For Quick Alerts
ALLOW NOTIFICATIONS  
For Daily Alerts

ಹಣ್ಣುಗಳ ರಾಜ ಮಾವಿನ ವಿವಿಧ ಅವತಾರಗಳು!

|

ನಾವೆಲ್ಲರೂ ಬೇಸಿಗೆಯನ್ನು ಕಾತರದಿಂದ ಕಾಯುತ್ತೇವೆ. ಬೀಚ್‌ಗೆ ಧಾವಿಸುವ ಹುರುಪಿನಲ್ಲೋ, ತಂಪಾದ ಈಜುಕೊಳದಲ್ಲಿ ಮುಳುಗೇಳಲು ಅಲ್ಲವೇ ಅಲ್ಲ. ಈ ಸೀಸನ್‌ನ ಹಣ್ಣಾದ ಹಣ್ಣುಗಳ ರಾಜ ಮಾವನ್ನು ಆಸ್ವಾದಿಸಲು. ಮಾವು ಹಣ್ಣಾಗಲೀ ಕಾಯಾಗಲಿ ಸ್ವಾದಪೂರ್ಣ ಮತ್ತು ತರಹೇವಾರಿ ಖಾದ್ಯಗಳ ತಯಾರಿಗೆ ಹೆಸರುವಾಸಿ.

ಹಣ್ಣ ಮಾವು ನೀಡುವ ರುಚಿ ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಅದರಲ್ಲೂ ಕಾಯಿ ಮಾವಿಗೆ ಉಪ್ಪು ಖಾರ ಬೆರೆತರೆ ಸ್ವರ್ಗಕ್ಕೆ ಮೂರೇ ಗೇಣು ಎಂಬ ಸುಖವನ್ನು ನಮ್ಮಲ್ಲಿ ಉಂಟುಮಾಡುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಕಿಕ್ ಮಾಡಿ: ಸವಿರುಚಿಯ ಮಾವಿನ ಹಣ್ಣಿನ ರಸಾಯನ

ಮಾರುಕಟ್ಟೆಯಲ್ಲಿ ಮಾವು ಬಂತೆಂದರೆ ಅದನ್ನು ಖರೀದಿಸುವ ವಾಂಛೆ ಎಲ್ಲರಲ್ಲಿ ಮೂಡುತ್ತದೆ. ದುಬಾರಿ ಬೆಲೆ ತೆತ್ತಾದರೂ ಮಾರುಕಟ್ಟೆಗೆ ಧಾವಿಸಿ ಸೀಸನ್ ಹಣ್ಣಾದ ಮಾವನ್ನು ನಮ್ಮದಾಗಿಸಿಕೊಳ್ಳುತ್ತೇವೆ. ಮಾರುಕಟ್ಟೆಯಲ್ಲಿ ಕೂಡ ನಮ್ಮ ಮನಸ್ಸನ್ನು ಆಕರ್ಷಿಸುವ ಬಗೆ ಬಗೆಯ ಹಣ್ಣುಗಳು ನಮ್ಮನ್ನು ಕಾತರದಿಂದ ಕಾಯುತ್ತಿರುತ್ತವೆ.

ನಿಮ್ಮಲ್ಲಿ ಹೆಚ್ಚಿನವರಿಗೆ ಮಾವಿನ ಹಲವಾರು ವಿಧಗಳು ತಿಳಿದಿರದೇ ಇರಬಹುದು. ಜಗತ್ತಿನಾದ್ಯಂತ 10 ಪ್ರಕಾರದ ಮಾವಿನ ಹಣ್ಣುಗಳು ಬೆಳೆಯುತ್ತವೆ. ಭಾರತದಲ್ಲಂತೂ ಅಲ್‌ಫೋನ್ಸೋ, ಬಾದಾಮಿ, ಲಂಗಡಾ, ಮಲ್ಲಿಕಾ, ದುಸ್ಸೇರಿ, ಬೈಗನಾಪಲ್ಲಿ ಮತ್ತು ಇನ್ನೂ ಹಲವಾರಿ ವಿಧಗಳು ಲಭ್ಯ. ಸೀಸನ್‌ನ ಹಣ್ಣಾದ ಮಾವುಗಳ ಇನ್ನಷ್ಟು ಪ್ರಕಾರಗಳನ್ನು ಈ ಲೇಖನದಲ್ಲಿ ತಿಳಿಯೋಣ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಕಿಕ್ ಮಾಡಿ: ವಾವ್! ಸವಿಯಾದ ಮಾವಿನಕಾಯಿ ಚಟ್ನಿ

ಅಲ್‌ಫೋನ್ಸೋ:

ಅಲ್‌ಫೋನ್ಸೋ:

ಅಫೋನ್ಸೋ ಡಿ ಅಲ್‌ಬುಕರ್ಕ್ ಹೆಸರಿನ ಈ ಅಲ್‌ಫೋನ್ಸೋ ಮಾವು ದುಬಾರಿ ಹಣ್ಣಾಗಿದೆ. ಅಫೂಸ್ ಅಥವಾ ಹಫೂಸ್ ಹೆಸರಿನಲ್ಲೂ ಇದನ್ನು ಕರೆಯುತ್ತಾರೆ.

ಬಾದಾಮಿ:

ಬಾದಾಮಿ:

ಬಾದಾಮಿ ಮಾವು ಭಾರತದಲ್ಲಿ ಲಭ್ಯವಿರುವ ಹಣ್ಣಾಗಿದ್ದು ಸಿಹಿ ಮತ್ತು ಹೆಚ್ಚು ತಿರುಳನ್ನು ಹೊಂದಿದೆ. ಇದನ್ನು ಕಾಯಿ ರೂಪದಲ್ಲೂ ಬಳಸುತ್ತಾರೆ ಮತ್ತು ಮ್ಯಾಂಗೋ ಶೇಕ್ಸ್‌ಗಳನ್ನು ತಯಾರಿಸಲು ಹೆಚ್ಚು ಬಳಸುತ್ತಾರೆ.

ಬೈಗನಾಪಲ್ಲಿ:

ಬೈಗನಾಪಲ್ಲಿ:

ಹಿಂದಿಯಲ್ಲಿ ಇದನ್ನು ಸಾಮಾನ್ಯವಾಗಿ ಬನೇಶನ್ ಎಂದು ಕರೆಯುತ್ತಾರೆ. ಈ ತಳಿಯ ಮಾವು ಆಂಧ್ರಪ್ರದೇಶದಿಂದ ನೇರವಾಗಿ ನಮ್ಮ ಮಾರುಕಟ್ಟೆಯನ್ನು ತಲುಪುತ್ತದೆ.

ದುಸ್ಸೇರಿ:

ದುಸ್ಸೇರಿ:

ಹಣ್ಣಿನ ಸಿಪ್ಪೆ ಹಳದಿ ಬಣ್ಣದಲ್ಲಿದ್ದು ದಪ್ಪನೆಯ ಚರ್ಮವನ್ನು ಹೊಂದಿದೆ. ಇದರ ರುಚಿ ಸಿಹಿಯಾಗಿದ್ದು ಸ್ಟೋನ್ಸ್ ತುಂಬಾ ಸಣ್ಣದಾಗಿವೆ.

ಕೇಸರ್:

ಕೇಸರ್:

ಮಾವುಗಳಲ್ಲಿ ತುಂಬಾ ಪ್ರಸಿದ್ಧವಾಗಿರುವ ಹಣ್ಣಾಗಿದ್ದು ಕಾಯಿ ರೂಪದಲ್ಲೂ ಬಳಸುತ್ತಾರೆ. ಅಮೃಸ್ ತಯಾರಿಸಲು ಕೇಸರ್‌ ಮಾವು ಅಗತ್ಯ. ಇದು ಅಹಮದಾಬಾದ್‌ನಿಂದ ಬರುತ್ತದೆ ಮತ್ತು ಗುಜರಾತ್ ಕೇಸರ್ ಮಾವುಗಳೆಂದೇ ಹೆಸರುವಾಸಿ.

ಮಲ್ಗೋವಾ:

ಮಲ್ಗೋವಾ:

ರುಚಿಯಲ್ಲಿ ಹುಳಿಯಾಗಿರುವುದರಿಂದ ಮಲ್ಗೋವಾವನ್ನು ಕಾಯಿ ರೂಪದಲ್ಲಿ ಸೇವಿಸುವುದಿಲ್ಲ. ಉಪ್ಪಿನಕಾಯಿ ಹಾಗೂ ಮ್ಯಾಂಗೋ ಶೇಕ್ಸ್‌ಗಳಲ್ಲಿ ಮಲ್ಗೋವಾವನ್ನು ಹೆಚ್ಚು ಬಳಸುತ್ತಾರೆ.

ಮಲ್ಲಿಕಾ:

ಮಲ್ಲಿಕಾ:

ನೀಲಂ ಮತ್ತು ದುಸ್ಸೇರಿಯಾ ಹೈಬ್ರೀಡ್ ತಳಿಯಾಗಿರುವ ಮಲ್ಲಿಕಾದ ತವರು ಭಾರತವಾಗಿದೆ.

ರಸ್‌ಪೂರಿ:

ರಸ್‌ಪೂರಿ:

ಓವಲ್ ಆಕಾರದಲ್ಲಿ ರಸ್‌ಪೂರಿ ಮಾವು ಇದ್ದು ಬಣ್ಣದಲ್ಲಿ ಹಳದಿಯಾಗಿದೆ. ಭಾರತದ ದಕ್ಷಿಣ ರಾಜ್ಯಗಳಲ್ಲಿ ಇದು ಹೆಸರುವಾಸಿ.

ಸಿಂಧೂರಾ:

ಸಿಂಧೂರಾ:

ಗಾಢ ಕೆಂಪು ಮತ್ತು ಹಸಿರು ವರ್ಣದ ಸಿಂಧೂರಾ ಮಾವು ರುಚಿಯಲ್ಲಿ ಸಿಹಿ ಮತ್ತು ಹೆಚ್ಚು ತಿರುಳಿನಿಂದ ಸಮೃದ್ಧವಾಗಿದೆ.


English summary

Different Types Of Mangoes In India

We all wait for the summers to come. It is not just for the craze to hit the beach, or dip into the swimming pool, but also to enjoy the fruit of the season, Mangoes! Mangoes are entitled as the King of all fruits.
Story first published: Tuesday, March 25, 2014, 14:25 [IST]
X
Desktop Bottom Promotion