For Quick Alerts
ALLOW NOTIFICATIONS  
For Daily Alerts

ನಿಮಗೆ ತಿಳಿಯದ ಪುದೀನಾ ಜ್ಯೂಸ್‌ನ 8 ಆರೋಗ್ಯ ಪ್ರಯೋಜನಗಳು!

|

ಬೇಸಿಗೆಯಲ್ಲಿ ನಮ್ಮ ದೇಹವನ್ನು ಮತ್ತು ಬಾಯಾರಿಕೆಯನ್ನು ಕಡಿಮೆ ಮಾಡುವಂತಹ ತಂಪಾದ ಪೇಯವನ್ನು ನಾವು ಹೆಚ್ಚು ಇಷ್ಟಪಡುತ್ತೇವೆ. ಬೇಸಿಗೆಯ ಧಗೆಯನ್ನು ನಿವಾರಿಸುವ ಒಂದು ತಂಪು ಪೇಯವಾಗಿದೆ ಪುದೀನಾ ಜ್ಯೂಸ್ ಅಥವಾ ಮಿಂಟ್. ಇದೊಂದು ಆರೋಗ್ಯಕರವಾದ ಬೇಸಿಗೆ ಪೇಯವಾಗಿದೆ. ಇದನ್ನು ಸಿದ್ಧಪಡಿಸುವುದು ತುಂಬಾ ಸರಳವಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಬೇಸಿಗೆಯಲ್ಲೂ ತಂಪಾಗಿರಲು ಸಹಕಾರಿ ಈ 12 ಸಲಹೆಗಳು

ಚಾಟ್ ಮಸಾಲಾ, ಜೀರಿಗೆ ಹುಡಿ, ಉಪ್ಪು ಅಥವಾ ಸಕ್ಕರೆಯನ್ನು ಪುದೀನಾದೊಂದಿಗೆ ಮಿಶ್ರ ಮಾಡಿ ಈ ಜ್ಯೂಸ್ ಅನ್ನು ತಯಾರಿಸಬಹುದು. ಒಂದು ಉತ್ತಮವಾದ ಆರೋಗ್ಯಕರ ಅಂಶವನ್ನು ಹೊಂದಿರುವ ಪುದೀನಾ ಬೇಸಿಗೆಗೆ ಒಂದು ಹೇಳಿ ಮಾಡಿಸಿದ ಪೇಯವಾಗಿದೆ.

ಪುದೀನಾವು ದೇಹದ ಬಿಸಿಯನ್ನು ಕ್ಷಣದಲ್ಲಿ ನಿವಾರಿಸುತ್ತದೆ. ಇದು ಜೀರ್ಣಕ್ರಿಯೆಗೂ ಸಹಕಾರಿ. ಹೊಟ್ಟೆಯ ಸ್ನಾಯುವನ್ನು ಮೃದುಗೊಳಿಸಿ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಪುದೀನಾ ಜ್ಯೂಸ್ ಅನ್ನು ಸೇವಿಸುವುದರಿಂದ ಉಂಟಾಗುವ ಪ್ರಯೋಜನಗಳನ್ನು ನಾವಿಲ್ಲಿ ನೀಡುತ್ತಿದ್ದು ಇನ್ನಷ್ಟು ತಿಳಿದುಕೊಳ್ಳಲು ಮುಂದೆ ಓದಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಪುದೀನಾ ಎಣ್ಣೆಯಲ್ಲಿದೆ ಮ್ಯಾಜಿಕ್ ಗುಣಗಳು

1.ದೇಹದ ತಾಪಮಾನವನ್ನು ಕಡಿಮೆಗೊಳಿಸುತ್ತದೆ

1.ದೇಹದ ತಾಪಮಾನವನ್ನು ಕಡಿಮೆಗೊಳಿಸುತ್ತದೆ

ಬೇಸಿಗೆಯಲ್ಲಿ ಈ ಜ್ಯೂಸ್ ಅನ್ನು ಸೇವಿಸುವುದರ ಆರೋಗ್ಯ ಪ್ರಯೋಜನಗಳಲ್ಲಿ ಇದೂ ಒಂದು. ದೇಹದ ಉಷ್ಣವನ್ನು ಕಡಿಮೆಗೊಳಿಸುವ ಗುಣ ಪುದೀನಾಕ್ಕಿದೆ. ಇದನ್ನು ನಿತ್ಯವೂ ಬೇಸಿಗೆಯಲ್ಲಿ ಸೇವಿಸುವುದು ಸನ್ ಸ್ಟ್ರೋಕ್‌ನಿಂದ ನಿಮಗೆ ರಕ್ಷಣೆಯನ್ನು ನೀಡುತ್ತದೆ.

2.ಜೀರ್ಣಕ್ರಿಯೆಗೆ ಸಹಕಾರಿ

2.ಜೀರ್ಣಕ್ರಿಯೆಗೆ ಸಹಕಾರಿ

ಹೊಟ್ಟೆಯ ಸ್ನಾಯುಗಳನ್ನು ಸಡಿಲಗೊಳಿಸುವ ಉತ್ಕರ್ಷಣ ನಿರೋಧಿ ಅಂಶಗಳು ಮತ್ತು ಫೈಟೋನ್ಯೂಟ್ರಿಯೆಂಟ್ಸ್ ಪುದೀನಾ ಎಲೆಗಳಲ್ಲಿದ್ದು ಜೀರ್ಣಕ್ರಿಯೆಗೆ ಇದು ಸಹಕಾರಿಯಾಗಿದೆ.

3.ನಿಮ್ಮನ್ನು ಹೈಡ್ರೇಟ್ ಆಗಿ ಇರಿಸುತ್ತದೆ

3.ನಿಮ್ಮನ್ನು ಹೈಡ್ರೇಟ್ ಆಗಿ ಇರಿಸುತ್ತದೆ

ದೇಹವನ್ನು ತಂಪಾಗಿಸುವ ಗುಣ ಪುದೀನಾಕ್ಕಿದ್ದು ನಿಮ್ಮನ್ನು ಹೈಡ್ರೇಟ್ ಆಗಿ ಇರಿಸುತ್ತದೆ. ಡೀಹೈಡ್ರೇಶನ್, ಸನ್ ಸ್ಟ್ರೋಕ್ ಮುಂತಾದ ಬೇಸಿಗೆಯ ಸಮಸ್ಯೆಗಳನ್ನು ದೂರಿಕರಿಸುವ ಶಕ್ತಿ ಪುದೀನಾಕ್ಕಿದೆ.

4.ಬಾಯಿಯ ಸ್ವಚ್ಛತೆ

4.ಬಾಯಿಯ ಸ್ವಚ್ಛತೆ

ಬಾಯಿಯ ಸ್ವಚ್ಛತೆಯನ್ನು ನೈಸರ್ಗಿಕವಾಗಿ ಸ್ವಚ್ಛಗೊಳಿಸುವ ಶಕ್ತಿ ಪುದೀನಾಕ್ಕಿದ್ದು ಬಾಯಿಯ ದುರ್ವಾಸನೆ, ದಂತಕ್ಷಯ, ಹಲ್ಲಿನ ಹಳದಿಗಟ್ಟುವಿಕೆ ಮುಂತಾದ ಬಾಯಿಯ ತೊಂದರೆಗಳನ್ನು ನಿವಾರಿಸುತ್ತದೆ. ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿ ವಿರೋಧಿ ಅಂಶಗಳಿಂದ ಶ್ರೀಮಂತವಾಗಿರುವ ಪುದೀನಾ ಬಾಯಿಯ ಎಲ್ಲಾ ತೊಂದರೆಗಳನ್ನು ಸುಲಭವಾಗಿ ನಿವಾರಿಸುತ್ತದೆ.

5.ಕೆಮ್ಮು ನಿವಾರಣೆ

5.ಕೆಮ್ಮು ನಿವಾರಣೆ

ಪುದೀನಾದಲ್ಲಿರುವ ಮೆಂಥೋಲ್ ಮೂಗಿನ ದ್ವಾರವನ್ನು ತೆರೆದು ಉಸಿರಾಟವನ್ನು ಸರಾಗಗೊಳಿಸುತ್ತದೆ. ಪುದೀನಾವನ್ನು ಅರೆದು ಅದನ್ನು ಜ್ಯೂಸ್‌ನಂತೆ ಸೇವಿಸುವುದರಿಂದ ಕೆಮ್ಮಿನ ಸಮಸ್ಯೆ ನಿವಾರಣೆಯಾಗುತ್ತದೆ.

6.ಒತ್ತಡ ನಿವಾರಣೆ

6.ಒತ್ತಡ ನಿವಾರಣೆ

ಸುಗಂಧ, ಉತ್ಕರ್ಷಣ ನಿರೋಧಿ ಅಂಶಗಳಿಂದ ಕೂಡಿರುವ ಪುದೀನಾ ಒತ್ತಡವನ್ನು ನಿವಾರಿಸಿ ನಿಮಗೆ ರಿಲ್ಯಾಕ್ಸ್ ನೀಡುತ್ತದೆ.

7.ಬೆಳಗ್ಗಿನ ಕಾಯಿಲೆಯನ್ನು ದೂರಮಾಡುತ್ತದೆ

7.ಬೆಳಗ್ಗಿನ ಕಾಯಿಲೆಯನ್ನು ದೂರಮಾಡುತ್ತದೆ

ಗರ್ಭೀಣಿ ಸ್ತ್ರೀಯರು ಮುಂಜಾನೆ ಎದ್ದ ಒಡನೆ ಪುದೀನಾ ಜ್ಯೂಸ್ ಅನ್ನು ಸೇವಿಸುವುದು ಬೆಳಗ್ಗಿನ ಕಾಯಿಲೆಯಾದ ವಾಕರಿಕೆ ತಲೆಸುತ್ತನ್ನು ನಿವಾರಿಸುತ್ತದೆ.

8.ರೋಗನಿರೋಧಕ ಶಕ್ತಿ ವರ್ಧನೆ

8.ರೋಗನಿರೋಧಕ ಶಕ್ತಿ ವರ್ಧನೆ

ವಿಟಮಿನ್ ಸಿ, ಡಿ, ಕ್ಯಾಲ್ಶಿಯಂ, ಪೋಸ್ಫರಸ್, ಮತ್ತು ವಿಟಮಿನ್ ಬಿ ಸಣ್ಣ ಪ್ರಮಾಣದಲ್ಲಿರುವ ಪುದೀನಾ ಎಲೆ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ವರ್ಧಿಸಿ ಉರಿಯನ್ನು ನಿವಾರಿಸುತ್ತದೆ.

English summary

8 Health Benefits Of Pudina Juice

During summers, we all want to drink some refreshing and healthy juices which reduce body heat and keep you cool during the hot season. Pudina or mint juice is one of the most common and healthy summer drinks.
Story first published: Wednesday, April 16, 2014, 11:09 [IST]
X
Desktop Bottom Promotion