For Quick Alerts
ALLOW NOTIFICATIONS  
For Daily Alerts

ಕಲ್ಲಂಗಡಿ ಹಣ್ಣಿನಲ್ಲಿರುವ ಗುಣಗಳು ಒಂದಾ ಎರಡಾ...

|

ದಕ್ಷಿಣ ಆಫ್ರಿಕಾ ಮೂಲವಾದ ಕಲ್ಲಂಗಡಿ ವಿಟಮಿನ್ ಭರಿತವಾದ ಹಣ್ಣಾಗಿದೆ. ವಿಟಮಿನ್ ಎ, ಬಿ6 ಮತ್ತು ಸಿ ಯನ್ನು ಒಳಗೊಂಡಿರುವ ಕಲ್ಲಂಗಡಿ ಬಹುವಿಟಮಿನ್ ಅಂಶದಿಂದ ಕೂಡಿದೆ. ಇದರಲ್ಲಿರುವ ವಿಟಮಿನ್ ಸಿ ಅಂಶ ರೋಗನಿರೋಧಕ ಶಕ್ತಿಯನ್ನು ವರ್ಧಿಸಿ ದೇಹಕ್ಕೆ ಚೈತನ್ಯವನ್ನುಂಟು ಮಾಡುತ್ತದೆ.

ಇತರ ಹಣ್ಣು ತರಕಾರಿಗಳಿಗಿಂತ ಲೈಕೊಪಿನ್ ಹೆಚ್ಚಾಗಿರುವ ಕಲ್ಲಂಗಡಿ ಕೊಬ್ಬು ಮುಕ್ತ ನೈಸರ್ಗಿಕ ಕೊಡುಗೆಯಾಗಿದೆ. ಕೊಲೆಸ್ಟ್ರಾಲ್ ಅಂಶವಿಲ್ಲದ ದೇಹಕ್ಕೆ ಶಕ್ತಿಯನ್ನು ಒದಗಿಸುವ ವಿಟಮಿನ್ ಭರಿತ ಹಣ್ಣಾದ ಕಲ್ಲಂಗಡಿ ಬೇಸಿಗೆಯ ಬೇಗೆಯನ್ನು ಕಳೆಯುವಲ್ಲಿ ಸಹಕಾರಿ. ಇದನ್ನು ಜ್ಯೂಸ್ ಅಥವಾ ಹಾಗೆ ಕೂಡ ಸೇವಿಸಬಹುದು. ಕಲ್ಲಂಗಡಿ ಬಾಯಾರಿಕೆಯನ್ನು ಮಾತ್ರ ತೀರಿಸದೆ ರೋಗಗಳ ವಿರುದ್ಧ ಹೋರಾಡುವ ಗುಣವನ್ನು ಹೇರಳವಾಗಿಸಿಕೊಂಡ ಸಮೃದ್ಧ ಹಣ್ಣು.

ಮೊಡವೆಯನ್ನು ಕಡಿಮೆ ಮಾಡುತ್ತದೆ:

ಮೊಡವೆಯನ್ನು ಕಡಿಮೆ ಮಾಡುತ್ತದೆ:

ಮೊಡವೆಗೆ ಇದನ್ನು ಹಚ್ಚಿದರೆ ನೈಸರ್ಗಿಕವಾಗಿ ಕಡಿಮೆಯಾಗುತ್ತದೆ. ತುಂಬಾ ಮೊಡವೆ ಬರುವವರು ಇದರಿಂದ ಪ್ರಯೋಜವನ್ನು ಪಡೆದುಕೊಳ್ಳಬಹುದು.

ನೈಸರ್ಗಿಕವಾದ ಟೋನರ್:

ನೈಸರ್ಗಿಕವಾದ ಟೋನರ್:

ಕಲ್ಲಂಗಡಿ ಹಣ್ಣನ್ನು ಮುಖಕ್ಕೆ ಮಸಾಜ್ ಮಾಡಬಹುದು. ಇದನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಹಚ್ಚಿ, 20 ನಿಮಿಷದ ಬಳಿಕ ತೊಳೆದರೆ ತ್ವಚೆ ಬೆಳ್ಳಗಾಗುವುದು.

ಎಣ್ಣೆ ತ್ವಚೆಯನ್ನು ಹೋಗಲಾಡಿಸುತ್ತದೆ:

ಎಣ್ಣೆ ತ್ವಚೆಯನ್ನು ಹೋಗಲಾಡಿಸುತ್ತದೆ:

ಇದರಲ್ಲಿ ವಿಟಮಿನ್ ಎ ಇರುವುದರಿಂದ ತ್ವಚೆಯಲ್ಲಿ ಅಧಿಕ ಎಣ್ಣೆಯಂಶ ಉತ್ಪತ್ತಿಯಾಗುವುದನ್ನು ತಡೆಯುತ್ತದೆ, ಮುಖದಲ್ಲಿ ರಂಧ್ರಗಳಿದ್ದರೆ ಇದನ್ನು ಹಚ್ಚುತ್ತಾ ಬಂದರೆ ಉತ್ತಮ ಫಲಿತಾಂಶ ಕಾಣಬಹುದು.

ತೂಕವನ್ನು ಕಮ್ಮಿ ಮಾಡುತ್ತದೆ:

ತೂಕವನ್ನು ಕಮ್ಮಿ ಮಾಡುತ್ತದೆ:

ಇದರಲ್ಲಿ ನೀರಿನಂಶ ಅಧಿಕವಿರುವುದರಿಂದ ತೆಳ್ಳಗಾಗಲು ಡಯಟ್ ಮಾಡುವವರು ಒಂದು ಹೊತ್ತು ಕಲ್ಲಂಗಡಿ ಹಣ್ಣು ತಿನ್ನಿ. ಇದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶ ದೊರೆಯುತ್ತದೆ, ತೂಕವೂ ಕಡಿಮೆಯಾಗುವುದು.

ರಕ್ತ ಸಂಚಾರಕ್ಕೆ:

ರಕ್ತ ಸಂಚಾರಕ್ಕೆ:

ಕಲ್ಲಂಗಡಿ ರಕ್ತ ಸಂಚಾರ ಸರಿಯಾಗಿ ನಡೆಯುವಂತೆ ಮಾಡಿ ಆರೋಗ್ಯವನ್ನು ಹೆಚ್ಚಿಸುತ್ತದೆ.

ದೇಹವನ್ನು ತಂಪಾಗಿಸುತ್ತದೆ:

ದೇಹವನ್ನು ತಂಪಾಗಿಸುತ್ತದೆ:

ಬೇಸಿಗೆಯಲ್ಲಿ ತಿನ್ನಲೇಬೇಕಾದ ಹಣ್ಣುಗಳಲ್ಲಿ ಕಲ್ಲಂಗಡಿ ಹಣ್ಣು ಕೂಡ ಒಂದು. ಇದು ದೇಹವನ್ನು ತಂಪಾಗಿ ಇಡುತ್ತದೆ. ದೇಹದಲ್ಲಿ ಉಷ್ಣತೆ ಹೆಚ್ಚಾದರೆ ಚಿಕನ್ ಪಾಕ್ಸ್ ಉಂಟಾಗಬಹುದು ಎಚ್ಚರ!

ಮಾನಸಿಕ ಒತ್ತಡವನ್ನು ಕಡಿಮೆಮಾಡುತ್ತದೆ:

ಮಾನಸಿಕ ಒತ್ತಡವನ್ನು ಕಡಿಮೆಮಾಡುತ್ತದೆ:

ಇದನ್ನು ಪ್ರತೀದಿನ ತಿಂದರೆ ಮಾನಸಿಕ ಒತ್ತಡ ಕಡಿಮೆಯಾಗಿ ಖಿನ್ನತೆ ಮಾಯವಾಗುವುದು.

ಗರ್ಭಿಣಿ ಮಹಿಳೆಯರಿಗೆ ತುಂಬಾ ಒಳ್ಳೆಯದು:

ಗರ್ಭಿಣಿ ಮಹಿಳೆಯರಿಗೆ ತುಂಬಾ ಒಳ್ಳೆಯದು:

ಇದರಲ್ಲಿ ಫಾಲಿಕ್ ಆಸಿಡ್ ಅಧಿಕವಿರುವುದರಿಂದ ಗರ್ಭಿಣಿಯರಿಗೆ ಸೂಕ್ತವಾದ ಆಹಾರವಾಗಿದೆ. ಅಲ್ಲದೆ ಇದರಲ್ಲಿ ಖನಿಜಾಂಶಗಳು ಇರುವುದರಿಂದ ಪೋಷಕಾಂಶಾದ ಕೊರತೆ ಉಂಟಾಗುವುದಿಲ್ಲ.

ದೇಹವನ್ನು ಕ್ಲೆನ್ಸ್ ಮಾಡುತ್ತದೆ:

ದೇಹವನ್ನು ಕ್ಲೆನ್ಸ್ ಮಾಡುತ್ತದೆ:

ಇದರಲ್ಲಿ ನೀರಿನಂಶ ಅಧಿಕವಿರುವುದಿಂದ ದೇಹವನ್ನು ಕ್ಲೆನ್ಸ್ ಮಾಡುತ್ತದೆ.

ತಾರುಣ್ಯ ಭರಿತ ತ್ವಚೆಗಾಗಿ:

ತಾರುಣ್ಯ ಭರಿತ ತ್ವಚೆಗಾಗಿ:

ಇದು ನೆರಿಗೆ ಬರುವುದನ್ನು ತಡೆಗಟ್ಟಿ ತಾರುಣ್ಯದ ಚೆಲುವನ್ನು ಉಳಿಸಲು ಸಹಾಯ ಮಾಡುತ್ತದೆ.

ಮೂಳೆಗಳ ಆರೋಗ್ಯಕ್ಕೆ:

ಮೂಳೆಗಳ ಆರೋಗ್ಯಕ್ಕೆ:

ಇದರಲ್ಲಿ ಕಬ್ಬಿಣದಂಶ, ಮ್ಯಾಗ್ನಿಷ್ಯಿಯಂ, ಕ್ಯಾಲ್ಸಿಯಂ, ಸತು, ಪೊಟಾಷ್ಯಿಯಂ, ಐಯೋಡಿನ್ ಇರುವುದರಿಂದ ಮೂಳೆಗಳನ್ನು ಬಲವಾಗಿಸುತ್ತದೆ. ಇದರಿಂದ ಸಂಧಿ ನೋವು ಉಂಟಾಗುವುದಿಲ್ಲ.

ಸಂಧಿ ನೋವು ತಡೆಯುತ್ತದೆ:

ಸಂಧಿ ನೋವು ತಡೆಯುತ್ತದೆ:

ಮ್ಯಾಗ್ನಿಷ್ಯಿಯಂ, ಕ್ಯಾಲ್ಸಿಯಂ, ಸತು, ಪೊಟಾಷ್ಯಿಯಂ, ಐಯೋಡಿನ್ ಇರುವುದರಿಂದ ಮೂಳೆಗಳನ್ನು ಬಲವಾಗಿಸುತ್ತದೆ. ಇದರಿಂದ ಸಂಧಿ ನೋವು ಉಂಟಾಗುವುದಿಲ್ಲ.

ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ:

ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ:

ಇತರ ಹಣ್ಣುಗಳಿಗಿಂತ ಕಲ್ಲಂಗಡಿ ಹಣ್ಣಿನಲ್ಲಿ ಲೈಕೋಪೆನೆ ಅಧಿಕವಿದೆ. ಲೈಕೋಪೆನೆ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ.

ಶಕ್ತಿ ತುಂಬುತ್ತದೆ:

ಶಕ್ತಿ ತುಂಬುತ್ತದೆ:

ದೇಹದ ಚೈತನ್ಯ ಹೆಚ್ಚಿ ಸುಸ್ತು ಮಾಯವಾಗುವುದು ಇದರಲ್ಲಿ ವಿಟಮಿನ್ ಬಿ6 ಇರುವುದರಿಂದ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಬೇಗನೆ ಉದ್ವೇಗಕ್ಕೆ ಒಳಗಾಗುವುದನ್ನು ತಡೆಯುತ್ತದೆ.

ಕಿಡ್ನಿಯ ಆರೋಗ್ಯಕ್ಕೆ:

ಕಿಡ್ನಿಯ ಆರೋಗ್ಯಕ್ಕೆ:

ಈ ಹಣ್ಣಿನಲ್ಲಿ ಸಿಟ್ರೊಲೈನ್(citrulline) ಇದ್ದು, ಇದು ದೇಹವನ್ನು ಸೇರಿದಾಗ ಅಮೈನೋ ಆಸಿಡ್ ಆಗಿ ಪರಿವರ್ತನೆಯಾಗುತ್ತದೆ. ಅಮೈನೋ ಆಸಿಡ್ ಕಿಡ್ನಿಯಲ್ಲಿ ಕಲ್ಲು ಉಂಟಾಗದಂತೆ ಕಾಪಾಡುತ್ತದೆ.

ವಿಟಮಿನ್ ಸಿ

ವಿಟಮಿನ್ ಸಿ

ಇದರಲ್ಲಿ ವಿಟಮಿನ್ ಅಂಶ ಅಧಿಕವಿದೆ. ಬೇಸಿಗೆಯಲ್ಲಿ ದಿನಾ ಒಂದು ತುಂಡು ಕಲ್ಲಂಗಡಿ ಹಣ್ಣು ತಿನ್ನುವವರಿಗೆ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ. ತ್ವಚೆ ರಕ್ಷಣೆಯನ್ನು ಮಾಡುತ್ತದೆ. ಗಾಯವಾಗಿದ್ದರೆ ಬೇಗನೆ ಒಣಗಲು ಸಹಾಯ ಮಾಡುತ್ತದೆ.

ಅಸ್ತಮಾ:

ಅಸ್ತಮಾ:

ಇದರಲ್ಲಿರುವ antioxidants ಅಸ್ತಮಾ ಕಾಯಿಲೆಯನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ವಿಟಮಿನ್ ಸಿ, ಫ್ಲೇವೋನೈಡ್ಸ್ ಅಂದರೆ ಲೈಕೋಪೆನೆ, ಬೀಟಾ ಕ್ಯಾರೋಟಿನ್, ಲ್ಯೂಟಿನ್ ಮುಂತಾದ ಅಂಶಗಳಿವೆ.

ಹೃದಯ ಹಾಗೂ ಕೊಲೆಸ್ಟ್ರಾಲ್:

ಹೃದಯ ಹಾಗೂ ಕೊಲೆಸ್ಟ್ರಾಲ್:

ಕೊಲೆಸ್ಟ್ರಾಲ್ ಹೆಚ್ಚಾದರೆ ಹೃದಯಾಘಾತ ಉಂಟಾಗುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿರುವ antioxidants ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

ಪ್ರತ್ಯಾಮ್ಲಗಳು:

ಪ್ರತ್ಯಾಮ್ಲಗಳು:

ಕಲ್ಲಂಗಡಿಯಲ್ಲಿ ಪ್ರತ್ಯಾಮ್ಲಗಳು (natioxidants) ಅಧಿಕವಿರುತ್ತದೆ. ಇದು ದೇಹಕ್ಕೆ ಹಾನಿಯುಂಟು ಮಾಡುವ ಬೇಡದ ರಾಸಾಯನಿಕಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಹೈಡ್ರೇಟ್ ಮತ್ತು ದೇಹ ಸ್ವಚ್ಛಕ:

ಹೈಡ್ರೇಟ್ ಮತ್ತು ದೇಹ ಸ್ವಚ್ಛಕ:

ಕಲ್ಲಂಗಡಿ 6% ಸಕ್ಕರೆ ಮತ್ತು 92% ನೀರನ್ನು ಒಳಗೊಂಡಿರುವ ನ್ಯೂಟ್ರೀಷಿಯನ್ ಭರಿತ ಹಣ್ಣಾಗಿದೆ. ಕಿಡ್ನಿ ರೋಗಿಗಳಿಗೆ ಡಯಾಲಿಸಿಸ್‌ಗಿಂತ ಮುಂಚೆ ಹೋಮಿಯೋಪತಿ ಚಿಕಿತ್ಸೆಯಂತೆ ಕಲ್ಲಂಗಡಿಯನ್ನು ನೀಡಲಾಗುತ್ತದೆ.

ತ್ವಚೆಯ ರಕ್ಷಣೆ:

ತ್ವಚೆಯ ರಕ್ಷಣೆ:

ನೀವು ಒಣ ತ್ವಚೆಯನ್ನು ಹೊಂದಿದ್ದರೆ ನಿಮ್ಮ ಈ ಬಗೆಯ ಸಮಸ್ಯೆಯನ್ನು ದೂರಮಾಡುವಲ್ಲಿ ಕಲ್ಲಂಗಡಿ ಉತ್ತಮ ಹಣ್ಣಾಗಿದೆ. ಇದರಲ್ಲಿರುವ ಅತ್ಯಧಿಕ ನೀರಿನ ಅಂಶ ಬಾಯಾರಿಕೆಯನ್ನು ದೂರಮಾಡಿ ನಮ್ಮನ್ನು ಹೈಡ್ರೇಟ್‌‌ನ್ನಾಗಿ ಮಾಡುತ್ತದೆ.

ಒಣ ತ್ವಚೆಗಾಗಿ ಕಲ್ಲಂಗಡಿ ಫೇಸ್‌ಪ್ಯಾಕ್:

ಒಣ ತ್ವಚೆಗಾಗಿ ಕಲ್ಲಂಗಡಿ ಫೇಸ್‌ಪ್ಯಾಕ್:

2 ಸ್ಫೂನ್ ಕಲ್ಲಂಗಡಿ ರಸ, 2 ಟೇಸ್ಪೂನ್ ಲಿಂಬೆ ರಸ, 1 ಟೇಬಲ್‌ಸ್ಪೂನ್ ಜೇನು. ಇವುಗಳನ್ನು ಮಿಶ್ರ ಮಾಡಿಕೊಂಡು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ 15-20 ನಿಮಿಷದ ನಂತರ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ

ನಿಮಿರುವಿಕೆಯ ನಿಷ್ಕ್ರಿಯತೆಯನ್ನು ಉಪಚರಿಸುತ್ತದೆ:

ನಿಮಿರುವಿಕೆಯ ನಿಷ್ಕ್ರಿಯತೆಯನ್ನು ಉಪಚರಿಸುತ್ತದೆ:

ಕಲ್ಲಂಗಡಿಯಲ್ಲಿರುವ ಸಿಟ್ರುಲ್ಲಿನ್, ಅಮೀನೊ ಏಸಿಡ್ ಅನ್ನು ಇನ್ನೊಂದು ಅಮೀನೊ ಏಸಿಡ್‌ ಅರ್ಜಿನೈನ್‌ನ ರಚನೆಗೆ ದೇಹದ ಮೂಲಕ ಬಳಸಲಾಗುತ್ತದೆ. ಇದರಿಂದ ದೇಹದಲ್ಲಿನ ಅಮೋನಿಯಾವನ್ನು ಹೊರಹಾಕಿ ನಿಟ್ರಿಕ್ ಆಕ್ಸೈಡ್ ಅನ್ನು ಉತ್ಪಾದಿಸುತ್ತದೆ. ನಿಟ್ರಿಕ್ ಆಕ್ಸೈಡ್ ರಕ್ತ ನಾಳಗಳನ್ನು ಮಾತ್ರ ಸಡಿಲಗೊಳಿಸದೆ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ವಯಾಗ್ರಾದ ಒಂದು ಭಾಗವಾಗಿರುವ ನಿಟ್ರಿಕ್ ಆಕ್ಸೈಡ್ ನಿಮಿರುವಿಕೆಯ ನಿಷ್ಕ್ರಿಯತೆಯನ್ನು ನಿರ್ಬಂಧಿಸುತ್ತದೆ.

ದೇಹದಲ್ಲಿ ಹೈಡ್ರೇಶನ್ ಇರುವಂತೆ ನೋಡಿಕೊಳ್ಳುತ್ತದೆ:

ದೇಹದಲ್ಲಿ ಹೈಡ್ರೇಶನ್ ಇರುವಂತೆ ನೋಡಿಕೊಳ್ಳುತ್ತದೆ:

ಕಲ್ಲಂಗಡಿ ದೇಹದಲ್ಲಿ ಹೈಡ್ರೇಶನ್ ಇರುವಂತೆ ನೋಡಿಕೊಳ್ಳುತ್ತದೆ ಹಾಗೂ ಇದು ಕ್ಯಾಲ್ಶಿಯಂ ಭರಿತವಾಗಿದ್ದು ಆರೋಗ್ಯವಂತ ಬ್ಯಾಕ್ಟೀರಿಯಾ ಜೀರ್ಣಕ್ರಿಯೆಗೆ ಸಹಕಾರಿ. ಹೆಚ್ಚಾಗಿ ಈ ಸ್ಮೂತಿ ಬೇಸಿಗೆಯಲ್ಲಿ ತೂಕ ಇಳಿಸಲು ಸಹಕಾರಿಯಾಗಿದೆ.

ಚಿಕನ್ ಫಾಕ್ಸ್‌ಗೆ:

ಚಿಕನ್ ಫಾಕ್ಸ್‌ಗೆ:

ನಿಮಗೆ ಚಿಕನ್ ಫಾಕ್ಸ್ ಬಿದ್ದಾಗ ಸೇವಿಸಲು ಕಲ್ಲಂಗಡಿ ಒಂದು ಉತ್ತಮ ಹಣ್ಣಾಗಿದೆ. ನಿಮ್ಮ ದೇಹವನ್ನು ತಂಪಾಗಿಸುವ ಶಕ್ತಿ ಕಲ್ಲಂಗಡಿಗೆ ಇದೆ ಮತ್ತು ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಇದು ಹೆಚ್ಚು ಮಾಡುವ ಹಣ್ಣಾಗಿದೆ. ವರಿಸೆಲ್ಲಾ - ಝೋಸ್ಟರ್ ವೈರಸ್ (ವಿಝೆಡ್‌ವಿ) ನಿಮ್ಮ ದೇಹಕ್ಕೆ ಹಾನಿ ಉಂಟುಮಾಡಿದಾಗ ಕಲ್ಲಂಗಡಿ ಜ್ಯೂಸ್ ಅನ್ನು ಸೇವಿಸುವುದು ಸೋಂಕನ್ನು ನಿವಾರಿಸುವಲ್ಲಿ ಪರಿಣಾಮಕಾರಿ.

English summary

Health benefits of watermelon

Watermelon is one of the fruits that offers both skin and Health benefits. You can either apply watermelon on your face or have the juicy fruit in your diet to stay healthy and look beautiful. If you want to know other beauty and skin benefits of watermelon, read on...
X
Desktop Bottom Promotion