Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧದ ಗೌಪ್ಯತೆ ಕಾಪಾಡಿಕೊಳ್ಳಿ: ದಂಪತಿಗಳಿಗಾಗಿ 7 ಪ್ರಮುಖ ನಿಯಮಗಳು -
ಬೆಂಗಳೂರು ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ 20 ನಿಮಿಷದ ಕೆಲಸ ಮಾಡಿ -
ವಿಶ್ವ ಮೊಟ್ಟೆ ದಿನ: ಕೇವಲ ₹20ರಲ್ಲಿ ಪ್ರೋಟೀನ್ ಪಡೆಯುವ ಅದ್ಭುತ ಹ್ಯಾಕ್ಸ್! -
ಮೈಸೂರು ದಸರಾ 2026: ಅಂಬಾರಿ ಹೊರುವ ಆನೆ ಯಾರು? ಟಿಕೆಟ್, ರೂಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ -
ನವರಾತ್ರಿ ಗರ್ಬಾ: ಕಾಲು ನೋವು, ಸುಸ್ತು ಇಲ್ಲದೆ ಗಂಟೆಗಟ್ಟಲೆ ಡ್ಯಾನ್ಸ್ ಮಾಡಲು ಈ 12 ನಿಮಿಷದ ಟ್ರಿಕ್ ಫಾಲೋ ಮಾಡಿ! -
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ
ಆರೋಗ್ಯ ಉತ್ತಮಪಡಿಸುವಲ್ಲಿ ನುಗ್ಗೆ ಸೊಪ್ಪಿನ ಮಹತ್ವ
ನಿಮ್ಮ ತೋಟದಲ್ಲಿ ನೀವು ನುಗ್ಗೆ ಮರವನ್ನು ಹೊಂದಿರುವಿರಿ ಎಂದರೆ, ನೀವು ಮನೆಯಲ್ಲೇ ವೈದ್ಯರನ್ನು ಹೊಂದಿದಂತೆ ಎಂಬ ಮಾತಿದೆ! ನಿಮ್ಮ ಆರೋಗ್ಯದ ವಿಷಯಕ್ಕೆ ಬಂದಾಗ ನುಗ್ಗೆ ಮರ ನಿಮಗೆ ವರದಾನವಾಗಿದೆ. ನಿಮ್ಮ ಹಲವಾರು ವೈದ್ಯಕೀಯ ಸಮಸ್ಯೆಗಳಿಗೆ ನುಗ್ಗೆ ರಾಮಬಾಣ. ನಿಮ್ಮ ಹೊಳೆಯುವ ತ್ವಚೆಗೆ ಮಾತ್ರ ಸಹಕಾರಿಯಾಗದೆ ನಿಮ್ಮ ಹೊಟ್ಟೆಗೂ ಇದು ಹಿತಕಾರಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಅಧಿಕ ಪ್ರೊಟೀನ್ ಇರುವ ನುಗ್ಗೆ ಸೊಪ್ಪಿನ ಚಟ್ನಿ
ನುಗ್ಗೆ ಮರಗಳ ವಿಷಯಕ್ಕೆ ಬಂದಾಗ, ಸಂಪೂರ್ಣ ಮರವೇ ನಮಗೆ ಒಂದಿಲ್ಲೊಂದು ರೀತಿಯಲ್ಲಿ ಉಪಯೋಗಕಾರಿ. ಹೊಟ್ಟಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ನುಗ್ಗೆ ತುಂಬಾ ಒಳ್ಳೆಯದು, ಮಧುಮೇಹಿಗಳಿಗೆ ನುಗ್ಗೆಯ ಸೊಪ್ಪುಹಿತಕಾರಿ. ಮರದಿಂದ ಒಸರುವ ಮೇಣ ಗಾಯಗಳಿಗೆ ಉತ್ತಮ ಔಷಧಿ ಮತ್ತು ಇದರ ತೊಗಟೆ ನಿಮಗೆ ಬಲಿಷ್ಟವಾದ ಹಲ್ಲನ್ನು ಒದಗಿಸುತ್ತದೆ.
ನಮಗೆ ಬೇಕಾಗುವ ಎಲ್ಲಾ ವಿಟಮಿನ್ ಮತ್ತು ಪ್ರೋಟೀನ್‌ಗಳನ್ನು ನುಗ್ಗೆ ಎಲೆ ಹೊಂದಿದೆ. ನಿಮ್ಮೆಲ್ಲಾ ಸಮಸ್ಯೆಗಳಿಗೆ ಇದು ಸೂಕ್ತ ಪರಿಹಾರ ಒದಗಿಸುತ್ತದೆ ಎಂಬುದು ನೂರು ಪ್ರತಿಶತ ಸತ್ಯ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನುಗ್ಗೆಸೊಪ್ಪಿನ ಚಟ್ನಿಪುಡಿ

ರೋಗ ನಿರೋಧಕ ಶಕ್ತಿ:
ವಿವಿಧ ರೋಗಗಳೊಂದಿಗೆ ಹೋರಾಡಲು ನಿಮಗೆ ಬಲವಾದ ರೋಗನಿರೋಧಕ ಶಕ್ತಿಯ ಅವಶ್ಯಕತೆಯಿದೆ. ಇದನ್ನು ವರ್ಧಿಸಲು 4 ವಾರಗಳಿಗೆ ಎರಡು ಬಾರಿಯಂತೆ ನುಗ್ಗೆ ಸೊಪ್ಪನ್ನು ಸೇವಿಸಬೇಕು.

ಮಧುಮೇಹಿಗಳಿಗೆ:
ಮಧುಮೇಹಿಗಳಿಗೆ ಇದೊಂದು ನೈಸರ್ಹಿಕವಾದ ಮತ್ತು ಉತ್ತಮ ಔಷಧವಾಗಿದೆ. ನುಗ್ಗೆಯ ಸೀಸನ್ ಆಗಿರುವಾಗ ಮಧುಮೇಹಿಗಳು ಇದನ್ನು ತಿಂದಷ್ಟು ಒಳ್ಳೆಯದು.

ರಕ್ತದೊತ್ತಡ ಸಮಸ್ಯೆಗೆ:
ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ನುಗ್ಗೆ ಸೊಪ್ಪನ್ನು ಬೆಚ್ಚಗಿನ ನೀರಿನಲ್ಲಿ ನೆನೆಸಿ. ಒಂದು ಗಂಟೆಯ ನಂತರ, ಈ ನೀರನ್ನು ಕುಡಿಯಿರಿ. ನಿಮ್ಮ ರಕ್ತದೊತ್ತಡವನ್ನು ಇದು ನಿಯಂತ್ರಣದಲ್ಲಿಡುತ್ತದೆ.

ಮೂಳೆಗಳ ಬಲವರ್ಧನೆಗೆ:
ನುಗ್ಗೆ ಸೊಪ್ಪಿನ ಒಂದು ಆರೋಗ್ಯಕಾರಿ ಪ್ರಯೋಜನವೆಂದರೆ ಇದು ಮೂಳೆಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ನಿಮ್ಮ ಮೂಳೆಗಳಿಗೆ ಅಗತ್ಯವಾಗಿರುವ ಕ್ಯಾಲ್ಶಿಯಂ ಅನ್ನು ಇದು ಒದಗಿಸುತ್ತದೆ.

ಸೆಕ್ಸ್ ಹೆಚ್ಚಿಸುತ್ತದೆ:
ಇಲ್ಲಿದೆ ನುಗ್ಗೆ ಸೊಪ್ಪಿನ ಆಸಕ್ತಿಕರ ಒಂದು ಸಂಗತಿ. ಇದು ನಿಮ್ಮ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುತ್ತದೆ. ಸೆಕ್ಸ್‌ನಲ್ಲಿ ಪ್ರಗತಿಯನ್ನು ತೋರಿಸುತ್ತದೆ.

ಹಾಲು ಉತ್ಪಾದನೆ:
ಗರ್ಭಾವಸ್ಥೆಯ ನಂತರ ಹೆಚ್ಚಿನ ಗರ್ಭಿಣಿಯರು ಈ ಸಮಸ್ಯೆಯನ್ನು ಹೊಂದಿರುತ್ತಾರೆ. ನುಗ್ಗೆಸೊಪ್ಪನ್ನು ನಿಯಮಿತವಾಗಿ ಸೇವಿಸುವುದು ಸ್ತನಗಳಲ್ಲಿ ಹಾಲನ್ನು ಹೆಚ್ಚು ಉತ್ಪಾದಿಸುತ್ತದೆ.

ಅನೀಮಿಯಾ:
ಇದು ದೇಹದಲ್ಲಿ ಆರ್‌ಬಿಸಿ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಇದು ಕೆಂಪು ರಕ್ತ ಕೋಶಗಳನ್ನು ಹೆಚ್ಚಿಸುವ ಐರನ್ ಬೆಳವಣಿಗೆಗೆ ಕಾರಣವಾಗಿದೆ.

ಜೀರ್ಣಕ್ರಿಯೆಗೆ:
ಜೀರ್ಣಕ್ರಿಯೆಯನ್ನು ಉತ್ತಮ ಪಡಿಸುವ ಶಕ್ತಿ ನುಗ್ಗೆ ಸೊಪ್ಪಿಗಿದೆ. ಇದು ಕಂದಮ್ಮಗಳಲ್ಲಿ ಮೆದುಳಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

ಸೋಂಕುಗಳ ವಿರುದ್ಧ ಹೋರಾಟ:
ಇದು ಸೋಂಕು ನಿವಾರಕ ಅಂಶಗಳನ್ನು ಹೊಂದಿದ್ದು ಗಂಟಲು, ಎದೆ ಮತ್ತು ತ್ವಚೆಯ ಸೋಂಕುಗಳನ್ನು ನಿವಾರಿಸುತ್ತದೆ.

ಲೂಸ್ ಮೋಶನ್:
ಜೇನು ಮತ್ತು ತೆಂಗಿನ ನೀರಿನೊಂದಿಗೆ ನುಗ್ಗೆ ಸೊಪ್ಪನ್ನು ಮಿಶ್ರ ಮಾಡಿಕೊಂಡು ಸೇವಿಸುವುದು ಲೂಸ್ ಮೋಶನ್ ಸಮಸ್ಯೆಯನ್ನು ದೂರ ಮಾಡುತ್ತದೆ.



Click it and Unblock the Notifications
