Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವೈದ್ಯರಿಂದ ದೂರವಿರಲು ಹೂವುಗಳನ್ನು ತಿನ್ನಿ!
ಉತ್ತಮ ಆರೋಗ್ಯಕ್ಕಾಗಿ ತಾಜಾ ಹಣ್ಣುಗಳನ್ನು ಮತ್ತು ತರಕಾರಿಗಳನ್ನು ಬಳಸಿ ಎಂದು ವೈದ್ಯರು ಸಲಹೆ ನೀಡುವುದು ಎಲ್ಲರಿಗೂ ತಿಳಿದ ವಿಷಯ.ಹಾಗೆಯೇ ಹೂವುಗಳನ್ನು ತಿನ್ನುವುದರಿಂದ ಕೂಡ ಅರೋಗ್ಯ ವೃದ್ಧಿಸಿಕೊಳ್ಳಬಹುದು ಎಂದರೆ ಆಶ್ಚರ್ಯವಾಗುವುದರಲ್ಲಿ ಅನುಮಾನವಿಲ್ಲ.
ತಂಪು ಗಾಳಿ ನೀಡುವ ಹವಾನಿಯಂತ್ರಿತದ ಬಳಕೆ ಹೆಚ್ಚು ಅಪಾಯಕಾರಿ!
ಹೌದು ಇದು ಸತ್ಯ ಎಂದು ಕೆಲವು ಸಂಶೋಧನೆಗಳ ಮೂಲಕ ಸಾಬೀತಾಗಿದೆ.ಕೇವಲ ದೇವರಿಗೆ,ಮಹಿಳೆಯ ಮುಡಿಯೇರಲು ಮಾತ್ರ ಬಳಸುವ ಈ ಹೂವುಗಳಲ್ಲಿ ಕೂಡ ವಿಟಮಿನ್ ಅಂಶವಿದೆ ಎಂಬುದು ಆಶ್ಚರ್ಯಕರ ಸಂಗತಿ.
ಖಾದ್ಯಕ್ಕೆ ಬಳಸಬಹುದಾದ ಹೂವುಗಳಿಂದ ಆರೋಗ್ಯವನ್ನು ಕೂಡ ಹೂವಿನಂತೆ ನಾಜೂಕಾಗಿ ಕಾಪಾಡಿಕೊಳ್ಳಬಹುದು. ಜಗತ್ತಿನ ಸುಂದರ ಹೂವಿನ ದಳಗಳು ಸೇಬು ಹಣ್ಣಿನೊಂದಿಗೆ ಪೈಪೋಟಿ ನಡೆಸಲು ಪ್ರಾರಂಭಿಸಿದಂತಿದೆ. ಹೊಸ ಸಂಶೋಧನೆ ಪ್ರಕಾರ ಚೀನಾದಲ್ಲಿ ದೊರೆಯುವ ಖಾದ್ಯಕ್ಕೆ ಬಳಸುವ ಹೂವುಗಳಲ್ಲಿ ಫೆನಿಲಿಕ್ಸ್ ಮತ್ತು ಉತ್ಕರ್ಷಣ ನಿರೋಧಕ ಅಂಶ ಅಧಿಕವಾಗಿರುತ್ತದೆ.ಇವುಗಳಿಂದ ರೋಗಗಳನ್ನು ತಡೆಯಬಹುದು ಎನ್ನಲಾಗುತ್ತದೆ.
ಸಂಶೋದಕರು ಹೇಳುವ ಪ್ರಕಾರ 'ಶತಮಾನಗಳಿಂದ ಚೀನಾ ಪಾಕಶಾಲೆಯು ಹೂವುಗಳನ್ನು ಖಾದ್ಯಗಳಿಗೆ ಬಳಸುತ್ತಿದೆ.ಹೂವುಗಳನ್ನು ಒಗ್ಗರಣೆ ಅಥವಾ ಅಡುಗೆಯ ಅಲಂಕಾರವನ್ನು ಹೆಚ್ಚಿಸಲು ಬಳಸಬಹುದು' ಎನ್ನುತ್ತಾರೆ.
ಊಟ ಮಾಡುವಾಗ ನಾವೇಕೆ ನೆಲದ ಮೇಲೆ ಕುಳಿತುಕೊಳ್ಳಬೇಕು?
ನಿಮಗೀಗ ಈ ಹೂವುಗಳು ಯಾವುದಾಗಿರಬಹುದು ಎಂಬುದರ ಬಗ್ಗೆ ಕುತೂಹಲ ಹೆಚ್ಚುತ್ತಿರಬಹುದು.ಬಹುಶಃ ನಿಮಗೆ ಈ ಹೂವುಗಳ ಪರಿಚಯವಿರಬಹುದು ಆದರೆ ಇದನ್ನು ತಿನ್ನಬಹುದು ಎಂಬುದು ನಿಮಗೆ ತಿಳಿದಿರಲಿಕ್ಕಿಲ್ಲ.ಇಲ್ಲಿವೆ ನೋಡಿ ಖಾದ್ಯಕ್ಕೆ ಬಳಸಬಹುದಾದ ಹೂವುಗಳ ಪಟ್ಟಿ.

ಸೇಬು ಮತ್ತು ಕಿತ್ತಳೆ ಹೂವುಗಳು :-
ಇವುಗಳನ್ನು ನೀವು ಅಡುಗೆಗೆ ಬಳಸಿಲ್ಲದಿದ್ದರೂ,ನೋಡಿರುತ್ತೀರಿ.ಇದನ್ನು ಸ್ವಲ್ಪ ಪ್ರಮಾಣದಲ್ಲಿ ಅಡುಗೆಗೆ ಬಳಸಬಹುದು ಎನ್ನಲಾಗುತ್ತದೆ.

ದಾಲ್ಚಿನ್ನಿ ಹೂವು-
ಇದರ ಎಲೆ ಮತ್ತು ಹೂವು ಎರಡೂ ಕೂಡ ಅಡುಗೆಗೆ ಬಳಕೆಗೆ ಬರುತ್ತದೆ.ದಾಲ್ಚಿನ್ನಿ ಟೀ ಕೂಡ ಜನಪ್ರಿಯ.ಇದು ಗಾಯವನ್ನು ಹೀರುವ,ಕ್ಯಾನ್ಸರ್ ವಿರುದ್ಧ ಹೋರಾಡುವ ಮತ್ತು ಉರಿಯೂತ ತಡೆಯುವ ಶಕ್ತಿ ಹೊಂದಿದೆ ಎನ್ನಲಾಗುತ್ತದೆ.

ದಾಸವಾಳ :-
ಇದನ್ನು ಅಡುಗೆ ಅಲಂಕಾರಕ್ಕೆ ಮತ್ತು ಟೀಯಲ್ಲಿ ಕೂಡ ಬಳಸಲಾಗುತ್ತದೆ.ಇದು ಉತ್ಕರ್ಷಣ ನಿರೋಧಕ ಗುಣವನ್ನು ಹೊಂದಿದೆ.ಜೊತೆಗೆ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕೂಡ ಇದು ಹಿಡಿತದಲ್ಲಿಡು ತ್ತದೆ ಎನ್ನಲಾಗುತ್ತದೆ.

ಲ್ಯಾವೆಂಡರ್ ಹೂವು :-
ಈ ಪರಿಮಳಯುಕ್ತ ಹೂವನ್ನು ಐಸ್ ಕ್ರೀಂ ಮತ್ತು ಯೋಗರ್ಟ್‌ಗಳಲ್ಲಿ ಬಳಸಲಾಗುತ್ತದೆ.ಜೊತೆಗೆ ಇದು ಕೀವುನಾಶಕ ಮತ್ತು ಹೊಟ್ಟು ನಿವಾರಕವಾಗಿ ಕೆಲಸ ಮಾಡುತ್ತದೆ.

ಸಣ್ಣ ಗುಲಾಬಿ ಎಸಳುಗಳು :-
ಸಣ್ಣ ಗುಲಾಬಿ ಹೂವಿನಂತಿರುವ ಪಿಯಾನಿ ಹೂವು ಕೇವಲ ಮದುವೆಯಲ್ಲಿ ಅಲಂಕಾರಕ್ಕೆ ಮಾತ್ರವಲ್ಲ ಇದನ್ನು ಖಾದ್ಯಗಳಲ್ಲಿ ಬಳಸುವುದರಿಂದ ಖಿನ್ನತೆಯನ್ನು ದೂರಮಾಡುವ ಶಕ್ತಿ ಇದಕ್ಕಿದೆ.

ಮಲ್ಲಿಗೆ ಹೂವು:-
ಸುವಾಸನೆಯುಕ್ತ ಮಲ್ಲಿಗೆಯನ್ನು ಟೀಯಲ್ಲಿ ಬಳಸಲಾಗುತ್ತದೆ,ಜೊತೆಗೆ ಸಲಾಡ್ ಗಳಿಗೂ ಕೂಡ ಇದರ ಉಪಯೋಗ ಮಾಡಲಾಗುತ್ತದೆ.ಇದು ಕ್ಯಾನ್ಸರ್ ಮತ್ತು ವೈರಸ್ ವಿರುದ್ಧ ಹೋರಾಡುವ ಗುಣವನ್ನು ಹೊಂದಿದೆ.

ಚೆಂಡುಹೂವು:-
ಭಾರತದಲ್ಲಿ ಝೇಂಡಾ ಹೂವು ಎಂದೇ ಪ್ರಖ್ಯಾತಿ ಹೊಂದಿರುವ ಚೆಂಡು ಹೂವನ್ನು ಚೀನಾದವರು ಟೀಯಲ್ಲಿ ಬಳಸುತ್ತಾರೆ.ಗಾಯವನ್ನು ಮಾಗಿಸಲು ಈ ಹೂವು ಸಹಾಯಕ ಎಂದು ಕೂಡ ಹೇಳಲಾಗುತ್ತದೆ.ಈ ಹೂವಿನಲ್ಲಿ ಕಣ್ಣಿಗೆ ಬೇಕಾಗುವ ವಿಟಮಿನ್ ಇದ್ದು ಕಣ್ಣಿನ ತೊಂದರೆಗಳನ್ನು ಹೋಗಲಾಡಿಸಲು ಇದು ಸಹಾಯಕ.

ಪ್ಯಾನ್ಸೀಸ್/ಸ್ತ್ರೀವತ ಹೂವು:-
ಈ ಸುಂದರವಾದ ಹೊಳೆಯುವ ಬಣ್ಣ ಹೊಂದಿರುವ ಹೂವು ಕೇವಲ ಫೋಟೋಗೆ ಮಾತ್ರವಲ್ಲ ಇದರಲ್ಲಿರುವ ಪೊಟ್ಯಾಷಿಯಂ ಮತ್ತು ಮಿನರಲ್ಸ್,ಕಿಡ್ನಿ,ಹೃದಯ,ರಕ್ತದೊತ್ತಡ ಇವುಗಳಿಂದ ದೂರವಿರಿಸುತ್ತದೆ.

ರೋಸ್/ಕೆಂಪು ಗುಲಾಬಿ ಹೂವು:-
ಹೂವುಗಳ ರಾಜ ಎನ್ನಬಹುದಾದ ರೋಸ್ ಹೂವು ಚೀನಾದವರ ಔಷಧಿಯಲ್ಲಿ ಹೆಚ್ಚಿನ ಪ್ರಾಶಸ್ತ್ಯ ಹೊಂದಿದೆ.ಇದು ಉರಿಯೂತದ ವಿರುದ್ಧ ಹೋರಾಡುವ ಗುಣವನ್ನು ಹೊಂದಿದೆ.ಅಧಿಕ ವಿಟಮಿನ್ ಹೊಂದಿರುವುದರಿಂದ ಕ್ಯಾನ್ಸರ್,ಮಧುಮೇಹ,ಹೃದಯ ಕಾಯಿಲೆಗಳನ್ನು ದೂರಮಾಡುತ್ತದೆ ಎನ್ನಲಾಗುತ್ತದೆ.

ಸೇವಂತಿಗೆ :-
ಚೀನಾದಲ್ಲಿ ಸೇವಂತಿಗೆಯನ್ನು ಟೀ ಗೆ ಬಳಸುತ್ತಾರೆ.ಇದರಲ್ಲಿ ಉತ್ಕರ್ಷಣ ನಿರೋಧಕ ಶಕ್ತಿ ಮತ್ತು ಖನಿಶಾಂಶ,ಕ್ಯಾನ್ಸರ್ ವಿರೋಧಿ ಗುಣ,ಉರಿಯೂತ ತಡೆಯುವ ಶಕ್ತಿ ಇದೆ.
ನೆನಪಿನಲ್ಲಿಡಬೇಕಾದ ಅಂಶ :-
ನೀವೇ ಬೆಳೆದ ಕೀಟನಾಶಕಗಳನ್ನು ಬಳಸದ,ಅಡುಗೆಗೆ ಬಳಸುವ ಹೂವುಗಳನ್ನು ಮಾತ್ರ ತಿನ್ನಿ. ಕೇವಲ ಎಸಳುಗಳನ್ನು ಮಾತ್ರ ತಿನ್ನಬೇಕು. ನಿಮಗೆ ಅಲರ್ಜಿ ತೊಂದರೆ ಇದ್ದರೆ ಕೆಲವು ಎಸಳು ತಿಂದು ಸ್ವಲ್ಪ ಹೊತ್ತು ಕಾದುನೋಡಿ. ಯಾವುದೇ ರೀತಿಯ ಸಮಸ್ಯೆ ಕಾಣಿಸಿಕೊಳ್ಳದಿದ್ದಲ್ಲಿ ಬಳಸಿ.



Click it and Unblock the Notifications