Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬ್ಲ್ಯಾಕ್ ಕಾಫಿ VS ಸಾಮಾನ್ಯ ಕಾಫಿ ಇದರಲ್ಲಿ ಯಾವುದು ಆರೋಗ್ಯಕಾರಿ?
ಇತರ ಅನೇಕರಂತೆ ನೀವೂ ಕೂಡ ಕಾಫಿ ಪ್ರಿಯರೇ ?! ಕಾಫಿಯು ನಿಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆಯೇ ? ಮುಂಜಾನೆ ಅಥವಾ ಭೋಜನದ ಒಂದು ತಾಸಿನ ನಂತರ ಕಾಫಿ ಸಿಗದಿದ್ದರೆ ನೀವು ಚಡಪಡಿಸುತ್ತೀರಾ ?
ಅಧ್ಯಯನ ಒಂದರ ಪ್ರಕಾರ, ಜನರು ಜನಪ್ರಿಯ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ಆಲ್ಕೋಹಾಲ್, ಅಥವಾ ಲೈಂಗಿಕ ಸುಖವನ್ನಾದರೂ ತ್ಯಜಿಸಲು ತಯಾರಿದ್ದಾರು.. ಆದರೆ, ಊಹೂo ಮುಂಜಾವಿನ ಬಿಸಿ ಬಿಸಿ ಕಾಫಿಯನ್ನು ಮಾತ್ರ ಯಾವುದೇ ಕಾರಣಕ್ಕೂ ಕೂಡ ತಪ್ಪಿಸಿಕೊಳ್ಳಲಾರರು.
ಹೊಳಪಿನ ಮೈಗಾಗಿ ಕಾಫಿ ಬಾಡಿ ಸ್ಕ್ರಬ್

ಆದರೆ ಇಲ್ಲೊಂದು ಪ್ರಶ್ನೆ. ನಿಜಕ್ಕೂ ಕಾಫಿಯು ಆರೋಗ್ಯದಾಯಕವೇ ? ಇದಕ್ಕೆ ಉತ್ತರ - ಹೌದು ಎಂದಾಗಿದೆ. ಯಕೃತ್ ನ ಕ್ಯಾನ್ಸರ್ ನ ಅಪಾಯವನ್ನು ಕಡಿಮೆ ಮಾಡುವುದು ಹಾಗೂ ನಿಮ್ಮ ಸ್ಮರಣ ಶಕ್ತಿಯನ್ನು ಸುಧಾರಿಸುವುದನ್ನೂ ಒಳಗೊಂಡಂತೆ ಕಾಫಿಯು ಅನೇಕ ಆರೋಗ್ಯ ಸಂಬಂಧೀ ಪ್ರಯೋಜನಗಳನ್ನು ಹೊಂದಿದೆ.
ಕಾಫಿಯನ್ನು ತಯಾರಿಸುವ ವಿಧಾನಗಳoತೂ ಸಾಕಷ್ಟು ಬೇರೆ ಬೇರೆಯಾಗಿದ್ದು, ನೀವು ಅದನ್ನು ಯಾವುದೇ ವಿಧಾನವನ್ನನುಸರಿಸಿ ಕುಡೀಯಬಹುದಾಗಿದ್ದರೂ ಸಹ, ತಯಾರಿಕೆಯ ವಿಧಾನವನ್ನು ಆಧರಿಸಿ ಅದರಲ್ಲಿ ವ್ಯತ್ಯಯಗೊಳ್ಳುವ ಪೌಷ್ಟಿಕಾoಶವನ್ನು ಆಧಾರವಾಗಿಟ್ಟುಕೊಂಡು ತಯಾರಿಕೆಯ ವಿಧಾನವನ್ನು ಆರಿಸಿಕೊಳ್ಳುವುದು ಒಳ್ಳೆಯದು. ಈ ಲೇಖನದಲ್ಲಿ ನಾವು ಕಪ್ಪು ಕಾಫಿ ಮತ್ತು ಹಾಲು ಹಾಗೂ ಸಕ್ಕರೆಯನ್ನು ಮಿಶ್ರಗೊಳಿಸಿ ತಯಾರಿಸಿದ ಕಾಫಿಗಳ ನಡುವಿನ ವ್ಯತ್ಯಾಸಗಳ ಕುರಿತು ಚರ್ಚಿಸೋಣ.
ಕಾಫಿ ಸೇವನೆಯಿಂದ ತೂಕ ಇಳಿಕೆ ಸಾಧ್ಯವೇ?
1. ತೂಕ ನಷ್ಟವನ್ನು ಹೊಂದುವುದಕ್ಕಾಗಿ ಕಪ್ಪು ಕಾಫಿ.
ನೀವು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸುವವರಾದರೆ, ಖಂಡಿತವಾಗಿಯೂ ನೀವು ಸಕ್ಕರೆ ಮತ್ತು ಹಾಲು ಬೆರೆಸಿದ ಕಾಫಿಗೆ ಬದಲಾಗಿ ಕಪ್ಪು ಕಾಫಿಯನ್ನು ಕುಡಿಯುವುದು ಒಳಿತು. ಯಾಕೆಂದರೆ ತೌಲನಿಕವಾಗಿ ಕಪ್ಪು ಕಾಫಿಯನ್ನು ಕಡಿಮೆ ಕ್ಯಾಲರಿಯ ಪ್ರಮಾಣವಿರುತ್ತದೆ. ಒಂದು ಲೋಟದಷ್ಟು ಕಪ್ಪು ಕಾಫಿಯಲ್ಲಿ ಕೇವಲ 4.7 ಕ್ಯಾಲರಿಗಳಿದ್ದರೆ, ಹಾಲು ಮತ್ತು ಸಕ್ಕರೆಯನ್ನೊಳಗೊoಡ ಕಾಫಿಯಲ್ಲಿ 56.6 ಕ್ಯಾಲರಿಗಳಿರುತ್ತದೆ.
2. ಸಂಜೆಯ ನಂತರ ಹಾಲು ಮತ್ತು ಸಕ್ಕರೆ ಮಿಶ್ರಿತ ಕಾಫಿಯನ್ನು ಸೇವಿಸಿರಿ.
ಸಾಮಾನ್ಯ ಕಾಫಿಗಿಂತಲೂ ಕಪ್ಪು ಕಾಫಿಯು ನಿಮ್ಮನ್ನು ಹೆಚ್ಚು ಶಕ್ತಿ ಹಾಗೂ ಉಲ್ಲಸಿತರನ್ನಾಗಿ ಮಾಡುತ್ತದೆ ಮತ್ತು ನಿಮ್ಮ ಮೆದುಳನ್ನು ಹೆಚ್ಚು ಚುರುಕಾಗಿಸುತ್ತದೆ. ಯಾಕೆಂದರೆ, ಕಪ್ಪು ಕಾಪಿಯ ಪರಿಣಾಮವನ್ನು ಮಂದಗತಿಗೊಳಿಸುವ ಹಾಲಾಗಲೀ ಅಥವಾ ಕೆನೆಯಾಗಲೀ ಅದರಲ್ಲಿರುವುದಿಲ್ಲ. ಈ ಕಾರಣದಿಂದ, ಕಪ್ಪು ಕಾಫಿಯನ್ನು ತಡ ಸಂಜೆಯ ವೇಳೆ ಸೇವಿಸುವುದರಿಂದ ನಿಮ್ಮನ್ನು ಅದು ತಡರಾತ್ರಿಯವರೆಗೆ ಎಚ್ಚರವಾಗಿಟ್ಟು ತನ್ಮೂಲಕ ನಿಮ್ಮ ದೈನಂದಿನ ಚಟುವಟಿಕೆಗಳನ್ನು ಏರುಪೇರಾಗಿಸಬಹುದು.
ಅದ್ದರಿಂದ ಸಕ್ಕರೆ ಹಾಗೂ ಹಾಲು ಮಿಶ್ರಿತ ಹಾಲಿನ ರೂಪದಲ್ಲಿ ಆ ಹೆಚ್ಚುವರಿ 50 ಕ್ಯಾಲರಿಗಳ ಸೇವನೆಯು ಸಂಜೆಯ ವೇಳೆಗೆ ಉಪಯುಕ್ತವಾದೀತು. ನಿಮ್ಮನ್ನೇನಾದರೂ ನಿದ್ರಾಹೀನತೆಯು ಕಾಡುತ್ತಿದ್ದರೆ, ಸೂರ್ಯಾಸ್ತಮಾನದ ನಂತರ ಕಾಫಿಯನ್ನು ಕುಡಿಯದಿರುವುದೇ ಒಳಿತು. ಇದಕ್ಕೆ ಬದಲಾಗಿ, ಒಂದು ವೇಳೆ ನಿಮಗೇನಾದರೂ ಪ್ರಮುಖವಾದ ಕಾರ್ಯವಿದ್ದು, ನಿದ್ರೆ ಬರುವoತಾಗಿದ್ದರೆ, ನೀವು ಕಪ್ಪು ಕಾಫಿಯನ್ನೇ ಸೇವಿಸಬೇಕು.
ವಾವ್! ಟ್ರೊಪಿಕಲ್ ಐಸ್ ಬರ್ಗ್ ಕೋಲ್ಡ್ ಕಾಫಿ
3. ಆಮ್ಲೀಯತೆಯ ಸಮಸ್ಯೆಯಿದ್ದರೆ ನಿಮಗೆ ಹಾಲು ಮತ್ತು ಸಕ್ಕರೆ ಮಿಶ್ರಿತ ಕಾಫಿಯೇ ಹಿತಕರ.
ಒಂದು ವೇಳೆ ನೀವು ಆಮ್ಲೀಯತೆಯಿಂದ ಬಳಲುತ್ತಿರುವಿರಾದರೆ, ನೀವು ಕಾಫಿಯನ್ನು ಕುಡಿಯದಿರುವುದೇ ಲೇಸು (ಅದರಲ್ಲೂ ವಿಶೇಷವಾಗಿ ಕಪ್ಪು ಕಾಫಿಯನ್ನು). ಯಾಕೆಂದರೆ ಕಾಫಿಯು ಅತೀ ಹೆಚ್ಚಿನ pH ಮಟ್ಟವನ್ನು ಹೊಂದಿದೆ.
ಮಾತ್ರವಲ್ಲದೇ, ಕಡುಕಪ್ಪಾದ ಕಾಫಿಯ ಸೇವನೆಯು ನಿಮ್ಮ ಮೂತ್ರದಲ್ಲಿ ಆಮ್ಲದ ಪ್ರಬಲತೆಯನ್ನು ಹೆಚ್ಚಿಸಬಹುದು. ಅದ್ದರಿಂದ, ಕಾಫಿಯ ಈ ಪರಿಣಾಮವನ್ನು ತಟಸ್ಥಗೊಳಿಸಲು ನೀವು ಸಾಕಷ್ಟು ನೀರು ಅಥವಾ ಸೌತೆಕಾಯಿಯಂತಹ ಆಹಾರ ವಸ್ತುವನ್ನು ಸೇವಿಸಿರುವುದನ್ನು ಖಚಿತಪಡಿಸಿಕೊಳ್ಳಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications