Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ನಗುವ ಯೋಗದ ಐದು ಪ್ರಯೋಜನಗಳು
ನೀವು ದುಃಖ ಮತ್ತು ಖಿನ್ನತೆಗೆ ಒಳಗಾಗಿದ್ದೀರೇ? ನಿಮ್ಮ ಜೀವನಕ್ಕೆ ನೀವು ಎಲ್ಲರಂತೆ ಅಧಿಕ ನಗು ಮತ್ತು ಸಂತೋಷವನ್ನು ಅನುಭವಿಸಲು ಬಯಸುತ್ತೀರಾ? ಇಲ್ಲಿ ನಗು ಯೋಗದಿಂದ ನಿಮ್ಮ ಆರೋಗ್ಯ ಮತ್ತು ಕ್ಷೇಮಕ್ಕೆ ಒದಗಿಸುವ ಐದು ಲಾಭಗಳನ್ನು ಹೇಳಲಾಗಿದೆ :
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತೊಡೆಯ ಬೊಜ್ಜು ಕರಗಿಸುವ ಯೋಗಾಸನಗಳು

1. ಉತ್ತಮ ಮೂಡ್ ಮತ್ತು ಇನ್ನಷ್ಟು ಹಾಸ್ಯ : ನೀವು ನಿಮ್ಮ ವೈಯಕ್ತಿಕ ಜೀವನದಲ್ಲಿರಲಿ, ವ್ಯಾಪಾರ ಜೀವನ ಅಥವಾ ಸಾಮಾಜಿಕ ಜೀವನವನ್ನೇ ನಡೆಸುತ್ತಿರಲಿ, ಆದರೆ ಇವೆಲವೂ ನಿಮ್ಮ ಮನಸ್ಥಿತಿಯನ್ನೇ ಅವಲಂಬಿಸಿರುತ್ತದೆ. ನಿಮ್ಮ ಮನಸ್ಥಿತಿ ಸರಿಯಾಗಿದ್ದರೆ,
ನೀವು ಉತ್ತಮ ಕೆಲಸಗಳನ್ನು ಮಾಡಬಹುದು. ನಗುವ ಯೋಗ ಎಂಡೋರ್ಫಿನ್ ಎಂಬ ರಾಸಾಯನಿಕವನ್ನು ನಿಮ್ಮ ಮಿದುಳಿನ ಜೀವಕೋಶಗಳಿಂದ ಬಿಡುಗಡೆ ಮಾಡುವ ಮೂಲಕ ನಿಮಿಷಗಳಲ್ಲಿ ನಿಮ್ಮ ಚಿತ್ತ ಬದಲಾಯಿಸಲು ನೆರವಾಗುತ್ತದೆ. ನೀವು ಹರ್ಷಚಿತ್ತದಿಂದ ಮತ್ತು ದಿನವಿಡೀ ಒಂದು ಉತ್ತಮ ಮೂಡ್ ನಿಂದ ಇರಲು, ಜೊತೆಗೆ ನೀವು ಸಾಮಾನ್ಯವಾಗಿ ನಗುವುದಕ್ಕಿಂದ ಹೆಚ್ಚು ನಕ್ಕು ಸಂತೋಷದಿಂದಿರುವಂತೆ ಮಾಡುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: 10 ಅಸಾಮಾನ್ಯ ಕಾಯಿಲೆಗಳಿಗೆ ಮದ್ದು ಯೋಗದಲ್ಲಿದೆ!
2. ಒತ್ತಡ ನೀಗಿಸುವ ಆರೋಗ್ಯಕರ ವ್ಯಾಯಾಮ: ನಗುವ ಯೋಗ ಒಂದು ಆರೋಗ್ಯಕರ ಮತ್ತು ಶಕ್ತಿಯುತ ಭಾವನೆಯನ್ನು ಉಂಟುಮಾಡುವ, ದೇಹದಲ್ಲಿ ಮತ್ತು ಮಿದುಳಿನಲ್ಲಿ ಹೆಚ್ಚು ಆಮ್ಲಜನಕವನ್ನು ಒದಗಿಸುವ ಒಂದು ಏರೋಬಿಕ್ ವ್ಯಾಯಾಮ ( ಹೃದಯ ವ್ಯಾಯಾಮವನ್ನು )ವಾಗಿದೆ. ನಗುವ ಯೋಗ ಏಕಕಾಲದಲ್ಲಿ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಒತ್ತಡವನ್ನು ಕಡಿಮೆಮಾಡುವ ಒಂದು ವಾಡಿಕೆಯ ವ್ಯಾಯಾಮವಾಗಿದೆ.
3. ಆರೋಗ್ಯ ಪ್ರಯೋಜನಗಳು: ನೀವು ಅನಾರೋಗ್ಯದಿಂದರೆ ನಿಮ್ಮ ಜೀವನವನ್ನು ಆನಂದಿಸಲು ಸಾಧ್ಯವಿಲ್ಲ. ನಗುವ ಯೋಗ ನಿಮ್ಮ ದೇಹದಲ್ಲಿ ನಿರೋಧಕ ವ್ಯವಸ್ಥೆಯನ್ನು ಬಲಗೊಳಿಸಿ ಅನಾರೋಗ್ಯ ಬೀಳದಂತೆ ನಿಮ್ಮನ್ನು ತಡೆಯುವುದು ಮಾತ್ರವಲ್ಲದೆ, ಅಧಿಕ ರಕ್ತದೊತ್ತಡ, ಹೃದಯ ರೋಗ, ಮಧುಮೇಹ, ಖಿನ್ನತೆ, ಸಂಧಿವಾತ, ಅಲರ್ಜಿ, ಅಸ್ತಮಾ, ಗಂಟಲೂತ, ಬೆನ್ನುನೋವು, ಫೈಬ್ರೊಮ್ಯಾಲ್ ಗಿಯ , ಮೈಗ್ರೇನ್ ತಲೆನೋವು, ಮುಟ್ಟಿನ ನಂತಹ ವಿವಿಧ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
4. ಜೀವನ ಗುಣಮಟ್ಟ : ಜೀವನದ ಗುಣಮಟ್ಟ, ಕಾಳಜಿಯುಳ್ಳ ಮತ್ತು ಉತ್ತಮ ಸಂಬಂಧವುಳ್ಳ ನಮ್ಮ ಒಳ್ಳೆಯ ಸ್ನೇಹಿತರ ಗುಣಮಟ್ಟ ಅವಲಂಬಿಸಿರುತ್ತದೆ. ನಗು, ಬೇಗನೆ ಜನರ ಸಂಪರ್ಕವನ್ನು ಮಾಡುವ ಮತ್ತು ಸಂಬಂಧಗಳನ್ನು ಹೆಚ್ಚಿಸುವ ಧನಾತ್ಮಕ ಶಕ್ತಿ. ನೀವು ಹೆಚ್ಚು ನಗುವುದರಿಂದ ಅನೇಕ ಸ್ನೇಹಿತರ ಸೆಳೆಯಬಹುದು!
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕಚೇರಿಯಲ್ಲೇ ಮಾಡಬಹುದಾದ ಆರು ಯೋಗಾಸನಗಳು
5 . ಸವಾಲಿನ ಸಮಯದಲ್ಲೂ ಸಕಾರಾತ್ಮಕ ಧೋರಣೆ : ಪ್ರತಿಯೊಬ್ಬರೂ ಸಮಯ ಚೆನ್ನಾಗಿದ್ದಾಗ ನಗುವುದು ಸಹಜ. ಆದರೆ ಸವಾಲುಗಳು ಮುಂದಿದ್ದಾಗ ಹೇಗೆ ತಾನೇ ನಗಲು ಸಾಧ್ಯ? ಆದರೆ, ನಗು ಋಣಾತ್ಮಕ ಸಂದರ್ಭಗಳಲ್ಲಿಯೂ ಮತ್ತು ಋಣಾತ್ಮಕ ಜನರೊಂದಿಗೆ ವ್ಯವಹರಿಸುವಾಗಲೂ ಧನಾತ್ಮಕ ಮಾನಸಿಕ ಧೋರಣೆಯನ್ನು ಹೊಂದಲು ಸಹಾಯ ಮಾಡುತ್ತದೆ. ಇದು ಕಷ್ಟ ಪಟ್ಟು ಸಮಸ್ಯೆಗಳನ್ನು ನಿಭಾಯಿಸಲು ಭರವಸೆ ಮತ್ತು ಆಶಾವಾದವನ್ನು ನೀಡುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications