Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ದೇಹದಲ್ಲಿ ಕಂಡುಬರುವ ಸಣ್ಣ ಗಂಟುಗಳಿಂದ ಬೇಸತ್ತು ಹೋಗಿರುವಿರಾ?
ದೇದಲ್ಲಿ ಸಣ್ಣ ಗಂಟುಗಳ ರೀತಿ ಆಗುವುದು ದೊಡ್ಡವರು ಮತ್ತು ಮಕ್ಕಳಲ್ಲೂ ಕೂಡ ಸಾಮಾನ್ಯವಾಗಿಬಿಟ್ಟಿದೆ. ಮಾನವ ದೇಹದ ವೈರಸ್‌ಗಳು ಹಾನಿಕಾರಕವಲ್ಲದಿದ್ದರೂ ಈ ವಾರ್ಟ್ಸ್ ಬೇರೆಡೆಗೆಲ್ಲ ಹರಡುವ ಸಾಧ್ಯತೆ ಹೆಚ್ಚು. ಇವು ಚರ್ಮ,ಬಾಯಿ, ಜನನಾಂಗ, ಗುದನಾಳ ಎಲ್ಲಿ ಬೇಕಾದರೂ ಆಗಬಹುದು. ಚರ್ಮದ ಗಡ್ಡೆಗಳು ಎಂದು ಕರೆಯಲಾಗುವ ಈ ವಾರ್ಟ್ಸ್ ವಿವಿಧ ರೀತಿಯಲ್ಲಿ ಅಂದರೆ ಸಾಮಾನ್ಯ ವಾರ್ಟ್ಸ್, ಕಾಲಿನ ವಾರ್ಟ್ಸ್, ಫ್ಲಾಟ್ ವಾರ್ಟ್ಸ್, ಜನನಾಂಗ ಗಂಟು ಹೀಗೆ ಬೇರೆಬೇರೆ ರೀತಿಯಲ್ಲಿ ಕಾಣಿಸಿಕೊಳ್ಳಬಹುದು.
ಡಯಟಿಂಗ್ ಪ್ರಭಾವ ಬೀರದಿರಲು ಏಳು ಕಾರಣಗಳು
ಈ ಗಂಟುಗಳು ಒರಟಾಗಿ ಚರ್ಮದಿಂದ ಎದ್ದು ಬರುವಂತೆ ಪ್ರಾರಂಭವಾಗುತ್ತವೆ, ಇವುಗಳು ಕೈ,ಭುಜ,ಕಾಲುಗಳು,ಮುಖ ಮತ್ತು ನೆತ್ತಿಯ ಮೇಲೆ ಕೂಡ ಕಾಣಿಸಿಕೊಳ್ಳಬಹುದು.ಪ್ರಾಥಮಿಕವಾಗಿ ವೈರಸ್ ನಿಂದ ಹುಟ್ಟಿಕೊಳ್ಳುವ ಈ ಗಂಟುಗಳು, ಚರ್ಮದ ಮೇಲೆ ಸರಿಯಾಗಿ ಬೆಳೆಯಲು ಸಾಧ್ಯವಾಗದಿದ್ದಾಗ ಕೂಡ ಕಂಡುಬರುತ್ತದೆ. ಈ ರೀತಿ ಸಣ್ಣ ಗಂಟುಗಳು ಕಾಣಿಸಿಕೊಂಡಾಗ ಮನೆ ಮದ್ದಿನ ಮೂಲಕ ಕೂಡ ಗುಣಪಡಿಸಬಹುದು. ಅವುಗಳಲ್ಲಿ ಕೆಲವು ಮನೆಮದ್ದನ್ನು ಇಲ್ಲಿ ನೀಡಿದ್ದೇವೆ ಓದಿ ನೋಡಿ.
ಹೊಟ್ಟೆಯ ಕೊಬ್ಬು ಕರಗಿಸುವ ಅತ್ಯುತ್ತಮ 10 ಉಪಾಯಗಳು

ಅಗಸೆಬೀಜ:
ಸಣ್ಣ ಗಂಟುಗಳನ್ನು ಹೋಗಲಾಡಿಸಲು ಸಹಾಯಕ. ಅಗಸೇಪುಡಿಗೆ ಅಗಸೆ ಎಣ್ಣೆ ಬೆರಸಿ, ಜೇನು ಸೇರಿಸಿ ಗಂಟು ಇರುವ ಜಾಗಕ್ಕೆ ಹಚ್ಚಿ ನಂತರ ಬಟ್ಟೆಯಲ್ಲಿ ಸುತ್ತಿ. ಪ್ರತಿದಿನ ಹೀಗೆ ಹೊಸದಾಗಿ ತಯಾರಿಸಿಕೊಂಡು ಹಚ್ಚಬೇಕು.

ಬೆಳ್ಳುಳ್ಳಿ:
ಇದಕ್ಕೆ ಇನ್ನೊಂದು ಪರಿಣಾಮಕಾರಿ ಮದ್ದೆಂದರೆ ಬೆಳ್ಳುಳ್ಳಿ, ಬೆಳ್ಳುಳ್ಳಿಯನ್ನು ಗಂಟು ಇರುವ ಜಾಗಕ್ಕೆ ಹಚ್ಚಿ, ಮತ್ತು ಬಟ್ಟೆಯಿಂದ ಸುತ್ತಿ.

ಪೈನಾಪಲ್:
ಪೈನಾಪಲ್ ಹಣ್ಣನ್ನು ಕತ್ತರಿಸಿದ ತಕ್ಷಣ ಗಂಟು ಇರುವ ಜಾಗಕ್ಕೆ ಹಚ್ಚಿ.ದಿನಕ್ಕೆ ಸಾಕಷ್ಟು ಬಾರಿ ಹಚ್ಚಿ ಇದರಿಂದ ಗಂಟು ಬೇಗ ಗುಣವಾಗುತ್ತದೆ.

ಅಂಜೂರ
ಅಂಜೂರದ ಬೇರನ್ನು ಹಚ್ಚಿ.ಇದರಿಂದ ಸಣ್ಣ ಗಂಟು(ವಾರ್ಟ್ಸ್)ಹೋಗಲಾಡಿಸಬಹುದು.

ಈರುಳ್ಳಿ:
ಒಂದು ರಾತ್ರಿಪೂರ್ತಿ ವಿನೆಗರ್ ನಲ್ಲಿ ಈರುಳ್ಳಿಯನ್ನು ನೆನೆಸಿಡಿ.ಬೆಳಗ್ಗೆ ನೆನೆಸಿಟ್ಟ ಈರುಳ್ಳಿ ಹೋಳನ್ನು ಗಂಟಿನ ಮೇಲಿಟ್ಟು ಬಟ್ಟೆ ಸುತ್ತಿ.

ಕರ್ಪೂರದ ತೈಲ:
ಕರ್ಪೂರದ ತೈಲವನ್ನು ದಿನದಲ್ಲಿ ಸಾಕಷ್ಟು ಬಾರಿ ಸವರುವುದರಿಂದ ಗಂಟು ಹೋಗುತ್ತವೆ.

ಕ್ಯಾಸ್ಟರ್ ಎಣ್ಣೆ:
ದಿನದಲ್ಲಿ ಎರಡು ಬಾರಿ ಕ್ಯಾಸ್ಟರ್ ಎಣ್ಣೆಯನ್ನು ಹಚ್ಚುವುದರಿಂದ ಚರ್ಮ ಮೃದುವಾಗುತ್ತದೆ ಮತ್ತು ಗಂಟು ಕರಗುತ್ತದೆ.

ಸೀಮೆಸುಣ್ಣ ಅಥವಾ ಆಲೂಗಡ್ಡೆ:
ಸೀಮೆಸುಣ್ಣ ಅಥವಾ ಆಲೂಗಡ್ಡೆಯಿಂದ ಉಜ್ಜುವುದರಿಂದ ಗಂಟು ಹೋಗಲಾಡಿಸಬಹುದು.

ಚಹಾ ಸೊಪ್ಪಿನ ಎಣ್ಣೆ:
ಚಹಾ ಸೊಪ್ಪಿನ ಎಣ್ಣೆಯನ್ನು ಪ್ರತಿದಿನ ವಾರ್ಟ್ಸ್ ಇರುವ ಜಾಗಕ್ಕೆ ಹಚ್ಚಿದರೆ,ಬೇಗ ಕಡಿಮೆಯಾಗುತ್ತದೆ.

ಬಿಸಿನೀರು:
ಪ್ರತಿದಿನ ಸಣ್ಣ ಗಂಟಾಗಿರುವ ಜಾಗವನ್ನು ಬಿಸಿನೀರಿನಲ್ಲಿ 15 ರಿಂದ 20 ನಿಮಿಷ ಅದ್ದಿಡಿ, ನಂತರ ವಿನೆಗರ್ ಅನ್ನು ಹತ್ತಿಯಲ್ಲಿ ನೆನೆಸಿ ಈ ಜಾಗಕ್ಕೆ ಸವರಿ, ಒಣಗಲು ಬಿಡಿ. ನಂತರ ನೀರಿನಲ್ಲಿ ತೊಳೆದು ಒರೆಸಿಕೊಳ್ಳಿ.

ಬಾಳೆಹಣ್ಣಿನ ಸಿಪ್ಪೆ:
ಸೋಂಕು ತಗುಲಿದ ಭಾಗಕ್ಕೆ ಬಾಳೆಹಣ್ಣಿನ ಸಿಪ್ಪೆಯನ್ನು ಸುತ್ತಿ.ಪ್ರತಿ 12 ರಿಂದ 24 ಗಂಟೆಗಳಿಗೊಮ್ಮೆ ಸಿಪ್ಪೆಯನ್ನು ಬದಲಾಯಿಸಿ.



Click it and Unblock the Notifications
