Latest Updates
-
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ! -
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!
ತಂಪಾದ ಲಸ್ಸಿಯ ಆರೋಗ್ಯಕಾರಿ ಪ್ರಯೋಜನಗಳು
ಲಸ್ಸಿ ಬೇಸಿಗೆಯ ಝಳಕ್ಕೆ ತಂಪನ್ನೀಯುವ ಒಂದು ಪೇಯವಾಗಿದೆ. ಭಾರತದಲ್ಲಿ ಮನೆಮಾತಾಗಿರುವ ಲಸ್ಸಿ ರುಚಿಯಲ್ಲಿ ಸಿಹಿ ಮತ್ತು ಆಹ್ಲಾದಕಾರಿ ಗುಣಗಳಿಂದ ಸಮೃದ್ಧವಾಗಿದೆ. ಲಸ್ಸಿಯನ್ನು ಯೋಗರ್ಟ್ ಇಲ್ಲವೇ ಮೊಸರಿನಿಂದ ತಯಾರಿಸುತ್ತಾರೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಮುಳ್ಳುಸೌತೆ ಜ್ಯೂಸ್‌ನ 8 ಆರೋಗ್ಯಕಾರಿ ಪ್ರಯೋಜನೆಗಳು
ಹಾಲಿನಿಂದ ತಯಾರಿಸಲಾದ ಯೋಗರ್ಟ್ ಮೂತ್ರಸೋಂಕನ್ನು ನಿವಾರಿಸುವಲ್ಲಿ ಸಹಕಾರಿ. ಇದರ ಇನ್ನೊಂದು ಆರೋಗ್ಯಕಾರಿ ಪ್ರಯೋಜನವೆಂದರೆ ಹೊಟ್ಟೆಗೆ ತುಂಬಾ ಒಳ್ಳೆಯದು. ಹೊಟ್ಟೆಯ ಉರಿಯನ್ನು ಶಮನಗೊಳಿಸಿ ದೇಹಕ್ಕೆ ತಂಪನ್ನು ಒದಗಿಸುವಲ್ಲಿ ಯೋಗರ್ಟ್ ತುಂಬಾ ಉತ್ತಮವಾಗಿದೆ. ಆದ್ದರಿಂದಲೇ ಇದರಿಂದ ತಯಾರಿಸಲಾಗುವ ಲಸ್ಸಿ ಕೂಡ ಕೆಲವೊಂದು ಮಹತ್ವದ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ.
ಭಾರತೀಯ ಬೇಸಿಗೆ ಪೇಯವಾದ ಲಸ್ಸಿಯನ್ನು ತಯಾರಿಸಲು ಹಲವಾರು ವಿಧಾನಗಳಿವೆ. ಸಕ್ಕರೆ ಹಾಗೂ ರೋಸ್ ವಾಟರ್ ಅನ್ನು ಬೆರೆಸಿ ಲಸ್ಸಿಯನ್ನು ತಯಾರು ಮಾಡುತ್ತಾರೆ. ಮಾವಿನ ಹಣ್ಣು ಹಾಗೂ ಏಲಕ್ಕಿಯನ್ನು ಮಿಶ್ರ ಮಾಡಿ ಸುವಾಸನೆಯುಕ್ತ ಲಸ್ಸಿಯನ್ನು ನಿಮಗೆ ಸವಿಯಬಹುದು.
ದೇಹದ ಉಷ್ಣವನ್ನು ಕಡಿಮೆ ಮಾಡುವ ಲಸ್ಸಿ ನೀವು ನಿತ್ಯವೂ ಸೇವಿಸಲೇಬೇಕಾದ ಬೇಸಿಗೆ ತಂಪು ಪಾನೀಯವಾಗಿದೆ. ಲಸ್ಸಿಯನ್ನು ಸೇವಿಸಿದರೆ ನಿಮಗೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ಈ ಲೇಖನ ತಿಳಿಸುತ್ತದೆ. ಮುಂದೆ ಓದಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ವಾವ್! ಬಿಸಿಲ ಝಳಕ್ಕೆ ಕೂಲ್ ಕೂಲ್ ವೆಜ್ಜೀಸ್!

ಡೀಹೈಡ್ರೇಶನ್ ನಿವಾರಿಸುತ್ತದೆ:
ಬೇಸಿಗೆಯಲ್ಲಿ, ನೀರು ಬೆವರಿನ ರೂಪದಲ್ಲಿ ದೇಹದಿಂದ ಹೊರಕ್ಕೆ ಹೋಗುತ್ತದೆ. ಲಸ್ಸಿಯನ್ನು ಸೇವಿಸುವುದು ದೇಹವನ್ನು ಹೈಡ್ರೇಟ್ ಮಾಡಿ ನೀರಿನ ಮಟ್ಟವನ್ನು ನಿಯಂತ್ರಿಸುತ್ತದೆ.

ದೇಹದ ಉಷ್ಣವನ್ನು ಶಮನಗೊಳಿಸುತ್ತದೆ:
ಬೇಸಿಗೆ ಪೇಯವಾಗಿರುವ ಲಸ್ಸಿ ಯೋಗರ್ಟ್‌ನಿಂದ ತಯಾರು ಮಾಡಲಾದ ಪಾನೀಯವಾಗಿದೆ. ದೇಹದ ಉಷ್ಣವನ್ನು ಶಮನಗೊಳಿಸಲುವಲ್ಲಿ ಲಸ್ಸಿ ಪ್ರಭಾವಕಾರಿಯಾಗಿದೆ.

ಮೂತ್ರ ಸೋಂಕನ್ನು ತಡೆಯುತ್ತದೆ:
ಯೋಗರ್ಟ್ ಆರೋಗ್ಯವಂತ ಬ್ಯಾಕ್ಟೀರಿಯಾವನ್ನು ಹೊಂದಿದ್ದು ಮೂತ್ರದ ಸೋಂಕನ್ನು ತಡೆಯುವಲ್ಲಿ ಮಹತ್ವಕಾರಿಯಾಗಿದೆ.

ನ್ಯೂಟ್ರೀಶನ್:
ಯೋಗರ್ಟ್‌ನಲ್ಲಿ ಪೊಟ್ಯಾಶಿಯಂ, ಕ್ಯಾಲ್ಶಿಯಂ, ಪ್ರೊಟೀನ್ ಹಾಗೂ ವಿಟಮಿನ್ ಬಿ ಇದ್ದು ಇದು ಬಿ -12 ನಷ್ಟು ಪರಿಣಾಮಕಾರಿಯಾಗಿದೆ. ಇದೊಂದು ನ್ಯೂಟ್ರೀಶನ್ ಉಳ್ಳ ಬೇಸಿಗೆ ಪಾನೀಯವಾಗಿದ್ದು ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ.

ನಿಯಮಿತ ಕರುಳಿನ ಚಲನೆ:
ಯೋಗರ್ಟ್ ಆರೋಗ್ಯಕರ ಪ್ರೊಬೊಯೋಟಿಕ್ಸ್ ಅನ್ನು ಹೊಂದಿದ್ದು ಜೀರ್ಣಕ್ರಿಯೆಯನ್ನು ಹೆಚ್ಚಿಸಿ ಮಲಬದ್ಧತೆಯನ್ನು ನಿವಾರಿಸುತ್ತದೆ. ನಿಯಮಿತ ಕರುಳ ಚಲನೆಯನ್ನು ಇದು ಅಭಿವೃದ್ಧಿಸುತ್ತದೆ.

ಜೀರ್ಣಕ್ರಿಯೆಗೆ ನೆರವು ನೀಡುತ್ತದೆ:
ಹಾಲಿನಲ್ಲಿರುವ ಲ್ಯಾಕ್ಟೋಸ್ ಅನ್ನು ಆರೋಗ್ಯವಂತ ಬ್ಯಾಕ್ಟೀರಿಯಾವು ಲ್ಯಾಕ್ಟಿಕ್ ಆಸಿಡ್ ಆಗಿ ಪರಿರ್ತಿಸುತ್ತದೆ. ಲಸ್ಸಿಯನ್ನು ನಿತ್ಯವೂ ಸೇವಿಸುವುದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ತೂಕ ಏರಿಕೆ:
ಲಸ್ಸಿ ಕ್ರೀಂ ಮತ್ತು ತುಪ್ಪದಿಂದ ಸಮೃದ್ಧವಾಗಿದೆ. ಸಾಂಪ್ರದಾಯಿಕ ಲಸ್ಸಿಯು ತೂಕ ಏರಿಕೆಗೆ ಸಹಕಾರಿಯಾಗಿದೆ.

ಕ್ಯಾಲ್ಶಿಯಂ ಒದಗಿಸುತ್ತದೆ:
ಡೈರಿ ಉತ್ಪನ್ನಗಳಿಂದ ತಯಾರು ಮಾಡಲಾದ ಲಸ್ಸಿ ಕ್ಯಾಲ್ಶಿಯಂ ಭರಿತವಾಗಿದೆ. ಇದು ಮೂಳೆಗೆ ಬೇಕಾದ ಶಕ್ತಿಯನ್ನು ಒದಗಿಸುತ್ತದೆ.

ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ:
ಹಲವಾರು ಅಧ್ಯಯನಗಳ ಪ್ರಕಾರ, ಲಸ್ಸಿಯು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ತಂಪಾದ ಒಂದು ಗ್ಲಾಸ್‌ನಷ್ಟು ಲಸ್ಸಿಯನ್ನು ಸೇವಿಸುವುದು ಬೇಸಿಗೆ ಬಿಸಿಯನ್ನು ನಿವಾರಣೆ ಮಾಡಿ ರೋಗನಿರೋಧಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುತ್ತದೆ.

ಹಸಿವು ನಿಯಂತ್ರಣ:
ನೀವು ತೂಕ ಇಳಿಸುವ ಡಯೆಟ್ ಅನ್ನು ಅನುಸರಿಸುವವರಾಗಿದ್ದರೆ, ಊಟಕ್ಕಿಂತ 30 ನಿಮಿಷಗಳಿಗೆ ಮುಂಚಿತವಾಗಿ ನೀವು ಲಸ್ಸಿಯನ್ನು ಸೇವಿಸಿ. ಲಸ್ಸಿ ನಿಮ್ಮ ಹೊಟ್ಟೆಯನ್ನು ಭರ್ತಿ ಮಾಡಿ ಹಸಿವನ್ನು ನಿಯಂತ್ರಿಸುತ್ತದೆ ಹಾಗೂ ತೂಕ ಏರುವುದಕ್ಕೆ ಕಡಿವಾಣ ಹಾಕುತ್ತದೆ.



Click it and Unblock the Notifications
