Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಋತುಚಕ್ರ ನಿಯಮಿತವಾಗಿ ಆಗಲು ಪಪ್ಪಾಯ ಹಣ್ಣು ಸಹಾಯಕವೇ?
ಋತುಚಕ್ರವು ಮುಂದೆ ಹೋಗುವುದು ನೋವು ಮತ್ತು ಒತ್ತಡವನ್ನು ಉಂಟುಮಾಡುತ್ತದೆ. ಅನಾರೋಗ್ಯ ಅಥವಾ ತುಸು ಅಧಿಕ ಅವಧಿಯ ಅನಾರೋಗ್ಯವೂ ಸಹ ಋತುಚಕ್ರವು ಮುಂದೆ ಹೋಗುವುದಕ್ಕೆ ಕಾರಣವಾಗಬಹುದು. ಹಾಗಾಗಿ ತಿಂಗಳಿನ ಋತುಚಕ್ರದಲ್ಲಿ ಕಂಡುಬರುವ ಇಂತಹ ಸಮಸ್ಯೆಗಳಿಗೆ ನಿಯಮಿತವಾಗಿ ಪಪ್ಪಾಯ ಹಣ್ಣು ಸೇವಿಸುವುದರಿಂದ ಮುಕ್ತಿ ಪಡೆಯಬಹುದು.
ಇದರಲ್ಲಿ ವಿಟಮಿನ್ ಎ, ಕ್ಯಾಲ್ಸಿಯಂ, ಪೊಟಾಸಿಯಂ ಸಮೃದ್ಧವಾಗಿದೆ. ಹಾಗೂ ವಿಟಮಿನ್ ಬಿ-6, ವಿಟಮಿನ್ ಬಿ-1 ಮತ್ತು ರಿಬೋಫ್ಲಾವಿನ್ ಇದರಲ್ಲಿದೆ. ಈ ವಿಟಮಿನ್ ಮತ್ತು ಮಿನರಲ್ಗಳಿಂದ ಪಪ್ಪಾಯ ಒಂದು ಅದ್ಭುತ ಆಹಾರ. ಇದು ಹಲವಾರು ರೀತಿಯ ಅನಾರೋಗ್ಯಗಳನ್ನು ನಿಯಂತ್ರಿಸುತ್ತದೆ.

ಮುಟ್ಟು ವಿಳಂಬವಾಯಿತೇ? ಕಾರಣ ತಿಳಿದುಕೊಳ್ಳಿ
ಪಪ್ಪಾಯದಲ್ಲಿ ಒಳ್ಳೆಯ ಗುಣಮಟ್ಟದ ನಾರಿನಾಂಶವಿದೆ. ಇದು ಮಲಬದ್ಧತೆ ನಿವಾರಿಸಿ ಜೀರ್ಣಕ್ರಿಯೆಗೆ ನೆರವಾಗುತ್ತದೆ. ಇದು ಕಡಿಮೆ ಕ್ಯಾಲರಿ, ಹೆಚ್ಚಿನ ನಾರಿನಾಂಶ ಮತ್ತು ವಿಟಮಿನ್ ಗಳಿಂದ ಸಮೃದ್ಧವಾಗಿರುವ ಕಾರಣ ತೂಕ ಇಳಿಸುವ ಆಹಾರ ಕ್ರಮದಲ್ಲಿ ಇದನ್ನು ಅಳವಡಿಸಬಹುದು.
ಇದರಲ್ಲಿನ ಉರಿಯೂತ ನಿವಾರಣ ಗುಣಗಳು ಸಂಧಿವಾತ ಮತ್ತು ಅಸ್ಥಿರಂಧ್ರತೆಯಿಂದ ಬಳಲುತ್ತಿದ್ದರೆ ನೋವನ್ನು ತಡೆಗಟ್ಟುತ್ತದೆ. ಪಪ್ಪಾಯದಲ್ಲಿ ವಿಟಮಿನ್ ಸಿ ಉನ್ನತ ಮಟ್ಟದಲ್ಲಿದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಪಪ್ಪಾಯದ ಬೀಜಗಳಲ್ಲಿ ಸೂಕ್ಷ್ಮಾಣು ವಿರೋಧಿ ಗುಣಗಳಿವೆ. ಇದು ಕಿಡ್ನಿ ವೈಫಲ್ಯ ತಡೆಯುತ್ತದೆ. ಪಿತ್ತಜನಕಾಂಗ ಶುದ್ದೀಕರಣ ಮಾಡುತ್ತದೆ ಮತ್ತು ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ.
ಪಪ್ಪಾಯದ ಹಲವಾರು ರೀತಿಯ ಲಾಭಗಳನ್ನು ನಾವೀಗ ತಿಳಿದುಕೊಂಡಿದ್ದೇವೆ ಮತ್ತು ಇದು ಋತುಚಕ್ರ ಉಂಟುಮಾಡುತ್ತದೆಯಾ ಎಂದು ತಿಳಿಯಬೇಕು. ಪಪ್ಪಾಯ ಋತುಚಕ್ರ ನಿಯಮಿತವಾಗಿ ಆಗುವಂತೆ ನೆರವಾಗುತ್ತದೆ. ಹಸಿ ಪಪ್ಪಾಯದಲ್ಲಿ ಹೆಚ್ಚಿನ ಉಷ್ಣತೆಯಿದ್ದು, ಇದು ದೇಹದಲ್ಲಿ ಇಸ್ಟ್ರೇಜನ್ ಉತ್ಪಾದಿಸುತ್ತದೆ ಮತ್ತು ಇದರ ಪರಿಣಾಮ ಋತುಚಕ್ರವನ್ನು ಸಾಮಾನ್ಯವಾಗಿಸುತ್ತದೆ.
ಋತುಚಕ್ರದ ವೇಳೆ ಆಗುವ ಬದಲಾವಣೆಗಳು
ಹಸಿ ಪಪ್ಪಾಯ ಋತುಚಕ್ರದ ವೇಳೆ ರಕ್ತದ ಹರಿವು ಹೆಚ್ಚಿಸುತ್ತದೆ. ಇದು ಗರ್ಭಾಶಯದ ಸ್ನಾಯುಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಇದರಿಂದ ನೈಸರ್ಗಿಕವಾಗಿ ಋತುಚಕ್ರವಾಗುವಂತೆ ಮಾಡುತ್ತದೆ.
ಆದಾಗ್ಯೂ ಹಸಿ ಪಪ್ಪಾಯ ಋತುಚಕ್ರ ನಿಯಮಿತವಾಗಿ ಆಗುವಂತೆ ಮಾಡುತ್ತದೆ. ಆದರೆ ಹಣ್ಣು ಪಪ್ಪಾಯವಲ್ಲ ಎನ್ನುವುದು ನೆನಪಿರಲಿ. ಹಸಿ ಪಪ್ಪಾಯ ತಿನ್ನಲು ಹಲವಾರು ವಿಧಾನಗಳಿವೆ. ಆದರೆ ಇದನ್ನು ಸಲಾಡ್ ರೂಪದಲ್ಲಿ ತಿನ್ನಬೇಕು. ಋತುಚಕ್ರವಾಗಲು ಹಸಿರು ಪಪ್ಪಾಯ ಪ್ರಯತ್ನಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
