Latest Updates
-
ಮಳೆಗಾಲದಲ್ಲಿ ಬಟ್ಟೆ ಒಣಗುತ್ತಿಲ್ಲವೇ? ಅಪಾರ್ಟ್ಮೆಂಟ್ನಲ್ಲಿ ಬೂಷ್ಟು ತಡೆಯಲು ಇಲ್ಲಿದೆ 15 ನಿಮಿಷದ ಸಿಂಪಲ್ ಟಿಪ್ಸ್! -
ಓಣಂ ಸದ್ಯದ ರುಚಿ ಸವಿಯುತ್ತಲೇ ಆರೋಗ್ಯ ಕಾಪಾಡಿಕೊಳ್ಳಿ: ಮಧುಮೇಹಿಗಳಿಗೆ ಇಲ್ಲಿದೆ ಸ್ಮಾರ್ಟ್ ಟಿಪ್ಸ್ -
ಓಣಂ ಮುಗಿದ್ರೂ ಕಮ್ಮಿ ಆಗಿಲ್ಲ ಸದ್ಯದ ಕ್ರೇಜ್! ಬೆಂಗಳೂರು, ಮುಂಬೈನಲ್ಲಿ ವೀಕೆಂಡ್ನಲ್ಲಿ ಎಲ್ಲಿ ಸಿಗುತ್ತೆ ರುಚಿಕರ ಊಟ? -
ರಾಷ್ಟ್ರೀಯ ಕ್ರೀಡಾದಿನ: ಜಿಮ್ ಇಲ್ಲದೆ ಮನೆಯಲ್ಲೇ ಫಿಟ್ ಆಗಲು ಈ 30 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ವರಮಹಾಲಕ್ಷ್ಮಿ ಹಬ್ಬದ ತಯಾರಿ: ಕುಟುಂಬದೊಂದಿಗೆ ಜಗಳವಿಲ್ಲದೆ, ಶಾಂತಿಯುತವಾಗಿ ಹಬ್ಬ ಆಚರಿಸುವುದು ಹೇಗೆ? -
ನಾಲ್ಕನೇ ಓಣಂ ಸಂಭ್ರಮ: ಪೂಕಳಂ ಸ್ಪರ್ಧೆಗೆ ಕ್ವಿಕ್ ಟಿಪ್ಸ್ ಮತ್ತು ಝೀರೋ-ವೇಸ್ಟ್ ಹ್ಯಾಕ್ಸ್! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ: ಇನ್ಮುಂದೆ ಕ್ಯಾನ್ ಮೇಲೆ ಈ ಹೆಸರು ಇರಲ್ಲ, FSSAI ಹೊಸ ರೂಲ್ಸ್! -
ರಕ್ಷಾಬಂಧನ 2026: ಚಂದ್ರಗ್ರಹಣದ ಭಯ ಬೇಡ, ರಾಖಿ ಕಟ್ಟಲು ಬೆಸ್ಟ್ ಟೈಮ್ ಇಲ್ಲಿದೆ! -
ಉರಿ ಬಿಸಿಲು, ತೇವಾಂಶದ ಕಾಟ: ಎಸಿ ಇಲ್ಲದಿದ್ದರೂ ಫಿಟ್ ಆಗಿರಲು 12 ನಿಮಿಷದ ಸರಳ ವರ್ಕೌಟ್! -
ರಕ್ಷಾಬಂಧನ ಶಾಪಿಂಗ್ ಎಚ್ಚರ: ನಿಮ್ಮ ಹಣ ಕದಿಯಲು ಕಾಯುತ್ತಿದ್ದಾರೆ ಸೈಬರ್ ವಂಚಕರು!
ಐಸ್ ತಿನ್ನುವುದರಿಂದ ಕ್ಯಾಲರಿ ಕಡಿಮೆಯಾಗುತ್ತಾ?
ನಿಮಗೆ ಐಸ್ ಕ್ರೀಂ ಎಂದರೆ ಪಂಚಪ್ರಾಣವೇ? ಎಷ್ಟೇ ಐಸ್ ಕ್ರೀಂ ತಿಂದರೂ ಅದರಿಂದ ತೂಕ ಹೆಚ್ಚಾಗಬಾರದೆಂದು ನೀವು ಬಯಸುತ್ತಿದ್ದೀರಾ? ಹಾಗಿದ್ದಲ್ಲಿ ನಿಮಗೆ ಶುಭ ಸಮಾಚಾರವಿದೆ. ಇದೇ ವೇಳೆ ಚಾಕಲೇಟ್ ಚಿಪ್ ತಿಂದೂ ನೀವು ಸಪೂರವಾಗಿರಬಹುದು.
ಸಂಶೋಧನೆಗಳು ಐಸ್ ಕ್ರೀಂ ಬಗ್ಗೆ ಅದ್ಭುತ ಫಲಿತಾಂಶ ನೀಡಿದೆ ಮತ್ತು ಇದರಲ್ಲಿ ಕ್ಯಾಲರಿ ದಹಿಸುವ ಶಕ್ತಿಯಿದೆ. ನಿಮ್ಮ ಸೊಂಟದ ಸುತ್ತಳತೆ ಕಡಿಮೆ ಮಾಡುವುದು ಹೇಗೆಂದು ನೀವು ಚಿಂತಿತರಾಗಿದ್ದೀರಾ? ಹಾಗಾದರೆ ನೀವು ಐಸ್ ಕ್ರೀಂ ಸೇವಿಸುವ ಅಭ್ಯಾಸ ಬಿಡದೆ ಇದನ್ನು ಮಾಡಬಹುದು.

ವಿಶ್ವದಲ್ಲಿ ಐಸ್ ಕ್ರೀಂ ತುಂಬಾ ಆರೋಗ್ಯಕರ ಆಹಾರವೆಂದು ಯಾರೂ ಹೇಳುವುದಿಲ್ಲ. ಆದರೆ ಇದು ಹಾನಿಕಾರಕವೂ ಅಲ್ಲ ಎಂದು ಜನರು ಭಾವಿಸಿದ್ದಾರೆ. ನಿಮ್ಮ ಫ್ರಿಜ್ ನಲ್ಲಿರುವ ಐಸ್ ಕ್ರೀಂನ್ನು ತೆಗೆದುಹಾಕಿ ಎಂದು ಯಾರಾದರೂ ಹೇಳುತ್ತಿದ್ದರೆ ಆಗ ನೀವು ಕಿವಿ ಮುಚ್ಚಿಕೊಳ್ಳಿ.
ಸಂಶೋಧನೆ ಮತ್ತು ಅಧ್ಯಯನದ ಹೊಸ ಐಡಿಯ ಪ್ರಕಾರ ಐಸ್ ಕ್ರೀಂ ತೂಕ ಇಳಿಸಿಕೊಳ್ಳಲು ನಿಮಗೆ ಮೊದಲ ಆಹಾರವಾಗಬಹುದು ಮತ್ತು ಇದು ಕ್ಯಾಲರಿ ದಹಿಸಲು ನೆರವಾಗಲಿದೆ. ಈಗ ನಿಮ್ಮ ಆಹಾರ ಕ್ರಮ ತಯಾರಿ ಮಾಡಿ ಮತ್ತು ಐಸ್ ಕ್ರೀಂ ನಿಂದ ಕ್ಯಾಲರಿ ದಹಿಸಿ. ಇದು ತುಂಬಾ ವಿಚಿತ್ರವೆಂದನಿಸುವುದಿಲ್ಲವೇ? ಐಸ್ ಕ್ರೀಂ ತಿಂದು ತೂಕ ಇಳಿಸಿಕೊಳ್ಳಲು ನೀವು ತುದಿಗಾಲಿನಲ್ಲಿ ನಿಂತಿದ್ದೀರಾ? ಹಾಗಿದ್ದರೆ ತಕ್ಷಣ ನಿಮ್ಮ ಕಾರನ್ನು ಐಸ್ ಕ್ರೀಂ ಪಾರ್ಲರ್ ಕಡೆಗೆ ತಿರುಗಿಸಿ ಮತ್ತು ಮಜಾ ಮಾಡಿ. ಐಸ್ ಕ್ರೀಂ ಮತ್ತು ಅದು ಕ್ಯಾಲರಿ ದಹಿಸುವ ಬಗ್ಗೆ ಇರುವ ಕೆಲವೊಂದು ಸತ್ಯಗಳು ಇಲ್ಲಿವೆ.
ತೂಕ ಇಳಿಸುವ ಗುರುಗಳು ಏನು ಹೇಳುತ್ತಾರೆ?
ತೂಕ ಇಳಿಸುವ ಗುರುಗಳು ಈಗ ಐಸ್ ಕ್ರೀಂ ಪಥ್ಯ ಮತ್ತು ಇದು ಕ್ಯಾಲರಿ ದಹಿಸುತ್ತದೆ ಹೇಳುತ್ತಾರೆ. ನೀವು ತಿಂಗಳೊಳಗೆ ಬೊಜ್ಜು ದೇಹ ಕಳಕೊಂಡು ಸಪೂರವಾಗಬಹುದು. ಕೇವಲ ಐಸ್ ಸೇವಿಸಿ ನಿಮ್ಮ ಭಾರ ಕಳಕೊಳ್ಳಬಹುದು, ಇದು ತುಂಬಾ ಆಸಕ್ತಿ ಕೆರಳಿಸುತ್ತಿದೆಯಲ್ಲವೇ? ಕೆಲವು ಮಂದಿ ತೂಕ ಇಳಿಸುವ ಗುರುಗಳು ಸಂಪೂರ್ಣವಾಗಿ ಐಸ್ ಪಥ್ಯ ಹೇಳಿದ್ದಾರೆ. ಐಸ್ ನಿಂದ ಕ್ಯಾಲರಿ ದಹಿಸಿ ಮತ್ತು ನಿಮ್ಮ ಹೊಸ ರೂಪದಿಂದ ಎಲ್ಲರನ್ನು ಬೆರಗುಗೊಳಿಸಿ.
ಐಸ್ ತ್ಯಜಿಸಿದರೆ ಏನಾಗುತ್ತದೆ
ಐಸ್ ಕ್ರೀಂ ನಿಮ್ಮ ಫೇವರಿಟ್ ಆಗಿರಬಹುದು ಮತ್ತು ಐಸ್ ಕ್ರೀಂ ನಿಮ್ಮ ಸೊಂಟದ ಸುತ್ತಳತೆ ಕಡಿಮೆ ಮಾಡಲು ಯಾವುದೇ ನೆರವು ನೀಡದು. ಆದರೆ ಇದನ್ನು ನೀವು ಕಡೆಗಣಿಸಿದರೆ ಆಗ ನಿಮ್ಮ ದೇಹದ ಮೇಲೆ ಋಣಾತ್ಮಕ ಪರಿಣಾಮವಾಗಬಹುದು. ನೀವು ವೇಗವಾಗಿ ತೂಕ ಕಳಕೊಳ್ಳಲು ಐಸ್ ಕ್ರೀಂ ಯಾವುದೇ ನೆರವು ನೀಡದು. ಆದರೆ ಇದು ದೇಹದ ತೂಕ ಇಳಿಸುವಲ್ಲಿ ಪರಿಣಾಮ ಬೀರಬಹುದು. ನಿಮ್ಮ ಫೇವರಿಟ್ ಆಹಾರವನ್ನು ತ್ಯಜಿಸಿದರೆ ಆಗ ತುಂಬಾ ಬೇಕೆಂಬ ಭಾವನೆಯಾಗಬಹುದು. ನಿಮ್ಮ ತೂಕ ಇಳಿಸುವ ಕ್ರಮವು ಒಂದು ಶಿಕ್ಷೆಯೆಂದು ನಿಮಗನಿಸಬಹುದು. ಇದರಿಂದ ನಿಮ್ಮ ತೂಕ ಕಳಕೊಳ್ಳುವ ಯೋಜನೆ ವಿಫಲವಾಗಬಹುದು. ಐಸ್ ನಿಂದ ಕ್ಯಾಲರಿ ದಹಿಸಲು ಯೋಜನೆ ಹಾಕಿದ್ದರೆ ಇದನ್ನು ಸಂಪೂರ್ಣವಾಗಿ ತ್ಯಜಿಸಬೇಡಿ.
ಐಸ್ ನಿಂದ ಕ್ಯಾಲರಿ ದಹಿಸಿ
ಐಸ್ ನಿಂದ ಸುಲಭ ಮತ್ತು ಒಳ್ಳೆಯ ರೀತಿಯಿಂದ ಕ್ಯಾಲರಿ ದಹಿಸಿ ಎಂದು ಇಂದಿನ ದಿನಗಳಲ್ಲಿ ಹಲವಾರು ಮಂದಿ ಡಯೆಟೀಶಿಯನ್ ಗಳು ಸಲಹೆ ನೀಡಬಹುದು. ಐಸ್ ನಿಂದ ನೀವು ವೇಗವಾಗಿ ತೂಕ ಕಳಕೊಳ್ಳಲು ಸಾಧ್ಯವಿಲ್ಲ. ಆದರೆ ಇದು ನಿಜವಾಗಿಯೂ ನಿಮ್ಮಲ್ಲಿರುವ ಹೆಚ್ಚಿನ ಕ್ಯಾಲರಿ ದಹಿಸಲಿದೆ. ಐಸ್ ಸೇವನೆಯಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಸ್ವಲ್ಪ ಕೆಲಸ ಮಾಡುತ್ತದೆ. ನೀವು ಸೇವಿಸಿದ ಐಸ್ ನ್ನು ಬಿಸಿ ಮಾಡಲು ಅದಕ್ಕೆ ಸ್ವಲ್ಪ ಶಕ್ತಿ ಬೇಕಾಗುತ್ತದೆ. ಈ ರೀತಿ ಐಸ್ ನಿಂದ ಕ್ಯಾಲರಿ ದಹಿಸಬಹುದು. ಐಸ್ ನಿಂದ ನೀವು ಕ್ಯಾಲರಿ ದಹಿಸಿದರೂ ತೂಕ ಕಳಕೊಳ್ಳಬಹುದು ಅಥವಾ ಕಳಕೊಳ್ಳದೆಯೂ ಇರಬಹುದು. ಐಸ್ ಕ್ರೀಂ ಸೇವನೆಯಿಂದ ಮಾತ್ರ ಕ್ಯಾಲರಿ ದಹಿಸುವುದಲ್ಲ, ಐಸ್ ನೀರಿನಿಂದ ಕೂಡ ನೀವು ಕ್ಯಾಲರಿ ದಹಿಸಬಹುದು.
ಸ್ವಲ್ಪ ಕೆಟ್ಟದ್ದು
ಆಹಾರ ಕ್ರಮವನ್ನು ನಿರ್ವಹಿಸುವ ವಿಷಯಕ್ಕೆ ಬಂದರೆ ಐಸ್ ಕ್ರೀಂ ಯಾವಾಗಲೂ ಕೆಟ್ಟದ್ದು. ಯಾಕೆಂದರೆ ಇದರಲ್ಲಿ ಇರುವ ಕೆಲವೊಂದು ಬೀಜಗಳು ಮತ್ತು ಇತರ ಕೊಬ್ಬಿನಾಂಶಗಳು ತೂಕ ಹೆಚ್ಚಿಸಬಹುದು. ಬೀಜಗಳನ್ನು ಒಳಗೊಂಡಿರುವ ಅರ್ಧ ಕಪ್ ಐಸ್ ಕ್ರೀಂನಲ್ಲಿ 250 ಕ್ಯಾಲರಿ ಇರುತ್ತದೆ. ಕ್ಯಾಲರಿ ದಹಿಸಲು ಬಯಸುವುದಾದರೆ ನೀವು ಆಗ ಬೀಜ ಹಾಕದಿರುವ ಐಸ್ ಕ್ರೀಂ ತಿನ್ನಿ. ಆಹಾರ ಕ್ರಮದಲ್ಲಿ ಅತೀ ಮುಖ್ಯವಾಗಿರುವುದು ಏನೆಂದರೆ ನೀವು ದಿನನಿತ್ಯ ತೆಗೆದುಕೊಳ್ಳುವ ಕ್ಯಾಲರಿ ಮತ್ತು ದಹಿಸುವ ಕ್ಯಾಲರಿಯನ್ನು ಗಮನಿಸಬೇಕು. ಇದರೆಡರ ಮಧ್ಯೆ ಸಮತೋಲನ ಕಾಪಾಡಿದರೆ ಆಗ ತೂಕ ಇಳಿಸುವುದು ಸುಲಭವಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications