Latest Updates
-
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ -
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್!
ಶೀತ ಮತ್ತು ಫ್ಲೂ ಬಗ್ಗೆ 7 ಅಚ್ಚರಿಯ ವಿಷಯ
ಚಳಿಗಾಲ ಆಗಮಿಸುತ್ತಿದೆ. ಇದರೊಂದಿಗೇ ಶೀತ, ಸೀನು, ಫ್ಲೂ, ಜ್ವರ ನೆಗಡಿ ಸಹಾ. ಚಳಿಗಾಲದಲ್ಲಿ ಒಂದು ವೇಳೆ ಕೈಗೊಳ್ಳಬೇಕಾದ ಆರೈಕೆ ಇಲ್ಲದಿದ್ದರೆ ಆರೋಗ್ಯ ಕೆಡುವುದು ಖಚಿತ. ಸಾಮಾನ್ಯವಾಗಿ ನಾವು ಉಪೇಕ್ಷಿಸುವ ವಿಷಯಗಳಲ್ಲಿ ಕೆಲವನ್ನು ಸರಿಯಾಗಿ ಪಾಲಿಸಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅವುಗಳಲ್ಲಿ ಪ್ರಮುಖವಾದ ಏಳು ಅಚ್ಚರಿ ಎನಿಸುವ ವಿಷಯಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.
1) ಶೀತ ನೆಗಡಿ ಬರದಂತೆ ಕಾಪಾಡಲು ಕೈಗಳನ್ನು ಆಗಾಗ್ಯೆ ಸಾಬೂನಿನಿಂದ ಸ್ವಚ್ಛಗೊಳಿಸುವುದು ಮುಖ್ಯ:
ಶೀತಕ್ಕೆ ಕಾರಣವಾದ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳು ಹರಡುವುದೇ ಕೈಗಳ ಮೂಲಕ. ಈ ವೈರಸ್ಸುಗಳು ಬೇರೆಯವರಿಂದ ಕೈ ತಲುಪಬಹುದಾದ ಸ್ಥಳಗಳಲ್ಲಿದ್ದರೆ, ಅಲ್ಲೆಲ್ಲಾ ಮುಟ್ಟುವ ಮೂಲಕ ಆ ವೈರಸ್ಸುಗಳು ಕೈಗಳಿಗೆ ತಲುಪುತ್ತವೆ. ಸರಿಯಾಗಿ ತೊಳೆಯದ ಕೈಗಳ ಮೂಲಕ ಈ ವೈರಸ್ಸುಗಳು ನೇರವಾಗಿ ದೇಹ ಪ್ರವೇಶಿಸಿ ಶೀತ ನೆಗಡಿಗೆ ಕಾರಣವಾಗುತ್ತವೆ. ಕೇವಲ ಇಪ್ಪತ್ತು ಸೆಕೆಂಡುಗಳ ಕಾಲ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವ ಮೂಲಕ ಶೀತವನ್ನು ದೂರವಿಡಬಹುದು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಶೀತ ಓಡಿಸುವ ಮಸಾಲಾ ಟೀ ರೆಡಿ ಮಾಡುವುದು ಹೇಗೆ?

2) ಶೀತ ನೆಗಡಿಯನ್ನು ದೂರವಿಡಲು ನಿಯಮಿತವಾಗಿ ವ್ಯಾಯಾಮ ಮಾಡಿ:
ನಿಯಮಿತವಾದ ವ್ಯಾಯಾಮದಿಂದ ದೇಹದ ರೋಗನಿರೋಧಕ ಶಕ್ತಿ ವೃದ್ಧಿಸುವುದರಿಂದ ಸ್ವಾಭಾವಿಕವಾಗಿ ಶೀತಕ್ಕೆ ಕಾರಣವಾದ ಕೀಟಾಣುಗಳನ್ನು ದೇಹ ಎದುರಿಸುತ್ತದೆ. ಒಂದು ವೇಳೆ ಶೀತ ಧಾಳಿ ಇಟ್ಟರೂ ದೇಹ ಶೀಘ್ರವೇ ಗುಣಹೊಂದಲು ರೋಗನಿರೋಧಕ ಶಕ್ತಿ ನೆರವಾಗುವುದು.
3) ಫ್ಲೂ ಜ್ವರ ಬಂದರೆ ಲಘುವಾಗಿ ಪರಿಗಣಿಸಬೇಡಿ:
1918 ಮತ್ತು 1919ರಲ್ಲಿ ವಿಶ್ವದಲ್ಲಿ ಸುಮಾರು ಐದು ಕೋಟಿ ಜನರು 'ಸ್ಪಾನಿಷ್ ಫ್ಲೂ' ಎಂಬ ಹೆಸರಿನ ಜ್ವರದಿಂದ ಸಾವನ್ನಪ್ಪಿದ್ದರು. ಇದು ಇಪ್ಪತ್ತನೆಯ ಶತಮಾನದ ವಿಶ್ವಯುದ್ದಗಳಲ್ಲಿ ಮಡಿದವರ ಸಂಖ್ಯೆಗೂ ಹೆಚ್ಚು! ಈ ಜ್ವರವನ್ನು ಲಘುವಾಗಿ ಪರಿಗಣಿಸಿದ್ದರಿಂದ ಕಳೆದ ನಲವತ್ತು ವರ್ಷಗಳಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನವೊಂದರಲ್ಲಿಯೇ ಸುಮಾರು ನಲತ್ತೊಂಭತ್ತು ಸಾವಿರ ಜನರು ಸಾವನ್ನಪ್ಪಿದ್ದಾರೆ. ಫ್ಲೂ ಜ್ವರ ಎಂದು ಗೊತ್ತಾದ ತಕ್ಷಣ ವೈದ್ಯರು ನೀಡುವ ಚಿಕಿತ್ಸೆಗಳನ್ನು ಪಡೆದು ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳುವುದು ಅಗತ್ಯ.
4) ಶೀತರ ವೈರಸ್ ಗಾಳಿಯಲ್ಲಿ ಆರು ಅಡಿಗಳವರೆಗೂ ಹಾರಬಲ್ಲುದು:
ಒಂದು ವೇಳೆ ಶೀತಗ್ರಸ್ತ ವ್ಯಕ್ತಿ ಸೀನಿದರೆ ಕನಿಷ್ಟ ಆರು ಅಡಿಗಳ ಅಂತರದಲ್ಲಿರಿ. ಏಕೆಂದರೆ ಸೀನಿದ ಬಳಿಕ ದೇಹದಿಂದ ಹೊರಹೊಮ್ಮಿದ ವೈರಸ್ಸುಗಳು ಆರು ಅಡಿಯವರೆಗೂ ಹಾರುವ ಸಾಧ್ಯತೆ ಇದೆ. ಶೀತದ ವೈರಸ್ಸುಗಳು ಸಾಂಕ್ರಾಮಿಕವಾದುದರಿಂದ ಕೂಡಲೇ ಬೇರೆಯವರಿಗೆ ಹರಡುತ್ತದೆ. ಇದನ್ನು ತಡೆಯಲು ಸೀನು ಬಂದ ಕೂಡಲೇ ಕರವಸ್ತ್ರದಿಂದ ಮೂಗು ಮುಚ್ಚಿಕೊಳ್ಳುವುದು ಉತ್ತಮ. ಒಂದು ವೇಳೆ ಕರವಸ್ತ್ರ ಕೈಗೆತ್ತಿಕೊಳ್ಳಲೂ ಸಮಯಾವಕಾಶ ಇಲ್ಲದಿದ್ದರೆ ಬರಿಗೈಯನ್ನಾದರೂ ಮೂಗಿಗೆ ಅಡ್ಡವಿಟ್ಟುಕೊಳ್ಳುವುದು ಕ್ಷೇಮ. ಬಳಿಕ ಕೈಗಳನ್ನು ಸಾಧ್ಯವಾದಷ್ಟು ಬೇಗನೇ ತೊಳೆದುಕೊಳ್ಳಬೇಕು. ನೆನಪಿರಲಿ, ಈ ವೈರಸ್ಸಿಗೆ ಮಾನವ ದೇಹದಿಂದ ಹೊರಬಂದ ಬಳಿಕವೂ ಎರಡು ದಿನ ಜೀವಂತ ಇರುವ ಕ್ಷಮತೆ ಇದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಶೀತ, ಕೆಮ್ಮು ಉಪಟಳ ತಡೆಯುವ ಮನೆಮದ್ದು
5) ಮೂಗು ಸ್ವಚ್ಛಗೊಳಿಸಲೂ ಒಂದು ರೀತಿಯಿದೆ:
ಶೀತ ನೆಗಡಿಯಿಂದ ಮೂಗು ತುಂಬಿಕೊಂಡಿದ್ದರೆ ಆಗಾಗ್ಗೆ ಮೂಗನ್ನು ಖಾಲಿ ಮಾಡುತ್ತಿರಬೇಕು. ವಾಸ್ತವವಾಗಿ ಈ ದ್ರವ ನಮ್ಮ ದೇಹವನ್ನು ಅಕ್ರಮಿಸಿದ ವೈರಸ್ಸುಗಳನ್ನು ಹೊರದಬ್ಬಲು ನಮ್ಮ ರೋಗ ನಿರೋಧಕ ವ್ಯವಸ್ಥೆ ಕಲ್ಪಿಸಿರುವ ಸುರಕ್ಷಾ ವಿಧಾನ. ವೈರಸ್ಸುಗಳ ಹಾವಳಿ ಅತಿಯಾಗುತ್ತಿದ್ದಂತೆಯೇ ಮೂಗಿನ ಒಳಭಾಗದಿಂದ ಒಸರುವ ದ್ರವದ ಮೂಲಕ ವೈರಸ್ಸುಗಳನ್ನು ದೇಹದಿಂದ ಹೊರದಬ್ಬಲಾಗುತ್ತದೆ. ಇದರ ಅರಿವಿಲ್ಲದೇ ನಾವು ಈ ದ್ರವವನ್ನು ಮತ್ತೆ ಮತ್ತೆ ಒಳಗೆಳೆದುಕೊಳ್ಳುತ್ತೇವೆ.
ಇದು ತಪ್ಪು. ಈ ದ್ರವವನ್ನು ಆದಷ್ಟು ಬೇಗನೇ ಹೊರತೆಗೆಯಬೇಕು. ಮೊದಲು ಎಡಮೂಗನ್ನು ಒತ್ತಿ ಬಲಮೂಗಿನಿಂದ ಉಸಿರನ್ನು ಹೊರಬಿಡಬೇಕು. ಬಳಿಕ ಬಲಮೂಗನ್ನು ಮುಚ್ಚಿ ಎಡಮೂಗಿನಿಂದ ಉಸಿರನ್ನು ಬಿಡಬೇಕು. ದ್ರವವೆಲ್ಲಾ ಖಾಲಿಯಾಗುವವರೆಗೂ ಇದನ್ನು ಪುನರಾವರ್ತಿಸಬೇಕು. ಒಂದು ವೇಳೆ ಈ ದ್ರವವನ್ನು ಹೊರಹಾಕದೇ ಇದ್ದರೆ ಸೋಂಕು ಉಂಟಾಗಿ ಕಿವಿಯವರೆಗೂ ಸೋಂಕು ತಲುಪಬಹುದು.
6) ಫ್ಲೂ ಲಸಿಕೆ ಹಾಕಿಸಿಕೊಂಡಿದ್ದರೂ ಫ್ಲೂ ಬರುವ ಸಾಧ್ಯತೆ ಇದೆ:
ಕೆಲವರು ಫ್ಲೂ ಲಸಿಕೆ ಹಾಕಿಕೊಂಡಿದ್ದರೆ ಜ್ವರ ಬರುವುದಿಲ್ಲ ಎಂದು ನಂಬಿದ್ದಾರೆ. ಆದರೆ ಇದು ತಪ್ಪು. ಏಕೆಂದರೆ ಫ್ಲೂ ಜ್ವರ ಬರಲು ಕಾರಣವಾದ ವೈರಸ್ಸುಗಳಲ್ಲಿ ಕೆಲವನ್ನು ಮಾತ್ರ ಈ ಲಸಿಕೆ ತಡೆಯುತ್ತದೆ. ಒಂದು ವೇಳೆ ಬೇರೊಂದು ವೈರಸ್ಸು ಧಾಳಿ ಇಟ್ಟರೆ ಲಸಿಕೆ ಕೆಲಸಕ್ಕೆ ಬರುವುದಿಲ್ಲ. ಆದುದರಿಂದ ಲಸಿಕೆ ಹಾಕಿಸಿಕೊಂಡಿದ್ದರೂ ನಾವು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳನ್ನು ವಹಿಸಲೇ ಬೇಕು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಶೀತ, ಕೆಮ್ಮು, ಜ್ವರಕ್ಕೆ ಮನೆಮದ್ದು
7) ಶೀತಕ್ಕೆ ಮನೆಮದ್ದೇ ಲೇಸು:
ಶೀತ ಬಂದಾಗ ಮದ್ದು ಮಾಡಿದರೆ ಒಂದು ವಾರದಲ್ಲಿ ಗುಣವಾಗುತ್ತದೆ, ಇಲ್ಲದಿದ್ದರೆ ಏಳು ದಿನದ ಬಳಿಕ ಗುಣವಾಗುತ್ತದೆ ಎಂಬ ನಾಣ್ಣುಡಿಯಿದೆ. ಹಿಂದಿನಿಂದಲೂ ಹಿರಿಯರು ಶೀತಕ್ಕೆ ಮಾಡುತ್ತಾ ಬಂದಿರುವ ಮನೆಮದ್ದು ನಿಜವಾಗಿಯೂ ಪರಿಣಾಮಕಾರಿಯಾಗಿದೆ. ಬಿಸಿಬಿಸಿಯಾದ ಸೂಪ್ (ಚಿಕನ್ ಅಥವಾ ಟೊಮಾಟೋ) ಕುಡಿಯುವುದರಿಂದ, ಬಿಸಿ ಬಿಸಿ ಟೀ ಕುಡಿಯುವುದರಿಂದ ಶೀತ ಕಡಿಮೆಯಾಗುತ್ತದೆ.
ಶೀತದ ಬಗ್ಗೆ ಕೆಲವು ಮಾಹಿತಿಗಳು:
* ಶೀತ ಪ್ರತಿಬಾರಿಯೂ ಬೇರೆ ಬೇರೆ ವೈರಸ್ಸುಗಳಿಂದ ಬರುತ್ತದೆ. ಪ್ರತಿಬಾರಿಯ ಶೀತದ ಬಳಿಕ ದೇಹ ಆ ವೈರಸ್ಸಿಗೆ ಪ್ರತಿರೋಧವನ್ನು ನಿರ್ಮಿಸಿಕೊಳ್ಳುತ್ತದೆ. ಅಂತೆಯೇ ವಯಸ್ಸಾದಂತೆ ಶೀತಕ್ಕೆ ಕಾರಣವಾದ ಬಹುತೇಕ ವೈರಸ್ಸುಗಳಿಗೆ ದೇಹ ಪ್ರತಿರೋಧಶಕ್ತಿಯನ್ನು ಗಳಿಸಿಕೊಂಡುಬಿಟ್ಟಿರುತ್ತದೆ. ಆದುದರಿಂದ ಹೆಚ್ಚಾಗಿ ವೃದ್ಧರಿಗೆ ಶೀತವಾಗುವುದಿಲ್ಲ. ಅವರಿಗೆ ಶೀತವಾಗುವುದು ಅವರು ಇದುವರೆಗೆ ಹೋಗಿಲ್ಲದ ಊರಿಗೆ ಹೋದಾಗ ಮಾತ್ರ.
* ಶೀತವಾದ ಬಳಿಕ ಹೊರಬರುವ ಕಫ ಹಳದಿ ಬಣ್ಣಕ್ಕಿದ್ದರೆ ಅದು ನಮ್ಮ ಬಿಳಿರಕ್ತಕಣಗಳು ವೈರಸ್ಸುಗಳೊಂದಿಗೆ ಹೋರಾಡಿ ಪ್ರಾಣ ಅರ್ಪಿಸಿದ ಸಂಕೇತ
* ಮಕ್ಕಳಿಗೆ ಅತಿ ಹೆಚ್ಚಾಗಿ ಶೀತವಾಗುತ್ತದೆ. ಅವರ ಬಳಿಕ ಮಹಿಳೆಯರಿಗೆ ಹೆಚ್ಚಾಗಿ ಶೀತವಾಗುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನೆಗಡಿ ಸಮಸ್ಯೆ ಶಮನ ಮಾಡುವುದು ಹೇಗೆ?
* ಶೀತದ ವೈರಸ್ಸಿಗೆ ಕಣ್ಣಿನ ಮೂಲಕವೂ ದೇಹ ಪ್ರವೇಶಿಸಲು ಸಾಧ್ಯವಿದೆ.
* ವಿಟಮಿನ್ ಸಿ ಸೇವನೆಯಿಂದ ಶೀತ ಕಡಿಮೆಯಾಗುತ್ತದೆ ಎಂಬ ನಂಬಿಕೆಯನ್ನು ಈಗ ವೈದ್ಯಶಾಸ್ತ್ರ ಅಲ್ಲಗಳೆದಿದೆ. ಬಿಸಿನೀರಿನ ಸೇವನೆ ಹೆಚ್ಚು ಸೂಕ್ತ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
