For Quick Alerts
ALLOW NOTIFICATIONS  
For Daily Alerts

ಮಹಿಳೆಯರು ವಯಸ್ಸಾದಂತೆ ಕಾಣುವುದನ್ನು ತಡೆಯುವ ಆಹಾರಗಳು

By Deepak M
|

ಗಂಡಸಿನ ಸಂಬಳವನ್ನು ಕೇಳಬಾರದು- ಹೆಂಗಸಿನ ವಯಸ್ಸು ಕೇಳಬಾರದು ಎಂದು ಹೇಳುತ್ತಾರೆ. ಇಂದು ಜನರು ತಾವು ಇನ್ನು ವಯಸ್ಸಾಗದೆ ನವ ಯುವಕರಂತೆ ಕಾಣಿಸಿಕೊಳ್ಳುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅದರಲ್ಲಿ ಹೆಂಗಸರೆ ಮುಂಚೂಣಿಯಲ್ಲಿರುವುದು ಎಂದು ಹೇಳಬೇಕಿಲ್ಲ.

ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಟಿಪ್ಸ್

ವಯಸ್ಸಾಗದಂತೆ ತಡೆಯಲು ನಾವು ಚಟುವಟಿಕೆಯುತವಾಗಿರುವ ಜೀವನ ಶೈಲಿಯನ್ನು ಹೊಂದಿರಬೇಕು, ಇದರ ಜೊತೆಗೆ ಆಹಾರ ವಿಚಾರದಲ್ಲಿ ಪಥ್ಯವನ್ನು ಅನುಸರಿಸಿದರೆ ಹೃದಯವು ಸಹ ಆರೋಗ್ಯಯುತವಾಗಿದ್ದು, ಹೃದ್ರೋಗಗಳು ಬರದಂತೆ ತಡೆಯುತ್ತದೆ.

ನೆನಪಿರಲಿ ಹೃದ್ರೋಗವು ಅಮೆರಿಕಾದ ಮಹಿಳೆಯರಿಗೆ ಮಾರಣಾಂತಿಕವಾಗಿರುವ ನಂ.1ನೇ ಕಾಯಿಲೆಯಾಗಿದೆ. ಇದರ ಜೊತೆಗೆ ಇನ್ನಿತರ ಆರೋಗ್ಯದ ವೈಪರಿತ್ಯಗಳು ಸಹ ನಿಮ್ಮನ್ನು ಭಾದಿಸದಿರಲು ಒಳ್ಳೆಯ ಆಹಾರ ಕ್ರಮವನ್ನು ಅನುಸರಿಸುವುದು ಅತ್ಯಗತ್ಯ.

ಮಹಿಳೆಯರು ತಮ್ಮ ಸೌಂದರ್ಯವನ್ನು ಕಾಪಾಡಿಕೊಂಡು ವಯಸ್ಸಾಗದಂತೆ ಕಾಣಲು ಆಹಾರದಲ್ಲಿ ಅಂಟಿಆಕ್ಸಿಡೆಂಟ್‍ಗಳು, ವಿಟಮಿನ್‍ಗಳು ಮತ್ತು ಮಿನರಲ್‍ಗಳು ಯಥೇಚ್ಛವಾಗಿರುವಂತೆ ನೋಡಿಕೊಳ್ಳಬೇಕುಮಹಿಳೆಯರಿಗೆ ವಯಸ್ಸಾದಂತೆ ಕಾಣುವುದನ್ನು ತಡೆಯುವ ಕೆಲವೊಂದು ಆಹಾರಗಳನ್ನು ನಾವು ಇಲ್ಲಿ ಪಟ್ಟಿ ಮಾಡಿದ್ದೇವೆ ಓದಿ ಕೊಳ್ಳಿ.

ದೇಹದಲ್ಲಿ ಅಧಿಕವಾದ ಕೊಲೆಸ್ಟ್ರಾಲ್‌ನಿಂದ ಬಳಲುತ್ತಿದ್ದೀರಾ?

ಬೆರ್ರಿಗಳು:

ಬೆರ್ರಿಗಳು:

ಬ್ಲೂಬೆರ್ರಿಗಳು, ಸ್ಟ್ರಾಬೆರ್ರಿಗಳು, ಕ್ರಾನ್‍ಬೆರ್ರಿಗಳು ಮತ್ತು ಗೂಸ್‍ಬೆರ್ರಿಗಳಲ್ಲಿ ಫ್ಲಾವೊನೊಯ್ಡ್‌ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವು ಸಮೃದ್ಧವಾದ ಅಂಟಿಆಕ್ಸಿಡೆಂಟ್‍ಗಳಾಗಿದ್ದು, ವಯಸ್ಸಾದಂತೆ ಕಾಣುವುದನ್ನು ತಡೆಯುವ ಶಕ್ತಿಶಾಲಿ ಆಯುಧವಾಗಿದೆ. ಡಾ|| ಬಾರ್ಬರ ಷುಕಿಟ್ಟ್ ಹೇಲ್. ಪಿಎಚ್‍ಡಿ ರವರ ಪ್ರಕಾರ ಒಂದು ಬೆರ್ರಿಯನ್ನು ತಿಂದರೆ ಸಾಕು ಅದು ನಿಮ್ಮ ಮೆದುಳಿನ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದು ನಿಮ್ಮ ಮನಸ್ಸಿನ ಮೇಲೆ ಉಂಟಾಗುವ ಒತ್ತಡವನ್ನು ಕಡಿಮೆ ಮಾಡುತ್ತದೆ, ಉರಿಯನ್ನು ಸಹ ಕಡಿಮೆ ಮಾಡುತ್ತದೆ ಮತ್ತು ಮೆದುಳಿನ ಕೋಶಗಳನ್ನು ಆರೋಗ್ಯಯುತಗೊಳಿಸುತ್ತದೆಯಂತೆ.

ಎಕ್ಸ್‌ಟ್ರಾ ವರ್ಜಿನ್ ಆಲಿವ್ ಆಯಿಲ್:

ಎಕ್ಸ್‌ಟ್ರಾ ವರ್ಜಿನ್ ಆಲಿವ್ ಆಯಿಲ್:

ಆಲಿವ್ ಆಯಿಲ್ ನಮ್ಮ ದೇಹಕ್ಕೆ ಅತ್ಯಗತ್ಯವಾಗಿರುವ ಪರಿಶುದ್ಧವಾದ ಮತ್ತು ಆರೋಗ್ಯಯುತವಾದ ಕೊಬ್ಬನ್ನು ಒದಗಿಸಿ ನಮ್ಮ ಕೂದಲು ಮತ್ತು ಚರ್ಮವನ್ನು ಜೀವನಪರ್ಯಂತ ಆರೋಗ್ಯಶಾಲಿಯನ್ನಾಗಿಸುತ್ತದೆ. ಈ ಆಲಿವ್ ಎಣ್ಣೆಯಲ್ಲಿ "ಆರೋಗ್ಯಯುತ ಕೊಬ್ಬು" ಅಂದರೆ ಮೊನೊಅನ್‍ಸ್ಯಾಚುರೇಟೆಡ್ ಕೊಬ್ಬುಗಳು ಲಭ್ಯವಿರುತ್ತವೆ. ಬಹುತೇಕ ಉತ್ತರ ಅಮೆರಿಕನ್ನರ ಆಹಾರ ಕ್ರಮದಲ್ಲಿ ಈ ಕೊಬ್ಬು ಇರುವುದಿಲ್ಲ. ಎಕ್ಸ್‌ಟ್ರಾ ವರ್ಜಿನ್ ಆಲಿವ್ ಎಣ್ಣೆ ಕಡಿಮೆ ಸಂಸ್ಕರಣೆಗೆ ಒಳಪಡುತ್ತದೆ. ಇದರ ಜೊತೆಗೆ ಇದು ರುಚಿಕರವು ಹೌದು.

ಆಲಿವ್ ಎಣ್ಣೆಯಲ್ಲಿ ಅಡುಗೆ ಮಾಡುವಾಗ ಹೆಚ್ಚು ಕಾಯಿಸಬೇಡಿ, ಏಕೆಂದರೆ ಹೆಚ್ಚು ಕಾಯಿಸಿದರೆ ಆಲಿವ್ ಎಣ್ಣೆಯು ಹೊಗೆಕಾರಲು ಶುರು ಮಾಡುತ್ತದೆ. ಅದಕ್ಕಾಗಿ ಕಡಿಮೆ ಉರಿಯನ್ನು ಬಳಸಿ, ಹೊಗೆಕಾರುತ್ತದೊ ಇಲ್ಲವೊ ಎಂದು ಗಮನಿಸಿ. ಏಕೆಂದರೆ ಆಲಿವ್ ಎಣ್ಣೆಯು ಹೊಗೆಕಾರಲು ಶುರು ಮಾಡಿದರೆ ಕಮಟಾಗಿ ಪರಿವರ್ತನೆಗೊಳ್ಳುತ್ತದೆ.

ಸಾಲ್ಮನ್

ಸಾಲ್ಮನ್

ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ ತ್ವಚೆಯನ್ನು ಮೃದುವಾಗಿಟ್ಟುಕೊಳ್ಳಬೇಕೆಂದರೆ ಮಹಿಳೆಯರು ಪ್ರತಿ ವಾರ 12 ಔನ್ಸ್‌ನಷ್ಟಾದರು ಸಾಲ್ಮನ್ ಮೀನನ್ನು ತಿನ್ನಬೇಕಂತೆ.

ಹಸಿರು ಸೊಪ್ಪುಗಳು:

ಹಸಿರು ಸೊಪ್ಪುಗಳು:

ಕೇಲ್, ಪಾಲಕ್,ಕಾಲರ್ಡ್ ಗ್ರೀನ್ಸ್, ರೊಮೈನ್ ಲೆಟ್ಟೂಸ್ ಮತ್ತು ಸ್ವಿಸ್ ಕಾರ್ಡ್ ಜೊತೆಗೆ ನಮ್ಮ ಕಾಶಿ ಸೊಪ್ಪು ಮುಂತಾದ ಕಡು ಹಸಿರು ಬಣ್ಣದ ಸೊಪ್ಪುಗಳಲ್ಲಿ ವಿಟಮಿನ್ ಸಿ, ವಿಟಮಿನ್ ಕೆ, ಫೊಲಿಕ್ ಆಮ್ಲ, ಕಬ್ಬಿಣಾಂಶ, ಪೊಟಾಶಿಯಂ, ಕ್ಯಾಲ್ಸಿಯಂ ಮತ್ತು ಮ್ಯಗ್ನೀಶಿಯಂಗಳು ಅಧಿಕ ಪ್ರಮಾಣದಲ್ಲಿರುತ್ತವೆ. ವಿಟಮಿನ್ ಬಿಯು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಮತ್ತು ನೆನಪಿನ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ವಿಟಮಿನ್ ಎ ತ್ವಚೆಯ ಕೋಶಗಳನ್ನು ನವೀಕರಿಸುತ್ತದೆ. ಜೊತೆಗೆ ಎಲ್ಲ ಬಗೆಯ ಸೊಪ್ಪುಗಳಲ್ಲಿ ಕಂಡು ಬರುವ ಲುಟೇನ್ ನಮ್ಮ ದೃಷ್ಟಿಯನ್ನು ಕಾಪಾಡುತ್ತದೆ. ಸೊಪ್ಪುಗಳಲ್ಲಿರುವ ಅಂಟಿ ಆಕ್ಸಿಡೆಂಟ್‍ಗಳು ತ್ವಚೆಯ ಮೇಲೆ ಸುಕ್ಕುಗಳು ಉಂಟಾಗದಂತೆ ಕಾಪಾಡುತ್ತವೆ. ಲೈಕೊಪೀನ್, ಲೂಟೇನ್ ಮತ್ತು ಬೀಟಾ- ಕ್ಯಾರೋಟಿನ್‍ಗಳು ಸೊಪ್ಪುಗಳಲ್ಲಿ ಸಾಮಾನ್ಯವಾಗಿ ದೊರೆಯುತ್ತವೆ. ಇವು ನೇರಳಾತೀತ ಕಿರಣಗಳನ್ನು ತಡೆದು, ತ್ವಚೆಯು ವಯಸ್ಸಾದಂತೆ ಕಾಣುವುದನ್ನು ತಡೆಯುತ್ತವೆ. ಇನ್ನು ಸೊಪ್ಪಿನಲ್ಲಿರುವ ಪೋಷಕಾಂಶಗಳು ಹೃದ್ರೋಗಗಳನ್ನು, ಅಸ್ತಮಾ, ಸಂಧಿವಾತ ಮತ್ತು ಇನ್ನಿತರ ಕ್ಯಾನ್ಸರ್‌ಗಳನ್ನು ಬರದಂತೆ ತಡೆಯುತ್ತವೆ.

ಬೆಳ್ಳುಳ್ಳಿ:

ಬೆಳ್ಳುಳ್ಳಿ:

ಬೆಳ್ಳುಳ್ಳಿಯು ತಿನ್ನಲು ಹೇಗೆ ರುಚಿಕರವೊ, ಹಾಗೆಯೇ ಆರೋಗ್ಯಕ್ಕು ಕೂಡ. ಬೆಳ್ಳುಳ್ಳಿಯು ಅಲ್ಲಿಯುಮ್ಸ್ ಎಂಬ ತರಕಾರಿಗಳ ಗುಂಪಿಗೆ ಸೇರಿದೆ. ಇವುಗಳು ನಿಮ್ಮ ಕರುಳಿನ ಸ್ವಾಭಾವಿಕ ಸಾಮರ್ಥ್ಯವನ್ನು ವೃದ್ಧಿಸುತ್ತದೆ. ಇದರ ಜೊತೆಗೆ ಇದು ಕರುಳಿನಲ್ಲಿರುವ ವಿಷಕಾರಕಗಳನ್ನು ಮತ್ತ್ ಕಾರ್ಸಿನೊಜೆನ್‍ಗಳನ್ನು ತೊಲಗಿಸುತ್ತದೆ. ಕೋಶಗಳು ಹಾಳಾಗದಂತೆ ಕಾಪಾಡಲು ಬೆಳ್ಳುಳ್ಳಿ ನೆರವಾಗುತ್ತದೆ, ಅಲ್ಲದೆ ಇದು ಹೃದ್ರೋಗಗಳನ್ನು ಸಹ ತಡೆಯುತ್ತದೆ. ಇನ್ನಿತರ ಆಹಾರಗಳಂತೆ ಬೆಳ್ಳುಳ್ಳಿಯಲ್ಲಿ ಅಂಟಿ ಆಕ್ಸಿಡೆಂಟ್‍ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವುಗಳು ಅತಿರೇಕದಿಂದ ಕೂಡಿದ ಕೋಶಗಳು ಬೆಳೆಯದಂತೆ ತಡೆಯಲು ಮತ್ತು ಮೆದುಳಿಗೆ ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹ ನೆರವಾಗುತ್ತದೆ.

ನೀವು ಏನು ಮಾಡಬಹುದು:

ನೀವು ಏನು ಮಾಡಬಹುದು:

ನೀವು ಇಷ್ಟಪಡುವ ಆರೋಗ್ಯಯುತ ಆಹಾರವನ್ನು ಸೇವಿಸಿ, ನಿಮ್ಮ ಕಣ್ಣಿಗೆ ಬೀಳುವ ಆಹಾರಗಳನ್ನೆಲ್ಲ ಸೇವಿಸಬೇಡಿ. ಪೋಷಕಾಂಶಗಳು ಹೆಚ್ಚಿರುವ ಆಹಾರವಾದರೆ ಉತ್ತಮ. ಹಾಗೆಂದು ಅತಿಯಾಗಿ ತಿಂದರೆ ಅಮೃತವು ಸಹ ವಿಷವಾಗುತ್ತದೆಯೆಂಬುದನ್ನು ಮರೆಯಬೇಡಿ. ಊಟ ಬಲ್ಲವನಿಗೆ ರೋಗವಿಲ್ಲ ಎಂಬುದು ಹಳೆಯ ಮಾತಾದರು, ಊಟ ಬಲ್ಲವರಿಗೆ ವಯಸ್ಸಾಗುವುದಿಲ್ಲ ಎಂಬುದನ್ನು ಸಾಭೀತು ಮಾಡಿ!.

English summary

Anti-Aging Foods For Women

Eating a fresh whole-food diet rich in antioxidants, vitamins and minerals will keep women of all ages feeling and looking their best. Here’s a brief list of foods that have been shown to fight the effects of aging in women:
Story first published: Friday, May 16, 2014, 15:25 [IST]
X
Desktop Bottom Promotion