Latest Updates
-
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ! -
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ?
ಮುಳ್ಳುಸೌತೆ ಜ್ಯೂಸ್‌ನ 8 ಆರೋಗ್ಯಕಾರಿ ಪ್ರಯೋಜನೆಗಳು
ಮುಳ್ಳುಸೌತೆಯನ್ನು ವಿಶ್ವದಾದ್ಯಂತ ಅಧಿಕ ಪ್ರಮಾಣದಲ್ಲಿ ಬೆಳೆಯುತ್ತಾರೆ. ಸಲಾಡ್‌ಗೆ ಒಂದು ಉತ್ಕೃಷ್ಟ ತರಕಾರಿಯಾಗಿರುವ ಇದು ನಿಮ್ಮ ಆಹಾರದಲ್ಲಿ ನ್ಯೂಟ್ರೀಶಿಯನ್ ಅನ್ನು ಹೇರಳವಾಗಿ ಪೂರೈಸುತ್ತದೆ.
ಹಸಿರು ತರಕಾರಿಗಳು, ಟೊಮೇಟೋ, ಮುಳ್ಳುಸೌತೆ ಬೆರೆತ ಸಲಾಡ್ ಒಂದು ಆರೋಗ್ಯಕರ ವಿಧಾನಕ್ಕೆ ಅಡಿಪಾಯವಾಗಿದೆ. ನಿಮ್ಮ ದಿನ ನ್ಯೂಟ್ರೀನ್ ಬೆರೆತ ಆಹಾರಗಳಿಂದ ಕೂಡಿದ್ದರೆ ಯಾವ ರೀತಿಯ ಕಾಯಿಲೆ ಕೂಡ ನಿಮ್ಮನ್ನು ಸೋಕುವುದಿಲ್ಲ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ನೈಸರ್ಗಿಕ ಶಕ್ತಿಯ ಹಸಿರು ಪಾನೀಯಗಳು
ನಮ್ಮಲ್ಲಿ ಹಲವಾರು ಜನರು ಬೆಳಗ್ಗೆ ಜ್ಯೂಸ್‌ಗಳನ್ನು ಸೇವಿಸುತ್ತಾರೆ. ದೈನಂದಿನ ಜೀವನದಲ್ಲಿ ಈ ಜ್ಯೂಸ್‌ಗಳು ಮಹತ್ವದ ಪ್ರಭಾವವನ್ನು ಬೀರುತ್ತವೆ. ಕೆಲವರು ಹಾಗಲಕಾಯಿ ಜ್ಯೂಸ್ ಅನ್ನು ಸೇವಿಸುತ್ತಾರೆ ಇದರಿಂದ ಅವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿ ಚಟುವಟಿಕೆಯಿಂದ ಅವರು ಕೂಡಿರುತ್ತಾರೆ. ಇದರಿಂದ ಐರನ್ ಮತ್ತು ಇತರ ಆರೋಗ್ಯಕರ ಪ್ರಯೋಜನಗಳು ದೊರಕುತ್ತದೆ.
ನ್ಯೂಟ್ರೀಶಿಯನ್‌ನ ಮುಖ್ಯ ಮೂಲ ಮುಳ್ಳುಸೌತೆ ಜ್ಯೂಸ್ ಆಗಿದೆ. ಮುಳ್ಳುಸೌತೆಯಲ್ಲಿ ವಿಟಮಿನ್ ಕೆ ಹೇರಳವಾಗಿದೆ. ಪುರುಷರು ಮುಳ್ಳುಸೌತೆ ಜ್ಯೂಸ್‌ನ 3 ಕಪ್ ಸೇವಿಸಿದರೆ ಮಹಿಳೆಯರು 2.5 ಕಪ್‌ನಷ್ಟನ್ನು ಸೇವಿಸಲೇಬೇಕು. ಇದು ಹಲವಾರು ರೋಗಗಳನ್ನು ಬುಡದಿಂದಲೇ ನಿವಾರಿಸುವ ಸಾಮರ್ಥ್ಯವನ್ನು ಹೊಂದಿದ್ದು ಒಂದು ಕಪ್‌ನಷ್ಟು ತರಕಾರಿಗಳ ಶಕ್ತಿಯನ್ನು ನೀಡುತ್ತದೆ.
ಸ್ಥೂಲಕಾಯತೆಗೂ ಇದು ಪರಿಹಾರವನ್ನು ನೀಡುತ್ತದೆ. ಈ ಲೇಖನದಲ್ಲಿ ಮುಳ್ಳುಸೌತೆ ಜ್ಯೂಸ್‌ನ ಮತ್ತಷ್ಟು ಪ್ರಯೋಜನಗಳನ್ನು ನೀಡಿದ್ದು ಮಾಹಿತಿಯನ್ನು ಇನ್ನೂ ತಿಳಿದುಕೊಳ್ಳಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಸೌತೆಕಾಯಿಯಲ್ಲಿದೆ ಕೆಲವು ಅಚ್ಚರಿಯ ಗುಣಗಳು

ಹೈಡ್ರೇಟೆಡ್ ಆಗಿ ಇರಿಸುತ್ತದೆ:
ಮುಳ್ಳುಸೌತೆ ನಿಮ್ಮ ದೇಹಕ್ಕೆ ಅಗತ್ಯವಿರುವ ನೀರನ್ನು ಪೂರೈಸುತ್ತದೆ. ದಿನವಿಡೀ ನಿರ್ಜಲೀಕರಣದ ಸಮಸ್ಯೆ ನಿಮ್ಮನ್ನು ಕಾಡದಂತೆ ನೋಡಿಕೊಳ್ಳುತ್ತದೆ. ನಿಮಗೆ ಸಾಕಷ್ಟು ನೀರಿನ ಪೂರೈಕೆ ಬೇಕೆಂದಲ್ಲಿ ಮುಳ್ಳುಸೌತೆಯನ್ನು ಆದಷ್ಟು ಸೇವಿಸಿ.

ಬಿಸಿಲಿನ ವಿರುದ್ಧ ತಂಪು:
ಬಿಸಿಲಿನ ಬೇಗೆ ದೇಹಕ್ಕೆ ಪರಮ ಶತ್ರು. ಈ ಸಮಯದಲ್ಲಿ ತಂಪಿನ ಪರಿಹಾರವನ್ನು ನೀವು ಮಾಡಲೇಬೇಕು. ಮುಳ್ಳುಸೌತೆಯ ಜ್ಯೂಸ್ ದೇಹದ ಉಷ್ಣವನ್ನು ನಿವಾರಿಸಿ ತಂಪನ್ನೀಯುತ್ತದೆ. ಸನ್‌ಬರ್ನ್ ನಿಮಗುಂಟಾದಲ್ಲಿ ಕೂಡ ಮುಳ್ಳುಸೌತೆ ಜ್ಯೂಸ್ ಅನ್ನು ದೇಹಕ್ಕೆ ಸವರಿಕೊಳ್ಳಿ. ತುರ್ತು ಪರಿಹಾರ ನಿಮಗೆ ದೊರಕುತ್ತದೆ.

ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ:
ನಿಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ಮುಳ್ಳುಸೌತೆ ಮುಖ್ಯ ಸಾಮಾಗ್ರಿಯಾಗಿದೆ. ಕಿಡ್ನಿ ಸ್ಟೋನ್ ಸಮಸ್ಯೆ ನಿಮಗಿದ್ದಲ್ಲಿ ಮುಳ್ಳುಸೌತೆ ಜ್ಯೂಸ್ ಅನ್ನು ಸೇವಿಸಲು ಮರೆಯದಿರಿ. ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹಾಕಿ ದೇಹದ ಸ್ವಾಸ್ಥ್ಯವನ್ನು ಕಾಪಾಡುತ್ತದೆ.

ವಿಟಮಿನ್ ಪೂರೈಕೆ:
ನಿಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಅಂಶ ವಿಟಮಿನ್ ಆಗಿದೆ. ಮುಳ್ಳುಸೌತೆ ಎ, ಬಿ ಹಾಗೂ ಸಿ ಮತ್ತು ಕೆ ಸತ್ವಗಳಿಂದ ಕೂಡಿದ್ದು ದೇಹಕ್ಕೆ ವಿಟಮಿನ್‌ನ ಉತ್ತಮ ಪೂರೈಕೆಯನ್ನು ಮಾಡುತ್ತದೆ. ವಿಟಮಿನ್‌ಗಳು ಪ್ರಮುಖ ಆರೋಗ್ಯ ಸಮಸ್ಯೆಗಳನ್ನು ದೂರೀಕರಿಸಿ ನಿಮ್ಮ ತ್ವಚೆಯನ್ನು ಹೊಳೆಯುವಂತೆಮಾಡುತ್ತದೆ.

ಮಿನರಲ್ ಟ್ರೀಟ್‌ಮೆಂಟ್:
ಮುಳ್ಳುಸೌತೆ ಜ್ಯೂಸ್ ಮಿನರಲ್‌ಗಳನ್ನು ಅಧಿಕವಾಗಿ ಹೊಂದಿದೆ. ನಿಮ್ಮ ತ್ವಚೆಯ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾಗಿರುವ ಮಿನರಲ್ಸ್ ಮುಳ್ಳುಸೌತೆಯಲ್ಲಿದೆ. ನಿಮ್ಮ ಸಂಪೂರ್ಣ ದೇಹ ಕೂಡ ಅತ್ಯಗತ್ಯ ಮಿನರಲ್ಸ್ ಪೂರೈಕೆಯನ್ನು ಮುಳ್ಳುಸೌತೆಯಿಂದ ಪಡೆಯುತ್ತದೆ.

ತೂಕ ಇಳಿಸುತ್ತದೆ:
ನೀವು ತೂಕವನ್ನು ಇಳಿಸುವ ಗುರಿಯನ್ನು ಹೊಂದಿರುವವರಾಗಿದ್ದಲ್ಲಿ, ಮುಳ್ಳುಸೌತೆ ಜ್ಯೂಸ್ ಅನ್ನು ಸೇವಿಸಲೇಬೇಕು. ದೇಹಕ್ಕೆ ಬೇಕಾದ ನ್ಯೂಟ್ರೀಶಿಯನ್ ಪೂರೈಕೆ ಮಾಡುತ್ತಾ ದೇಹ ತೂಕವನ್ನು ಇಳಿಸಿಕೊಳ್ಳುವ ಸುಲಭ ವಿಧಾವಾಗಿದೆ ಮುಳ್ಳುಸೌತೆ ಜ್ಯೂಸ್ ಸೇವನೆ.

ಕಣ್ಣಿಗೆ ಉತ್ತಮ:
ವಿಟಮಿನ್ ಎ ಮತ್ತು ಇತರ ಅಗತ್ಯ ಪ್ರೊಟೀನ್‌ಗಳೊಂದಿಗೆ ಮುಳ್ಳುಸೌತೆ ನಿಮ್ಮ ದೃಷ್ಟಿಗೆ ಉತ್ತಮ ಪರಿಣಾಮವನ್ನು ಬೀರುತ್ತದೆ. ನಿಮ್ಮ ಕಣ್ರೆಪ್ಪೆಗಳಿಗೆ ಮುಳ್ಳುಸೌತೆಯನ್ನು ತುಂಡರಿಸಿ ಇಡುವುದರಿಂದ ಕಣ್ಣು ತಂಪಾಗಿರುತ್ತದೆ. ಇಲ್ಲವೇ ಇದರ ಜ್ಯೂಸ್ ಸೇವನೆ ಕೂಡ ಕಣ್ಣಿಗೆ ಉತ್ತಮ.

ಬಿಪಿ ಸಮಸ್ಯೆಗಳ ನಿವಾರಣೆ:
ಅಧಿಕ ಹಾಗೂ ಕಡಿಮೆ ಬಿಪಿ ಸಮಸ್ಯೆಗಳಿಂದ ನೀವು ಬಳಲುತ್ತಿದ್ದಲ್ಲಿ ಮುಳ್ಳುಸೌತೆ ಜ್ಯೂಸ್ ನಿಮಗೆ ಪರಿಣಾಮಕಾರಿಯಾಗಿದೆ.



Click it and Unblock the Notifications
