Latest Updates
-
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ!
ಯುವತಿಯರು ಮಾಡಿಸಲೇಬೇಕಾದ ಕೆಲವು ಪರೀಕ್ಷೆಗಳು
ಜೀವನ ಶೈಲಿಯಿಂದ ಬರುವ ಆರೋಗ್ಯ ಸಮಸ್ಯೆಗಳು ಇಂದಿನ ಯುಗದಲ್ಲಿ ಸಾಮಾನ್ಯಕ್ಕಿಂತಲೂ ಸಾಮಾನ್ಯವಾಗಿವೆ. ಹಾಗೂ ಒಮ್ಮೆ ನೀವು ಮೂವತ್ತೈದು ದಾಟಿದಿರಿ ಎಂದಾದರೆ ಮತ್ತೆ ನೀವಿದರ ಬಗ್ಗೆ ಚಿಂತಿಸಬೇಕಿಲ್ಲ ಎಂದರ್ಥ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ವಾರದೊಳಗೆ ಹೊಟ್ಟೆಯ ಕೊಬ್ಬು ಕರಗಲು ಹೀಗೆ ಮಾಡಿ!
ಇತ್ತೀಚೆಗಂತೂ ಬಹಳ ಸಣ್ಣ ಪ್ರಾಯದ ಹುಡುಗಿಯರೂ ಇದರಿಂದ ಪ್ರಭಾವಕ್ಕೊಳಗಾಗಿದ್ದಾರೆ. ಅನಾರೋಗ್ಯವನ್ನು ಮೊದಲೇ ಪತ್ತೆ ಹಚ್ಚಿ ಅದಕ್ಕೆ ಸರಿಯಾದ ಚಿಕಿತ್ಸೆಯನ್ನು ಪತ್ತೆ ಮಾಡಿ ಅದನ್ನು ಕಾರ್ಯಗತಗೊಳಿಸಿದರಷ್ಟೇ ಈ ಅನಾರೋಗ್ಯದಿಂದ ಮುಕ್ತಿ.
ಹಾಗಾದರೆ ಈ ವಯಸ್ಸಿನಲ್ಲಿ ಬಾಧಿಸುವ ಅನಾರೋಗ್ಯಗಳು ಯಾವುವು ಅವನ್ನು ಹೇಗೆ ಕಂಡುಹಿಡಿಯಬೇಕು. ಅದಕ್ಕೆ ಉತ್ತರ ನೀಡಲು ಇಲ್ಲಿ ಹದಿನೆಂಟು ವರ್ಷದ ಹಾಗೂ ಹದಿನೆಂಟನ್ನು ದಾಟಿದ ಎಲ್ಲಾ ಮಹಿಳೆಯರು ಸಾಮಾನ್ಯವಾಗಿ ಮಾಡಿಸಬೇಕಾದ ವೈದ್ಯಕೀಯ ತಪಾಸಣೆಯ ಬಗ್ಗೆ ಮಾಹಿತಿ ನೀಡಲಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಋತುಚಕ್ರದ ಅವಧಿಯಲ್ಲಿ ಸೇವಿಸಬೇಕಾದ ಆಹಾರಗಳು

ವಿಟಮಿನ್ ಡಿ ; ಯಾವಾಗ? :
ಮೂಳೆ ತಜ್ಞ ಡಾ. ತೇಜಸ್ ಉಪಾಸಿನಿಯವರ ಪ್ರಕಾರ, ಮೂಳೆ ನೋವು, ಬೆನ್ನುನೋವು ಮತ್ತು ಕಾಲು ನೋವು ಕಾಣಿಸಿಕೊಂಡರೆ ಇದು ಮೂಳೆಗೆ ಸಂಬಂಧಿಸಿದ ರೋಗಲಕ್ಷಣಗಳಾಗಿದ್ದು ಆ ಬಗ್ಗೆ ಗಮನವಹಿಸಬೇಕು ಎನ್ನುತ್ತಾರೆ.
ಈ ಪರೀಕ್ಷೆ ಏಕೆ? ಇದು ಯುವತಿಯರು ಮಾಡಿಸಬೇಕಾದ ಪ್ರಮುಖ ಪರೀಕ್ಷೆ. ಡಿ ಜೀವಸತ್ವ ಕೊರತೆ ಸಾಮಾನ್ಯವಾಗಿ ಎಲ್ಲಾ ಯುವತಿಯರಲ್ಲಿ ಸುಮಾರು 80-90% ಅಸ್ತಿತ್ವದಲ್ಲಿದೆ, ಆದ್ದರಿಂದ ಪ್ರತಿ ವಯಸ್ಸಿನ ಪ್ರತಿ ಮಹಿಳೆಗೆ ಈ ಪರೀಕ್ಷೆಯನ್ನು ಮಾಡಲಾಗುತ್ತದೆ. ಇದು ಹಿಂದಿನ ಮಹಿಳೆಯರು ಭಾವಿಸುವ ಆಸ್ಟಿಯೊಪೊರೋಸಿಸ್ ಗಿಂತ ಭಿನ್ನವಾಗಿದೆ.
ಪರೀಕ್ಷೆ - ಹೇಗೆ? : ರಕ್ತ ಪರೀಕ್ಷೆ .

ಜೀವಸತ್ವ ಬಿ12 – ಯಾವಾಗ?:
ತೋಳುಗಳ, ಕಾಲುಗಳು ಮರಗಟ್ಟಿದಂತೆ ಅಥವಾ ಈ ಭಾಗಗಳಲ್ಲಿ ಜುಮ್ಮೆನ್ನುವ ಅನುಭವವಾದರೆ, ಬಲಹೀನತೆ, ದೇಹದಲ್ಲಿ ಅಸಮತೋಲನ ಹಾಗೂ ರಕ್ತಹೀನತೆಯ ಅನುಭವವಾಗುತ್ತಿದೆಯೇ? ಹಾಗಾದರೆ ಮೊದಲು ಪರೀಕ್ಷೆ ಮಾಡಿಸಿಕೊಳ್ಳಿ.
ಏಕೆ: ಈ ಕೊರತೆ ಸಾಮಾನ್ಯವಾಗಿ ಸಸ್ಯಾಹಾರಿಗಳಲ್ಲಿ ಪತ್ತೆಯಾಗಿದೆ. ಈ ಪರೀಕ್ಷೆಯು, ನಿಮ್ಮ ರಕ್ತದಲ್ಲಿ ಈ ಜೀವಸತ್ವದ ಪ್ರಮಾಣದ ಬಗ್ಗೆ ಮಾಹಿತಿ ನೀಡುತ್ತದೆ.
ಪರೀಕ್ಷೆ - ಹೇಗೆ?: ರಕ್ತ ಪರೀಕ್ಷೆ . ಪರೀಕ್ಷೆಯ 10-12 ಗಂಟೆಗಳ ಮೊದಲು ಯಾವುದೇ ಆಹಾರವನ್ನು ಸೇವಿಸದೇ ತೆರಳಿ

ಸ್ತನ ಪರೀಕ್ಷೆ –
ಯಾವಾಗ ?: ಲಂಪ್ಸ್ ಮತ್ತು ಸ್ತನಗಳಲ್ಲಿನ ತೊಂದರೆ ಇದರ ಮೊದಲ ಲಕ್ಷಣ. ಸ್ವಪರೀಕ್ಷೆಯಿಂದ ಮೊದಲು ತಿಳಿಯಬಹುದು. ನಂತರ ಮೆಮೊಗ್ರಾಂ ಪರೀಕ್ಷೆಗೆ ಒಳಗಾಗಬೇಕು.
ಏಕೆ?: ಇದನ್ನು ಯುವತಿಯರು ನಿರ್ಲಕ್ಷಿಸುವ ಪ್ರಮುಖ ಪರೀಕ್ಷೆ! 25 ವರ್ಷ ದಾಟಿದ ಎಲ್ಲಾ ಯುವತಿಯರು ಈ ಪರೀಕ್ಷೆಗೆ ಒಳಗಾಗಬೇಕು.
ಪರೀಕ್ಷೆ - ಹೇಗೆ ? ಸ್ವ ಪರೀಕ್ಷೆ. ಸ್ತನದ ಲಂಪ್ಸ್ (Lumps) ಅಥವಾ ಸ್ತನದ ಬೆಳವಣಿಗೆಯನ್ನು ಪರಿಶೀಲಿಸಿ.

ಮಧುಮೇಹ( ಸಕ್ಕರೆ ಖಾಯಿಲೆ) – ಯಾವಾಗ? :
ನಿರಂತರವಾಗಿ ಬಾಯಾರಿಕೆ, ಆಗಾಗ್ಗೆ ಮೂತ್ರ ವಿಸರ್ಜಿಸಬೇಕೆನ್ನುವ ಅನುಭವ, ಹಠಾತ್ ಹೆಚ್ಚಳವಾಗುವ ಹಸಿವು, ವಿಪರೀತ ಆಯಾಸ, ತಲೆತಿರುಗುವಿಕೆ, ಮಂದ ದೃಷ್ಟಿ ಮತ್ತು ವಾಕರಿಕೆ ಈ ಎಲ್ಲಾ ಸೂಚಕಗಳು ಈ ಖಾಯಿಲೆಯ ಆರಂಭಿಕ ಲಕ್ಷಣಗಳು.
ಏಕೆ: ಯುವತಿಯರು ತೂಕ ಮತ್ತು ಬೊಜ್ಜು ಕಳೆದುಕೊಳ್ಳುವ ಪ್ರಯತ್ನವೂ ಈ ಖಾಯಿಲೆಯ ಏರಿಕೆಗೆ ಕಾರಣ. ಈ ಎರಡೂ ಕಾರಣಗಳಿಂದಾಗಿ, 20 ವರ್ಷಗಳ ಮೇಲ್ಪಟ್ಟ ಮಹಿಳೆಯರು ಕೆಲವೊಮ್ಮೆ ಅದಕ್ಕಿಂತಲೂ ಕಡಿಮೆ ವಯಸ್ಸಿನವರೂ ಸಕ್ಕರೆ ಖಾಯಿಲೆಯ ಪರೀಕ್ಷೆಗಳನ್ನು ಪಡೆಯಬೇಕಾಗಿರುವುದು ಅತ್ಯಗತ್ಯ.
ಪರೀಕ್ಷೆ - ಹೇಗೆ? : ರಕ್ತದ ಮಾದರಿ ಪರೀಕ್ಷೆಗೆ ಬೆರಳಿನ ತುದಿಯನ್ನು ಚುಚ್ಚಿ ಒಂದು ಹನಿ ರಕ್ತ ತೆಗೆದು ಪರೀಕ್ಷಿಸಲಾಗುತ್ತದೆ. ಫಲಿತಾಂಶಗಳು ನಿಮಿಷಗಳಲ್ಲಿ ತಿಳಿಯಬಹುದು!

ಥೈರಾಯ್ಡ್ - ಯಾವಾಗ? :
ತೂಕ ಹೆಚ್ಚಳ, ಆಲಸ್ಯ, ಅನಿಯಮಿತ ಋತುಚಕ್ರ, ಕುತ್ತಿಗೆ ಊತ.
ಏಕೆ: ಹೈಪರ್ ಅಥವಾ ಹೈಪೋ ಥೈರಾಯ್ಡ್ ಎಂಬುದನ್ನು ಪರೀಕ್ಷಿಸಬೇಕು. ಈ ಎರಡೂ ಬಗೆಯ ಥೈರಾಯ್ಡ್ ನಗರದಲ್ಲಿ ಸಾಕಷ್ಟು ಪ್ರಚಲಿತದಲ್ಲಿವೆ 18 ವರ್ಷದ ಹುಡುಗಿಯರಲ್ಲಿ ಕಾಣುವ ದೇಹಾಲಸ್ಯ ರೋಗಲಕ್ಷಣಗಳಾಗಿದೆ ಎಂದು ವೈದ್ಯರು ಹೇಳುತ್ತಾರೆ. .
ಪರೀಕ್ಷೆ- ಹೇಗೆ? : ರಕ್ತ ಪರೀಕ್ಷೆ.

ಪ್ಯಾಪ್ ಸ್ಮೀಯರ್ ಯಾವಾಗ? :
ಯಾವುದೇ ಲಕ್ಷಣಗಳನ್ನೂ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದ್ದರಿಂದ 25 ವರ್ಷಕ್ಕಿಂತ ಮೇಲಿನ ಪ್ರತಿ ಮಹಿಳೆಗೆ ಹೋಗಿ ಈ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕೆಂದು ತಜ್ಞರು ಹೇಳುತ್ತಾರೆ.
65 ದಾಟಿದ ಮಹಿಳೆಯರು ಕಳೆದ ಹತ್ತು ವರ್ಷಗಳಿಂದ ಪರೀಕ್ಷೆಗೆ ನಿಯಮಿತವಾಗಿ ಒಳಗಾಗುತ್ತಿದ್ದಲ್ಲಿ ಹಾಗು ಸರ್ವಿಕ್ಸ್ (ಸಾಮಾನ್ಯವಾಗಿ ಹಿಸ್ಟರಾಕ್ಟಮಿ ಯಿಂದ ಉಂಟಾಗುತ್ತದೆ) ನ ಸಮಸ್ಯೆ ಇಲ್ಲದಿದ್ದಲ್ಲಿ ಈ ಕಾಯಿಲೆಯ ಬಗ್ಗೆ ಚಿಂತಿಸಬೇಕಾಗಿಲ್ಲ.
ಪರೀಕ್ಷೆ - ಏಕೆ?:
ಇದು ಮಹಿಳೆಯಲ್ಲಿ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ ಕ್ಯಾನ್ಸರ್ ಪ್ರಕ್ರಿಯೆಗಳನ್ನು ಪರಿಶೀಲಿಸಿದಾಗ ತಡೆಗಟ್ಟುವ ಪರೀಕ್ಷೆ.
ಪರೀಕ್ಷೆ - ಹೇಗೆ? :
ಇದೊಂದು ಸರಳ ವಿಧಾನ. ಗರ್ಭಕಂಠದ ಜೀವಕೋಶಗಳನ್ನು ಸಂಗ್ರಹಿಸಲಾಗುತ್ತದೆ ಮತ್ತು ಅದನ್ನು ಪ್ರಯೋಗಾಲಯದಲ್ಲಿ ವಿಶ್ಲೇಷಿಸಲಾಗುತ್ತದೆ.



Click it and Unblock the Notifications