Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಸೂರ್ಯನ ಬಿಸಿಲಿನ ಅರೋಗ್ಯಕ್ಕಾರಿ ಪ್ರಯೋಜನಗಳು
ಸೂರ್ಯನ ಕಿರಣ ಎಲ್ಲರ ಜೀವನಕ್ಕೆ ಅತ್ಯಂತ ಅವಶ್ಯಕ ಅಂಶವಾಗಿದೆ. ಸೂರ್ಯಕಿರಣ ಮಾನವದೇಹಕ್ಕೆ ಸಂಭಂದಿಸಿದ ಗುಣಾತ್ಮಕ ಲಕ್ಷಣಗಳಿಗೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ವಿಟಮಿನ್ ಡಿ ಸೂರ್ಯಕಿರಣದ ಪ್ರಾಥಮಿಕ ಮೂಲ. ಇದರಿಂದ ಅಲ್ಟ್ರ ವಯೋಲೆಟ್ (Ultra Violet) ವಿಕಿರಣ ಉತ್ಪತ್ತಿಯಾಗುತ್ತದೆ. ಸೂರ್ಯನಕಿರಣದಿಂದ ಬರುವ ಅಲ್ಟ್ರ ವಯೋಲೆಟ್ ವಿಕಿರಣವು ಮಾನವದೇಹದೊಳಗಿನ ಮೂಳೆಯ ಆರೋಗ್ಯಕ್ಕೆ ಅತ್ಯಗತ್ಯ.
ಸೂರ್ಯನ ಕಿರಣಗಳಿಗೆ ಒಡ್ಡುವುದು ಕಡಿಮೆಯಾದಷ್ಟೂ ಕಳಪೆ ಮೂಳೆಯ ಆರೋಗ್ಯಕ್ಕೆ ಕಾರಣವಾಗುತ್ತದೆ. ಸೂರ್ಯನಕಿರಣ ದೇಹದ ಶಕ್ತಿಯ ಮಟ್ಟವನ್ನು ಉತ್ತೇಜಿಸಲು ಬಹಳ ಉಪಯುಕ್ತ. ಸೂರ್ಯನಕಿರಣದಿಂದ ಚರ್ಮ, ಹೃದಯ, ಪ್ರತಿರಕ್ಷಣಾ ವ್ಯವಸ್ತೆ, ಬ್ಯಾಕ್ಟೀರಿಯ, ಕೊಲೆಸ್ಟರಾಲ್ ಮತ್ತು ರಕ್ತದೊತ್ತಡಗಳಿಗೆ ವಿವಿಧ ಆರೋಗ್ಯ ಲಾಭಗಳಿವೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗ್ರೀನ್ ಟೀ ಹೊಟ್ಟೆಯ ಸಮಸ್ಯೆಗಳಿಗೆ ಉತ್ತಮವೇ?

ಸೂರ್ಯಕಿರಣದಿಂದ ಆಗುವ ಆರೋಗ್ಯ ಲಾಭಗಳು:
ಸೂರ್ಯಕಿರಣ ಬ್ಯಾಕ್ಟೀರಿಯವನ್ನು ಕೊಲ್ಲುತ್ತದೆ:
ಶರೀರದಮೇಲೆ ಗಾಯಗಳಾದಾಗ ಅವುಗಳನ್ನು ಸೂರ್ಯನಕಿರಣಗಳಿಗೆ ಒಡ್ಡಿದರೆ ಆ ಗಾಯಗಳಲ್ಲಿರುವ ಬ್ಯಾಕ್ಟೀರಿಯ ಬಹಳಷ್ಟು ಕಡಿಮೆಯಾಗಿ ಹೆಚ್ಚು ಸೋಂಕು ಬರದಂತೆ ತಡೆಯುತ್ತದೆ.
ಚರ್ಮ ರಕ್ಷಣೆ:
ನಮ್ಮ ಶರೀರದ ಚರ್ಮಭಾಗವನ್ನು ಸೂರ್ಯನ ಕಿರಣಗಳಿಗೆ ಒಡ್ಡಿದರೆ ಕಿರಣಗಳು ಚರ್ಮದ ಮೂಲಕ ಶರೀರದ ಒಳಕ್ಕೆ ಹೋಗಿ ರಕ್ತವನ್ನೂ ಸಹ ಸ್ವಚ್ಚಗೊಳಿಸಲು ಸಹಾಯಮಾಡುತ್ತದೆ. ನಮ್ಮ ಚರ್ಮದ ಭಾಗವನ್ನು ದೀರ್ಘಕಾಲ ಸೂರ್ಯಕಿರಣಗಳಿಗೆ ಒಡ್ಡಿದರೆ, ವಿಶೇಷವಾಗಿ ನಾವು ಸಣ್ಣವರಾಗಿದ್ದಾಗ, ಚರ್ಮವು ಸುಟ್ಟ ಅನುಭವವಾಗುತ್ತದೆ. ಹೀಗೆ ದೀರ್ಘಕಾಲ ಮಲಗಿ ಒಡ್ಡಿದಾಗ ಚರ್ಮಕ್ಕೆ ಕ್ಯಾನ್ಸರ್ ಬರುವ ಅಪಾಯವನ್ನು ಸುಧಾರಿಸುತ್ತದೆ.
ಪ್ರತಿರಕ್ಷಣಾ (Immune) ವ್ಯವಸ್ಥೆ:
ಸೂರ್ಯನಕಿರಣಗಳಿಗೆ ನಮ್ಮ ಶರೀರವನ್ನು ಒಡ್ಡಿದಾಗ ಶರೀರದಲ್ಲಿರುವ ಬಿಳಿ ರಕ್ತಕಣಗಳು ಹೆಚ್ಚಾಗಿ ದೇಹಕ್ಕೆ ಸೋಂಕು ಬರುವುದನ್ನು ಕಡಿಮೆ ಮಾಡುತ್ತದೆ.
ದೇಹದ ಎತ್ತರವನ್ನು ಹೆಚ್ಚಿಸುವುದು: ಮಕ್ಕಳು ಚಿಕ್ಕವರಾಗಿದ್ದಾಗ ಅವರನ್ನು ಸೂರ್ಯನಕಿರಣಗಳಿಗೆ ಒಡ್ಡಲ್ಪಟ್ಟಾಗ ಮಗು ಎತ್ತರವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಸೂರ್ಯನಕಿರಣಗಳು ಎತ್ತರಬೆಳೆಯಲು ಪ್ರಮುಖ ಪಾತ್ರ ವಹಿಸುತ್ತದೆ.
ಕೊಲೆಸ್ಟರಾಲ್ ಮಟ್ಟ:
ನಮ್ಮ ಶರೀರವನ್ನು ಸೂರ್ಯನಕಿರಣಗಳಿಗೆ ಒಡ್ಡಿದರೆ ದೇಹದೊಳಗಿನ ಕೊಲೆಸ್ಟರಾಲ್ ವಿಟಮಿನ್ ಡಿ ಗೆ ಪರಿವರ್ತಿತವಾಗುತ್ತದೆ. ಇಲ್ಲದಿದ್ದಲ್ಲಿ ದೇಹದಲ್ಲಿರುವ ವಿಟಮಿನ್ ಕೊಲೆಸ್ಟರಾಲ್ ಆಗಿ ಪರಿವರ್ತಿತವಾಗಿಬಿಡುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಅಸ್ತಮಾ ಕಾಯಿಲೆಗೆ ಮನೆಮದ್ದು-ಸ್ಪೆಷಲ್ ಲೇಖನ
ರಕ್ತದೊತ್ತಡ:
ಸೂರ್ಯನಕಿರಣಗಳು ರಕ್ತದೊತ್ತಡವು ಕಡಿಮೆಯಾಗಲು ಒಂದು ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಸೂರ್ಯನಕಿರಣಗಳಿಗೆ ಶರೀರವನ್ನು ಒಡ್ಡದರೆ ರಕ್ತದೊತ್ತಡ ಕಡಿಮೆಯಾಗುತ್ತದೆ.
ಖಿನ್ನತೆ (ಡಿಪ್ರೆಸ್ಸಿಒನ್):
ನಾವು ಸೂರ್ಯಕಿರಣಗಳಿಗೆ ಒಡ್ಡಿದರೆ ನಮ್ಮಲ್ಲಿರುವ ಒತ್ತಡ ಅಥವ ಖಿನ್ನತೆಯು ಕಡಿಮೆಯಾಗಲು ಸಹಾಯಮಾಡುತ್ತದೆ ಹಾಗೂ ಮಾನಸಿಕವಾಗಿ ಉತ್ತಮ ಸಾಧನೆಗಳನ್ನು ಹೆಚ್ಚಿಸಲು ಸಹಾಯ ಮಾಡುವುದದಲ್ಲದೆ ನಿದ್ರೆಯನ್ನೂ ಸಹ ಸುಧಾರಿಸುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಅನಿಯಮಿತ ಮುಟ್ಟಿನ ಸಮಸ್ಯೆಗೆ ಪರಿಹಾರ ಇಲ್ಲಿದೆ
ಇವೆಲ್ಲವೂ ಸೂರ್ಯನಬಿಸಿಲಿನಿಂದ ಅರೋಗ್ಯಕ್ಕೆ ಆಗುವ ಗಮನಾರ್ಹ ಮತ್ತು ಅದ್ಭುತ ಪ್ರಯೋಜನಗಳು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications