Latest Updates
-
ಬಿಸಿಗಾಳಿಯ ಅಬ್ಬರ: ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸದಿದ್ದರೆ ಕಾದಿದೆ ದೊಡ್ಡ ಅಪಾಯ! -
ಸಲಿಂಗ ಜೋಡಿಗಳಿಗೆ ಸಿಕ್ತು ಭದ್ರತೆ: ಹೈಕೋರ್ಟ್ನ ಈ ತೀರ್ಪು ನಿಮ್ಮ ಬದುಕನ್ನೇ ಬದಲಿಸಬಹುದು! -
ಸುಡುವ ಬಿಸಿಲಿಗೆ ಸುಸ್ತಾದ್ರಾ? ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ನಕಲಿ ಜಿಮ್ ಸಪ್ಲಿಮೆಂಟ್ ಬಳಸುತ್ತಿದ್ದೀರಾ? ದೆಹಲಿಯ ಈ ದಾಳಿ ನಿಮ್ಮ ಕಣ್ಣು ತೆರೆಸುತ್ತದೆ! -
40 ಡಿಗ್ರಿ ಬಿಸಿಲಲ್ಲೂ ಫ್ರೆಶ್ ಆಗಿರಬೇಕಾ? ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ! -
ಹೀಟ್ವೇವ್ ಅಲರ್ಟ್: ಬಿಸಿಲ ಬೇಗೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲಿ ಡೇಟಿಂಗ್ ಪ್ಲಾನ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಬೇಡಿ! -
ಬಿಸಿಗಾಳಿಯ ಅಬ್ಬರ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಉಪಾಯಗಳು -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮ ಪಾಲಿಸಿ -
ಫ್ಯಾಶನ್ ರೆವಲ್ಯೂಷನ್ ಡೇ: ಬಟ್ಟೆಯನ್ನು ಉಲ್ಟಾ ಧರಿಸಿ ಫೋಟೋ ಹಾಕುತ್ತಿರುವುದೇಕೆ? ಈ ಟ್ರೆಂಡ್ ಹಿಂದಿದೆ ದೊಡ್ಡ ಕಥೆ!
ಬೆಂಡೆಕಾಯಿಯಿಂದ ಅರೋಗ್ಯಕ್ಕಾಗುವ ಅನುಕೂಲತೆಗಳು
ಬೆಂಡಿ,ಲೇಡಿಸ್ ಫಿಂಗರ್,ಒಕ್ರಾ ಎಂದು ಪ್ರಪಂಚದ ವಿವಿಧ ಭಾಗಗಳಲ್ಲಿ ಜನಪ್ರಿಯವಾಗಿರುವ ತರಕಾರಿ ಈ ಬೆಂಡೆಕಾಯಿ.ಇದರ ವೈಜ್ಞಾನಿಕ ಹೆಸರು Abelmoschus esculentus ಮತ್ತು ಇದು ಎಲ್ಲಿಂದ ಪ್ರಾರಂಭವಾಯಿತು ಎಂಬುದು ಖಚಿತವಿಲ್ಲ. ಸಂಶೋಧನೆಗಳು ಇದು ದಕ್ಷಿಣ ಏಷ್ಯಾ, ಆಫ್ರಿಕಾ ಮತ್ತು ಯುರೋಪಿಯನ್ ಭಾಗಗಳಿಂದ ಬೆಳೆದು ಬಂದಿದೆ ಎನ್ನುತ್ತದೆ. ಅಮೇರಿಕಾದಲ್ಲಿ ಇದನ್ನು ಒಕ್ರಾ ಎಂದು ಕರೆಯಲಾಗಿದ್ದು ಪ್ರಪಂಚದ ಇತರ ಭಾಗಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ.
ಇದನ್ನು ಕೆರೆಬಿಯನ್‌ನಿಂದ ಚೀನಾದವರೆಗೆ ಎಲ್ಲಾ ಭಾಗಗಳಲ್ಲೂ ಬಳಸುತ್ತಾರೆ. ಅಡುಗೆಗೆ ಮುಖ್ಯ ತರಕಾರಿಯಾಗಿ,ಉಪ್ಪಿನಕಾಯಿಯಾಗಿ,ಸೈಡ್ ಡಿಶ್,ವೆಜಿಟೇಬಲ್ ಆಯಿಲ್ ತಯಾರಿಸಲು ಹೀಗೆ ವಿವಿಧ ರೀತಿಯಲ್ಲಿ ಇದನ್ನು ಹೆಚ್ಚು ಬಳಸಲಾಗುತ್ತಿದೆ.
ಇದರಿಂದ ದೊರೆಯುವ ವಿಟಮಿನ್,ಮಿನರಲ್,ಸಾವಯುವ ಅಂಶದಿಂದಾಗಿ ಬೆಂಡೆ ಕಾಯಿಯನ್ನು ಸಾಕಷ್ಟು ವಿಧಾನದಲ್ಲಿ ಉಪಯೋಗಿಸಲಾಗುತ್ತದೆ.ಇವೆಲ್ಲವುಗಳು ಇದರಲ್ಲಿ ದೊರೆಯುವುದರಿಂದ ಉತ್ತಮ ಅರೋಗ್ಯ ಪಡೆಯಲು ಕೂಡ ಇದು ಸಹಾಯಕ.

ಬೆಂಡೆಕಾಯಿಯಲ್ಲಿರುವ ಪೌಷ್ಟಿಕಾಂಶ:
ಬೆಂಡೆಕಾಯಿಯ ಮಾರುಕಟ್ಟೆಯಲ್ಲಿ ಹೆಚ್ಚು ಪ್ರಚಾರ ಪಡೆದಿಲ್ಲದಿರಬಹುದು.ಆದರೆ ಇದರಲ್ಲಿ ಖನಿಜಾಂಶ,ವಿಟಮಿನ್ ಎ,ಬಿ,ಸಿ,ಇ ಮತ್ತು ಕೆ,ಕ್ಯಾಲ್ಸಿಯಂ,ಕಬ್ಬಿಣದಂಶ,ಮ್ಯಗ್ನಿಶಿಯಂ,ಪೊಟ್ಯಾಷಿಯಂ ಮತ್ತು ಸತುವಿನ ಅಂಶ ಅಧಿಕವಿರುತ್ತದೆ.ಜೊತೆಗೆ ಇದರಲ್ಲಿ ನಾರಿನಂಶ ಕೂಡ ಇರುತ್ತದೆ.

ಜೀರ್ಣಕಾರಿ:
ಬೆಂಡೆಕಾಯಿ ಅಡುಗೆಯಲ್ಲಿ ಬಳಸುವುದರಿಂದ ನಿಮಗಾಗುವ ಮುಖ್ಯ ಆರೋಗ್ಯಕರ ಅಂಶವೆಂದರೆ ಇದು ನಾರಿನಂಶವನ್ನು ಸಂಪೂರ್ಣವಾಗಿ ದೇಹಕ್ಕೆ ಸೇರುವಂತೆ ಮಾಡುತ್ತದೆ.ಬೆಂಡೆಕಾಯಿಯಲ್ಲಿರುವ ನಾರಿನಂಶ ನಿಮ್ಮ ದೇಹದ ಜೀರ್ಣಕ್ರಿಯೆ ಸಕ್ರಿಯವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ.ಇದನ್ನು ಅಡುಗೆಗೆ ಬಳಸುವುದರಿಂದ ಮಲಬದ್ಧತೆ,ಗ್ಯಾಸ್ ಸಮಸ್ಯೆ,ಹೊಟ್ಟೆ ಉಬ್ಬರ ಇವುಗಳಾಗದಂತೆ ತಡೆಯುತ್ತದೆ.ಇದು ಡಯೇರಿಯಾವನ್ನು ಕೂಡ ತಡೆಯುತ್ತದೆ.ಜೊತೆಗೆ ದೇಹದಲ್ಲಿರುವ ಅಧಿಕ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕುತ್ತದೆ.

ಚರ್ಮದ ಆರೋಗ್ಯ:
ಇದರಲ್ಲಿರುವ ವಿಟಮಿನ್ ಎ ಚರ್ಮವನ್ನು ಸುಂದರವಾಗಿರಿಸುತ್ತದೆ.ಸುಕ್ಕು,ಮೊಡವೆ ಮುಂತಾದವುಗಳು ಸಂಭವಿಸದಂತೆ ತಡೆಯುತ್ತವೆ.ಫ್ರೀ ರಾಡಿಕಲ್ಸ್ ಅನ್ನು ಬೆಂಡೆಯಲ್ಲಿರುವ ಉತ್ಕರ್ಷಣ ಅಂಶ ಹಾನಿಗೊಳಗಾದ ಚರ್ಮವನ್ನು ಸರಿದೂಗಿಸಲು ಸಹಕರಿಸುತ್ತದೆ.

ಇಮ್ಯೂನ್ ಸಿಸ್ಟಮ್:
ಬೆಂಡೆಕಾಯಿಯಲ್ಲಿರುವ ವಿವಿಧ ಉತ್ಕರ್ಷಣ ಅಂಶಗಳು ಫ್ರೀ ರಾಡಿಕಲ್ಸ್ ವಿರುದ್ಧ ಹೋರಾಡುತ್ತವೆ.ಜೊತೆಗೆ ಇದರಲ್ಲಿರುವ ವಿಟಮಿನ್ ಸಿ ಇಮ್ಮ್ಯೂನ್ ಸಿಸ್ಟಮ್ ಅನ್ನು ಹೆಚ್ಚಿಸುತ್ತದೆ.ವಿಟಮಿನ್ ಸಿ ದೇಹದ ಇಮ್ಮ್ಯುನ್ ವ್ಯಯಸ್ಥೆಯನ್ನು ಹೆಚ್ಚು ಪ್ರಚೋದಿಸಿ ಬಿಳಿ ರಕ್ತ ಕಣಗಳನ್ನು ಹೆಚ್ಚಿಸಲು ಸಹಕರಿಸುತ್ತದೆ.ಇದರಿಂದ ದೇಹದಲ್ಲಿ ಕಾಣಿಸಿಕೊಳ್ಳಬಹುದಾದ ಅನೇಕ ಸಮಸ್ಯೆ ಹೋಗಲಾಡಿಸುವ ಗುಣ ಪಡೆಯುತ್ತದೆ.

ರಕ್ತದೊತ್ತಡ ಮತ್ತು ಹೃದಯದ ಅರೋಗ್ಯ:
ಬೆಂಡೆಕಾಯಿ ವಿಟಮಿನ್ ಮತ್ತು ಖನಿಜಾಂಶಗಳು,ಪೊಟ್ಯಾಷಿಯಂ ಅಧಿಕವಿರುವ ಆರೋಗ್ಯಕ್ಕೆ ಮುಖ್ಯವಾದ ತರಕಾರಿ.ದೇಹಕ್ಕೆ ಬೇಕಾದ ನೀರಿನಂಶವನ್ನು ಇದರಲ್ಲಿರುವ ಪೊಟ್ಯಾಷಿಯಂ ಕಾಪಾಡುತ್ತದೆ.ಜೊತೆಗೆ ಪೊಟ್ಯಾಷಿಯಂ,ಸಂಧಿ ಮತ್ತು ರಕ್ತ ಕಣಗಳ ವಿಶ್ರಾಂತಿಗೆ ಸಹಕರಿಸುತ್ತದೆ,ಇದರಿಂದ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಸಮಸ್ಯೆಗಳ ಸಂಭವ ಕಡಿಮೆಯಾಗುತ್ತದೆ.ಜೊತೆಗೆ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಸಂಧಿವಾತದ ಸಮಸ್ಯೆ ಬರುವುದು ತಪ್ಪುತ್ತದೆ.

ದೃಷ್ಟಿ
ನೀವು ಬೆಂಡೆಕಾಯಿಯಿಂದ ಬೆಂಡೆಕಾಯಿಯಲ್ಲಿ ವಿಟಮಿನ್ ಎ,ಜೊತೆಗೆ ಬೀಟಾ ಕೆರೋಟೀನ್,ಲುಟೈನ್ , ಕ್ಸಾಂತೆನ್ ಹೇರಳವಾಗಿರುತ್ತದೆ.ಚಯಾಪಚಯನ ಕ್ರಿಯೆಗೆ ಅಪಾಯಕಾರಿಯಾದ ರಾಡಿಕಲ್ಸ್ ಅನ್ನು ಇದರಲ್ಲಿರುವ ಉತ್ಕರ್ಷಣ ನಿರೋಧಕ ಗುಣ ತಡೆಯುತ್ತದೆ.ಇದರಲ್ಲಿರುವ ಫ್ರೀ ರಾಡಿಕಲ್ಸ್ ದೇಹದ ಇತರ ಅಂಗಗಳಿಗೂ ಹರಿದು ದೃಷ್ಟಿ ಸಮಸ್ಯೆಯನ್ನು ಹೋಗಲಾಡಿಸುವ ಗುಣ ಹೊಂದಿದೆ.ಬೆಂಡೆಕಾಯಿಯನ್ನು ಅಧಿಕ ಪ್ರಮಾಣದಲ್ಲಿ ಬಳಸುವುದರಿಂದ ಕ್ಯಾಟರಾಕ್ಟ್ ಮುಂತಾದ ಸಮಸ್ಯೆಗಳು ಬರುವುದಿಲ್ಲ.
ಸಂಭವಿಸಬಹುದಾದ ಅಪಾಯದ ಬಗ್ಗೆ ತಿಳಿದುಕೊಳ್ಳಲೇಬೇಕು.ಇದರಲ್ಲಿ ಅಕ್ಸಲೆಟ್ ಎಂಬ ಅಂಶವಿರುತ್ತದೆ.ಇದು ಕಿಡ್ನಿಕಲ್ಲು ಮತ್ತು ಪಿತ್ತಶ್ಮರಿ ತೊಂದರೆ ಇದ್ದರೆ ಅದನ್ನು ಉಲ್ಬಣಗೊಳಿಸುತ್ತದೆ. ಒಕ್ರಾವನ್ನು ಕರಿಯುವುದರಿಂದ ದಿನನಿತ್ಯ ನೀವು ತೆಗೆದುಕೊಳ್ಳುವ ಕೊಲೆಸ್ಟ್ರಾಲ್ ಪ್ರಮಾಣ ಕೂಡ ಅಧಿಕವಾಗಬಹುದು. ದೇಹದಲ್ಲಿ ಕೊಲೆಸ್ಟ್ರಾಲ್ ಅನ್ನು ಸಮತೋಲನದಲ್ಲಿ ಇಡಬೇಕೆಂದರೆ ಕರಿಯುವುದನ್ನು ಬಿಟ್ಟು ಬೇರೆ ರೀತಿಯಲ್ಲಿ ಅಡುಗೆ ಮಾಡಲು ಪ್ರಯತ್ನಿಸಿ. ಇದನ್ನು ಬಿಟ್ಟು ಉಳಿದಂತೆ ಬೆಂಡೆಕಾಯಿಯಿಂದ ಸಾಕಷ್ಟು ಪ್ರಯೋಜನಗಳಿವೆ ಆದ್ದರಿಂದ ಪ್ರಪಂಚದ ವಿವಿಧ ಅಡುಗೆ ಪ್ರಯೋಗ ಮಾಡಿ ಆನಂದಿಸಿ.

ಕೊನೆಯಲ್ಲಿ ಎಚ್ಚರಿಕೆಯಿಂದಿರಬೇಕಾದ ಅಂಶಗಳು:
ನೀವು ಬೆಂಡೆಕಾಯಿಯಿಂದ ಸಂಭವಿಸಬಹುದಾದ ಅಪಾಯದ ಬಗ್ಗೆ ತಿಳಿದುಕೊಳ್ಳಲೇಬೇಕು.ಇದರಲ್ಲಿ ಅಕ್ಸಲೆಟ್ ಎಂಬ ಅಂಶವಿರುತ್ತದೆ.ಇದು ಕಿಡ್ನಿಕಲ್ಲು ಮತ್ತು ಪಿತ್ತಶ್ಮರಿ ತೊಂದರೆ ಇದ್ದರೆ ಅದನ್ನು ಉಲ್ಬಣಗೊಳಿಸುತ್ತದೆ. ಒಕ್ರಾವನ್ನು ಕರಿಯುವುದರಿಂದ ದಿನನಿತ್ಯ ನೀವು ತೆಗೆದುಕೊಳ್ಳುವ ಕೊಲೆಸ್ಟ್ರಾಲ್ ಪ್ರಮಾಣ ಕೂಡ ಅಧಿಕವಾಗಬಹುದು. ದೇಹದಲ್ಲಿ ಕೊಲೆಸ್ಟ್ರಾಲ್ ಅನ್ನು ಸಮತೋಲನದಲ್ಲಿ ಇಡಬೇಕೆಂದರೆ ಕರಿಯುವುದನ್ನು ಬಿಟ್ಟು ಬೇರೆ ರೀತಿಯಲ್ಲಿ ಅಡುಗೆ ಮಾಡಲು ಪ್ರಯತ್ನಿಸಿ. ಇದನ್ನು ಬಿಟ್ಟು ಉಳಿದಂತೆ ಬೆಂಡೆಕಾಯಿಯಿಂದ ಸಾಕಷ್ಟು ಪ್ರಯೋಜನಗಳಿವೆ ಆದ್ದರಿಂದ ಪ್ರಪಂಚದ ವಿವಿಧ ಅಡುಗೆ ಪ್ರಯೋಗ ಮಾಡಿ ಆನಂದಿಸಿ.



Click it and Unblock the Notifications