Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ನೀವು ಮಿತಿಮೀರಿ ತಿನ್ನುವುದಕ್ಕೆ ಕಾರಣ ಏನು ಗೊತ್ತೇ?
ನೀವು ಮಿತಿಮೀರಿ ಏಕೆ ತಿನ್ನುತ್ತೀರಿ? ಹಾಗೆ ತಿನ್ನುವುದಕ್ಕೆ 6 ಕಾರಣಗಳು. ನೀವು ಮಿತಿಮೀರಿ ತಿನ್ನುದಕ್ಕೆ ಪ್ರಾಯಶಃ ಇಲ್ಲಿ ಕೊಟ್ಟಿರುವ ಕಾರಣಗಳಿರಬೇಕು: ನಿಮಗೆ ಇಷ್ಟವಾದ ಆಹಾರಗಳನ್ನು ಯಾವಾಗ ಕಂಡರೂ ನಿಮಗೆ ಒಂದು ತರಹ ಹುಚ್ಚು ಹಿಡಿಯುತ್ತದೆಯೇ? ಅಥವಾ ನೀವು ಇಷ್ಟಪಡುವ ಭಕ್ಷ್ಯಗಳನ್ನು ಕಂಡಾಗ ಯಾವುದು ತಿನ್ನಬೇಕೋ ಎಂದು ನಿರ್ಧರಿಸಲು ಸಾಧ್ಯವಾಗಲಿಲ್ಲವೆಂದು ಎಲ್ಲವನ್ನೂ ಬೇಕೆಂದು ಕೇಳುತ್ತೀರಾ.
ಟಿವಿ ನೋಡುತ್ತ ನೋಡುತ್ತಾ ಅತಿಯಾಗಿ ತಿನ್ನುತ್ತೀರಾ? ಅಥವ ನಿಮಗಿಷ್ಟವಿರುವ ಭಕ್ಷ್ಯ ಕಂಡಾಗ ಚೆನ್ನಾಗಿ ಸುಮ್ಮನೇ ತಿಂದುಬಿಡುತ್ತೀರೋ? ಸಂದರ್ಭ ಹೇಗೇ ಇರಲಿ, ಅತಿಯಾಗಿ ತಿನ್ನುವುದು ಮಾತ್ರ ಒಳ್ಳೆಯದಲ್ಲ.
ಅತಿಯಾಗಿ ತಿನ್ನುವ ಪ್ರಚೋದನೆಯಾದಾಗ ಅದನ್ನು ಗುರುತಿಸಿಕೊಂಡು ತಿನ್ನುವುದನ್ನು ನಿಯಂತ್ರಣಗೊಳಿಸಬೇಕು. ನಿಮಗೆ ಎಷ್ಟುಬೇಕೋ ಅಷ್ಟು ತಿನ್ನುವುದಕ್ಕಿಂತಾ ಅತಿಯಾಗಿ ತಿನ್ನಲು ಕಾರಣಗಳೇನು? ಮುಂದೆ ಓದಿ.
ಅತಿಯಾಗಿ ತಿನ್ನುವುದನ್ನು ನಿಯಂತ್ರಿಸುವುದು ಹೇಗೆ?

ಸ್ನೇಹಿತರೊಂದಿಗೆ ಸೇರಿದಾಗ
ಕೆಲವು ಸಂದರ್ಭಗಳಲ್ಲಿ ನೀವು ನಿಮ್ಮ ಆಹಾರದಮೇಲೆ ನಿಯಂತ್ರಣವಿಟ್ಟುಕೊಂಡಿದ್ದರೂ ಸಹ ಸ್ನೇಹಿತರ ಜೊತೆ ಸೇರಿದಾಗ ನಿಮಗರಿವಿಲ್ಲದೆಯೇ ಕರಿದ ಆಹಾರವನ್ನು ತಿನ್ನಲು ಪ್ರಚೊದನೆಯಾಗುವುದು. ಅಂತಹ ಸಂದರ್ಭದಲ್ಲಿ ನೀವು ನಿಮ್ಮ ಆರೋಗ್ಯದಬಗ್ಗೆ ಮತ್ತು ನಿಮ್ಮ ನಿಯಮಿತ ಆಹಾರಗಳ ಬಗ್ಗೆ ಯೋಚನೆ ಮಾಡಬೇಕು. ಹಾಗೆ ಮಾಡಿದ್ದಲ್ಲಿ ನಿಮ್ಮ ಸ್ನೇಹಿತರಿಗಲ್ಲದಿದ್ದರೂ ನಿಮಗೇ ಒಂದು ಉತ್ತಮ ಭಾವನೆ ಬರುತ್ತದೆ. ನಿಮ್ಮ ಮನಸ್ಸು ಗಟ್ಟಿಗೊಳಿಸಿ ನಿಮ್ಮ ನಿರ್ಧಾರವನ್ನು ಬದಲಿಸಬೇಡಿ. ಕ್ರಮೇಣ ನಿಮ್ಮ ಸ್ನೇಹಿತರೂ ಕೂಡ ನಿಮ್ಮ ನಿರ್ಧಾರಗಳನ್ನು ಒಪ್ಪಿಕೊಂಡು ಪ್ರಾಯಶಃ ನಿಮ್ಮನ್ನೇ ಅನುಸರಿಸಬಹುದು.

ತಿನ್ನಲು ಉಪಯೋಗಿಸುವ ತಟ್ಟೆಗಳು, ಇತ್ಯಾದಿ
ತಿನ್ನಲು ಬಳಸುವ ತಟ್ಟೆಗಳ ಗಾತ್ರ ಅತಿಯಾಗಿದ್ದು ಮತ್ತು ಆಕರ್ಷಣದಿಂದಿದ್ದರೆ ಮಿತಿಮೀರಿ ತಿನ್ನಲು ಒಂದು ಪ್ರಮುಖ ಕಾರಣವಾಗಿರಬಹುದು. ರೆಸ್ಟೊರೆಂಟ್‌ಗಳಲ್ಲಿರುವ ಆಕರ್ಷಕ ಮತ್ತು ಅಲಂಕಾರಿಕ ತಟ್ಟೆಗಳು ನಿಮಗೆ ಅತಿಯಾಗಿ ತಿನ್ನಲು ಪ್ರಚೋದಿಸಬಹುದು. ಆದರೆ ದಿನನಿತ್ಯ ಆಹಾರ ಸೇವನೆಗೆ ಆದರ್ಶವಾಗಿ ಮಧ್ಯಮ ಅಥವ ಇನ್ನೂ ಸ್ವಲ್ಪ ಚಿಕ್ಕದಿದ್ದರೆ ಉತ್ತಮ. ಹೀಗೆ ಹೇಳಿದಂತೆ ಬದಲಾವಣೆ ಮಾಡಿ ಅದರಿಂದ ನಿಮ್ಮ ಆಹಾರ ಸೇವನೆಯ ಮೇಲೆ ಆಗುವ ಪರಿಣಾಮ ನೋಡಿ.

ತಿಂದದ್ದನ್ನು ಜೀರ್ಣಿಸಿಕೊಳ್ಳುವುದು
ಹೆಚ್ಚು ಸಂದರ್ಭಗಳಲ್ಲಿ ನಮಗೆ ಸುಸ್ತಿನ ಲಕ್ಷಣಗಳಿದ್ದಾಗ ಅವನ್ನು ಹಸಿವಿನಿಂದಾಗಿದೆ ಅಂದು ತಪ್ಪಗಿ ಕಾಣುತ್ತದೆ. ನೀವು ಪ್ರತಿ ರಾತ್ರಿ ಸಾಕಷ್ಟು , ಅಂದರೆ ಆರರಿಂದ ಎಂಟು ಗಂಟೆಗಳ ಕಾಲ, ನಿದ್ರೆ ಮಾಡಲು ಖಚಿತಪಡಿಸಿಕೊಳ್ಳಿ. ಹಾಗೆಯೇ ನಿಮಗೆ ಎಷ್ಟುಬಾರಿ ದಣಿದದಂತೆ ಆಗುತ್ತದೆ ಎಂಬ ಮಾಹಿತಿಯನ್ನು ಬರೆದಿಟ್ಟುಕೊಳ್ಳಿ. ಹೀಗೆ ಬರೆದಿಟ್ಟುಕೊಂಡಿದ್ದನ್ನು ವಿಶ್ಲೇಷಣ ಮಾಡಿದಾಗ ನೀವು ಜಂಕ್ ಅಹಾರಗಳ ಬದಲು ಆರೋಗ್ಯಕರ ಆಹಾರಗಳನ್ನು ತಿನ್ನಲು ಅವಕಾಶವಾಗುತ್ತದೆ.

ಅತಿ ಬೇಗ ಬೇಗ ತಿನ್ನುವುದು
ನೀವು ಆಹಾರವನ್ನು ಗಬಗಬನೆ ತಿಂದು ಹತ್ತು ನಿಮಿಷಗಳೊಳಗೆ ಮುಗಿಸುತ್ತೀರಾ? ನೀವು ಯಾವ ಊಟವನ್ನು ಇಪ್ಪತ್ತು ನಿಮಿಷಗಳೊಳಗೆ ತಿಂದು ಮುಗಿಸಿದರೆ ಅದು ಮಿತಿಮೀರಿ ಊಟಮಾಡುವ ಅಪಾಯಕ್ಕೆ ಒಳಗಾಗುತ್ತೀರಿ. ನಿಧಾನವಾಗಿ ಪ್ರತಿ ತುತ್ತಿನ ರುಚಿಯನ್ನು ಸವಿದು ಚೆನ್ನಾಗಿ ಅಗಿಯಿರಿ ಮತ್ತು ಪ್ರತಿ ಬಾರಿ ತಿಂದಾಗಲೂ ಫೋರ್ಕ್ ಮತ್ತು ಸ್ಪೂನ್ ಅವುಗಳನ್ನು ಕೆಳಗಿಟ್ಟು ಆಹಾರದ ಪ್ರತಿ ತುತ್ತಿನ ಸವಿಯನ್ನು ಅನುಭವಿಸಿ.

ತೀರಾ ಬೇಸರಿಕೆಯಾಗುವುದು
ಎಷ್ಟುಬಾರಿ ನಿಮಗೆ ಬೇಸರವಾದಾಗ ಟಿವಿ ಮುಂದೆ ಕುಳಿತು ಹುರುಕು-ಮುರುಕು ತಿಂಡಿಗಳನ್ನು ತಿನ್ನಲು ಆಸೆಪಟ್ಟಿದ್ದೀರಾ? ಆಫೀಸ್ ಕೆಲಸದಮಧ್ಯದಲ್ಲೂ ಸಹ ಈ ರೀತಿ ಅನುಭವವಾಗಿ ಏನಾದರೂ ತಿನ್ನಲು ಹವಣಿಸಿದ್ದೀರಿ? ತಜ್ಞರ ಅಭಿಪ್ರಾಯದ ಪ್ರಕಾರ ಲಕ್ಷಾಂತರ ಜನರು ಸಾಮಾನ್ಯವಾಗಿ ಇಂತಹ ಸಮಯದಲ್ಲಿ ಅಥವಾ ಏನೂ ಬೇರೆ ಆಸಕ್ತಿದಾಯಕ ಕೆಲಸವಿಲ್ಲದ್ದಾಗ ಏನನ್ನಾದರೂ ತಿನ್ನಲು ಹವಣಿಸುತ್ತಾರೆ. ನೀವು, ಮನೆಯಲ್ಲಾಗಲಿ ಅಥವ ಅಫೀಸ್‌ನಲ್ಲಿಯಾಗಲಿ, ಇಂತಹ ಸಮಯ ಬಂದಾಗ ಅದನ್ನು ಗುರುತಿಸಿಕೊಳ್ಳಿ. ನಿಮ್ಮ ಕೆಲಸದಲ್ಲಿ ನಿರತವಾಗಿ ತೊಡಗಿಸಿಕೊಂಡು ಮಿತಿಮೀರಿ ತಿನ್ನಲು ಅವಕಾಶಮಾಡಿಕೊಳ್ಳಬೇಡಿ.

ನಿರ್ಜಲೀಕರಣ
ನೀವು ಸರಿಯಾಗಿ ದ್ರವಗಳು, ಅಂದರೆ ನೀರು ಇತ್ಯಾದಿ, ಅವುಗಳನ್ನು ತೆಗೆದುಕೊಳ್ಳದ್ದಿದ್ದಲ್ಲಿ ಅತಿಯಾಗಿ ತಿನ್ನಬೇಕೆನಿಸುತ್ತದೆ. ದಿನವಿಡೀ ಆಗಾಗ್ಗೆ ನೀರು ಕುಡಿಯುವುದನ್ನು ಖಚಿತಪಡಿಸಿಕೊಳ್ಳಿ. ಊಟಕ್ಕೆ ಮುಂಚೆ, ಬೆಳಗ್ಗೆ ಎದ್ದ ತಕ್ಷಣ ಮತ್ತು ಮಲಗುವ ಮುನ್ನ ಒಂದು ಲೋಟ ನೀರನ್ನು ಕುಡಿಯುವ ಅಭ್ಯಾಸಮಾಡಿಕೊಳ್ಳಿ.



Click it and Unblock the Notifications









