Latest Updates
-
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್!
ಈರುಳ್ಳಿ ರಸದ ಅದ್ಭುತವಾದ ಆರೋಗ್ಯಕಾರಿ ಪ್ರಯೋಜನಗಳು
ಈರುಳ್ಳಿಗಳನ್ನು ಹಾಗೆಯೇ ತಿನ್ನಿ, ಆಹಾರದಲ್ಲಿ ಬೆರೆಸಿ ಬೇಯಿಸಿಕೊಂಡು ತಿನ್ನಿ, ಅದು ಯಾವಾಗಲು ನಿಮ್ಮ ನಾಲಿಗೆಗೆ ರುಚಿಯನ್ನು ಮತ್ತು ಅಡುಗೆಗೆ ರುಚಿಯನ್ನು ಒದಗಿಸುತ್ತದೆ. ಕತ್ತರಿಸಿ, ರುಬ್ಬಿ, ಕೊಚ್ಚಿ ಅಥವಾ ಸ್ಲೈಸ್‍ಗಳಂತೆ ಮಾಡಿಕೊಳ್ಳಿ. ನಿಮಗೆ ಹೇಗೆ ಬೇಕೋ ಹಾಗೆ ಮಾಡಿಕೊಳ್ಳಿ. ಈರುಳ್ಳಿಯು ನಿಮಗೆ ಬೇಕಾದ ಫಲಿತಾಂಶವನ್ನು ಒದಗಿಸುತ್ತದೆ. ಈರುಳ್ಳಿಯು ನಿಮಗೆ ಯಾವಾಗಲು ಪರಿಣಾಮಕಾರಿಯಾದ ಫಲಿತಾಂಶಗಳನ್ನು ಒದಗಿಸುತ್ತದೆ.
ಇದು ಭಾರತೀಯ ಅಡುಗೆ ಮನೆಯ ಅವಿಭಾಜ್ಯ ಅಂಗ, ಇಲ್ಲಿ ಬಹುತೇಕ ಎಲ್ಲಾ ಅಡುಗೆ ಮನೆಗಳಲ್ಲಿ ಈರುಳ್ಳಿಯನ್ನು ಕಾಣಬಹುದು. ಈರುಳ್ಳಿಯಲ್ಲಿರುವ ಒಳ್ಳೆಯ ಸದ್ಗುಣಗಳನ್ನು ಅದರ ಅರಿವಿಲ್ಲದೆಯೇ ಎಲ್ಲಾ ಬಳಕೆದಾರರು ಪಡೆದುಕೊಳ್ಳುತ್ತಾರೆ.
ಈರುಳ್ಳಿಯು ಒಂದು ಅಧಿಕ ಪ್ರಯೋಜನಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುವ ತರಕಾರಿಯಾಗಿದೆ. ಬೇರೆ ತರಕಾರಿ ಮತ್ತು ಹಣ್ಣುಗಳನ್ನು ಅದರಲ್ಲಿರುವ ವಿಟಮಿನ್ ಮತ್ತು ಖನಿಜಗಳಿಗಾಗಿ ಹೊಗಳುವಾಗ ತುಂಬಾ ಅಪರೂಪವಾಗಿ ಈರುಳ್ಳಿಯನ್ನು ಹೆಸರಿಸಲಾಗುತ್ತದೆ. ಆದರೆ ಆ ಈರುಳ್ಳಿಯನ್ನು ಹೊಗಳಬೇಕಾದ ಕಾಲ ಇದೀಗ ಬಂದಿದೆ.

ಈರುಳ್ಳಿಗಳಲ್ಲಿ ವಿಟಮಿನ್ ಎ,ಬಿ ಮತ್ತು ಸಿ ಅಧಿಕ ಪ್ರಮಾಣದಲ್ಲಿರುತ್ತದೆ. ಇದರಲ್ಲಿ ಫೊಲಿಕ್ ಆಮ್ಲವು ಸಹ ಅಧಿಕ ಪ್ರಮಾಣದಲ್ಲಿರುತ್ತದೆ. ಇನ್ನು ಖನಿಜಗಳ ವಿಚಾರಕ್ಕೆ ಬಂದರೆ, ಕ್ಯಾಲ್ಸಿಯಂ, ರಂಜಕ, ಮ್ಯೆಗ್ನಿಶಿಯಂ, ಗಂಧಕ, ಕ್ರೋಮಿಯಂ ಮತ್ತು ಕಬ್ಬಿಣಾಂಶಗಳು ಇದರಲ್ಲಿ ಅಡಕಗೊಂಡಿವೆ. ಇನ್ನು ಇದರಲ್ಲಿರುವ ಎಲ್ಲಾ ಪೋಷಕಾಂಶಗಳನ್ನು ನೀವು ಪಡೆಯಬೇಕೆ? ಹಾಗಾದರೆ ಈರುಳ್ಳಿ ಜ್ಯೂಸ್ ಕುಡಿಯಿರಿ. ಇದರಲ್ಲಿರುವ ಯಥೇಚ್ಛವಾದ ಪೋಷಕಾಂಶಗಳ ಕಾರಣದಿಂದಾಗಿ ಈರುಳ್ಳಿ ಜ್ಯೂಸ್ ಅಥವಾ ರಸವು ಅತ್ಯುತ್ತಮ ಪ್ರಯೋಜನಕಾರಿಯಾಗಿರುತ್ತದೆ.
ಇನ್ನೂ ನಿಮಗೆ ಇರುವ ಸಂಶಯಗಳನ್ನು ಮತ್ತು ಅಗತ್ಯವಾಗಿ ಬೇಕಾಗಿರುವ ಮಾಹಿತಿಗಳನ್ನು ನಾವು ನಿಮಗಾಗಿ ನೀಡುತ್ತಿದ್ದೇವೆ ಓದಿಕೊಳ್ಳಿ. ಈರುಳ್ಳಿಗಳನ್ನು ಅದರ ಕಚ್ಛಾ ರೂಪದಲ್ಲಿಯೇ ಸೇವಿಸಿದರೆ ಒಳ್ಳೆಯದು, ಅದೇ ದೇಹಕ್ಕೆ ಹಿತವು ಹೌದು.
ಸೊಂಪಾದ ಕೂದಲು ಪಡೆಯಲು ಈರುಳ್ಳಿ ಜ್ಯೂಸ್ ಬಳಸಿ
ಕಾರ್ಡಿಯೋವ್ಯಾಸ್ಕ್ಯುಲರ್
ನಿಮ್ಮ ಊಟದ ಜೊತೆಗೆ ಈರುಳ್ಳಿಯನ್ನು ಹಾಗೆಯೇ ಸೇವಿಸಿ ಅಥವಾ ಜ್ಯೂಸ್ ಮಾಡಿಕೊಂಡು ಸೇವಿಸಿ; ಈರುಳ್ಳಿಯು ಒಂದು ಅದ್ಭುತವಾದ ಹೆಪ್ಪುಗಟ್ಟುವಿಕೆಯನ್ನು ತಡೆಯುವ ಗುಣಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುತ್ತದೆ. ಇದು ರಕ್ತ ನಾಳಗಳು ಗಟ್ಟಿಯಾಗಿಸುವುದನ್ನು ತಡೆಯುತ್ತದೆ ಮತ್ತು ಹೃದ್ರೋಗಗಳ ವಿರುದ್ಧ ರಕ್ಷಣೆಯನ್ನು ನೀಡುತ್ತದೆ. ಈರುಳ್ಳಿಗಳು ಹೋಮೊಸಿಸ್ಟೇನಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ, ಹೀಗಾಗಿ ಇದು ಹೃದ್ರೋಗವನ್ನು ಅದರ ಮೂಲದಲ್ಲಿಯೇ ಪರಿಹರಿಸಿ, ಮುಂದೆ ಹೃದ್ರೋಗ ನಮ್ಮನ್ನು ಕಾಡದಂತೆ ಮಾಡುತ್ತದೆ.
ಉರಿಯೂತವನ್ನು ನಿವಾರಿಸುತ್ತದೆ
ಈರುಳ್ಳಿಯಲ್ಲಿರುವ ಉರಿಯೂತ ನಿವಾರಕ ಗುಣಗಳು ನಿಮಗೆ ಅರ್ಥರಿಟಿಸ್ ಮತ್ತು ಸಂಧಿವಾತಗಳು ಬರದಂತೆ ಕಾಪಾಡುತ್ತದೆ.
ಆಂಟಿಸೆಪ್ಟಿಕ್
ಇ.ಕೊಲಿ ಮತ್ತು ಸಲ್ಮೊನೆಲ್ಲಗಳಂತಹ ಇನ್‍ಫೆಕ್ಷನ್‍ಗಳು ಸಂಭವಿಸಿದಾಗ ಈರುಳ್ಳಿಯಲ್ಲಿರುವ ಆಂಟಿಸೆಪ್ಟಿಕ್ ಗುಣಗಳು ನಮ್ಮನ್ನು ರಕ್ಷಿಸುತ್ತವೆ. ಇದರ ಜೊತೆಗೆ ಕ್ರಿಸ್ಟಿಟಿಸ್‍ನಂತಹ ಮೂತ್ರ ನಾಳಗಳ ಇನ್‍ಫೆಕ್ಷನ್ ಸಂಭವಿಸಿದಾಗಲು ಈರುಳ್ಳಿಗಳು ನಮ್ಮ ಪ್ರಯೋಜನಕ್ಕೆ ಬರುತ್ತವೆ.
ಅಂಟಿ-ಅಲರ್ಜಿ
ಕ್ವೆರ್ಸೆಟಿನ್ ಎಂಬ ಆಂಟಿಹಿಸ್ಟಮೈನ್ ಅಂಶವು ಈರುಳ್ಳಿಯಲ್ಲಿ ಕಂಡು ಬರುತ್ತದೆ. ಇದು ಅಸ್ತಮಾದಂತಹ ಅಲರ್ಜಿಗಳು ಸಂಭವಿಸಿದಾಗ ನಮಗೆ ಸಹಾಯವನ್ನು ಒದಗಿಸುತ್ತದೆ. ಇತರ ಮೂಲಗಳಿಗೆ ಹೋಲಿಸಿದರೆ ಈರುಳ್ಳಿಯಲ್ಲಿರುವ ಕ್ವೆರ್ಸೆಟಿನ್ ಅಂಶವು ಅತ್ಯಂತ ಸುಲಭವಾಗಿ ದೇಹದಲ್ಲಿ ಕರಗಿ ಹೋಗುತ್ತದೆ ಮತ್ತು ರಕ್ತ ಪರಿಚಲನೆಯಲ್ಲಿ ಹಾಗೆಯೇ ಉಳಿದುಕೊಳ್ಳುತ್ತದೆ.
ಕೂದಲು ಉದುರುವ ಸಮಸ್ಯೆ ನಿವಾರಣೆಗೆ ಈರುಳ್ಳಿ!
ಶ್ವಾಸಕೋಶದ ಡಿಸಾರ್ಡರ್‌ಗಳು
ಶೀತ ಮತ್ತು ಕೆಮ್ಮುಗಳನ್ನು ಮನೆ ಮದ್ದುಗಳಿಂದಲೆ ನಿವಾರಿಸಿಕೊಳ್ಳಬಹುದು. ಅವುಗಳಲ್ಲಿ ಈರುಳ್ಳಿ ಸಹ ಒಂದು ಅತ್ಯುತ್ತಮವಾದ ಮನೆ ಮದ್ದಾಗಿದೆ. ಈರುಳ್ಳಿಯ ಮಧ್ಯದಲ್ಲಿರುವ ಬಲ್ಬ್‌ನಂತಹ ಭಾಗವು ಸಿಂಬಳವನ್ನು ಇಲ್ಲವಾಗಿಸುವುದರ ಜೊತೆಗೆ, ಅದು ಮತ್ತೆ ರೂಪುಗೊಳ್ಳುವದನ್ನು ತಡೆಯುತ್ತದೆ. ಇದು ಬ್ರೊಚಿಟಿಸ್, ಕಂಜೆಶ್ಶನ್ ಮತ್ತು ಜೀರ್ಣಾಂಗದ ಇನ್‍ಫೆಕ್ಷನ್‍ಗಳ ನಿವಾರಣೆಗೂ ಸಹ ಪ್ರಯೋಜನಕ್ಕೆ ಬರುತ್ತದೆ.
ಆಸ್ಟೀಯೊಪೊರೊಸಿಸ್
ಆಸ್ಟೀಯೊಪೊರೊಸಿಸ್‍ಗೆ ಈರುಳ್ಳಿಯಿಂದ ಪ್ರಯೋಜನಗಳು ದೊರೆಯುತ್ತವೆಯೇ? ಖಂಡಿತ ಹೌದು, ಈರುಳ್ಳಿಯಲ್ಲಿರುವ ಉತ್ತಮವಾದ ಕ್ಯಾಲ್ಸಿಯಂ ಪ್ರಮಾಣವು ಇದನ್ನು ಮೂಳೆಗಳ ಸ್ನೇಹಿಯನ್ನಾಗಿಸುವುದರ ಜೊತೆಗೆ, ಆಸ್ಟೀಯೊಪೊರೊಸಿಸ್ ಅನ್ನು ಬರದಂತೆ ತಡೆಯುತ್ತದೆ. ಸಂಶೋಧನೆಗಳ ಪ್ರಕಾರ ತಿಳಿದು ಬಂದಿರುವ ವಿಚಾರವೇನೆಂದರೆ, ಈರುಳ್ಳಿಗಳಲ್ಲಿ ಮೂಳೆಗಳ ನಾಶವನ್ನು ತಡೆಯುವ ಒಂದು ರಾಸಾಯನಿಕವು ಇದೆಯೆಂದು ಕಂಡು ಬಂದಿದೆ.
ಬಾಯಿಯ ಆರೋಗ್ಯ
ದಂತ ಕ್ಷಯ ಮತ್ತು ಬಾಯಿಯ ಇನ್‍ಫೆಕ್ಷನ್‍ಗಳನ್ನು ಸಹ ಈರುಳ್ಳಿಯನ್ನು ದಿನ ನಿತ್ಯ ಸೇವಿಸುವ ಮೂಲಕ ದೂರವಿಡಬಹುದು. ಈರುಳ್ಳಿಯನ್ನು ನಿಮ್ಮ ಆಹಾರದಲ್ಲಿ, ಸಲಾಡ್‍ಗಳಲ್ಲಿ ಸೇರಿಸಿ. ಇವುಗಳು ಬಾಯಿಯಲ್ಲಿರುವ ಕೀಟಾಣುಗಳನ್ನು ಕೊಂದು, ನಿಮ್ಮ ಬಾಯಿಯ ಆರೋಗ್ಯವನ್ನು ಕಾಪಾಡುತ್ತದೆ.
ಮಧುಮೇಹ
ಈರುಳ್ಳಿಯಲ್ಲಿರುವ ಕ್ರೋಮಿಯಂ ಮಧುಮೇಹಿಗಳಲ್ಲಿರುವ ಇನ್ಸುಲಿನ್ ಪ್ರಮಾಣವನ್ನು ಕಡಿಮೆ ಮಾಡಲು ಸಹಕರಿಸುತ್ತದೆ ಮತ್ತು ಗ್ಲೂಕೋಸನ್ನು ತಾಳಿಕೊಳ್ಳುವ ಸಾಮರ್ಥ್ಯವನ್ನು ಸುಧಾರಿಸುತ್ತದೆ.
ಹೀಟ್ ಸ್ಟ್ರೋಕ್
ಹೀಟ್ ಸ್ಟ್ರೋಕ್ ಅಥವಾ ಬಿಸಿಲಿಗೆ ತಲೆ ಸುತ್ತು ಬಂದಾಗ ಈರುಳ್ಳಿ ರಸವು ಒಂದು ಒಳ್ಳೆಯ ಪರಿಹಾರವಾಗಿರುತ್ತದೆ. ಈ ಬಗೆಯ ಹೀಟ್ ಸ್ಟ್ರೋಕ್ ಸಂಭವಿಸಿದಾಗ ಒಂದು ಕಚ್ಛಾ ಈರುಳ್ಳಿಯ ರಸವನ್ನು ಕಲ್ಲು ಉಪ್ಪಿನೊಂದಿಗೆ ಬೆರೆಸಿ ಕುಡಿಸಿ. ಜೊತೆಗೆ ಇದೇ ರಸದಿಂದ ಹೀಟ್ ಸ್ಟ್ರೋಕ್ ಆದವರ ಪಾದಗಳನ್ನು ಸಹ ಉಜ್ಜಿದರೆ ಅನುಕೂಲವಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











