Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಮುಟ್ಟಿನ ನೋವನ್ನು ತಡೆಯಲು ಪರಿಣಾಮಕಾರಿ ಸಲಹೆಗಳು
ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ.ಮಾರುಕಟ್ಟೆಯಲ್ಲಿ ಇದನ್ನು ತಡೆಯಲು ಸಾಕಷ್ಟು ಔಷಧಿಗಳು ದೊರಕುತ್ತವೆ ಆದರೆ ಇದರಿಂದ ಆರೋಗ್ಯಕ್ಕೆ ಅಡ್ಡ ಪರಿಣಾಮಗಳಾಗುತ್ತವೆ ಮತ್ತು ಮಹಿಳೆಯರ ಗರ್ಭ ಕೋಶದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
ಈ ಲೇಖನದಲ್ಲಿ ನಾವು ಅಡ್ಡ ಪರಿಣಾಮಗಳು ಇಲ್ಲದ ಸ್ವಾಭಾವಿಕವಾಗಿ ನೋವನ್ನು ಗುಣಪಡಿಸುವ ಮಾರ್ಗಗಳ ಬಗ್ಗೆ ಸಲಹೆ ನೀಡಿದ್ದೇವೆ.ಈ ವಿಧಾನದಿಂದ ಕೇವಲ ಹೊಟ್ಟೆ ನೋವು ಮಾತ್ರವಲ್ಲ ಆ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಇತರ ಸಮಸ್ಯೆಗಳಿಗೂ ಪರಿಹಾರ ದೊರಕುತ್ತದೆ. ಈ ವಿಧಾನಗಳನ್ನು ನೀವು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾಗಿದ್ದು ಮನೆಯಲ್ಲಿ ದೊರೆಯುವ ಪದಾರ್ಥಗಳಿಂದ ಇದನ್ನು ತಯಾರಿಸಿಕೊಳ್ಳಬಹುದು ಮತ್ತು ಖರ್ಚೂ ಕಡಿಮೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತಿಂಗಳ ಮುಟ್ಟಿನ ತಡವಾಗುವಿಕೆಗಾಗಿ ಮನೆಮದ್ದುಗಳು

ಶುಂಟಿ ಉಪಯೋಗಿಸಿ ನೋವನ್ನು ನಿಲ್ಲಿಸಿ:
ಒಂದು ಲೋಟ ನೀರಿನಲ್ಲಿ 29 ಗ್ರಾಂ ನಷ್ಟು ಶುಂಟಿ ಹಾಕಿ ಕುದಿಸಿ.ನಂತರ ಅರ್ಧದಷ್ಟಾದ ಆ ನೀರನ್ನು ಒಂದು ಲೋಟಕ್ಕೆ ಸೋಯಿಸಿ ಇಡಿ.ದಿನದಲ್ಲಿ 2 ಬಾರಿ ಈ ನೀರನ್ನು ಕುಡಿಯುತ್ತಾ ಬನ್ನಿ. ಮುಟ್ಟಾಗುವ 15 ದಿನ ಮೊದಲಿನಿಂದಲೇ ಈ ನೀರನ್ನು ಕುಡಿಯುತ್ತಾ ಬನ್ನಿ ಹೀಗೆ 2 ತಿಂಗಳು ಮಾಡಿದರೆ ಖಂಡಿತ ಮುಟ್ಟಿನ ಸಂದರ್ಭದಲ್ಲಿ ಕಾಡುವ ಹೊಟ್ಟೆ ನೋವನ್ನು ನಿವಾರಿಸಬಹುದು. ಮುಟ್ಟಿನ ಸಮಯದಲ್ಲಿ ಉಳಿದ ದಿನಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಶುಂಟಿ ಬಳಸಿ ಕುಡಿಯಿರಿ ಇದರಿಂದ ನೋವು ಕಡಿಮೆ ಆಗುತ್ತದೆ.

ಸಾಸಿವೆ ಉಪಯೋಗಿಸಿ ನೋವು ಹೋಗಲಾಡಿಸಿ:
ನೀರಿಗೆ ಸಾಸಿವೆಯನ್ನು ಹಾಕಿ ಚೆನ್ನಾಗಿ ಕುದಿಸಿ ನಂತರ ಇದರಲ್ಲಿ ಹತ್ತಿ ಬಟ್ಟೆಯನ್ನು ಅದ್ದಿ,ಹಿಂಡಿ,ಹೊಟ್ಟೆ ನೋವಿರುವಾಗ ಹೊಟ್ಟೆಯ ಮೇಲೆ ಈ ಬಟ್ಟೆಯನ್ನು ಹಾಕಿ ಇದರಿಂದ ಹೊಟ್ಟೆ ನೋವು ನಿವಾರಿಸಬಹುದು.

ಓಮಿನ ಕಾಳನ್ನು ಬಳಸಿ
ನೋವು ನಿವಾರಿಸಿ: ಬಿಸಿ ಹಾಲಿಗೆ ಅರ್ಧ ಚಮಚ ಅಜವಾನ ಅಥವಾ ಓಮಿನ ಕಾಳನ್ನು ಬಳಸಿ ದಿನದಲ್ಲಿ ಎರಡು ಬಾರಿ ಬೆಳಿಗ್ಗೆ ಮತ್ತು ಸಂಜೆ ಕುಡಿಯಿರಿ ಇದರಿಂದ ನೋವು ಕಡಿಮೆಯಾಗುತ್ತದೆ.15 ದಿನ ಮುಂಚಿನಿಂದಲೇ ಮುಟ್ಟಿನ ಸಮಯದವರೆಗೆ ತೆಗೆದುಕೊಳ್ಳಿ.

ಮೆಂತೆಯನ್ನು ಬಳಸಿ
ಹೊಟ್ಟೆ ನೋವು ನಿವಾರಿಸಿ: ಮೆಂತೆಯನ್ನು ನೀರಿನಲ್ಲಿ ಕುದಿಸಿ.ಮುಟ್ಟಿನ ಸಮಯದಲ್ಲಿ ದಿನದಲ್ಲಿ ಎರಡು ಬಾರಿ ಒಂದು ಲೋಟ ಕುಡಿಸಿದ ಮೆಂತೆ ನೀರನ್ನು ಕುಡಿಯಿರಿ ಮತ್ತು ನೋವು ನಿವಾರಿಸಿಕೊಳ್ಳಿ.

ಕಾಳು ಜೀರಿಗೆ ಬಳಸಿ
ನೋವು ಹೋಗಲಾಡಿಸಿಕೊಳ್ಳಿ:ಕಾಳುಜೀರಿಗೆಯನ್ನು ಎರಡು ಲೋಟ ನೀರಿನಲ್ಲಿ ಕುದಿಸಿ.ಇದು ಒಂದು ಲೋಟ ಆಗುವವರೆಗೆ ಕುದಿಸಿ ನಂತರ ಸೋಯಿಸಿ ದಿನದಲ್ಲಿ ಒಮ್ಮೆ ಕುಡಿಯಿರಿ.ಇದರಿಂದ ಹೊಟ್ಟೆ ನೋವು ಕಡಿಮೆ ಆಗುತ್ತದೆ.



Click it and Unblock the Notifications