Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮ್ಮ ಯೌವನ ಕಾಪಾಡುವ ಸೂಪರ್ ಆಹಾರಗಳು
ವಯಸ್ಸಾದರೂ ಯೌವನದ ಹೊಳಪು ದೀರ್ಘ ಕಾಲದವರೆಗೆ ಉಳಿಯುವುದು ಯಾರಿಗೆ ಇಷ್ಟವಿಲ್ಲ ಹೇಳಿ. ಅಕ್ಷರ ಮಾಲೆಯಲ್ಲಿದೆ ನೋಡಿ ಈ ಕನಸನ್ನು ನನಸು ಮಾಡಿಕೊಳ್ಳುವ ಮಂತ್ರ. ನಾವು ತಿನ್ನುವ ಆಹಾರ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ನಿರ್ಧರಿಸುತ್ತದೆ.
ಕೆಲವು ಆಹಾರಗಳಲ್ಲಿ ಅದ್ಭುತ ಪೌಷ್ಟಿಕಾಂಶಗಳು ಅಡಗಿವೆ. ಇವುಗಳಲ್ಲಿರುವ ವಿಟಮಿನ್ಗಳು, ಪೌಷ್ಟಿಕಾಂಶಗಳು ಮತ್ತು ಆ್ಯಂಟಿ ಆ್ಯಕ್ಸಿಡೆಂಟ್‌ಗಳು ವಯಸ್ಸಾಗುವುದನ್ನು ತಡೆಯಬಲ್ಲದು ಎಂದರೆ ಆಶ್ಚರ್ಯವಾಗುತ್ತದೆಯೇ?
ಕೆಳಗೆ ನೀಡಿರುವ ಪಟ್ಟಿಯಲ್ಲಿನ ಆಹಾರಗಳನ್ನು ನಿಮ್ಮ ದೈನಂದಿನ ಆಹಾರದೊಂದಿಗೆ ಸೇವಿಸಿ. ಬದಲಾವಣೆಯನ್ನು ಕಂಡುಕೊಳ್ಳಿ.

A ಅಂದರೆ ಅವಕ್ಯಾಡೋ:
ಇದರಲ್ಲಿ ಬಾಳೆಹಣ್ಣಿನಲ್ಲಿ ಇರುವುದಕ್ಕಿಂತ ಪೊಟ್ಯಾಶಿಯಂ ಹೆಚ್ಚಿದ್ದು ರಕ್ತದೊತ್ತಡವನ್ನು ತಗ್ಗಿಸುವಲ್ಲಿ ನೆರವು ನೀಡುತ್ತದೆ. ಇದರೊಂದಿಗೆ ಗ್ಲುಟಥಿಯೊನ್ ದೇಹವನ್ನು ವಿಷಕಾರಿ ಪದಾರ್ಥಗಳಿಂದ ಸಂರಕ್ಷಿಸುತ್ತದೆ. ಅನಾವಶ್ಯಕವಾದ ಕೊಬ್ಬನ್ನು ನಿಯಂತ್ರಿಸುತ್ತದೆ. ಜೊತೆಗೆ ಆ್ಯಂಟಿಆ್ಯಂಕ್ಸಿಡೆಂಟ್ನ ಹಾಗೆ ವರ್ತಿಸಿ ವಯಸ್ಸಾಗುವಿಕೆ ಕಾರಣವಾಗುವ ಜೀವಕೋಶಗಳ ಹಾನಿಯನ್ನು ತಡೆಯುತ್ತದೆ.

B ಅಂದರೆ ಬ್ರೊಕೊಲಿ:
ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಉಳಿದ ತರಕಾರಿಗಳಿಗಿಂತ ಇದರಲ್ಲಿ ಕ್ಯಾಲ್ಸಿಯಂ ಹೆಚ್ಚಿರುತ್ತದೆ. ಇದು ಮೂಳೆ ಸವೆತ ಮತ್ತು ಕ್ಯಾನ್ಸರ್ನ ವಿರುದ್ಧ ಹೋರಾಡುತ್ತದೆ.

C ಅಂದರೆ ಕ್ಯಾರೆಟ್:
ಕ್ಯಾರೆಟ್ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ. ಇದರಲ್ಲಿ ಕಿತ್ತಳೆ ಬಣ್ಣವು ರೋಗ ನಿರೋಧಕತೆಯನ್ನು ಹೆಚ್ಚಿಸುತ್ತದೆ. ಇದರಲ್ಲಿನ ಬೀಟಾಕ್ಯಾರೋಟೆನೆ ವಯಸ್ಸಾಗುವಿಕೆಯೊಂದಿಗೆ ಕಣ್ಣುಗಳಿಗೆ ಬರಬಹುದಾದ ರೋಗಗಳಿಂದ ರಕ್ಷಿಸುತ್ತದೆ. ಇದು ಕಣ್ಣಿನ ದೃಷ್ಟಿಗೆ ಒಳ್ಳೆಯದು.

D ಅಂದರೆ ಡಾರ್ಕ್ ಚಾಕೊಲೆಟ್:
ಈ ತಿಂಡಿಯಲ್ಲಿ ಆ್ಯಂಟಿಆ್ಯಂಕ್ಸಿಡೆಂಟ್ಗಳು ಹೆಚ್ಚಿದ್ದು ಇದು ಜೀವಕೋಶಗಳ ಹಾನಿಯ ವಿರುದ್ಧ ಹೋರಾಡುತ್ತದೆ. ಇದರಲ್ಲಿ ವಿಟಮಿನ್ B6 ಮತ್ತು ಟ್ರೈಪೊಟೊಫ್ಯಾನ್ ಇರುತ್ತದೆ. ಇದು ಸೆರೊಟೊನಿನ್ ಆಗಿ ಪರಿವರ್ತಿತವಾಗುತ್ತದೆ. ಇದು ಖಿನ್ನತೆಯ ವಿರುದ್ಧ ಹೋರಾಡಲು ಸಹಕಾರಿ.

E ಅಂದರೆ ಮೊಟ್ಟೆ:
ತಾಯಿಯ ಎದೆಹಾಲಿನ ನಂತರ ದೇಹಕ್ಕೆ ಅಗತ್ಯವಾದ ಎಲ್ಲವನ್ನೂ ಒದಗಿಸಬಹುದಾದ ಆಹಾರ ಮೊಟ್ಟೆ. ಇದರಲ್ಲಿ ಲ್ಯೂಟೆಯಿನ್ ಹೆಚ್ಚಿರುತ್ತದೆ. ಇದು ಕಣ್ಣಿನ ಅಕ್ಷಿಪಟಲದ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿ.

F ಅಂದರೆ ಮೀನು:
ಸಾಲಮೊನ್, ತುನ, ಸಾರಡೈನೆಸ್ ಮತ್ತು ಹೆರ್ರಿಂಗ್ಸ್ಗಳಲ್ಲಿ ಒಮೆಗಾ 3 ಎನ್ನುವ ಎಣ್ಣೆಯ ಅಂಶವಿರುತ್ತದೆ. ಇದು ರಕ್ತ ಹೆಪ್ಪುಗಟ್ಟದಂತೆ ನೋಡಿಕೊಳ್ಳುತ್ತದೆ. ಅಪಧಮನಿಗಳನ್ನು ರಕ್ಷಿಸುತ್ತದೆ, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು DNAಗೆ ಉಂಟಾಗಬಹುದಾದ ಹಾನಿಯನ್ನು ತಡೆಗಟ್ಟುತ್ತದೆ.

G ಅಂದರೆ ಬೆಳ್ಳುಳ್ಳಿ:
ಇದು ರಕ್ತಪರಿಚಲನೆಯನ್ನು ಸರಾಗವಾಗಿರಿಸುತ್ತದೆ. ಆಮ್ಲಜನಕಯುಕ್ತ ರಕ್ತವು ಚರ್ಮದ ಕಾಂತಿ, ಕೂದಲು ಮತ್ತು ಉಗುರುಗಳು ಶಕ್ತವಾಗಿ ಮತ್ತು ಆರೋಗ್ಯವಾಗಿರಿಸುತ್ತದೆ.

H ಅಂದರೆ ಜೇನುತುಪ್ಪ:
ದಿನವೂ ½ ಚಮಚ ಜೇನುತುಪ್ಪವನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಜೇನುತುಪ್ಪವನ್ನು ತಣ್ಣಗೆ ಬಳಸಬೇಕೆ ಹೊರತು ಕಾಯಿಸಬಾರದು. ಅದರಲ್ಲಿನ ಅಗತ್ಯ ವಿಟಮಿನ್ಗಳು ಕಾಯಿಸುವುದರಿಂದ ನಷ್ಟವಾಗುತ್ತದೆ.

I ಅಂದರೆ ಐಸ್ಬರ್ಗ್ ಲೆಟ್ಟ್ಯೂಸ್:
ಇದು ಹಾನಿಕಾರಕ ಕಣಗಳೊಂದಿಗೆ ಹೋರಾಡುತ್ತದೆ. ಇದರಲ್ಲಿ ಮ್ಯಾಂಗನೀಸ್, ಮೆಗ್ನಿಶಿಯಂ, ಪೊಟ್ಯಾಶಿಯಂ, ಐ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

J ಅಂದರೆ ಜಪಾನಿಸ್ ಗ್ರೀನ್ ಟೀ:
ಇದರಲ್ಲಿ ಆ್ಯಂಟಿ ಏಜಿಂಗ್ ಆ್ಯಂಟಿಆ್ಯಕ್ಸಿಡೆಂಟ್ಸ್ ಮತ್ತು ಮೆಥ್ಯಲಾಕ್ಸೆಂಥ್ಯನಿಸ್ ಇದ್ದು ಮೆಟಬಾಲಿಸಂ ಅನ್ನು ಹೆಚ್ಚಿಸುತ್ತದೆ ಮತ್ತು ಕೊಬ್ಬನ್ನು ಕರಗಿಸುವುದರೊಂದಿಗೆ ಕೊಲೆಸ್ಟ್ರಾಲ್ ಅನ್ನು ಕೂಡ ಕಡಿಮೆಗೊಳಿಸುತ್ತದೆ.

K ಅಂದರೆ ಕೊಂಬುಚ ಟೀ:
ಇದರಲ್ಲಿ ಆ್ಯಂಟಿಆ್ಯಕ್ಸಿಡೆಂಟ್ಸ್ ಹೆಚ್ಚಿರುತ್ತದೆ. ದಿನಕ್ಕೆ ಒಂದು ಕಪ್ ಟೀ ಸಾಕು ನಿಮ್ಮ ಆರೋಗ್ಯವನ್ನು ಕಾಪಾಡಲು.

L ಅಂದರೆ ಲೆಗ್ಯುಮೆ:
ಮೊಳಕೆ ಕಾಳುಗಳು, ರಾಗಿ, ಹುರುಳಿ, ಬಾರ್ಲಿ, ಸೊಪ್ಪು ಇವುಗಳು ಸಪೊನಿನ್ ಹೊಂದಿರುತ್ತದೆ. ಇದು ರೋಗದ ಗಡ್ಡೆಗಳ ಬೆಳವಣಿಗೆಯನ್ನು ತಡೆಯುತ್ತದೆ. ಇವುಗಳಲ್ಲಿ ಪ್ರೊಟಿನ್ ಕೂಡ ಹೆಚ್ಚಿರುತ್ತದೆ.

M ಅಂದರೆ ಬಾಂಗಡ ಮೀನು:
ಇದು ಎಣ್ಣೆಯ ಅಂಶ ಹೆಚ್ಚಿರುವ ಮೀನು. ಇದರಲ್ಲಿ ಅಗತ್ಯವಾದ ಎಣ್ಣೆಗಳು, ವಿಟಮಿನ್ಗಳು, ಖನಿಜಾಂಶಗಳು, ಒಮೆಗ 3 ಮತ್ತು ಒಮೆಗ 6ರಂತಹ ಕೊಬ್ಬಿನಂಶವಿರುವ ಆಮ್ಲಗಳು ಹೆಚ್ಚಿರುತ್ತದೆ.

N ಅಂದರೆ ಕಾಳುಗಳು:
ಕಾಳುಗಳ ಸಿಪ್ಪೆಯಲ್ಲಿ ಆ್ಯಂಟಿಏಜಿಂಗ್ ಅಂಶ ಹೆಚ್ಚಿರುತ್ತದೆ. ಎಲ್ಲ ಕಾಳುಗಳಲ್ಲೂ ಪ್ರೊಟೀನ್, ಫೈಬರ್, ಅಗತ್ಯವಾದ ಕೊಬ್ಬಿನಂಶ, ವಿಟಮಿನ್ಗಳು ಮತ್ತು ಖನಿಜಾಂಶಗಳಿರುತ್ತವೆ. ಇದರೊಂದಿಗೆ ಮೆಗ್ನಿಶಿಯಂ ಕೂಡ ಇರುತ್ತದೆ.

O ಅಂದರೆ ಈರುಳ್ಳಿ:
ಉರಿಯೂತಗಳನ್ನು ಕಡಿಮೆಗೊಳಿಸುತ್ತದೆ, ಇದರಲ್ಲಿ ಆ್ಯಂಟಿ ಬ್ಯಾಕ್ಟಿರಿಯಲ್, ಆ್ಯಂಟಿ ಫಂಗಲ್ ಮತ್ತು ಆ್ಯಂಟಿ ವೈರಲ್ ಗುಣವಿದೆ. ಈರುಳ್ಳಿಯಲ್ಲಿ ಜೀರ್ಣಕಾರಿ ಎಂಜೈಮ್ಗಳಿವೆ. ಇದು ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೆಂಪು ಈರುಳ್ಳಿ ಹೆಚ್ಚು ಉತ್ತಮವಾದದ್ದು.

P ಅಂದರೆ ಪಾರ್ಸಲಿ:
ಇದು ಜೀರ್ಣಾಂಗಗಳನ್ನು ಸ್ವಚ್ಛಗೊಳಿಸುವಲ್ಲಿ ಸಹಕಾರಿ. ಇದರಲ್ಲಿ ವಿಟಮಿನ್ ಸಿ, ಎ ಮತ್ತು ಬಿ ಇದೆ. ಇದರೊಂದಿಗೆ ಕಬ್ಬಿಣದಂಶ, ಕ್ಯಾಲ್ಸಿಯಂ ಮತ್ತು ಪೊಟ್ಯಾಶಿಯಂ ಇರುತ್ತದೆ. ಇದರಲ್ಲಿ ಸಹಜ ಮೂತ್ರವರ್ಧಕ ಅಂಶವಿದೆ.

Q ಅಂದರೆ ಕ್ವಿನೊಅ:
ಇದೊಂದು ಪುಷ್ಟಿದಾಯಕ ಆಹಾರ. ಇದರಲ್ಲಿ ಎಲ್ಲ ಅತ್ಯಗತ್ಯ 8 ಅಮಿನೊ ಆ್ಯಸಿಡ್‌ಗಳಿವೆ ಮತ್ತು ಇದರಲ್ಲಿ ಕ್ಯಾಲ್ಸಿಯಂ ಮತ್ತು ಕಬ್ಬಿಣದಂಶ ಹೆಚ್ಚಿರುತ್ತದೆ.

R ಅಂದರೆ ಕೆಂಪು ಹಣ್ಣುಗಳು:
ಕೆಂಪು ಹಣ್ಣು ಮತ್ತು ತರಕಾರಿಗಳಾದ ರಾಸ್ಬೆರಿಸ್, ಸ್ಟ್ರಾಬೆರ್ರಿಸ್, ಕೆಂಪು ಮೆಣಸು, ಕೆಂಪು ಕೋಸು ಮತ್ತು ಕೆಂಪು ಈರುಳ್ಳಿಗಳು ಉತ್ತಮವಾದದ್ದು. ಇವುಗಳಲ್ಲಿ ಹೆಚ್ಚು ಶಕ್ತಿಯುತವಾದ ಆ್ಯಂಟಿಆ್ಯಕ್ಸಿಡೆಂಟ್ಗಳಿರುತ್ತವೆ. ಇದು ಹೃದಯಸಂಬಂಧಿ ಖಾಯಿಲೆಗಳ ವಿರುದ್ಧ ಹೋರಾಡುತ್ತದೆ. ಕ್ಯಾನ್ಸರ್, ಪಾರ್ಶ್ವವಾಯು ಮತ್ತು ಕಣ್ಣು ಸಂಬಂಧಿ ಖಾಯಿಲೆಗಳ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.

S ಅಂದರೆ ಸೊಪ್ಪು:
ಇದರಲ್ಲಿ ಆ್ಯಂಟಿಆ್ಯಕ್ಸಿಡೆಂಟ್ಗಳು ಹೆಚ್ಚಿದ್ದು ಪಾರ್ಶ್ವವಾಯು, ಹೃದಯಸಂಬಂಧಿ ಖಾಯಿಲೆಗಳು ಮತ್ತು ರಕ್ತದೊತ್ತಡವನ್ನು ತಡೆಗಟ್ಟುತ್ತದೆ. ಇದು 10 ಅತ್ಯುತ್ತಮ ಆಹಾರಗಳಲ್ಲಿ ಒಂದು. ಇದರಲ್ಲಿ ಲ್ಯುಟೆನ್ ಮತ್ತು ಜೆಆಕ್ಸೆಂತೈನ್ ಮತ್ತು ಆ್ಯಂಟಿ ಏಜಿಂಗ್ ಅಂಶ ಹೆಚ್ಚಿರುತ್ತದೆ.

T ಅಂದರೆ ಟೊಮೆಟೊ:
ಇದರಲ್ಲಿ ಕ್ವೆರ್ಸೆಟಿನ್ ಮತ್ತು ಆ್ಯಂಟಿಆ್ಯಕ್ಸಿಡೆಂಟ್ ಲೈಕೊಪೆನೆ ಇರುತ್ತದೆ. ಇದು ವಯಸ್ಸಾದವರ ದೈಹಿಕ ಮತ್ತು ಮಾನಸಿಕ ಸಮತೋಲನವನ್ನು ಕಾಪಾಡಲು ಅತ್ಯಗತ್ಯ.

U ಅಂದರೆ ಬೇಯಿಸದ ತರಕಾರಿಗಳು:
ತರಕಾರಿಗಳನ್ನು ಬೇಯಿಸುವುದರಿಂದ ಅವುಗಳಲ್ಲಿರುವ ಪೌಷ್ಟಿಕಾಂಶಗಳು ನಷ್ಟವಾಗುತ್ತವೆ. ಹಬೆಯಲ್ಲಿ ಕಡಿಮೆ ನೀರನ್ನು ಬಳಸಿ ತರಕಾರಿಗಳನ್ನು ಬೇಯಿಸುವುದರಿಂದ ಪೌಷ್ಟಿಕಾಂಶಗಳು ನಷ್ಟವಾಗುವುದನ್ನು ತಪ್ಪಿಸಬಹುದು. ಹಸಿತರಕಾರಿಗಳನ್ನು ತಿನ್ನುವುದು ಒಳ್ಳೆಯದು. ಬೇಯಿಸಬೇಕಾದಾಗ ಹಬೆಯಲ್ಲಿ ಬೇಯಿಸುವುದು ಉತ್ತಮ.

V ಅಂದರೆ ಹಸಿರು ತರಕಾರಿಗಳು:
ಹಸಿರು ತರಕಾರಿಗಳು, ಕೆಂಪು ತರಕಾರಿಗಳು ಅಥವ ಕಿತ್ತಳೆ ಮತ್ತು ಹಳದಿ ಬಣ್ಣದವುಗಳಲ್ಲಿ ಹೆಚ್ಚಿನ ಆ್ಯಂಟಿಆ್ಯಂಕ್ಸಿಡೆಂಟ್ಗಳು ಮತ್ತು ವಿಟಮಿನ್ಗಳಿರುತ್ತವೆ. ಇವುಗಲ್ಲಿ ಹೆಚ್ಚಿನ ನೀರಿನಂಶವಿರುತ್ತದೆ. ನೀರಿನಂಶ ಹೆಚ್ಚಿರುವ ತರಕಾರಿಗಳನ್ನು ತಿನ್ನುವುದರಿಂದ ದೇಹದಲ್ಲಿ ನೀರಿನಂಶವನ್ನು ಕಾಪಾಡಿಕೊಳ್ಳಬಹುದು.

W ಅಂದರೆ ವಾಲ್ನಟ್ಸ್:
ಇದರಲ್ಲಿ ಕಾಪರ್ ಅಂಶ ಹೆಚ್ಚಿರುತ್ತದೆ. ಇದು ಕೂದಲು ಬೆಳ್ಳಗಾಗುವುದನ್ನು ತಪ್ಪಿಸುತ್ತದೆ ಮತ್ತು ಕೂದಲ ನೈಸರ್ಗಿಕ ಬಣ್ಣವನ್ನು ಕಾಪಾಡಿಕೊಳ್ಳಲು ಸಹಕಾರಿ.

X ಅಂದರೆ ಗ್ಜೈಲಿತೊಲ್:
ಇದು ಕ್ಯಾಲೊರಿಗಳಿಲ್ಲದ ಸಹಜವಾಗಿ ಲಭ್ಯವಿರುವ ಸಿಹಿ ವಸ್ತು. ಇದರಲ್ಲಿ ಯಾವುದೇ ಕೃತಕ ವಸ್ತುಗಳಿರುವುದಿಲ್ಲ. ಇದು ಹಲ್ಲುಗಳಿಗೆ ಒಳ್ಳೆಯದು.

Y ಅಂದರೆ ಹಳದಿ ಹಣ್ಣುಗಳು ಮತ್ತು ತರಕಾರಿಗಳು:
ದ್ರಾಕ್ಷಿ ಹಣ್ಣುಗಳು, ಕಲ್ಲಂಗಡಿ, ಅನಾನಸ್ ಮತ್ತು ನಿಂಬೆಹಣ್ಣಿನಲ್ಲಿ ಆ್ಯಂಟಿಆ್ಯಕ್ಸಿಡೆಂಟ್ ಹೆಚ್ಚಿರುತ್ತದೆ. ಇದು ದೇಹದಿಂದ ವಿಷವನ್ನು ಹೊರಹಾಕಲು ಸಹಕಾರಿ.

Z ಅಂದರೆ ಜ್ಯುಚ್ಚಿನಿ:
ಇದನ್ನು ಪಾಸ್ತಾದೊಂದಿಗೆ ಬಳಸುವುದು ಒಳ್ಳೆಯದು. ಇದು ಉರಿಯೂತವನ್ನು ತಡೆಗಟ್ಟುತ್ತದೆ ಮತ್ತು ಅತಿ ತೂಕವನ್ನು ತಗ್ಗಿಸುತ್ತದೆ. ಇದರಲ್ಲಿ ಸಕ್ಕರೆಯ ಅಂಶ ಹೆಚ್ಚಿರುತ್ತದೆ.



Click it and Unblock the Notifications