Latest Updates
-
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ!
ನೀವು ನಿದ್ದೆಯಲ್ಲಿ ಹಲ್ಲು ಕಡಿಯುತ್ತೀರಾ?
ಹಲ್ಲು ಕಡಿಯುವುದು ಅಥವಾ ಬ್ರೂಕ್ಸಿಸಂ ಎಂಬುದು ಗೊರಕೆಯಂತೆ, ಇದು ನೀವು ನಿದ್ದೆ ಮಾಡುವಾಗ ಸಂಭವಿಸುತ್ತದೆ. ಈ ವಿಚಾರ ನಮಗೆ ತಿಳಿಯುವುದೇ ಇಲ್ಲ. ಆದರೆ ನಮ್ಮ ಅಕ್ಕ ಪಕ್ಕದಲ್ಲಿ ಮಲಗುವವರಿಗೆ ಇದರ ಪರಿಚಯ ತುಂಬಾ ಚೆನ್ನಾಗಿರುತ್ತದೆ.
ಸುಖ ನಿದ್ದೆ ಬರಲು ಡಯಟ್ ಹೀಗಿರಲಿ
ವಿಶೇಷವಾಗಿ ನಮ್ಮ ಸಂಗಾತಿಗೆ ಈ ವಿಚಾರ ಮೊದಲು ತಿಳಿಯುತ್ತದೆ ಮತ್ತು ಇದನ್ನು ಅವರೇ ಮೊಟ್ಟ ಮೊದಲು ನಮ್ಮ ಗಮನಕ್ಕೆ ತರುತ್ತಾರೆ. ಒಂದು ಹಂತಕ್ಕೆ ಬಂದಾಗ ಹಲ್ಲು ಕಡಿಯುವ ಅಭ್ಯಾಸ ತನ್ನಷ್ಟಕ್ಕೆ ತಾನೇ ನಿಂತು ಹೋಗುತ್ತದೆ ಎಂದು ನೀವು ಭಾವಿಸಿದ್ದೀರಾ?

ಖಂಡಿತ ನಿಮ್ಮ ಭಾವನೆ ತಪ್ಪು. ಗೊರಕೆಯಂತೆ ಈ ಸಮಸ್ಯೆಯಿಂದಲೂ ಸಹ ನೀವು ಹೊರಬರಲು ಪ್ರಯತ್ನಪಡಬೇಕು ಅಷ್ಟೇ. ಹಲ್ಲು ಕಡಿಯುವ ಅಭ್ಯಾಸವು ಹಲವಾರು ದಂತ ಸಮಸ್ಯೆಗಳಿಗೆ ಮೂಲವಾಗುತ್ತದೆ. ಹಲ್ಲುಗಳನ್ನು ಬಲವಾಗಿ ಕಡಿಯುವುದರಿಂದ ಹಲ್ಲುಗಳ ಮೇಲೆ ಉಂಟಾಗುವ ಪರಿಣಾಮಗಳನ್ನು ನಾವು ಕಣ್ಣಾರೆ ಕಾಣಬಹುದು.
ಮಕ್ಕಳಲ್ಲಿ ಹಲ್ಲು ಕಡಿಯುವ ಅಭ್ಯಾಸ: ಮಕ್ಕಳಲ್ಲಿ ಹಲ್ಲು ಕಡಿಯುವ ಸಮಸ್ಯೆಯು ಎರಡು ಬಾರಿ ಕಂಡು ಬರುತ್ತದೆ. ಒಂದು ಅವರು ಮಕ್ಕಳಾಗಿರುವಾಗ, ಎರಡು ಅವರಿಗೆ ಹಲ್ಲುಗಳು ಮೂಡಿದಾಗ ಈ ಸಮಸ್ಯೆಯು ಕಂಡು ಬರುತ್ತದೆ. ಆದರೆ ಈ ಸಮಸ್ಯೆಯು ಮಕ್ಕಳಲ್ಲಿ ಮಕ್ಕಳಲ್ಲಿ ತಲೆನೋವು, ದವಡೆ ನೋವು ಮತ್ತು ಅಡ್ಡಾ-ದಿಡ್ಡಿ ಹಲ್ಲುಗಳ ಸಮಸ್ಯೆಯನ್ನು ಹೊರತುಪಡಿಸಿ ಇನ್ನಿತರ ಶಾಶ್ವತವಾದ ಪರಿಣಾಮವನ್ನೇನು ಉಂಟು ಮಾಡುವುದಿಲ್ಲ.
ಇವರು ಬೆಳೆದಂತೆಲ್ಲ ಹಲ್ಲುಗಳು ಶಾಶ್ವತವಾಗಿ ಬೆಳೆಯುತ್ತವೆ.
ಆಗ ಕೆಲವು ಮಕ್ಕಳಲ್ಲಿ ಹಲ್ಲು ಕಡಿಯುವ ಅಭ್ಯಾಸ ಮುಂದುವರಿಯುತ್ತದೆ. ಇದಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೂ ಮೇಲಿನ ಮತ್ತು ಕೆಳದವಡೆಗಳ ಘರ್ಷಣೆಯ ಪರಿಣಾಮ ಹಲ್ಲು ಕಡಿಯುವ ಸಮಸ್ಯೆ ಕಂಡುಬರುತ್ತದೆ ಎಂದು ಊಹಿಸಲಾಗಿದೆ. ಇದರಿಂದ ಅಲರ್ಜಿ, ಅಸ್ವಸ್ಥತೆ ಮತ್ತು ಒತ್ತಡದಂತಹ ಸಮಸ್ಯೆಗಳು ಕಂಡು ಬರುತ್ತವೆ.
ನೀವು ಹಲ್ಲು ಕಚ್ಚಿದರೆ ಮತ್ತೊಬ್ಬರ ನಿದ್ದೆ ಹಾಳು!
ಹಲ್ಲು ಕಡಿಯುವ ಸಮಸ್ಯೆಯ ಲಕ್ಷಣಗಳು:
ಹಲ್ಲು ಕಡಿಯುವುದು ಹಲವಾರು ತರದಲ್ಲಿ ನಡೆಯುತ್ತದೆ. ಸಮಾನಾಂತರವಾಗಿ ಗರಗಸದಂತೆ ಕಡಿಯುವುದು, ಕಟ ಕಟ ಎಂದು ಕಡಿಯುವುದು, ಹಿಂದೆ-ಮುಂದೆ ದವಡೆಗಳನ್ನು ಚಲಿಸಿ ಕಡಿಯುವ ಸದ್ದು ಮಾಡುವುದು ಹೀಗೆ ಹಲವು ತರಹದಲ್ಲಿ ಹಲ್ಲುಗಳನ್ನು ಕಡಿಯುವುದನ್ನು ನಾವು ನೋಡಬಹುದು. ಇನ್ನೂ ಕೆಲವರು ಬಲವಾಗಿ ಹಲ್ಲುಗಳನ್ನು ಕಚ್ಚಿ ಹಿಡಿಯುವ ಅಭ್ಯಾಸವನ್ನು ಸಹ ಹೊಂದಿರುತ್ತಾರೆ. ನಿಮಗೆ ಹಲ್ಲು ಕಡಿಯುವ ಅಭ್ಯಾಸವಿದ್ದಲ್ಲಿ ಅದನ್ನು ಸುಲಭವಾಗಿ ಕಂಡು ಹಿಡಿಯಬಹುದು. ರಾತ್ರಿ ನೀವು ಹಲ್ಲು ಕಡಿದಿದ್ದಲ್ಲಿ, ಬೆಳಗ್ಗೆ ತಲೆನೋವು ಮತ್ತು ದವಡೆ ನೋವಿನ ಸಮಸ್ಯೆ ನಿಮ್ಮಲ್ಲಿ ಕಂಡು ಬರುತ್ತದೆ.
ಹಲ್ಲು ಕಡಿಯುವ ಸಮಸ್ಯೆಯ ಹಿಂದಿನ ಕಾರಣಗಳು:
ಹಲ್ಲು ಕಡಿಯುವ ಸಮಸ್ಯೆಯನ್ನು ವೈಧ್ಯಕೀಯ ಶಾಸ್ತ್ರದಲ್ಲಿ ಬ್ರೂಕ್ಸಿಸಂ ಎಂದು ಕರೆಯುತ್ತಾರೆ. ಇದಕ್ಕೆ ಇರುವ ಕಾರಣಗಳು ಚರ್ಚಾಸ್ಪದವಾಗಿವೆ. ಮಾನಸಿಕ ಒತ್ತಡವೆ ಇದಕ್ಕೆ ಪ್ರಮುಖ ಕಾರಣ ಎಂದು ದೋಷಾರೋಪಣೆಯನ್ನು ಹೊರಿಸಲಾಗುತ್ತದೆ. ಆದರೂ ಸಹ ಅಂಕು ಡೊಂಕಾದ ಹಲ್ಲುಗಳು ಅಥವಾ ಬೆಳೆಯದ ಹಲ್ಲುಗಳು ಸಹ ಇದಕ್ಕೆ ಕಾರಣ ಎಂದು ಹೇಳಲಾಗುತ್ತದೆ.
ಪರಿಹಾರಗಳು:
ಈ ಸಮಸ್ಯೆಗೆ ದಂತ ವೈಧ್ಯರು ಟೂಥ್ ಗಾರ್ಡ್ ನೀಡುತ್ತಾರೆ. ಈ ಸಮಸ್ಯೆಯು ವಿಕೋಪಕ್ಕೆ ಹೋದಾಗ ರೂಟ್ ಕೆನಾಲ್, ಕ್ರೌನ್, ಬ್ರಿಡ್ಜ್, ದಂತ ಕಸಿ ಅಥವಾ ಹಲ್ಲುಗಳ ಸಾಲನ್ನು ಸರಿಪಡಿಸುವ ಮೂಲಕ ಚಿಕಿತ್ಸೆಯನ್ನು ನೀಡುತ್ತಾರೆ. ಅದಕ್ಕಾಗಿ ನಿಮ್ಮ ಸಂಗಾತಿ ಹಲ್ಲು ಕಡಿಯುವ ಸಮಸ್ಯೆ ನಿಮಗೆ ಪ್ರತಿನಿತ್ಯ ಇದೆ ಎಂದು ದೂರಿದಾಗ, ತಡ ಮಾಡದೆ ದಂತ ವೈಧ್ಯರ ಬಳಿ ಪರೀಕ್ಷಿಸಿ.
ಮಲಗುವ ಮುಂಚೆ ಹೀಗೆ ಮಾಡಲು ಮರೆಯದಿರಿ
ಯಾವುದನ್ನು ನಿಯಂತ್ರಿಸಬೇಕು:
ಮೊದಲು ಒತ್ತಡವನ್ನು ನಿಯಂತ್ರಿಸಿ, ಸಾಧ್ಯವಾದಷ್ಟು ನಿತ್ಯವು ವ್ಯಾಯಾಮ ಅಥವಾ ಧ್ಯಾನ ಮಾಡುವುದನ್ನು ರೂಢಿಸಿಕೊಂಡು ಒತ್ತಡವನ್ನು ನಿಭಾಯಿಸಿ. ಎರಡನೆಯದಾಗಿ ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆಗಳನ್ನು ತನ್ನಿ. ಕಾಫಿ, ಕೆಫಿನ್ ಮತ್ತು ಆಲ್ಕೋಹಾಲ್‍ನಂತಹ ಪೇಯಗಳನ್ನು ಸೇವಿಸುವುದನ್ನು ಬಿಟ್ಟು ಬಿಡಿ. ಆಹಾರವಲ್ಲದ ಪದಾರ್ಥಗಳನ್ನು ಅಂದರೆ ಚ್ಯೂಯಿಂಗ್ ಗಮ್‍ನಂತಹ ಪದಾರ್ಥಗಳನ್ನು ಸೇವಿಸುವುದನ್ನು ಬಿಟ್ಟು ಬಿಡಿ. ಬಾಯಿಯ ಆರೋಗ್ಯವನ್ನು ಹಾಳು ಮಾಡುವಂತಹ ಅಭ್ಯಾಸಗಳನ್ನು ಬಿಟ್ಟು ಬಿಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
