Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ನಿಮ್ಮ ಬೇಸಿಗೆಯ ಸ್ವಿಮ್ಮಿಂಗ್‌ಗಾಗಿ 8 ಆರೋಗ್ಯ ಸಲಹೆಗಳು
ಬಿಸಿಲ ಝಳ ನಿಮ್ಮನ್ನು ಸುಡುತ್ತಿದೆ. ಬಾಯಾರಿಕೆ, ಸುಸ್ತು, ಬೆವರು ಅಬ್ಬಾ ಸಾಕಪ್ಪಾ ಸಾಕು ಬೇಸಿಗೆ ಎಂಬ ಉದ್ಗಾರ ದಿನದಲ್ಲಿ ಒಂದು 100 ಬಾರಿಯಾದರೂ ಮನದಲ್ಲಿ ಬಂದಿರುತ್ತದೆ. ಈ ಸಮಯದಲ್ಲಿ ತಂಪನ್ನು ಅರಸಿಕೊಂಡು ದೂರದೂರದ ತಂಪು ಪ್ರದೇಶಕ್ಕೆ ಹತ್ತಿರದ ಸ್ವಿಮ್ಮಿಂಗ್ ಪೂಲ್‌ಗೆ ಜನರು ದೌಡಾಯಿಸುವುದು ಸಹಜವೇ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಚಿಕನ್ ಫಾಕ್ಸ್‌ಗೆ ಕಲ್ಲಂಗಡಿ ಹಣ್ಣು ಉತ್ತಮವೇ?
ದೂರದೂರಿನ ತಂಪು ಪ್ರದೇಶದ ನಮ್ಮ ಪ್ರಯಾಣ ನಮ್ಮ ದೇಹಕ್ಕೆ ಹಿತಕಾರಿಯಾಗಿರುತ್ತದೆ. ಆಳವಾದ ಕೊಳದಲ್ಲಿ ಸ್ನಾನ ಮಾಡಲು ತಂಪು ಅನುಭವವನ್ನು ಪಡೆದುಕೊಳ್ಳಲು ಧಾವಿಸುವ ಮುನ್ನ ಸ್ವಲ್ಪ ಈ ಲೇಖನದತ್ತ ಗಮನ ಕೊಡಿ.
ಕೊಳದಲ್ಲಿ ನೀವು ಇಳಿಯುವ ಮುನ್ನ ನಿಮ್ಮ ಆರೋಗ್ಯದ ಕಡೆಗೆ ನೀವು ಹೇಗೆ ಗಮನ ನೀಡಬೇಕೆಂಬುದು ನಿಮಗೆ ತಿಳಿದಿರಬೇಕು. ಈಜುವುದು ಒಂದು ಸುಲಭವಾದ ವ್ಯಾಯಾಮ. ಅದು ಸರಿಯೇ ಆದರೆ ನಿಮ್ಮ ಆರೋಗ್ಯದೆಡೆಗೆ ಗಮನ ಹರಿಸದೇ ಬೇಸಿಗೆಯಲ್ಲಿ ನೀವು ಈಜಲು ತೊಡಗಿದರೆಂದರೆ ನೀವು ಕಾಯಿಲೆ ಬೀಳುವುದು ಖಂಡಿತ. ಆದ್ದರಿಂದ ಕೊಳಕ್ಕೆ ಇಳಿಯುವ ಮುನ್ನ ಈ ಸಲಹೆಗಳನ್ನು ಅರಿತುಕೊಳ್ಳಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ವಾರದೊಳಗೆ ಹೊಟ್ಟೆಯ ಕೊಬ್ಬು ಕರಗಲು ಹೀಗೆ ಮಾಡಿ!

ಆಹಾರ ಸೇವನೆ:
ನೀವು ನೀರಿಗೆ ಇಳಿಯುವ ಒಂದು ಗಂಟೆಗಿಂತ ಮುಂಚಿತವಾಗಿ ಆಹಾರವನ್ನು ಸೇವಿಸದಿರುವುದು ಪ್ರಥಮವಾಗಿ ನೀವು ಅನುಸರಿಸಬೇಕಾದ ಆರೋಗ್ಯ ಸಲಹೆಯಾಗಿದೆ. ನೀವು ಏಸಿಡ್ ಅಂಶವುಳ್ಳ ಆಹಾರವನ್ನು ಸೇವಿಸಿ ಕೊಳಕ್ಕೆ ಇಳಿದಿರೆಂದರೆ ನಿಮ್ಮ ಹೊಟ್ಟೆಗೆ ಸಂಚಕಾರ ಖಂಡಿತ.

ಶೌಚಾಲಯಕ್ಕೆ ಭೇಟಿ ನೀಡಿ:
ಭೇದಿಯಿಂದ ಬಳಲುತ್ತಿರುವವರು ಕೊಳಕ್ಕೆ ಹೋಗದಿರುವುದು ಒಳ್ಳೆಯದು. ನೀವು ಕೊಳಕ್ಕೆ ಇಳಿಯುವ ಮುನ್ನ ಲೂ (ಶೌಚಾಲಯ) ಗೆ ಭೇಟಿ ನೀಡಿ. ಬೇಸಿಗೆಯಲ್ಲಿ ನಿಮಗೆ ಆಗಾಗ್ಗೆ ಮೂತ್ರವಿಸರ್ಜನೆ ಉಂಟಾಗುತ್ತಿರುತ್ತದೆ ಈ ಸಮಸ್ಯೆಯನ್ನು ಹೋಗಲಾಡಿಸಲು ಇದು ಉತ್ತಮ ವಿಧಾನವಾಗಿದೆ.

ನಿಮಗೆ ಗಾಯವಾಗಿದ್ದರೆ:
ನಿಮ್ಮ ಗಾಯಗಳು ತೆರೆದ ಸ್ಥಿತಿಯಲ್ಲಿದ್ದರೆ ನೀವು ಈಜಲು ಹೋಗದಿರುವುದು ಅತೀ ಉತ್ತಮ. ಗಾಯಗಳು ಒಣಗಿನ ನಂತರವೇ ಕೊಳಕ್ಕೆ ಇಳಿಯಿರಿ. ಕೊಳದಲ್ಲಿರುವ ಕ್ಲೋರೀನ್ ನಿಮ್ಮ ತೆರೆದ ಗಾಯಕ್ಕೆ ಸೋಂಕನ್ನು ಉಂಟುಮಾಡಬಹುದು.

ನಿಮ್ಮ ದೇಹವನ್ನು ಬೆಚ್ಚಗೆ ಮಾಡಿ;
ಈ ಬೇಸಿಗೆಯಲ್ಲಿ ನೀವು ಅನುಸರಿಸಲೇಬೇಕಾದ ಒಂದು ಆರೋಗ್ಯ ಸಲಹೆಯೆಂದರೆ ನಿಮ್ಮ ದೇಹವನ್ನು ಬೆಚ್ಚಗಾಗಿಸಲು ವ್ಯಾಯಾಮ ಮಾಡುವುದಾಗಿದೆ. ದೀರ್ಘ ಸಮಯದವರೆಗೆ ಈಜಲು ಇದು ನಿಮಗೆ ಶಕ್ತಿಯನ್ನು ನೀಡುತ್ತದೆ. 10-15 ನಿಮಿಷದ ವ್ಯಾಯಾಮ ಅತ್ಯಗತ್ಯ.

ಏನನ್ನಾದರೂ ಕುಡಿಯಿರಿ:
ಹೌದು, ನೀವು ಈಜುಕೊಳದಲ್ಲಿದ್ದಾಗಲೂ ಆಗಾಗ್ಗೆ ನೀರು ಕುಡಿಯುವುದು ಅತೀ ಸೂಕ್ತ. ಬೇಸಿಗೆಯಲ್ಲಿ ನೀವು ಈಜುವಾಗ ನಿಮ್ಮ ಶರೀರ ಡೀಹೈಡ್ರೇಟ್ ಆಗುತ್ತದೆ ಆದ್ದರಿಂದ ಸ್ವಿಮ್ಮಿಂಗ್ ನಡುವೆ ಆಗಾಗ್ಗೆ ನೀರು ಕುಡಿಯಿರಿ.

ದೇಹವನ್ನು ವಿಸ್ತಾರಗೊಳಿಸಿ:
10 ನಿಮಿಷಕ್ಕಾಗಿ ನಿಮ್ಮ ದೇಹವನ್ನು ವಿಸ್ತಾರಗೊಳಿಸುವುದು ಉತ್ತಮ ವಿಧಾನವಾಗಿದೆ. ದೇಹದಲ್ಲೆ ಸೆಡೆತ ಉಂಟಾಗುವುದನ್ನು ಇದು ತಪ್ಪಿಸುತ್ತದೆ ಹಾಗೂ ನಿಮ್ಮ ಶಕ್ತಿಯನ್ನು ಇದು ಹೆಚ್ಚಿಸುತ್ತದೆ.

ಕೊಳಕ್ಕೆ ಇಳಿಯುವಾಗ:
ನಿಮ್ಮ ದೇಹದ ತಾಪಮಾನ ಕೊಳದ ನೀರಿನ ತಾಪಮಾನಕ್ಕೆ ಅನುಗುಣವಾಗಿ ಇರಬೇಕು. ಕೊಳಕ್ಕೆ ನಿಧಾನವಾಗಿ ನಡೆಯಿರಿ ಇದರಿಂದ ನಿಮ್ಮ ದೇಹ ತಾಪಮಾನವನ್ನು ಬಳಸಿಕೊಳ್ಳುತ್ತದೆ. ದೇಹವು ಉಷ್ಣತೆಯನ್ನು ಅರಿತುಕೊಳ್ಳುವ ಮುನ್ನವೇ ನೀವು ನೀರಿಗೆ ಹಾರಿದಾಗ ನಿಮಗೆ ನರ್ವಸ್ ಶಾಕ್ ಉಂಟಾಗಬಹುದು.

ದೇಹದ ಸೆಳೆತಗಳು:
ದೇಹದ ಸೆಳೆತಗಳನ್ನು ನಿವಾರಿಸಲು, ವ್ಯಾಯಾಮ ಮಾಡಿ ಮತ್ತು ನಿಮ್ಮ ದೇಹವನ್ನು ಬೆಚ್ಚಗಿರಿಸಿ. ಈ ಬೇಸಿಗೆಯಲ್ಲಿ ನೀವು ಅನುಸರಿಸಬೇಕಾದ ಒಂದು ಸಲಹೆಯೆಂದರೆ ಬೆಚ್ಚಗಿನ ಈಜುಕೊಳದಲ್ಲಿ ನೀವು ಈಜುವುದಾಗಿದೆ. ಇದರಿಂದ ದೇಹದ ಸೆಳೆತ ನಿಮ್ಮಲ್ಲಿ ಕಡಿಮೆ ಉಂಟಾಗುತ್ತದೆ.



Click it and Unblock the Notifications
