Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಯೋಗಾಭ್ಯಾಸದ ಏಳು ಮಹತ್ವ ಪ್ರಯೋಜನಗಳು
ಪದ್ಮಾಸನ ಹಾಕಿಕೊಂಡು ಯೋಗ ತರಗತಿಗಳಲ್ಲಿ 60 ನಿಮಿಷಗಳಷ್ಟು ಕಾಲ 'ಓಂ' ನಾಮಸ್ಮರಣೆಯನ್ನು ಮಾಡುವುದು ಯೋಗಾಭ್ಯಾಸ ಎಂದು ನೀವು ತಿಳಿದಿದ್ದೀರಾ? ಯೋಗಾಸನ ಮಾಡುವುದು ಬರಿಯ ಧ್ಯಾನವನ್ನು ಮಾತ್ರ ಒಳಗೊಂಡಿಲ್ಲ. ಕೆಲವೊಂದು ಆಸನಗಳನ್ನು ಒಳಗೊಂಡಿರುವ ಈ ಆಯುರ್ವೇದಿಯ ವ್ಯಾಯಾಮ ಜೀವನಕ್ಕೆ ಎಷ್ಟು ಅವಶ್ಯಕ ಎಂಬುದು ಅದನ್ನು ಅಭ್ಯಾಸ ಮಾಡಿದಾಗಲೇ ತಿಳಿಯಲು ಸಾಧ್ಯ. ಇಂದಿನ ಒತ್ತಡಭರಿತ ಜೀವನದಲ್ಲಿ ಯೋಗ ಅತ್ಯಂತ ಆವಶ್ಯಕ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಧುಮೇಹಿಗಳಿಗೆ 10 ಅತ್ಯುತ್ತಮ ಆಹಾರಗಳು
ಮಾನಸಿಕ ನೆಮ್ಮದಿಯೊಂದಿಗೆ ದೇಹಕ್ಕೆ ಹೊಸ ಉಲ್ಲಾಸವನ್ನು ನೀಡುವ ಯೋಗ ಹಲವಾರು ರೋಗಗಳನ್ನು ದೂರವಿಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಯೋಗಾಸನವು ಹಲವಾರು ಆಸನಗಳನ್ನು ಒಳಗೊಂಡಿದ್ದು ಈ ಆಸನಗಳು ದೈಹಿಕವಾಗಿ ಮಾನಸಿಕವಾಗಿ ನಮ್ಮನ್ನು ಸದೃಢಗೊಳಿಸುತ್ತದೆ.
'ಊಟ ಬಲ್ಲವನಿಗೆ ರೋಗವಿಲ್ಲ' ಎಂಬ ಗಾದೆಯಂತೆ 'ಯೋಗ ಬಲ್ಲವನೂ ರೋಗದಿಂದ ಮುಕ್ತನಾಗಿರುತ್ತಾನೆ'. ಅನಾದಿ ಕಾಲದಿಂದಲೂ ಯೋಗಿಗಳು ತಪಸ್ವಿಗಳು ತಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ಅನುಷ್ಠಾನಿಕೊಂಡವರು. ಕೆಲವು ಆಸನಗಳಾದ ಅನುಸಾರ, ವಿನ್ಯಾಸ ಮತ್ತು ಬಿಕ್ರಮ ನಿಮ್ಮ ವಿನ್ಯಾಸವಿರುವ ದೇಹ ಆಕಾರಕ್ಕೆ ಕಾರಣವಾಗಿವೆ.
ಅಧಿಕ ತೂಕವನ್ನು ಕಳೆದುಕೊಂಡು ಆರೋಗ್ಯಕರ ದೇಹ ಸಂಪತ್ತನ್ನು ಯೋಗದ ಮೂಲಕ ನಿಮಗೆ ಪಡೆದುಕೊಳ್ಳಬಹುದು. ಯೋಗವು ಆರೋಗ್ಯವನ್ನು ಸುವ್ಯವಸ್ಥಿತವಾಗಿಡುವಲ್ಲಿ ಹೇಗೆ ಸಹಕಾರಿಯಾಗಿದೆ ಎಂಬುದನ್ನು ತಿಳಿಯಲು ಮುಂದೆ ಓದಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಅರಶಿನದ ಆರೋಗ್ಯಕಾರಿ ಪ್ರಯೋಜನಗಳು

ನೈಸರ್ಗಿಕ ಸಾಮರ್ಥ್ಯ:
ಯೋಗ ಮಾಡುತ್ತಿರುವ ನಿಮ್ಮ ಸ್ನಾಯುಗಳು ಮೂಳೆಗಳು ಬೇಕಾದ ಆಕಾರದಲ್ಲಿ ರೀತಿಯಲ್ಲಿ ಬಾಗುತ್ತವೆ. ಈ ರೀತಿಯ ಕಸರತ್ತು ಚಯಾಪಚಯಾ ಪ್ರಕ್ರಿಯೆಯನ್ನು ವೇಗಗೊಳಸಿ ಮೂಳೆ ಸ್ನಾಯು ಬಲಕ್ಕೆ ಕಾರಣವಾಗುತ್ತದೆ.

ಹೃದಯದ ಆರೋಗ್ಯ ಮತ್ತು ಆಂತರಿಕ ದೇಹ ತಾಪಮಾನವನ್ನು ಸಕ್ರಿಯಗೊಳಿಸುತ್ತದೆ:
ಯೋಗಭ್ಯಾಸದಿಂದ ಹೃದಯದ ಬಡಿತ ಸಾಮಾನ್ಯ ಸ್ಥಿತಿಗೆ ಪಕ್ವಗೊಂಡು ರಕ್ತ ಪರಿಚನೆ ಚೆನ್ನಾಗಿ ಆಗಲು ಸಹಕಾರಿಯಾಗುತ್ತದೆ. ಹೃದಯ ಸಂಬಂಧಿ ಕಾಯಿಲೆಗಳು ನಿವಾರಣೆಯಾಗುತ್ತವೆ. ನಿಮ್ಮ ದೇಹದ ಆಂತರಿಕ ತಾಪಮಾನ ಕ್ರಿಯಾಶೀಲಗೊಂಡು ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಜಿಐ (ಜಠರಗರುಳಿನ) ವ್ಯೂಹದ ಒತ್ತಡವನ್ನು ಉತ್ತೇಜಿಸುತ್ತದೆ
ಜಿಐ (ಜಠರಗರುಳಿನ) ವ್ಯೂಹದ ಕಡಿಮೆ ಒತ್ತಡವು ಜೀರ್ಣಾಂಗ ವ್ಯವಸ್ಥೆಯನ್ನು ನಿಧಾನಗೊಳಿಸಿ ದೇಹದ ತೂಕ ಏರುವಂತೆ ಮಾಡುತ್ತದೆ. ಜಡವಾಗಿರುವ ಜಠರವು ನಿಮ್ಮ ಚಯಾಪಚಯ ಪ್ರಕ್ರಿಯೆಗೆ ತೊಡಕಿನಂತೆ. ಆದರೆ ಯೋಗವು ಜಠರದ ವೇಗವನ್ನು ತೀವ್ರಗೊಳಿಸಿ ಜೀರ್ಣಾಂಗ ವ್ಯೂಹವನ್ನು ಸಮರ್ಪಕಗೊಳಿಸುತ್ತದೆ.

ಕರುಳಿನಿಂದ ವಿಷಕಾರಿ ತ್ಯಾಜ್ಯ ಅಂಶಗಳನ್ನು ಹೊರಹಾಕುವಲ್ಲಿ ಸಹಕಾರಿ:
ಯೋಗವು ಕರುಳಿನಿಂದ ತ್ಯಾಜ್ಯ ವಿಷಕಾರಿ ಅಂಶಗಳನ್ನು ಹೊರಹಾಕಿ ಅದರ ಸ್ವಚ್ಛತೆಯನ್ನು ಮಾಡುತ್ತದೆ. ಕರುಳಿನ ಸ್ವಚ್ಛತೆಯಿಂದ ನಮಗೆ ಹಲವಾರು ರೋಗಗಳ ವಿರುದ್ಧ ಹೋರಾಡುವ ದೃಢತೆ ಉಂಟಾಗುತ್ತದೆ.

ದೇಹದ ಉತ್ತಮ ಆರೋಗ್ಯ:
ಯೋಗವು ದೇಹದ ಆರೋಗ್ಯವನ್ನು ಕಾಪಿಡುವಲ್ಲಿ ಮಹತ್ವದ ಪಾತ್ರ ವಹಿಸಿದೆ. ನಿಮ್ಮ ಮೂಳೆ ಸ್ನಾಯುಗಳನ್ನು ಚುರುಕು ಮತ್ತು ಚಟುವಟಿಕೆಗೊಳಿಸಲು ಯೋಗ ಸಹಕಾರಿ. ಯೋಗಭ್ಯಾಸದ ನಿರಂತರತೆಯು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಬಳಲಿಕೆ, ಸುಸ್ತು, ನಿಮ್ಮಿಂದ ದೂರವಾಗಿ ಚಟುವಟಿಕೆ ನಿಮ್ಮ ಜತೆಗೂಡುತ್ತದೆ.

.ಥೈರೋಯ್ಡ್ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ:
ಆರೋಗ್ಯಕರ ತೂಕವನ್ನು ನಿರ್ವಹಿಸುವಲ್ಲಿ ಥೈರೋಯ್ಡ್ ಗ್ರಂಥಿಯು ಮಹತ್ವದ ಪಾತ್ರ ವಹಿಸುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುತ್ತದೆ.

ದೇಹದ ಕೊಬ್ಬನ್ನು ನಿಯಂತ್ರಿಸುತ್ತದೆ :
ತಿರುಚುವ ಆಸನಗಳು ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕುತ್ತವೆ. ಇವುಗಳು ಕೊಬ್ಬನ್ನು ಉಂಟುಮಾಡುವಲ್ಲಿ ಪಾತ್ರ ವಹಿಸಿದ್ದು ದೇಹದಲ್ಲಿ ವಿಪರೀತ ಕೊಬ್ಬು ಬೆಳೆಯುವುದಕ್ಕೆ ಕಾರಣವಾಗಿದೆ. ಯೋಗದಿಂದ ಈ ರೀತಿಯ ಅಂಶಗಳು ಹೊರಹೋಗಿ ದೇಹ ಹಗುರಾಗುತ್ತದೆ, ಜೊತೆಗೆ ನಿಮ್ಮ ದೇಹದ ಅತಿಯಾದ ತೂಕವನ್ನೂ ಇಳಿಸುವುದರಿಂದ ಉಲ್ಲಾಸಭರಿತ ಜೀವನ ನಿಮ್ಮದಾಗುತ್ತದೆ.



Click it and Unblock the Notifications