Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಮೈಗ್ರೇನ್ ತಲೆನೋವು ನಿಮ್ಮನ್ನು ಬೆನ್ನುಬಿಡದೇ ಕಾಡುತ್ತಿದೆಯೇ?
ಯೋಗ ಎಂಬುದು ನಮ್ಮ ಹಿರಿಯರು ನಮಗೆ ನೀಡಿದ ವರ. ಕೇವಲ ಆಸನಗಳು, ಉಸಿರಾಟದ ಕ್ರಮದಿಂದ ಉತ್ತಮ ಜೀವನ ಶೈಲಿಯನ್ನು ತಂದು ಕೊಡುವ ಈ ವ್ಯಾಯಾಮ ಪ್ರಕ್ರಿಯೆಯು ನೀಡುವ ಪ್ರಯೋಜನಗಳು ಎಣಿಕೆಗು ಸಹ ನಿಲುಕದು. ಅದರಲ್ಲೂ ಮೈಗ್ರೇನ್‍ನಂತಹ ತಲೆನೋವನ್ನು ನಿವಾರಿಸಿಕೊಳ್ಳಲು ಯೋಗವು ಯಾವುದೇ ಅಡ್ಡಪರಿಣಾಮಗಳಿಲ್ಲದ ಪರಿಹಾರೋಪಾಯವಾಗಿದೆ.
ಪ್ರತಿ ನಿತ್ಯವು ಕೆಲವೊಂದು ಯೋಗಾಸನಗಳನ್ನು ಕೆಲ ನಿಮಿಷ ಮಾಡುವ ಮೂಲಕ ಮುಂದಿನ ಮೈಗ್ರೇನ್ ಆಕ್ರಮಣವನ್ನು ಸಹಿಸಿಕೊಳ್ಳುವಂತಹ ಶಕ್ತಿಯನ್ನು ನೀವು ನಿಮ್ಮ ದೇಹಕ್ಕೆ ನೀಡಬಹುದು. ಹಾಗಾದರೆ ಯಾವುದು ಆ ಆಸನಗಳು ಎಂಬ ಕುತೂಹಲ ನಿಮಗಿದೆಯೇ? ಮುಂದೆ ಓದಿ ಆ ಆಸನಗಳ ಕುರಿತು ನಿಮಗಾಗಿ ಮಾಹಿತಿಗಳನ್ನು ನೀಡಿದ್ದೇವೆ.

ಹಸ್ತಪಾದಾಸನ ( ಮುಂದೆ ಬಾಗಿ ಪಾದಗಳ ಬಳಿ ಹಸ್ತಗಳನ್ನು ನೆಲಕ್ಕೆ ತಾಗಿಸುವುದು)
ನೆಟ್ಟಗೆ ನಿಂತು ಮುಂದೆ ಬಾಗುವುದರಿಂದ ನಮ್ಮ ದೇಹದ ನರವ್ಯೂಹಕ್ಕೆ ಅಧಿಕ ರಕ್ತ ಪರಿಚಲನೆಯು ಸಾಧ್ಯವಾಗುತ್ತದೆ. ಇದರಿಂದ ನಮ್ಮ ನರವ್ಯೂಹಕ್ಕೆ ಚೈತನ್ಯ ದೊರೆತು ಮನಸ್ಸು ಶಾಂತಗೊಳ್ಳುತ್ತದೆ.

ಸೇತು ಬಂಧಾಸನ ( ಸೇತುವೆಯಂತಹ ಭಂಗಿ)
ಈ ಆಸನವು ನಿಮ್ಮ ರಕ್ತದ ಒತ್ತಡವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸಹಕಾರಿಯಾಗುತ್ತದೆ. ಮನಸ್ಸನ್ನು ಶಾಂತಗೊಳಿಸುವುದರ ಜೊತೆಗೆ ಉದ್ವೇಗವನ್ನು ಕಡಿಮೆ ಮಾಡಿ, ಮನಸ್ಸಿಗೆ ವಿಶ್ರಾಂತಿಯನ್ನು ನೀಡುತ್ತದೆ. ಇದೆಲ್ಲದರ ಜೊತೆಗೆ ಈ ಆಸನ ಮಾಡುವಾಗ ರಕ್ತವು ನಿಮ್ಮ ಮೆದುಳಿಗೆ ವೇಗವಾಗಿ ಸಾಗುವುದರಿಂದ ನೀವು ಅನುಭವಿಸುವ ನೋವಿನಿಂದ ನಿಮಗೆ ಸ್ವಲ್ಪ ಆರಾಮ ದೊರೆಯುತ್ತದೆ.

ಬಾಲಾಸನ ( ಮಗುವಿನಂತಹ ಭಂಗಿ)
ಮಗುವಿನ ಭಂಗಿ ಎಂದೆ ಕರೆಯಲ್ಪಡುವ ಈ ಆಸನವು ಶ್ರೇಷ್ಟವಾದ ಒತ್ತಡ ನಿವಾರಕವಾಗಿ ಗುರುತಿಸಲ್ಪಟ್ಟಿದೆ. ಮೊಣಕಾಲುಗಳ ಮೇಲೆ ವಜ್ರಾಸನದಲ್ಲಿ ಕುಳಿತು ನಿಧಾನವಾಗಿ ಉಸಿರಾಡುತ್ತ ಇಡೀ ದೇಹವನ್ನು ಹಾಗೆಯೇ ಮುಂದೆ ಬಾಗಿ ತಲೆಯನ್ನು ನೆಲಕ್ಕೆ ಬಾಗಿಸಲು ಪ್ರಯತ್ನಿಸುವುದು ಈ ಆಸನದ ಕ್ರಿಯೆಯಾಗಿರುತ್ತದೆ. ಇದು ಮನಸ್ಸನ್ನು ಶಾಂತಗೊಳಿಸುವ ಮೂಲಕ ಒತ್ತಡ ಮತ್ತು ಆಯಾಸವನ್ನು ನಿವಾರಿಸುತ್ತದೆ. ಈ ಮಗುವಿನ ಭಂಗಿಯು ನರವ್ಯೂಹವನ್ನು ಶಾಂತಗೊಳಿಸುವುದರ ಮೂಲಕ ನೋವನ್ನು ಕಡಿಮೆ ಮಾಡುತ್ತದೆ.

ಮಾರ್ಜರಿ ಆಸನ ( ಬೆಕ್ಕಿನ ಭಂಗಿ)
ಬೆಕ್ಕಿನ ಭಂಗಿಯು ನಿಮ್ಮ ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ, ಮನಸ್ಸಿಗೆ ವಿಶ್ರಾಂತಿಯನ್ನು ನೀಡುತ್ತದೆ, ಒತ್ತಡವನ್ನು ನಿವಾರಿಸುತ್ತದೆ ಮತ್ತು ಉಸಿರಾಟ ಪ್ರಕ್ರಿಯೆಯನ್ನು ಸರಾಗ ಮಾಡುತ್ತದೆ. ಈ ಆಸನದ ಪ್ರಮುಕ ಪ್ರಯೋಜನವೆಂದರೆ ಇದು ನಮಗೆ ಒತ್ತಡವನ್ನು ನೀಡುವ ಸ್ನಾಯುಗಳಿಗೆ ವಿಶ್ರಾಂತಿಯನ್ನು ನೀಡಲು ಸಹಾಯ ಮಾಡುತ್ತದೆ. ಅದರ ಮೂಲಕ ನಿಮ್ಮ ನೋವನ್ನು ಇದು ನಿವಾರಿಸುತ್ತದೆ. ನೀವು ಬೆಕ್ಕಿನ ವ್ಯಾಯಾಮ ಅಥವಾ ಮಾರ್ಜರಿ ಆಸನವನ್ನು ಹೇಗೆ ಮಾಡಬಹುದು ಎಂಬುದಕ್ಕೆ ಇಲ್ಲಿ ನೋಡಿ.

ಪಶ್ಚಿಮೋತ್ತಾನಾಸನ ( ಎರಡು ಕಾಲುಗಳನ್ನು ಚಾಚಿ ಅದರ ಮೇಲೆ ದೇಹವನ್ನು ಬಾಗಿಸುವುದು)
ಎರಡು ಕಾಲುಗಳನ್ನು ಚಾಚಿ ಅದರ ಮೇಲೆ ದೇಹವನ್ನು ಬಾಗಿಸುವ ಈ ಆಸನವು ಮನಸ್ಸಿಗೆ ಶಾಂತತೆಯನ್ನು ನೀಡುತ್ತದೆ ಮತ್ತು ಒತ್ತಡವನ್ನು ನಿವಾರಿಸಿ ತಲೆನೋವನ್ನು ಪರಿಹರಿಸುತ್ತದೆ. ಪಶ್ಚಿಮೋತ್ತಾನಾಸನವನ್ನು ಮಾಡುವ ಬಗೆ ಹೇಗೆ ಎಂದು ತಿಳಿಯಲು ಇಲ್ಲಿ ನೋಡಿ.

ಅಧೋಮುಖ ಶ್ವಾನಾಸನ ( ಕೆಳಮುಖ ಮಾಡಿಕೊಂಡಿರುವ ನಾಯಿಯಂತಹ ಭಂಗಿ)
ಕೆಳಮುಖ ಮಾಡಿಕೊಂಡಿರುವ ನಾಯಿಯಂತಹ ಭಂಗಿಯು ನಿಮ್ಮ ಮೆದುಳಿಗೆ ರಕ್ತ ಪರಿಚಲನೆಯನ್ನು ಅಧಿಕಗೊಳಿಸುತ್ತದೆ, ಇದರಿಂದ ನಿಮ್ಮ ತಲೆನೋವು ಕಡಿಮೆಯಾಗುತ್ತದೆ. ಅಧೋಮುಖ ಶ್ವಾನಾಸನ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿ ನೋಡಿ.

ಪದ್ಮಾಸನ (ಕಮಲದ ಭಂಗಿ)
ಪದ್ಮಾಸನವು ನಿಮ್ಮ ಮನಸ್ಸಿಗೆ ವಿಶ್ರಾಂತಿಯನ್ನು ನೀಡುವುದರ ಮೂಲಕ ನಿಮ್ಮ ತಲೆನೋವನ್ನು ನಿವಾರಿಸುತ್ತದೆ. ಪದ್ಮಾಸನವನ್ನು ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿ ನೋಡಿ.

ಶವಾಸನ ( ಶವದಂತಹ ಭಂಗಿ)
ಶವಾಸನವು ನಿಮ್ಮನ್ನು ಧ್ಯಾನದ ಅತ್ಯುನ್ನತ ಸ್ಥಿತಿಗೆ ಕೊಂಡೊಯ್ಯುವ ಮೂಲಕ ನಿಮ್ಮ ದೇಹಕ್ಕೆ ಬೇಕಾದ ಆಹ್ಲಾದಕತೆಯನ್ನು ಒದಗಿಸುತ್ತದೆ. ನೀವು ಯೋಗವನ್ನು ಮಾಡಿದ ಮೇಲೆ ಈ ಆಸನ ಮಾಡಿದ ಮೇಲೆಯೇ ಯೋಗಾಸನವು ಮುಕ್ತಾಯಗೊಳ್ಳುತ್ತದೆ. ಅದಕ್ಕಾಗಿ ಈ ಆಸನಕ್ಕೆ ಯೋಗದಲ್ಲಿ ಎಲ್ಲಿಲ್ಲದ ಮಹತ್ವವಿದೆ. ಶವಾಸನ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ನೋಡಿ.
ಈ ಎಲ್ಲಾ ಸರಳವಾದ ಯೋಗಾಸನಗಳನ್ನು ನೀವು ಪ್ರಯತ್ನಿಸಿ ಅಭ್ಯಾಸ ಮಾಡುವುದರ ಮೂಲಕ ನಿಮ್ಮ ಮೈಗ್ರೇನ್ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು ಅಥವಾ ಶಾಶ್ವತವಾಗಿ ಇಲ್ಲವಾಗಿಸಿಕೊಳ್ಳಬಹುದು. ಅದಕ್ಕಾಗಿ ಯೋಗಾ ಮ್ಯಾಟ್ ಮೇಲೆ ನಿಮ್ಮ ದೇಹವನ್ನು ದಂಡಿಸಿ. ನಿಮ್ಮನ್ನು ಕಾಡುವ ಮೈಗ್ರೇನ್‍ಗೆ ಗುಡ್‍ಬೈ ಹೇಳಿ.



Click it and Unblock the Notifications