Latest Updates
-
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ?
ಬೇಯಿಸಿದ ಮೊಟ್ಟೆಯಿಂದ ಆರೋಗ್ಯಕರ ಪ್ರಯೋಜನ
ಬೇಯಿಸಿದ ಮೊಟ್ಟೆ ಆಕಾರದಲ್ಲಿ ಸಣ್ಣದಾಗಿದ್ದರೂ ಅದು ವಿಟಮಿನ್ ಪ್ರೋಟೀನ್‌ಗಳ ಒಂದು ಸಂಮಿಶ್ರಣವಾಗಿದೆ. ಬೇಯಿಸಿದ ಮೊಟ್ಟೆಯಲ್ಲಿ ಪೊಟ್ಯಾಷಿಯಂ, ಐರನ್, ಜಿಂಕ್, ವಿಟಮಿನ್ ಇ, ಮತ್ತು ಫೊಲೇಟ್ ಇವೆ. ಸಂಶೋಧನೆಗಳ ಪ್ರಕಾರ ಬೇಯಿಸಿದ ಮೊಟ್ಟೆಯಲ್ಲಿ 6.29 ಗ್ರಾಂನಷ್ಟು ಪ್ರೊಟೀನ್ ಇದ್ದು, 78 ಕ್ಯಾಲೋರಿಗಳಿವೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬೆಳಗಿನ ಉಪಹಾರಕ್ಕೆ ಎಗ್ ಸಲಾಡ್
ಬೇಯಿಸಿದ ಮೊಟ್ಟೆಯು ನಿಮ್ಮ ದೇಹವನ್ನು ಭರ್ತಿಗೊಳಿಸಿ ನಿಮ್ಮ ಹಸಿವನ್ನು ನಿಯಂತ್ರಿಸುತ್ತದೆ. ಆದ್ದರಿಂದಲೇ ದೈಹಿಕ ತಜ್ಞರು ಬೇಯಿಸಿದ ಮೊಟ್ಟೆಯನ್ನು ವರ್ಕ್‌ಔಟ್‌ಗಿಂತ ಮುಂಚೆ ತಿನ್ನಲು ಉಪದೇಶಿಸುತ್ತಾರೆ. ಬೆಳಗ್ಗಿನ ಉಪಹಾರಕ್ಕೆ ಚೆನ್ನಾಗಿ ಬೇಯಿಸಿದ ಮೊಟ್ಟೆಯನ್ನು ನೀವು ತಿಂದಿರೆಂದರೆ ನಿಮ್ಮ ದಿನದ ಪ್ರಾರಂಭ ಉಲ್ಲಾಸ ಮತ್ತು ಉತ್ಸಾಹದಿಂದ ಕೂಡಿರುತ್ತದೆ.
ನಿಮಗೆ ಬೇಕಾದ ನ್ಯೂಟ್ರಿಯಂಟ್ಸ್‌ಗಳು ಇದರಿಂದ ದೊರಕುತ್ತವೆ. ಬೇಯಿಸಿದ ಮೊಟ್ಟೆಯಿಂದ ಉಂಟಾಗುವ ಕೆಲವು ಪ್ರಯೋಜನಗಳನ್ನು ಬೋಲ್ಡ್ ಸ್ಕೈ ಇಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮೊಟ್ಟೆಯ ಹಳದಿ ತಿಂದರೆ ಆರೋಗ್ಯಕ್ಕೆ ನಾನಾ ಲಾಭ!

ನಿಮ್ಮ ಕಣ್ಣುಗಳಿಗೆ ಉತ್ತಮ:
ಬೇಯಿಸಿದ ಮೊಟ್ಟೆಯ ಒಂದು ಉಪಯೋಗವೆಂದರೆ ಇವು ಕಣ್ಣನ್ನು ಚೆನ್ನಾಗಿ ನೋಡಿಕೊಳ್ಳುತ್ತವೆ ಎಂಬುದಾಗಿದೆ. ನೀವು ನಿತ್ಯವೂ ಸೇವಿಸುವುದು ಕಣ್ಣಿನ ಬೆಳವಣಿಗೆಗೆ ಆವಶ್ಯಕವಾದ ಲ್ಯೂಟೀನ್ ಮತ್ತು ಝೇಕ್ಸಂಥೀನ್ ಅನ್ನು ಪೂರೈಸಿದಂತೆ. ಇವುಗಳು ಅಕ್ಷಿಪಟಲದ ಅವನತಿಯನ್ನು ತಡೆಯುತ್ತದೆ ಎಂಬುದು ಮಹತ್ವದ ಅಂಶವಾಗಿದೆ.

ನಿಮ್ಮ ಉಗುರುಗಳಿಗೆ ಉತ್ತಮ:
ಹೆಚ್ಚಿನ ಪ್ರಮಾಣದ ಸಲ್ಫರ್ ಅಂಶವನ್ನು ಬೇಯಿಸಿದ ಮೊಟ್ಟೆಯು ಒಳಗೊಂಡಿದ್ದು ಇವು ವಿಟಮಿನ್ ಡಿ ಗೆ ಪೂರಕವಾಗಿದೆ. ಇದರಲ್ಲಿರುವ ಇತರ ಮಿನರಲ್‌ಗಳು, ಆಂಟಿಯೋಕ್ಸಿಡೆಂಟ್ಸ್ ನಿಮ್ಮ ಉಗುರಿಗೆ ಉತ್ತಮ ಪೋಷಣೆಯನ್ನು ಒದಗಿಸುತ್ತವೆ.

ಮೆದುಳಿಗೆ ಒಳ್ಳೆಯದು:
ಬೇಯಿಸಿದ ಮೊಟ್ಟೆಯನ್ನು ನೀವು ನಿತ್ಯವೂ ಸೇವಿಸುವುದು ನಿಮ್ಮ ಮುಪ್ಪಿನ ಕಾಲದಲ್ಲಿ ನೆರವಾಗುತ್ತದೆ. ಅಲ್ಲದೆ ಬೇಯಿಸಿದ ಮೊಟ್ಟೆಯಲ್ಲಿರುವ ಕೊಲೀನ್ ಆರೋಗ್ಯಕರ ಮೆದುಳಿನ ಕಾರ್ಯಾಚರಣೆಗೆ ಸಹಾಯಕ.

ತೂಕ ನಿಯಂತ್ರಣಕ್ಕೆ ಸಹಕಾರಿ:
ಬೇಯಿಸಿದ ಮೊಟ್ಟೆಯು ತೂಕ ಇಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇದು 80 ಕ್ಯಾಲೋರಿಗಳನ್ನು ಒಳಗೊಂಡಿದ್ದು ತಮ್ಮ ತೂಕ ಕಳೆದುಕೊಳ್ಳುವವರಿಗೆ ಸಹಾಯಕವಾಗಿವೆ.

ಮೂಳೆಗಳಿಗೆ ಚೇತೋಹಾರಿ:
ಘನ ಮತ್ತು ಮೆತ್ತಗಿನ ಬೇಯಿಸಿದ ಮೊಟ್ಟೆಗಳಲ್ಲಿ ಕಂಡು ಬರುವ ವಿಟಮಿನ್ ಡಿ ನಿಮ್ಮ ರಕ್ತದಲ್ಲಿ ಕ್ಯಾಲ್ಶಿಯಂ ಅಂಶವನ್ನು ಹೆಚ್ಚಿಸುತ್ತದೆ.

ರಕ್ತಕ್ಕೆ ಒಳ್ಳೆಯದು:
ಸಂಶೋಧನೆಗಳ ಪ್ರಕಾರ ಬೇಯಿಸಿದ ಮೊಟ್ಟೆಯು ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟುತ್ತದೆ. ಇದು ನಿಮ್ಮ ಹೃದಯಕ್ಕೂ ಉತ್ತಮವಾದುದಾಗಿದೆ.

ಸ್ತನಗಳಿಗೆ ಉತ್ತಮ:
ವಾರಕ್ಕೊಮ್ಮೆ ಬೇಯಿಸಿದ ಮೊಟ್ಟೆಯನ್ನು ಸೇವಿಸುವುದು ಸ್ತನ ಕ್ಯಾನ್ಸರ್ ಅನ್ನು ನಿಮ್ಮಿಂದ ದೂರಮಾಡುತ್ತದೆ. ವಾರಕ್ಕೊಮ್ಮೆ ಕನಿಷ್ಟ ಪಕ್ಷ 6 ಮೊಟ್ಟೆಗಳನ್ನು ಸೇವಿಸುವುದು ಸ್ತನ ಕ್ಯಾನ್ಸರ್‌ನ ಅಪಾಯವನ್ನು 44% ದಷ್ಟು ಕಡಿಮೆ ಮಾಡುತ್ತದೆ ಎಂಬುದಾಗಿದೆ.

ಕೊಲೆಸ್ಟ್ರಾಲ್‌ಗೆ ಪೂರಕ:
ಆಹಾರದ ಕೊಲೆಸ್ಟ್ರಾಲ್‌ಗಿಂತ ಆರ್ದ್ರವಾದ ಕೊಬ್ಬು ಕೊಲೆಸ್ಟ್ರಾಲ್ ಅನ್ನು ಏರಿಸುತ್ತದೆ. ಬೇಯಿಸಿದ ಮೊಟ್ಟೆಯನ್ನು ತಿನ್ನುವುದು ಕೊಲೆಸ್ಟ್ರಾಲ್ ಮಟ್ಟವನ್ನು ಏರಿಸುವುದಿಲ್ಲ.



Click it and Unblock the Notifications
