For Quick Alerts
ALLOW NOTIFICATIONS  
For Daily Alerts

ಕೊಲೆಸ್ಟ್ರಾಲ್ ತಗ್ಗಿಸಲು ಸರಳ ವಿಧಾನ ಇಲ್ಲಿದೆ ನೋಡಿ!

|

ದೇಹದ ದೈನಂದಿನ ಚಟುವಟಿಕೆಗಳಿಗೆ ಅಗತ್ಯವಾದ ಕೊಬ್ಬಿನಾಂಶವೇ ಕೊಲೆಸ್ಟ್ರಾಲ್. ಇದು ಹಾರ್ಮೋನ್‌ನ ಉತ್ಪಾದನೆ ಮತ್ತು ಅಂಗಗಳ ಚಟುವಟಿಕೆಗೆ ಕಾರಣವಾಗಿದೆ. ಇದರಿಂದ ದೇಹದಲ್ಲಿ ಒಂದು ನಿರ್ದಿಷ್ಟ ಪ್ರಮಾಣದ ಕೊಲೆಸ್ಟ್ರಾಲ್ ಬೇಕಾಗುತ್ತದೆ. ಕೊಲೆಸ್ಟ್ರಾಲ್ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಇದರಿಂದ ಹೃದಯಾಘಾತ, ಲಘು ಅಥವಾ ದೊಡ್ಡ ಪ್ರಮಾಣದ ಪಾರ್ಶ್ವವಾಯು ಮತ್ತು ಇತರ ಹೃದಯ ಸಂಬಂಧಿ ಕಾಯಿಲೆಗಳು ಬರಬಹುದು. ಇದರಿಂದಾಗಿ ಕೊಲೆಸ್ಟ್ರಾಲ್ ನ್ನು ನಿಯಂತ್ರಣದಲ್ಲಿ ಇಡುವುದು ಅತ್ಯಗತ್ಯವಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಈ ಆಹಾರಗಳು ನಿಮ್ಮ ರಾತ್ರಿಯೂಟಕ್ಕೆ ಆರೋಗ್ಯದಾಯಕ!

ಆರೋಗ್ಯಕರ ಜೀವನಶೈಲಿ, ಕೊಬ್ಬು ಕಡಿಮೆ ಇರುವ ಆಹಾರಕ್ರಮ, ಸಂಸ್ಕರಿತ ಕೊಬ್ಬು ಇಲ್ಲದ ಆಹಾರ ಮತ್ತು ನಿಯಮಿತ ವ್ಯಾಯಾಮವು ಕೊಲೆಸ್ಟ್ರಾಲ್ ಹೆಚ್ಚದಂತೆ ಮಾಡುತ್ತದೆ. ವಯಸಾದಂತೆ ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ಹಾಗೂ ನಿಯಂತ್ರಣದಲ್ಲಿ ಇಡಲು ಕೆಲವೊಂದು ಟಿಪ್ಸ್ ಮತ್ತು ಸುಲಭವಾದ ವಿಧಾನಗಳನ್ನು ಬೋಲ್ಡ್ ಸ್ಕೈ ನಿಮಗಾಗಿ ನೀಡುತ್ತಿದೆ.

Easy ways to lower cholesterol

ಅಸಮತೋಲನದ ಜೀವನಶೈಲಿ, ಸಂಸ್ಕರಿತ ಕೊಬ್ಬಿನ ಸೇವನೆ, ಬೊಜ್ಜು ಮತ್ತು ಅನುವಂಶೀಯತೆ 30ರ ಬಳಿಕ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಲು ಕೆಲವು ಕಾರಣಗಳಾಗಿವೆ. ಅತಿಯಾಗಿ ಧೂಮಪಾನ ಮಾಡುವುದು ಕೂಡ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಲು ಒಂದು ಕಾರಣವಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವ ಫುಡ್ ಇಲ್ಲಿದೆ ನೋಡಿ

ನೈಸರ್ಗಿಕವಾಗಿ ದೊರೆಯುವ ಜ್ಯೂಸ್:
ಹಣ್ಣುಗಳ ಜ್ಯೂಸ್‌ಗಳಾದ ಕಿತ್ತಳೆ ಮತ್ತು ಕ್ರ್ಯಾನ್ಬೆರಿಯಲ್ಲಿ ಎಲ್ ಡಿಎಲ್ ನ್ನು ಕಡಿಮೆಗೊಳಿಸುವ ಆಕ್ಸಿಡೆಂಟ್ ಗಳು, ಆಂತೋಸಿಯಾನ್ಸಿಸ್ ಮತ್ತು ಪ್ಲವೊನೈಡ್‌ಗಳಿವೆ. ಈ ಪೌಷ್ಠಿಕಾಂಶಗಳು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತದೆ. ಪ್ರತೀ ದಿನ ಒಂದು ಲೋಟ ಕಿತ್ತಳೆ ಜ್ಯೂಸ್ ಕುಡಿಯುವುದರಿಂದ ಕೊಲೆಸ್ಟ್ರಾಲ್ ಶೇ.5-7ರಷ್ಟು ಕಡಿಮೆಯಾಗುತ್ತದೆ. ಇದು ಹದಿಹರೆಯದ ಬಳಿಕ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಿ ನಿಯಂತ್ರಣದಲ್ಲಿಡಲು ಇದು ಒಳ್ಳೆಯ ವಿಧಾನವಾಗಿದೆ.

ಕಡಿಮೆ ಕೊಬ್ಬು ಇರುವ ಆಹಾರವನ್ನು ಸೇವಿಸಿ:
ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿಕೊಳ್ಳಲು ಸಮಯದ ಅಂತರದ ಅನುಗುಣವಾಗಿ ಸಣ್ಣ ಪ್ರಮಾಣದ ಊಟ ಮಾಡಬೇಕು. ನಿಮ್ಮ ಆಹಾರ ಕ್ರಮದಲ್ಲಿ ಕಡಿಮೆ ಕೊಬ್ಬು ಇರುವ ಆಹಾರಗಳನ್ನು ಸೇರಿಸಿಕೊಳ್ಳಿ. ಸಂಸ್ಕರಿತ ಕೊಬ್ಬು ಇರುವ ಆಹಾರಗಳನ್ನು ನೀವು ಕಡೆಗಣಿಸಬೇಕು.

ಕಡಿಮೆ ಕೊಲೆಸ್ಟ್ರಾಲ್ ಇರುವ ಧಾನ್ಯಗಳು:
30ರ ಹರೆಯದ ಬಳಿಕ ಕೊಲೆಸ್ಟ್ರಾಲ್ ಕಡಿಮೆ ಮಾಡಲು ನೀವು ಧಾನ್ಯದ ಆಹಾರ ತಿನ್ನಿ, ಕೊಲೆಸ್ಟ್ರಾಲ್ ಹೆಚ್ಚು ಇರುವ ಧಾನ್ಯಗಳನ್ನು ಕಡೆಗಣಿಸಿ. ನೀವು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಬಹುದು ಮತ್ತು ನಿಮ್ಮ ಆಹಾರದಲ್ಲಿ ಕಾರ್ಬ್ ಪ್ರಮಾಣ ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ನ್ನು ಹೆಚ್ಚಿಸಬಹುದು. ಕಂದು ಬ್ರೆಡ್, ಕಂದು ಅಕ್ಕಿ ಮತ್ತು ಇತರ ಕೆಲವು ಧಾನ್ಯಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ.

ಆರೋಗ್ಯಕರ ಎಣ್ಣೆ:
ಆಲಿವ್ ತೈಲ, ಅಕ್ಕಿ ತವುಡು ತೈಲ ಮತ್ತು ಸೋಯಾ ತೈಲದಂತಹ ಕೆಲವೊಂದು ಎಣ್ಣೆಗಳಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ. 30ರ ಹರೆಯದ ಬಳಿಕ ನಿಮಗೆ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಎಣ್ಣೆಯಲ್ಲಿ ಕೊಲೆಸ್ಟ್ರಾಲ್ ಕಡಿಮೆ ಇರುವ ಎಣ್ಣೆಗಳನ್ನು ಬಳಸಿ. ಇದು ಕೊಲೆಸ್ಟ್ರಾಲ್ ಕಡಿಮೆ ಮಾಡುವ ಸುಲಭ ವಿಧಾನ. ಕೊಲೆಸ್ಟ್ರಾಲ್ ಇರುವ ಎಣ್ಣೆಗಳನ್ನು ಆಯ್ಕೆ ಮಾಡುವಾಗ ಅದನ್ನು ಇತರ ಎಣ್ಣೆಗಳೊಂದಿಗೆ ಹೋಲಿಸಿ ನೋಡಿ.

ಆರೋಗ್ಯಕರ ಓಟ್ಸ್:
ಓಟ್ಸ್‌ನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಶೇ. 10ರಿಂದ 12ರಷ್ಟು ಕಡಿಮೆ ಮಾಡಬಹುದು ಎಂದು ಸಾಬೀತಾಗಿದೆ. ಓಟ್ ಮೀಲ್ ನಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಉನ್ನತ ಮಟ್ಟದ ಶಕ್ತಿ ಇರುವ ಕಾರಣ ಇದು ಅತ್ಯುತ್ತಮ ಉಪಹಾರವೆಂದು ಪರಿಗಣಿಸಲಾಗಿದೆ. 30ರ ಬಳಿಕ ಕೊಲೆಸ್ಟ್ರಾಲ್ ಮಟ್ಟ ತಗ್ಗಿಸಲು ಪ್ರತೀ ದಿನ ಉಪಹಾರಕ್ಕೆ ಓಟ್ ಮೀಲ್ ಸೇವಿಸುವುದು ತುಂಬಾ ಸರಳ ವಿಧಾನ

Read more about: health wellness
English summary

Easy ways to lower cholesterol

It is responsible for hormone production and organ functionality. Cholesterol is thus required in a certain amount. But these days, cholesterol after 30 is in higher amounts than required.
Story first published: Saturday, March 22, 2014, 15:31 [IST]
X
Desktop Bottom Promotion