Latest Updates
-
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ!
ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು
Wellness
oi-Manohar
ಚಳಿಗಾಲದ ಆಗಮನವಾಗುತ್ತಿದೆ. ಬೆಳಗಿನ ಇಬ್ಬನಿ, ಚಳಿಗಾಳಿ, ಚಿಗುರೊಡೆದ ತಳಿರಿನೊಡನೇ ತಣ್ಣಗೇ ಆಗಮಿಸುತ್ತವೆ. ಜೊತೆಗೆ ಶೀತ, ನೆಗಡಿ ಇನ್ನಿತರ ಚಳಿಗಾಲ ಸಂಬಂಧಿ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತಿವೆ. ಆದರೆ ಇವೆಲ್ಲವನ್ನು ತಡೆಯುವ ಶಕ್ತಿ ಮಾತ್ರ ದೇಹದಲ್ಲಿ ಕುಂದುತ್ತಿದೆ. ಹಾಗಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೆಲವು ಆಹಾರವನ್ನು ಸೇವಿಸುವುದರಿಂದ ರೋಗಗಳಿಗೆ ತುತ್ತಾಗುವುದನ್ನು ತಡೆಯಬಹುದು.
ಸೀಬೆಕಾಯಿ

ಸೀಬೆಕಾಯಿ ಹೊಟ್ಟೆಯ ಹಾಗೂ ಮೂಳೆಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಚಳಿಗಾಲದಲ್ಲಿ ಸಂಧಿ ನೋವು ಹೆಚ್ಚಾಗಿ ಕಂಡು ಬರುತ್ತದೆ. ಸೀಬೆಕಾಯಿ ಸಂಧಿನೋವು ತಡೆಯುವಲ್ಲಿ ಸಹಕಾರಿಯಾಗಿದೆ.
ಪಾಲಾಕ್
ಪಾಲಾಕ್ ಸೊಪ್ಪನ್ನು ಆಹಾರಕ್ರಮದಲ್ಲಿ ಹೆಚ್ಚಾಗಿ ಸೇರಿಸಬೇಕು. ಅದರಲ್ಲೂ ಈ ಸಮಯದಲ್ಲಿ ಪಾಲಾಕ್ ಸೊಪ್ಪು ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತದೆ. ಖಾಲಿ ಹೊಟ್ಟೆಯಲ್ಲಿ ಹಣ್ಣುಗಳ ಸೇವನೆ ದೇಹಕ್ಕೆ ಆರೋಗ್ಯಕಾರಿ ಹೇಗೆ?
ಮೊಸರು
ಮೊಸರಿನಲ್ಲಿ ದೇಹಕ್ಕೆ ಅಗತ್ಯವಾದ ಒಳ್ಳೆಯ ಬ್ಯಾಕ್ಟೀರಿಯಾ ಇರುವುದರಿಂದ ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿ. ಇದರ ಸೇವನೆಯಿಂದ ಜೀರ್ಣಕ್ರಿಯೆಯೂ ಸಮತೋಲನವಾಗಿ ಸಾಗುವಂತೆ ನೋಡಿಕೊಳ್ಳುತ್ತದೆ
ಗ್ರೀನ್ ಟೀ
ಗ್ರೀನ್ ಟೀನಲ್ಲಿನ ಪಾಲಿಫೆನಾಲ್ಸ್, ಪೊಟೆಂಟ್ ಪ್ಲಾಂಟ್ ಆಂಟಿಯಾಕ್ಸಿಡೆಂಟ್ ಗಳಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಗ್ರೀನ್ ಟೀನಲ್ಲಿರುವ ಪ್ರತ್ಯೇಕ ಪಾಲಿಫೆನಾಲ್ಸ್ ಕ್ಯಾಟೆಚಿನ್ ಎಂಬ ಅಂಶ ವೈರಸ್‌ಗಳನ್ನು ತೊಡೆದು ಹಾಕುತ್ತದೆ ಎಂದು ಕೆಲವು ಅಧ್ಯಯನ ತಿಳಿಸಿದೆ. ಆದರೆ ಗ್ರೀನ್ ಟೀ ಉಪಯೋಗವನ್ನು ಸಂಪೂರ್ಣವಾಗಿ ಪಡೆಯಬೇಕೆಂದರೆ ಬಿಸಿ ನೀರಿಗೆ ಗ್ರೀನ್ ಟೀಯನ್ನು ಒಂದು ನಿಮಿಷ ಅದ್ದಿ ಸ್ವಲ್ಪ ನಿಂಬೆ ಅಥವಾ ಜೇನನ್ನು ಬೆರೆಸಿ ಕುಡಿಯಬಹುದು. ಆದರೆ ಹಾಲನ್ನು ಸೇರಿಸಿ ಕುಡಿದರೆ ಈ ಉಪಯೋಗ ಪಡೆಯಲು ಸಾಧ್ಯವಿಲ್ಲ.
ವಿಟಮಿನ್ ಡಿ
ವಿಟಮಿನ್ ಡಿ ಮಾತ್ರೆಗಳನ್ನು ತೆಗೆದುಕೊಳ್ಳುವ ಮಕ್ಕಳು ಚಳಿಗಾಲದ ಸಮಸ್ಯೆಗಳಿಗೆ ಒಳಗಾಗುವುದು ಶೇಕಡಾ 40ರಷ್ಟು ಕಡಿಮೆ ಎಂದು ತಿಳಿದುಬಂದಿದೆ. ಈ ವಿಟಮಿನ್ ಡಿ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿ ಸುಸ್ತಾಗುವಂತೆ ಮಾಡುವ ಬ್ಯಾಕ್ಟೀರಿಯಾವನ್ನು ನಿರ್ಮೂಲನೆ ಮಾಡುತ್ತದೆ ಎನ್ನಲಾಗಿದೆ. ಅಷ್ಟೇ ಅಲ್ಲ, ಮೀನು, ಸೂರ್ಯನ ಕಿರಣವೂ ಕೂಡ ವಿಟಮಿನ್ ಡಿ ನೀಡುತ್ತದೆ.
ಕಿತ್ತಳೆ
ಕಿತ್ತಳೆ ತಿಂದರೆ ಶೀತವಾಗುತ್ತದೆ ಎಂದು ಅದನ್ನು ತಿನ್ನದೆ ಇರುತ್ತಾರೆ. ಕಿತ್ತಳೆಯಲ್ಲಿ ವಿಟಮಿನ್ ಸಿ ಇರುವುದರಿಂದ ಇದನ್ನು ತಿಂದರೆ ಕೆಮ್ಮು, ಶೀತ ಇವುಗಳ ವಿರುದ್ಧ ಹೋರಾಡುತ್ತದೆ. ಪ್ರತಿದಿನ ಕಿತ್ತಳೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದು. ಕಿತ್ತಳೆಯ ಬಗ್ಗೆ ಕೆಲ ಆಸಕ್ತಿಕರ ಅಂಶಗಳು
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.
Comments
English summary
Food to boost immune system in Winter
Story first published: Monday, November 17, 2014, 12:22 [IST]
Other articles published on Nov 17, 2014



Click it and Unblock the Notifications




