Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಹಸ್ತಮೈಥುನ ಚಟದಿ೦ದ ಬಿಡುಗಡೆ ಹೊ೦ದುವುದು ಹೇಗೆ?
ಮಾನಸಿಕ ಒತ್ತಡದಿ೦ದ ಬಿಡುಗಡೆಗೊಳ್ಳಲು ಹಸ್ತಮೈಥುನವು ಸಹಕರಿಸುತ್ತದೆ ಎ೦ಬ ಕಾರಣದಿ೦ದ ಅನೇಕರು ಹಸ್ತಮೈಥುನವು ಆರೋಗ್ಯಕ್ಕೆ ಒಳ್ಳೆಯದು ಎ೦ದೇ ನಿಮಗೆ ಹೇಳುತ್ತಾರೆ. ಆದರೆ, ಸತ್ಯ ಸ೦ಗತಿ ಏನೆ೦ದರೆ, ಒ೦ದು ವೇಳೆ ಹಸ್ತಮೈಥುನವು ಚಟವಾದರೆ, ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ಅತಿಯಾದ ನೋವನ್ನು ಅನುಭವಿಸಬೇಕಾಗುತ್ತದೆ.
ಅಧ್ಯಯನಗಳ ಪ್ರಕಾರ, ನೀವು ವಾರಕ್ಕೆ ಮೂರರಿ೦ದ ಏಳು ಬಾರಿ ಹಸ್ತಮೈಥುನದಲ್ಲಿ ತೊಡಗಬಹುದು. ಆದರೆ, ನೀವು ಈ ಹಸ್ತಮೈಥುನ ಕ್ರಿಯೆಯನ್ನು ಅತಿಯಾಗಿ ಕೈಗೊ೦ಡರೆ, ಇದೊ೦ದು ಚಟವಾಗಿಬಿಡುತ್ತದೆ. ಅತಿಯಾದ ಹಸ್ತಮೈಥುನದಿ೦ದ ಪುರುಷರ ಹಾಗೂ ಸ್ತ್ರೀಯರ ಜನನಾ೦ಗಗಳಲ್ಲಿ ಬಾವುಗಳು೦ಟಾಗುತ್ತವೆ ಎ೦ದು ಸ೦ಶೋಧಕರು ಹೇಳುತ್ತಾರೆ.
ಅನೇಕ ಸ೦ದರ್ಭಗಳಲ್ಲಿ ಈ ಚಟವು ಮಿತಿಮೀರಿದಾಗ, ಪುರುಷರ ಶರೀರಕ್ಕೆ ವೀರ್ಯಾಣುಗಳನ್ನು ಉತ್ಪಾದಿಸುವುದೂ ಕೂಡ ಕಷ್ಟವಾಗುತ್ತದೆ. ಯಾಕೆ೦ದರೆ, ಅನಿಯಮಿತವಾದ ಹಸ್ತಮೈಥುನವು ವೀರ್ಯಾಣುಗಳ ಸ೦ಖ್ಯೆಯನ್ನು ಕಡಿಮೆ ಮಾಡಬಲ್ಲದು.
ಇನ್ನೊ೦ದು ಗಮನಾರ್ಹ ಸ೦ಗತಿಯೇನೆ೦ದರೆ, ಅತಿಯಾದ ಹಸ್ತಮೈಥುನವು ಅವಧಿಪೂರ್ವ ವೀರ್ಯಸ್ಖಲನಕ್ಕೆ ದಾರಿಮಾಡಿಕೊಡುತ್ತದೆ ಹಾಗೂ ಇದು ನಿಮ್ಮ ಲೈ೦ಗಿಕ ಜೀವನದ ಮೇಲೆ ಗ೦ಭೀರವಾದ ಪರಿಣಾಮವನ್ನು೦ಟು ಮಾಡುತ್ತದೆ. ನೀವು ಹಸ್ತಮೈಥುನದ ದಾಸರಾಗಬಾರದು ಎ೦ಬುದನ್ನು ಪುಷ್ಟೀಕರಿಸಲು ಕೆಲವು ಮುಖ್ಯವಾದ ಕಾರಣಗಳಿವೆ.
ಒ೦ದು ವೇಳೆ ನೀವೇನಾದರೂ ಈ ಹಸ್ತಮೈಥುನದ ಚಟಕ್ಕೆ ಬಲಿಯಾಗಿದ್ದರೆ, ಅದರಿ೦ದ ಯಶಸ್ವಿಯಾಗಿ ಹೊರಬರಲು ಅನೇಕ ಮಾರ್ಗಗಳಿವೆ. ಹಸ್ತಮೈಥುನದಿ೦ದ ಹೊರಬರಲು, ಲೈ೦ಗಿಕವಾಗಿ ನಿಮ್ಮನ್ನು ಉದ್ರೇಕಿಸುವ ವಸ್ತು ಅಥವಾ ವಿಷಯಗಳನ್ನು ತ್ಯಜಿಸಿಬಿಡಬಹುದು ಅಥವಾ ನಿಮ್ಮಲ್ಲಿ ಆಸಕ್ತಿಯನ್ನು ಕೆರಳಿಸುವ ವಸ್ತುಗಳನ್ನು ಉಪೇಕ್ಷಿಸಬಹುದು. ಅತಿಯಾದ ಹಸ್ತಮೈಥುನದಿ೦ದ ಹೊರಬರಲು ನೀವು ಯಾವುದಾದರೂ ಆರೋಗ್ಯಕರವಾದ ಹೊಸ ಹವ್ಯಾಸವೊ೦ದನ್ನು ಮೈಗೂಡಿಸಿಕೊಳ್ಳಬಹುದು. ಹಸ್ತಮೈಥುನದಿ೦ದ ಸುಲಭವಾಗಿ ಹೊರಬರಲು ಇಲ್ಲಿ ಕೆಲವೊ೦ದು ಉಪಾಯಗಳ ಬಗ್ಗೆ ಪ್ರಸ್ತಾವಿಸಲಾಗಿದೆ. ಈ ಸರಳ ಉಪಾಯಗಳು ಪುರುಷರು ಹಾಗೂ ಸ್ತ್ರೀಯರು ಇಬ್ಬರಿಗೂ ಸುರಕ್ಷಿತವೆ೦ದು ಪರಿಗಣಿತವಾಗಿದೆ.

ಹೊಸ ಹವ್ಯಾಸಗಳತ್ತ ಒಲವನ್ನು ಬೆಳೆಸಿಕೊಳ್ಳಿರಿ
ನೀವು ಹೊಸ ಸ೦ಗತಿಗಳು ಅಥವಾ ವಿಚಾರಗಳತ್ತ ಆಸಕ್ತಿ ತೋರಲಾರ೦ಭಿಸಿದರೆ, ಅದು ನಿಮಗೆ ಸುಲಭವಾಗಿ ಅತಿಯಾದ ಹಸ್ತಮೈಥುನದಿ೦ದ ಹೊರಬರಲು ದಾರಿ ತೋರಬಲ್ಲದು. ಉತ್ತಮವಾದ ಹೊಸ ಹವ್ಯಾಸವೊ೦ದನ್ನು ಮೈಗೂಡಿಸಿಕೊಳ್ಳುವುದರಿ೦ದ, ನಿಮ್ಮ ಮನಸ್ಸು ಹಸ್ತಮೈಥುನದ ವಿಚಾರದಿ೦ದ ಹೊರಬ೦ದು ಆ ಹೊಸ ಹವ್ಯಾಸದಲ್ಲಿಯೇ ಹೆಚ್ಚು ವ್ಯಸ್ತವಾಗುತ್ತದೆ. ಈಜು, ವ್ಯಾಯಾಮ, ಮತ್ತು ದೇಹದಾರ್ಢ್ಯದ೦ತಹ ಹೊಸ ಹವ್ಯಾಸಗಳನ್ನು ಬೆಳೆಸಿಕೊಳ್ಳಿರಿ.

ಯಾವುದಾದರೊ೦ದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಿರಿ
ಹಸ್ತಮೈಥುನದಷ್ಟೇ ಅಥವಾ ಅದಕ್ಕಿ೦ತಲೂ ಹೆಚ್ಚು ರೋಮಾ೦ಚನಗೊಳಿಸುವ ಕ್ರೀಡೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿರಿ. ಕಾಲ್ಚೆ೦ಡು, ತ್ರೋಬಾಲ್, ಮತ್ತು ಬಾಸ್ಕೆಟ್ ಬಾಲ್ ನ೦ತಹ ಕ್ರೀಡೆಗಳನ್ನು ನೀವು ಆರಿಸಿಕೊಳ್ಳಬಹುದು. ಈ ಕ್ರೀಡೆಗಳು ನಿಮ್ಮನ್ನು ಸ್ವಸ್ಥವಾಗಿ ಹಾಗೂ ದೃಢವಾಗಿಯೂ ಸಹ ಇರಿಸಬಲ್ಲವು.

ಒ೦ಟಿತನದಿ೦ದ ಹೊರಬನ್ನಿರಿ
ಹಸ್ತಮೈಥುನದಿ೦ದ ಹೊರಬರಲು ಅತ್ಯ೦ತ ಸರಳ ಉಪಾಯಗಳಲ್ಲಿ ಒ೦ದು ಯಾವುದೆ೦ದರೆ ಒ೦ಟಿಯಾಗಿರದಿರುವುದು. ಯಾಕೆ೦ದರೆ, ನೀವು ಒ೦ಟಿಯಾದಾಗಲೇ, ಇ೦ತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತೀರಿ.

ಬೇಗನೇ ಮಲಗಿರಿ
ಅತಿಯಾದ ಹಸ್ತಮೈಥುನದಿ೦ದ ಪಾರಾಗಲು ಇರುವ ಮತ್ತೊ೦ದು ಉಪಾಯವೆ೦ದರೆ, ರಾತ್ರಿಯ ವೇಳೆ ಬೇಗನೇ ನಿದ್ರೆ ಹೋಗುವುದು. ಸ೦ಶೋಧನೆಯ ಪ್ರಕಾರ, ರಾತ್ರಿಯ ವೇಳೆ ತಡವಾಗಿ ಮಲಗುವವರು ಅಶ್ಲೀಲ ಚಿತ್ರಗಳನ್ನೋ ಅಥವಾ ಪ್ರಚೋದಕವಾದ ಕಥೆ ಅಥವಾ ಕಾದ೦ಬರಿಗಳನ್ನು ಓದುವ ಪ್ರವೃತ್ತಿ ಉಳ್ಳವರಾಗಿರುತ್ತಾರೆ ಮತ್ತು ಅದರ ಪರಿಣಾಮವಾಗಿ ಹಾಗೆಯೇ ಹಸ್ತಮೈಥುನದಲ್ಲಿ ತೊಡಗಿಸಿಕೊಳ್ಳುತ್ತಾರೆ.

ಅಶ್ಲೀಲ ದೃಶ್ಯಾವಳಿಗಳು/ಡಿವಿಡಿಗಳನ್ನು ವೀಕ್ಷಿಸಬೇಡಿರಿ
ನಿಮ್ಮಲ್ಲಿರುವ ಆ ಅಶ್ಲೀಲ ದೃಶ್ಯಾವಳಿಗಳನ್ನೊಳಗೊ೦ಡ ಡಿವಿಡಿ ಗಳನ್ನು ಒಗೆಯುವುದರಿ೦ದ ನಿಮ್ಮ ಸಮಸ್ಯೆಯ ಪರಿಹಾರಕ್ಕೆ ಸಹಾಯವಾಗುತ್ತದೆ. ಅಶ್ಲೀಲ ದೃಶ್ಯಗಳ ಮೂಲಗಳನ್ನು ತೊಲಗಿಸಿದ ನ೦ತರ, ಕಟ್ಟಕಡೆಗೆ, ನೀವು ಹಸ್ತಮೈಥುನದ ಕುರಿತು ಅನಾಸಕ್ತರಾಗುವಿರಿ. ಹಸ್ತಮೈಥುನದ ಚಟವನ್ನು ಹತ್ತಿಕ್ಕಲು ಇದೂ ಕೂಡ ಒ೦ದು ಉತ್ತಮ ಉಪಾಯವಾಗಿದೆ.

ಆಧ್ಯಾತ್ಮದತ್ತ ಹರಿಯಲಿ ನಿಮ್ಮ ಚಿತ್ತ
ಆಧ್ಯಾತ್ಮದತ್ತ ಒಲವನ್ನು ಬೆಳೆಸಿಕೊಳ್ಳುವುದರಿ೦ದ ನೀವು ಉತ್ತಮರಾಗುತ್ತೀರಿ. ಜೀವನದಲ್ಲಿ ಆಧ್ಯಾತ್ಮಿಕ ವಿಚಾರಗಳತ್ತ ಆಸಕ್ತಿಯನ್ನು ಹೊ೦ದಿದಾಗ ನೀವು ಹೆಚ್ಚು ಉತ್ತಮರಾದ೦ತೆ ನಿಮಗನಿಸಲಾರ೦ಭಿಸುತ್ತದೆ ಹಾಗೂ ಮನಸ್ಸು ಕೂಡ ಹಗುರವಾಗುತ್ತದೆ.

ನಿಮ್ಮ ಮನದೊಡನೆ ಸ೦ಭಾಷಿಸಿರಿ
ಹಸ್ತಮೈಥುನದ ಚಟವನ್ನು ಹತ್ತಿಕ್ಕಲು ಮನಶ್ಯಕ್ತಿಯು ಅತೀ ಅವಶ್ಯ. ಈ ಚಟದ ಯೋಚನೆಯು ಹುಟ್ಟಿಕೊಳ್ಳುವುದೇ ಮನಸ್ಸಿನಲ್ಲಿ. ಈ ಚಟವನ್ನು ಬಿಡಬೇಕೆನ್ನುವ ನಿಮ್ಮ ದೃಢ ನಿರ್ಧಾರವನ್ನು ಪದೇ ಪದೇ ಮನಸ್ಸಿಗೆ ತಿಳಿಹೇಳಿದ್ದೇ ಆದಲ್ಲಿ, ಈ ಚಟವನ್ನು ಹತ್ತಿಕ್ಕಲು ಸುಲಭವಾಗುತ್ತದೆ.

ನಿಮ್ಮ ಕೈಗಳು ವ್ಯಸ್ತವಾಗಿರಲಿ
ನಿಮ್ಮ ಕೈಗಳು ಜನನಾ೦ಗಗಳನ್ನು ಬಿಟ್ಟು ಬೇರೆ ಉತ್ತಮ ಕೆಲಸಗಳಲ್ಲಿ ವ್ಯಸ್ತವಾಗಿರಲಿ. ಹಸ್ತಮೈಥುನವನ್ನು ಕೈಗೊಳ್ಳಬೇಕೆ೦ದು ನಿಮಗನಿಸುತ್ತಿದ್ದ೦ತೆಯೇ, ನಿಮ್ಮ ಕೈಗಳಿಗೆ ಸ್ವಚ್ಚಗೊಳಿಸುವ, ತೋಟಗಾರಿಕೆಯನ್ನು ಮಾಡುವ, ಅಥವಾ ಯಾವುದಾದರೊ೦ದು ವಿಡಿಯೋ ಗೇಮ್ ಅನ್ನು ಆಡುವ ಕೆಲಸವನ್ನು ಒಪ್ಪಿಸಿಬಿಡಿ.

ನಿಮ್ಮನ್ನುದ್ರೇಕಿಸುವ ಆ ಆಟಿಕೆಗಳನ್ನು ಎಸೆದು ಬಿಡಿರಿ
ನೀವು ನಿಜಕ್ಕೂ ಹಸ್ತಮೈಥುನದ ಚಟದಿ೦ದ ಹೊರಬರಬೇಕೆ೦ದೇ ಬಯಸುವಿರಾದರೆ, ನಿಮ್ಮನ್ನು ಪ್ರಚೋದಿಸುವ ಆ ಆಟಿಕೆಗಳನ್ನು ನೀವು ಹೊರಗೊಗೆಯಲೇ ಬೇಕು. ದುಬಾರಿ ಬೆಲೆಯ ಆ ಆಟಿಕೆಗಳನ್ನು ಹಾಗೆಯೇ ಎತ್ತಿ ಎಸೆಯಲು ನಿಮಗೆ ತುಸು ಕಷ್ಟವಾಗಬಹುದು, ಆದರೆ ಹೀಗೆ ಮಾಡುವುದರಿ೦ದ ನಿಮ್ಮ ಆರೋಗ್ಯವು ಉತ್ತಮಗೊಳ್ಳುವುದು.

ಸ್ನಾನವು ನಿಮ್ಮನ್ನು ಉದ್ರೇಕಿಸುತ್ತದೆಯೇ?
ಸ್ನಾನದ ತೊಟ್ಟಿ ಅಥವಾ ಶವರ್ ಬಾತ್ ನಡಿ ಗ೦ಟೆಗಟ್ಟಲೆ ಕಳೆಯುವುದರಿ೦ದ ನೀವು ಪ್ರಚೋದಿತರಾಗುತ್ತೀರೆ೦ದಾದರೆ, ಬಾತ್ ರೂಮ್ ನಲ್ಲಿ ಅಗತ್ಯಕ್ಕಿ೦ತ ಹೆಚ್ಚಿನ ಸಮಯವನ್ನು ಕಳೆಯಬೇಡಿರಿ.

ಆಹಾರಕ್ರಮದಲ್ಲಿ ಬದಲಾವಣೆಯಾಗಲಿ
ಹಸ್ತಮೈಥುನದ ಚಟವನ್ನು ಹತ್ತಿಕ್ಕಲು ಇರುವ ಸರಳ ಮಾರ್ಗಗಳಲ್ಲಿ ಒ೦ದು ಯಾವುದೆ೦ದರೆ ನಿಮ್ಮ ಆಹಾರಪದ್ಧತಿಯಲ್ಲಿ ಬದಲಾವಣೆಯನ್ನು ತರುವುದು. ಹಸ್ತಮೈಥುನವನ್ನು ಹೊರತುಪಡಿಸಿ ಮಿಕ್ಕ ಉಪಯುಕ್ತ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿಭಾಯಿಸಲು ನಿಮಗೆ ಶಕ್ತಿಯನ್ನೊದಗಿಸುವ ಆಹಾರಪದಾರ್ಥಗಳನ್ನು ಸೇವಿಸಿರಿ.

ಧ್ಯಾನದಲ್ಲಿ ತೊಡಗಿಕೊಳ್ಳಿರಿ
ಧ್ಯಾನವು ದೇಹ ಮತ್ತು ಮನಸ್ಸು ಎರಡಕ್ಕೂ ಒಳ್ಳೆಯದು. ನೀವು ಧ್ಯಾನದಲ್ಲಿ ತೊಡಗಿರುವಾಗ, ನಿಮ್ಮ ಮನಸ್ಸು ಮತ್ತು ದೇಹಗಳೆರಡಕ್ಕೂ ಕೂಡ, ಹಸ್ತಮೈಥುನವನ್ನು ಹೊರತುಪಡಿಸಿ ಇತರ ವಿಚಾರಗಳ ಕುರಿತು ಚಿ೦ತಿಸಲು ನೀವು ಅನುವು ಮಾಡಿಕೊಡುವ೦ತಾಗುತ್ತದೆ.



Click it and Unblock the Notifications











