Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಲಸಂದೆ ಕಾಳಿನ 6 ಪ್ರಮುಖ ಗುಣ ವೈಶಿಷ್ಟ್ಯಗಳು
ಅಲಸಂದೆ ಕಾಳುಗಳು ಲೆಗ್ಯೂಮ್ ಅಂದರೆ ದ್ವಿದಳ ಧಾನ್ಯದ ಕುಟುಂಬಕ್ಕೆ ಸೇರಿದ ಧಾನ್ಯವಾಗಿದೆ. ಇದು ಸಾಮಾನ್ಯವಾಗಿ ಭಾರತದ ಎಲ್ಲಾ ಕಡೆಯಲ್ಲಿ ಬೆಳೆಯಲಾಗುತ್ತದೆ ಹಾಗು ಜನರನ್ನು ಇದನ್ನು ಸೇವಿಸಲು ತುಂಬಾ ಇಷ್ಟ ಪಡುತ್ತಾರೆ. ಇದನ್ನು ಉತ್ತರ ಭಾರತದಲ್ಲಿ ಚಾವ್ಲಿ ಎಂದು ಕರೆಯುತ್ತಾರೆ.
ಇದರ ರುಚಿಯ ಜೊತೆಗೆ ಇದರಲ್ಲಿರುವ ಸಮೃದ್ಧವಾದ ಪೋಷಕಾಂಶಗಳು ದೇಹದಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತವೆ. ಇಲ್ಲಿ ನಾವು ಇವುಗಳನ್ನು ತಿನ್ನಲು ಇರುವ 6 ಆರೋಗ್ಯಕಾರಿ ಕಾರಣಗಳನ್ನು ಪಟ್ಟಿ ಮಾಡಿದ್ದೇವೆ ಓದಿಕೊಳ್ಳಿ
11 ಅತ್ಯುತ್ತಮ ಸರ್ವಕಾಲಿಕ ಫಿಟ್ನೆಸ್ ರಹಸ್ಯಗಳು

ನಿಮ್ಮ ದೇಹದ ತೂಕವನ್ನು ಇಳಿಸಲು ನೆರವಾಗುತ್ತದೆ
ಈ ಅಲಸಂದೆಗಳಲ್ಲಿ ಕ್ಯಾಲೋರಿ ಮತ್ತು ಕೊಬ್ಬು ಕಡಿಮೆ ಪ್ರಮಾಣದಲ್ಲಿರುತ್ತವೆ. ಹೀಗಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳಲು ಇಚ್ಛಿಸುವವರಿಗೆ ಇದು ಹೇಳಿ ಮಾಡಿಸಿದ ಆಹಾರವಾಗಿದೆ. ಜೊತೆಗೆ ಅಲಸಂದೆಯಲ್ಲಿ ಡಯೇಟರಿ ಫೈಬರ್‌ಗಳು ಹೆಚ್ಚಿನ ಅಂಶದಲ್ಲಿ ಇರುತ್ತವೆ. ಇವು ಸಹ ದೀರ್ಘಕಾಲದವರೆಗೆ ನಿಮಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡಿ, ತೂಕ ಇಳಿಸಿಕೊಳ್ಳಲು ಸಹಕರಿಸುತ್ತದೆ.

ಮಧುಮೇಹಿಗಳಿಗೆ ಒಳ್ಳೆಯದು
ಅಲಸಂದೆಗಳಲ್ಲಿ ಗ್ಲಿಸೆಮಿಕ್ ಇಂಡೆಕ್ಸ್ (ಜಿಐ) ಕಡಿಮೆ ಪ್ರಮಾಣದಲ್ಲಿರುತ್ತದೆ. ಇದು ಇನ್ನಿತರ ದ್ವಿದಳ ಧಾನ್ಯಗಳು ಮತ್ತು ಲೆಂಟಿಲ್‍ಗಳಿಗೆ ಹೋಲಿಸಿದರೆ ತುಂಬಾ ಕಡಿಮೆ. ಜಿಐ ಕಡಿಮೆ ಇರುವ ಆಹಾರಗಳು ಮಧುಮೇಹದಿಂದ ಬಳಲುತ್ತಿರುವವರಿಗೆ ಒಳ್ಳೆಯದು, ಏಕೆಂದರೆ ಈ ಆಹಾರಗಳು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಸಾಮಾನ್ಯ ಪ್ರಮಾಣದಲ್ಲಿ ಇರಿಸಲು ನೆರವಾಗುತ್ತದೆ.

ಇನ್‍ಫೆಕ್ಷನ್‍ಗಳಿಂದ ರಕ್ಷಿಸುತ್ತದೆ
ವಿಟಮಿನ್ ಎ ನಂತಹ ಆಂಟಿಆಕ್ಸಿಡೆಂಟ್‍ಗಳ ಸಮೃದ್ಧ ಆಕರವಾಗಿರುವ ಅಲಸಂದೆಗಳು ವಿವಿಧ ಬಗೆಯ ರೋಗರುಜಿನಗಳನ್ನು ನಮ್ಮನ್ನು ಕಾಪಾಡುವ ಸಾಮಾರ್ಥ್ಯವನ್ನು ತಮ್ಮಲ್ಲಿ ಅಡಗಿಸಿಕೊಂಡಿದೆ. ಈ ದ್ವಿದಳ ಧಾನ್ಯಗಳನ್ನು ಸೇವಿಸುವುದರಿಂದ ಆರೋಗ್ಯವನ್ನು ಸೂಕ್ತ ಪ್ರಮಾಣದಲ್ಲಿ ಕಾಪಾಡಿಕೊಳ್ಳಲು ನೆರವಾಗುವುದರ ಜೊತೆಗೆ ದೇಹದಲ್ಲಿರುವ ವಿವಿಧ ಬಗೆಯ ವಿಷಕಾರಿ ಅಂಶಗಳನ್ನು ಹೊರಗೆ ಹಾಕಲು ಮತ್ತು ಆಮ್ಲಜನಕ ರಹಿತ ಫ್ರೀರಾಡಿಕಲ್‌ಗಳನ್ನು ದೇಹದಿಂದ ಹೊರದಬ್ಬಲು ನೆರವಾಗುತ್ತದೆ.

ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ
ಅಲಸಂದೆಗಳು ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಹೃದ್ರೋಗ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲು ಸಹಕರಿಸುತ್ತವೆ. ಪೊಟಾಶಿಯಂ ಮತ್ತು ಮ್ಯಗ್ನಿಶಿಯಂ ಮತ್ತು ಲಿಗ್ನಿನ್ ( ಫೈಟೋಇಸ್ಟ್ರೊಜೆನ್) ಎಂಬ ಫ್ಲೆವೊನೊಯ್ಡ್‌ಗಳು ಮತ್ತು ಖನಿಜಾಂಶಗಳು ಅಲಸಂದೆಯನ್ನು ಹೃದಯದ ಆರೋಗ್ಯ ಸ್ನೇಹಿ ಧಾನ್ಯವಾಗಿ ಮಾಡಿವೆ.

ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ
ಅಲಸಂದೆಗಳಲ್ಲಿ ನಾರಿನಾಂಶ ಮತ್ತು ಪ್ರೊಟೀನ್ ಅಂಶಗಳು ಹೆಚ್ಚಾಗಿ ಇರುವುದರಿಂದ ಇವು ಜಠರದ ಮೇಲೆ ಉತ್ತಮ ಪರಿಣಾಮವನ್ನು ಬೀರಿ, ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ನಾರು ಸಾಮಾನ್ಯವಾದ ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಪರಿಹರಿಸಲು ಸಹಕರಿಸುತ್ತದೆ, ಹೊಟ್ಟೆಯ ಉಬ್ಬಸ ಹಾಗು ಊತಗಳನ್ನು ನಿವಾರಿಸುತ್ತದೆ ಮತ್ತು ಆಹಾರವು ಚೆನ್ನಾಗಿ ಜೀರ್ಣಗೊಳ್ಳಲು ಸಹಕರಿಸುತ್ತದೆ.

ಆರೋಗ್ಯಕಾರಿ ತ್ವಚೆಗೆ ಒಳ್ಳೆಯದು
ಅಲಸಂದೆಯಲ್ಲಿರುವ ಅಧಿಕ ಪೋಷಕಾಂಶಗಳು ಆರೋಗ್ಯಕರವಾದ ತ್ವಚೆಯನ್ನು ಕಾಪಾಡಿಕೊಳ್ಳಲು ನೆರವಾಗುತ್ತವೆ. ಇದು ತ್ವಚೆಯ ಸಮಸ್ಯೆಯನ್ನು ಸರಿ ಪಡಿಸುವ ಗುಣಗಳನ್ನು ತನ್ನಲ್ಲಿ ಹೊಂದಿದೆ. ಇದಕ್ಕೆ ಕಾರಣ ಈ ದ್ವಿದಳ ಧಾನ್ಯಗಳಲ್ಲಿರುವ ವಿಟಮಿನ್ ಎ ಮತ್ತು ಸಿ ಗಳ ಅಸ್ತಿತ್ವದಿಂದಾಗಿ, ಅಲಸಂದೆಯು ನಮ್ಮ ದೇಹದಲ್ಲಿರುವ ತ್ವಚೆಯ ಕೋಶಗಳನ್ನು ಫ್ರೀ ರಾಡಿಕಲ್‍ಗಳ ಹಾನಿಯಿಂದ ರಕ್ಷಿಸುತ್ತದೆ.



Click it and Unblock the Notifications