Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಏಲಕ್ಕಿಯ 20 ಆರೋಗ್ಯಕರ ಪ್ರಯೋಜನಗಳು
ಭಾರತದ ನಿತ್ಯಹರಿದ್ವರ್ಣ ಕಾಡುಗಳಿಗೆ ಏಲಕ್ಕಿ ಸ್ಥಳೀಯವಾಗಿದೆ. ಭಾರತೀಯ ಅಡುಗೆಯಲ್ಲಿ ತನ್ನ ಚಮತ್ಕಾರವನ್ನು ತೋರುವ ಈ ಪುಟ್ಟ ಸಾಂಬಾರು ಪದಾರ್ಥ, ಆಯುರ್ವೇದದಲ್ಲಿ ದಿವ್ಯೌಷಧವಾಗಿದೆ ಎಂದರೆ ನೀವು ನಂಬಲೇಬೇಕು. ಬಾಯಿ ಹುಣ್ಣು, ಜೀರ್ಣಕ್ರಿಯೆ ಸಮಸ್ಯೆ, ಮಾನಸಿಕ ಒತ್ತಡವನ್ನು ನಿವಾರಿಸುವಲ್ಲಿ ಏಲಕ್ಕಿ ಸಿದ್ಧಹಸ್ತವಾಗಿದೆ. ನಿಮ್ಮ ದೈನಂದಿನ ಆಹಾರದಲ್ಲಿ ಇದರ ಬಳಕೆಯನ್ನು ಕೇವಲ ಪರಿಮಳಕ್ಕಾಗಿ ಮಾತ್ರವಲ್ಲ ದೈಹಿಕ ಸ್ವಾಸ್ಥ್ಯಕ್ಕೂ ಏಲಕ್ಕಿ ಪರಿಣಾಮಕಾರಿಯಾಗಿದೆ.
ಸಿಪ್ಪೆಯಿಂದ ಆವೃತವಾಗಿರುವ ಈ ಸಾಂಬಾರು ಪದಾರ್ಥ ಮಾಡುವ ಜಾದೂ ನಂಬಿಕೆಗೆ ಮಿಗಿಲಾದುದು. ಇದರಲ್ಲಿರುವ ಸಿಟ್ರಸಿ ಖಾರ ರೋಗವನ್ನು ಹೊಡೆದೋಡಿಸುವ ಚೈತನ್ಯವನ್ನು ದೇಹಕ್ಕೆ ನೀಡುತ್ತದೆ. ಇದರಲ್ಲಿನ ಸುಗಂಧವು ಬಾಯಿಯ ಸ್ವಚ್ಛತೆಗೂ ಸಹಕಾರಿ. ಇದರ ಇನ್ನೂ ಕೆಲವು ವಿಶೇಷ ಗುಣಗಳನ್ನು ತಿಳಿದುಕೊಳ್ಳೋಣ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಖರ್ಜೂರ ಸೇವನೆಯ ಆರೋಗ್ಯಕರ ಪ್ರಯೋಜನಗಳು

1.ಹೊಟ್ಟೆಯ ಗ್ಯಾಸ್ ವಿರುದ್ಧ ಹೋರಾಡುತ್ತದೆ. ಎದೆ ಉರಿಯನ್ನು ಶಮನ ಮಾಡುತ್ತದೆ.
2.ತಲೆನೋವಿನಿಂದ ತ್ವರಿತ ಉಪಶಮನವನ್ನು ನೀಡುತ್ತದೆ. (ಏಲಕ್ಕಿಯ ಪೇಸ್ಟ್ ಅನ್ನು ನೆತ್ತಿಗೆ ಹಚ್ಚಿಕೊಳ್ಳುವುದರಿಂದ ಪರಿಹಾರ ದೊರೆಯುತ್ತದೆ.)
3.ಹೃದಯಾಘಾತದ ವಿರುದ್ಧ ರಕ್ಷಣೆಯನ್ನು ನೀಡುವಲ್ಲಿ ಏಲಕ್ಕಿ ಸಹಕಾರಿ. ಮನೆಯಿಂದ ಹೊರಹೋಗುವ ಸಂದರ್ಭದಲ್ಲಿ ಏಲಕ್ಕಿಯನ್ನು ಜಗಿಯುವುದು ಉತ್ತಮ.
4.ಏಲಕ್ಕಿಯ ಸುವಾಸನೆಯು ಉಸಿರಾಟ ಸ್ವಚ್ಛಕವಾಗಿ ಕಾರ್ಯನಿರ್ವಹಿಸುತ್ತದೆ.
5. ಕೆಫೀನ್ ವಿರುದ್ಧ ಹೋರಾಡಬಲ್ಲ ಪರಿಷ್ಕರಣ ಮಸಾಲೆ ಏಲಕ್ಕಿಯಾಗಿದೆ. (ಕೆಫೇನ್ ಅನ್ನು ನಿರ್ವಷೀಕರಿಸುತ್ತದೆ).
6."ತ್ರಿದೋಷಕ" ಎಂಬ ಹೆಸರಿರುವ ಮೂರು ದೋಷಗಳೆಲ್ಲವನ್ನೂ ನಿಯಂತ್ರಿಸಲು ಏಲಕ್ಕಿ ಸಹಕಾರಿ. ಏಲಕ್ಕಿಯ ಸಣ್ಣ ಪ್ರಮಾಣ ಕಫದಿಂದ ಮುಕ್ತಿ ನೀಡುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಶುಂಠಿ ಚಹಾದ 8 ಆರೋಗ್ಯ ಪ್ರಯೋಜನಗಳು
7. ವಿವಿಧ ರೀತಿಯ ಉಸಿರಾಟ ತೊಂದರೆಗಳನ್ನು ನಿವಾರಿಸುವಲ್ಲಿ ಸಹಕಾರಿ. ನೋಯುತ್ತಿರುವ ಗಂಟಲಿಗೆ ಉಪಶಮನವನ್ನು ನೀಡುತ್ತದೆ.
8. ಅಸ್ತಮಾ ಮತ್ತು ನಾಯಿಕೆಮ್ಮುವಿನ ನಿವಾರಣೆ ಏಲಕ್ಕಿಯಿಂದ ಸಾಧ್ಯ. ಏಲಕ್ಕಿ ಹುಡಿ ಮತ್ತು ಜೇನನ್ನು ಸೇರಿಸಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಈ ಮಿಶ್ರಣದ ನಿಯಮಿತ ಸೇವನೆಯು ನಾಯಿಕೆಮ್ಮು ಮತ್ತು ಅಸ್ತಮಾದಿಂದ ಪರಿಹಾರ ನೀಡುತ್ತದೆ.
9. ಸೆಳೆತದ ವಿರುದ್ಧ ಹೋರಾಡುವ ಉತ್ತಮ ಸಾಮರ್ಥ್ಯ ಏಲಕ್ಕಿಗಿದೆ ಆದ್ದರಿಂದ ಸೆಳೆತ ಮತ್ತು ನಡುಕದ ಸಮಯದಲ್ಲಿ ಇದು ಹೆಚ್ಚು ಸಹಕಾರಿಯಾಗಿದೆ.
10.ಗ್ಯಾಸ್ಟ್ರಿಕ್ ಅಂಶವಿರುವ ಜ್ಯೂಸ್‌ಗಳ ಪ್ರಕ್ರಿಯೆಯ ಉತ್ತೇಜನ ಮತ್ತು ನಿಯಂತ್ರಣಕ್ಕೆ ಸಹಕಾರಿ ಮತ್ತು ಹೊಟ್ಟೆಯ ಗ್ಯಾಸ್‌ಗಳನ್ನು ಇದು ದೂರಮಾಡುತ್ತದೆ.
11. ಹಲ್ಲಿನ ವಸಡಿನ ತೊಂದರೆ ಮತ್ತು ಇನ್‌ಫೆಕ್ಷನ್‌ನಿಂದ ರಕ್ಷಿಸುತ್ತದೆ.
12. ದೇಹದ ನಿರ್ವಿಶೀಕರಣವನ್ನು ಏಲಕ್ಕಿ ಬೆಂಬಲಿಸುತ್ತದೆ ಮತ್ತು ಸಂಪೂರ್ಣ ದೇಹವನ್ನು ಶೋಧಿಸಲು ಸಹಾಯ ಮಾಡುತ್ತದೆ.
13.ಮೂತ್ರ ಸಮಸ್ಯೆಯ ಪರಿಹಾರವನ್ನು ನಿವಾರಿಸುವಲ್ಲಿ ಏಲಕ್ಕಿಯ ಪಾತ್ರ ಹಿರಿದು. ನೆಲ್ಲಿಕಾಯಿ, ಮೊಸರು ಅಥವಾ ಜೇನಿನೊಂದಿಗೆ ಏಲಕ್ಕಿ ಬೆರೆಸಿ ತಿನ್ನಬಹುದು.
14. ಏಲಕ್ಕಿ ಶ್ವಾಸನಾಳವನ್ನು ಬೆಚ್ಚಗಾಗಿಸುತ್ತದೆ ಮತ್ತು ಇದರಿಂದ ಶ್ವಾಸಕೋಶದ ಪರಿಚಲನೆ ಹೆಚ್ಚಾಗುತ್ತದೆ.
15. ಹೊಟ್ಟೆಯ ಸೆಳೆತದಿಂದ ಬಳಲುತ್ತಿರುವವರಿಗೆ ಏಲಕ್ಕಿ ಸಹಾಯ ಮಾಡುತ್ತದೆ (ಏಲಕ್ಕಿ + ಕಾಳುಮೆಣಸು + ಶೋಧಿಸಿದ ಬೆಣ್ಣೆ).
16. ಧ್ವನಿಗೆ ಉತ್ತಮವಾಗಿರುವುದರಿಂದ ಏಲಕ್ಕಿ ಗಾಯಕರಿಗೆ ವರದಾನವಾಗಿದೆ.
17. ಬಿಕ್ಕಳಿಕೆಯನ್ನು ದೂರಾಗಿಸುವಲ್ಲಿ ಸಹಕಾರಿಯಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗೋಡಂಬಿಯ ವಿಸ್ಮಯಕಾರಿ 7 ಆರೋಗ್ಯ ಪ್ರಯೋಜನಗಳು
18. ಆಯುರ್ವೇದದಲ್ಲಿರುವ ಒಂದು ಶಮನಕಾರಿಯಾಗಿದೆ.
19. ವಾಂತಿಗೆ ಉತ್ತಮ ಪರಿಹಾರವಾಗಿದೆ.
20. ಏಲಕ್ಕಿಯ ಪರಿಮಳ ನರಮಂಡಲ ವ್ಯವಸ್ಥೆಯಲ್ಲಿನ ಪರಿಣಾಮಗಳನ್ನು ಉತ್ತೇಜಿಸುತ್ತದೆ. ಕ್ಷೀಣತೆಯ ಸಂದರ್ಭದಲ್ಲಿ ಆರೋಗ್ಯಕರ ಉಲ್ಲಾಸವನ್ನು ಅದು ಉಂಟುಮಾಡುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications









