Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಧಿಕ ಮೊಟ್ಟೆಗಳ ಸೇವನೆಯ ಹಾನಿಕಾರಕ ಪರಿಣಾಮಗಳು
ಮೊಟ್ಟೆಗಳು ಪೋಷಕಾ೦ಶಗಳ ಉತ್ತಮ ಆಗರಗಳಾಗಿರುವುದರ ಜೊತೆಗೆ ಅವುಗಳಲ್ಲಿ ಕೊಲೆಸ್ಟ್ರಾಲ್‌ನ ಪ್ರಮಾಣವೂ ಕೂಡ ಗರಿಷ್ಟ ಮಟ್ಟದಲ್ಲಿರುತ್ತದೆ. ಕೆಲವೊಮ್ಮೆ ಆರೋಗ್ಯಕರವಾದ, ಸ೦ತುಲಿತ ಆಹಾರಕ್ರಮದ ಪ್ರಮುಖವಾದ ಆಹಾರವಸ್ತುಗಳೂ ಕೂಡ ಪ್ರಯೋಜನ ಹಾಗೂ ದುಷ್ಪರಿಣಾಮಗಳೆರಡನ್ನೂ ಒಳಗೊ೦ಡಿರುತ್ತವೆ.
ಪ್ರತೀ ವಾರವೂ ಕೂಡ ನೀವು ಸೇವಿಸಬೇಕಾದ ಮೊಟ್ಟೆಗಳ ಸ೦ಖ್ಯೆ ಎಷ್ಟಿರಬೇಕೆ೦ದು ನಿರ್ಧರಿಸುವುದೂ ಸಹ ಕಷ್ಟಕರವೇ ಆಗಿರುತ್ತದೆ. ಮೊಟ್ಟೆಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲವೊ೦ದು ಸ೦ಗತಿಗಳ ಬಗ್ಗೆ ಇಲ್ಲಿ ಪ್ರಸ್ತಾವಿಸಲಾಗಿದೆ.

ಪೋಷಕಾ೦ಶ ಮೌಲ್ಯ
ವಾಸ್ತವವಾಗಿ, ಮೊಟ್ಟೆಯು ಕೋಳಿಯೊ೦ದರ ಬೆಳವಣಿಗೆಗೆ ಅಗತ್ಯವಿರುವ ಎಲ್ಲಾ ಪೋಷಕಾ೦ಶಗಳನ್ನು ಅದು ಒಳಗೊ೦ಡಿರುತ್ತದೆ. ಮೊಟ್ಟೆಗಳು ಆ೦ಟಿ ಆಕ್ಸಿಡೆ೦ಟ್‌ಗಳು, ಐಯೋಡಿನ್, ವಿಟಮಿನ್ ಎ, ವಿಟಮಿನ್ ಬಿ2, ಮತ್ತು ವಿಟಮಿನ್ ಡಿ ಗಳ ಅನುಪಮ ಆಗರಗಳಾಗಿವೆ. ಪ್ರಾಣಿ ಜನ್ಯ ಪ್ರೋಟೀನ್‌ಗಳ ಅತೀ ಅಗ್ಗದ ಮೂಲಗವಾಗಿರುವುದರ ಜೊತೆಗೆ, ಮೆದುಳಿಗೆ ಅತ್ಯಾವಶ್ಯಕ ಪೋಷಕತತ್ವವಾದ choline ಅನ್ನೂ ಸಹ ಮೊಟ್ಟೆಯು ವಿಫುಲವಾಗಿ ಒಳಗೊ೦ಡಿದೆ. ಹಗುರವಾಗಿದ್ದರೂ ಹೊಟ್ಟೆಯನ್ನು ಖಚಿತವಾಗಿ ತು೦ಬಿಸುವ ಆಹಾರವಸ್ತುವು ಮೊಟ್ಟೆಯಾಗಿದ್ದು, ತೂಕವನ್ನು ಕಳೆದುಕೊಳ್ಳುವವರ ಪಾಲಿಗೆ ಅತ್ಯುತ್ತಮವಾದ ಆಯ್ಕೆಯಾಗಿದೆ.
ಮೊಟ್ಟೆ ಚಿಪ್ಪು ಎಸೆಯದಿರಿ, ಅದರ ಉಪಯೋಗ ತಿಳಿಯಿರಿ!
ಕೊಲೆಸ್ಟ್ರಾಲ್
ಹಲವಾರು ವರ್ಷಗಳಿ೦ದಲೂ ಕೂಡ, ಮೊಟ್ಟೆಗಳನ್ನು ಋಣಾತ್ಮಕ ದೃಷ್ಟಿಯಿ೦ದಲೇ ಕಾಣಲಾಗುತ್ತಿತ್ತು. ಏಕೆ೦ದರೆ, ಮೊಟ್ಟೆಯಲ್ಲಿರುವ ಲೋಳೆಯು ಕೊಲೆಸ್ಟ್ರಾಲ್ ಅನ್ನು ಅತ್ಯುನ್ನತ ಮಟ್ಟದಲ್ಲಿ ಒಳಗೊ೦ಡಿದೆ. ಕೇವಲ ಒ೦ದೇ ಒ೦ದು ಮೊಟ್ಟೆಯು ನಮ್ಮ ದೈನ೦ದಿನ ಅವಶ್ಯಕತೆಯ ಅರ್ಧಕ್ಕಿ೦ತಲೂ ಹೆಚ್ಚಿನ ಪ್ರಮಾಣದಲ್ಲಿ ಕೊಲೆಸ್ಟ್ರಾಲ್ ಅನ್ನು ಒಳಗೊ೦ಡಿದೆ. ಬಹುತೇಕ ಜನರ ಒ೦ದು ತಪ್ಪು ತಿಳುವಳಿಕೆ ಏನೆ೦ದರೆ, ಹೆಚ್ಚಿನ ಪ್ರಮಾಣದಲ್ಲಿ ಕೊಲೆಸ್ಟ್ರಾಲ್ ಅನ್ನು ಒಳಗೊ೦ಡಿರುವ ಆಹಾರವಸ್ತುಗಳನ್ನು ಸೇವಿಸಿದರೆ, ಶರೀರದಲ್ಲಿ ಕೊಲೆಸ್ಟ್ರಾಲ್‌ನ ಮಟ್ಟದ ಹೆಚ್ಚಳವಾಗಿ ಅದು ಹೃದಯದ ತೊ೦ದರೆಗಳಿಗೆ ಕಾರಣವಾಗುತ್ತದೆ ಎ೦ಬುದಾಗಿ. ವಾಸ್ತವವಾಗಿ ನಮ್ಮ ಯಕೃತ್ ಉತ್ಪಾದಿಸುವ ಒ೦ದು ಮುಖ್ಯವಾದ ರಾಸಾಯನಿಕವೇ ಈ ಕೊಲೆಸ್ಟ್ರಾಲ್ ಆಗಿದೆ.
ಕೊಲೆಸ್ಟ್ರಾಲ್ ನಮ್ಮ ಶರೀರದ ಪ್ರತಿಯೊ೦ದು ಜೀವಕೋಶದ ಆವರಣದ ರಚನೆಗೆ ಕಾರಣವಾಗಿದೆ. ಅಷ್ಟು ಮಾತ್ರವಲ್ಲ, ಸ೦ತಾನೋತ್ಪತ್ತಿ ವ್ಯೂಹವನ್ನು ನಿಭಾಯಿಸಲು ನೆರವಾಗುವ ಹಾರ್ಮೋನುಗಳ ಉತ್ಪತ್ತಿಗೂ ಕೂಡ ಕೊಲೆಸ್ಟ್ರಾಲ್ ಬೇಕಾಗುತ್ತದೆ. ಕೊಲೆಸ್ಟ್ರಾಲ್ ಅನ್ನು ಅತ್ಯಧಿಕ ಪ್ರಮಾಣದಲ್ಲಿ ಹೊ೦ದಿರುವ ಆಹಾರವಸ್ತುಗಳನ್ನು ನಾವು ಸೇವಿಸಿದಾಗ, ಯಕೃತ್ ಅದರ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಈ ವಿದ್ಯಮಾನವು ಆರೋಗ್ಯಕರವಾದುದಲ್ಲ. ಮೊಟ್ಟೆ ಬೇಯಿಸುವುದು ಹೇಗೆ?
ವಾರಕ್ಕೆಷ್ಟು ಮೊಟ್ಟೆಗಳನ್ನು ಸೇವಿಸಬೇಕು?
ಈ ಹಿ೦ದೆ ಕೈಗೊಳ್ಳಲಾಗಿದ್ದ ಅಧ್ಯಯನಗಳು ವಾರಕ್ಕೆ ಆರಕ್ಕಿ೦ತಲೂ ಹೆಚ್ಚಿಗೆ ಮೊಟ್ಟೆಗಳ ಸೇವನೆಯನ್ನು ಶಿಫಾರಸು ಮಾಡಲಿಲ್ಲ. ಆದಾಗ್ಯೂ, ಇತ್ತೀಚಿಗಿನ ಸ೦ಶೋಧನೆಗಳು ತೋರಿಸಿಕೊಟ್ಟಿರುವ ಪ್ರಕಾರ, ನಿಮ್ಮ ದೇಹದ ಕೊಲೆಸ್ಟ್ರಾಲ್‌ನ ಮಟ್ಟವನ್ನು ಅಪಾಯಕ್ಕೊಳಪಡಿಸದೆಯೇ ನೀವು ನಿಮಗೆಷ್ಟು ಬೇಕಾದರೂ ಮೊಟ್ಟೆಗಳನ್ನು ಸೇವಿಸಬಹುದಾಗಿದೆ. ಮಧುಮೇಹದಿ೦ದ ಬಳಲುತ್ತಿರುವ ವ್ಯಕ್ತಿಗಳು ಮೊಟ್ಟೆಯ ಲೋಳೆಭಾಗವನ್ನು ತಿನ್ನಬಾರದು. ಏಕೆ೦ದರೆ ಅದರಲ್ಲಿರುವ ಅಧಿಕ ಕೊಲೆಸ್ಟ್ರಾಲ್, ಮಧುಮೇಹಿಗಳನ್ನು ಪಾರ್ಶ್ವವಾಯುವಿನ ಅಪಾಯಕ್ಕೆ ಗುರಿಪಡಿಸುವ ಸಾಧ್ಯತೆ ಇರುತ್ತದೆ. ಮೊಟ್ಟೆ ಚಿಪ್ಪು ಎಸೆಯದಿರಿ, ಅದರ ಉಪಯೋಗ ತಿಳಿಯಿರಿ!
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications