲ್ಲದೆಯೇ ಇರುವಾಗ ಹೇಗಿರುತ್ತೀರಿ ಎಂಬುದರ ಬಗ್ಗೆ ಎಚ್ಚರದಿಂದಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
