Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ತುಳಸಿಯ ಅನಿರೀಕ್ಷಿತ ಅಡ್ಡಪರಿಣಾಮಗಳ ಬಗ್ಗೆ ತಿಳಿದಿದೆಯೇ?
ತುಳಸಿಯಲ್ಲಿ ಎಲ್ಲಾ ರೋಗಗಳನ್ನು ನಿವಾರಿಸುವ ಶಕ್ತಿಯಿದೆ ಎಂದು ನೀವು ಕೇಳಿರಬಹುದು. ಅದರ ಲಾಭಗಳನ್ನು ಗಣನೆಗೆ ತೆಗೆದುಕೊಂಡು ಇದು ಎಷ್ಟು ನಿಜ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಬಾಲ್ಯದಿಂದಲೂ ನಮ್ಮ ತಾಯಿ ಅಥವಾ ಅಜ್ಜಿ ತುಳಸಿಯ ಅದ್ಭುತ ಆರೋಗ್ಯ ಲಾಭಗಳ ಬಗ್ಗೆ ನಮಗೆ ಹೇಳುತ್ತಲೇ ಇದ್ದಾರೆ. ನಾವು ಇದನ್ನು ಕೇಳಿ ತಲೆಯಾಡಿಸಿ ಎಲ್ಲವನ್ನು ನಂಬಿದ್ದೇವೆ.
ತುಳಸಿ ನಮ್ಮ ಆರೋಗ್ಯಕ್ಕೆ ಅದ್ಭುತವಾಗಿ ನೆರವಾಗುತ್ತದೆ. ಈ ಔಷಧಿಯು ಆಯುರ್ವೇದದಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ ಮತ್ತು ಇದರ ಆರೋಗ್ಯಕಾರಿ ಗುಣಗಳ ಬಗ್ಗೆ ತಿಳಿದುಕೊಳ್ಳಲೇಬೇಕು. ಆದರೆ ಕೆಲವೊಂದು ವಿಷಯಗಳು ನಿಮಗೆ ತಿಳಿಯದೆ ಇರಬಹುದು. ವಿಶ್ವದೆಲ್ಲೆಡೆ ಪ್ರಶಂಸೆ ಪಡೆದಿರುವ ಈ ಔಷಧಿಯ ಗಿಡದಲ್ಲೂ ಕೆಲವೊಂದು ಅಡ್ಡಪರಿಣಾಮಗಳಿವೆ.
*ಯುಜೆನೋಲ್ ಓವರ್‌ಡೋಸ್

ಯುಜೆನೋಲ್ ತುಳಸಿಯಲ್ಲಿರುವ ಮೊದಲ ಅಂಶ. ಹೆಚ್ಚಿನ ತುಳಸಿ ಸೇವನೆಯಿಂದಾಗಿ ಯುಜೆನೋಲ್ ಓವರ್ ಡೋಸ್ ಆಗುತ್ತದೆ. ಅತಿಯಾಗಿ ಯುಜೆನೋಲ್ ಸೇವಿಸಿದರೆ ಅದು ವಿಷಕಾರಿಯಾಗಲೂಬಹುದು. ಕ್ಲೋವ್ ಸಿಗರೇಟ್ ಮತ್ತು ಇತರ ಕೆಲವು ಆಹಾರದ ರುಚಿಗೆ ಬಳಸುವ ವಸ್ತುಗಳಲ್ಲಿ ಯುಜೆನೋಲ್ ಕಂಡುಬರುತ್ತದೆ.
ಲಕ್ಷಣಗಳು
ಕೆಮ್ಮುವಾಗ ರಕ್ತ ಬರುವುದು, ವೇಗದ ಉಸಿರಾಟ ಮತ್ತು ಮೂತ್ರದಲ್ಲಿ ರಕ್ತ.
*ರಕ್ತ ತೆಳುವಾಗುವುದು
ನಮ್ಮ ದೇಹದಲ್ಲಿರುವ ರಕ್ತವನ್ನು ತೆಳುವಾಗಿಸುವ ಗುಣ ತುಳಸಿಯಲ್ಲಿದೆ. ಯಾವುದೇ ಹೆಪ್ಪುಗಟ್ಟಿಸುವ ಔಷಧಿಗಳಿದ್ದರೆ ಆಗ ತುಳಸಿ ತಿನ್ನಬೇಡಿ.
ಹೇಗೆ?
ರಕ್ತ ತೆಳುವಾಗಿಸುವ ಔಷಧಿಗಳಾದ ವಾರ್ಫರಿನ್ ಮತ್ತು ಹೆಪಾರಿನ್ ತೆಗೆದುಕೊಳ್ಳುತ್ತಿದ್ದರೆ ತುಳಸಿ ಸೇವಿಸಬೇಡಿ. ತುಳಸಿಯು ಈ ಔಷಧಿಗಳ ತೀವ್ರತೆಯನ್ನು ಹೆಚ್ಚಿಸಿ ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗಬಹುದು.
ಲಕ್ಷಣಗಳು?
ಹಿಸುಕುವಿಕೆ ಮತ್ತು ದೀರ್ಘ ಕಾಲ ರಕ್ತ ಸೋರುವಿಕೆ.
*ಹೈಪೊಗ್ಲಿಕ್ಯಾಮಿಯಾ
ಹೈಪೊಗ್ಲಿಕ್ಯಾಮಿಯಾ ರಕ್ತದಲ್ಲಿನ ಸಕ್ಕರೆ ಮಟ್ಟವು ಕಡಿಮೆಯಿರುವ ಒಂದು ಅಸ್ವಾಭಾವಿಕ ಪರಿಸ್ಥಿತಿ. ಇದು ರೋಗವಲ್ಲದಿದ್ದರೂ ಆರೋಗ್ಯ ಸಮಸ್ಯೆಯ ಲಕ್ಷಣ. ಹೇಗೆ? ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಿರುವವರು ಇದನ್ನು ಕಡಿಮೆ ಮಾಡಲು ತುಳಸಿ ಸೇವಿಸುತ್ತಾರೆ. ಆದರೆ ಡಯಾಬಿಟಿಸ್ ಅಥವಾ ಹೈಪೊಗ್ಲಿಕ್ಯಾಮಿಯಾದಿಂದ ಬಳಲುತ್ತಿರುವ ವ್ಯಕ್ತಿಗಳು ತುಳಸಿ ಸೇವನೆ ಮಾಡಿದರೆ ಅವರ ರಕ್ತದಲ್ಲಿನ ಸಕ್ಕರೆ ಮಟ್ಟವು ಮತ್ತಷ್ಟು ಕಡಿಮೆಯಾಗಬಹುದು. ಇದು ತುಂಬಾ ಅಪಾಯಕಾರಿ.
ಲಕ್ಷಣಗಳು?
ತಲೆತಿರುಗುವಿಕೆ, ಹಸಿವು, ನಿಶ್ಯಕ್ತಿ ಮತ್ತು ಮುಂಗೋಪ
ಫಲವತ್ತತೆ ಮೇಲೆ ಪರಿಣಾಮ
ತುಳಸಿ ಪುರುಷರಲ್ಲಿ ಫಲವತ್ತತೆಗೆ ಅಡ್ಡಿಯಾಗಬಹುದು. ಪುರುಷ ಮೊಲಗಳ ಮೇಲೆ ನಡೆಸಿರುವ ಪರೀಕ್ಷೆಯಲ್ಲಿ ಮೊಲಗಳನ್ನು ಪರೀಕ್ಷೆ ಮತ್ತು ಸಾಮಾನ್ಯ ವಿಭಾಗವೆಂದು ಗುರುತಿಸಲಾಗಿದೆ. ಪರೀಕ್ಷೆಗೆ ಒಳಪಟ್ಟ ಮೊಲಗಳಿಗೆ 30 ದಿನಗಳ ಕಾಲ ತಲಾ ಎರಡು ಗ್ರಾಂನಂತೆ ತುಳಸಿ ಎಲೆಗಳನ್ನು ನೀಡಲಾಯಿತು. ಈ ಮೊಲಗಳಲ್ಲಿ ವೀರ್ಯದ ಪ್ರಮಾಣ ಕಡಿಮೆಯಾಗುವುದು ಕಂಡುಬಂತು.
*ಗರ್ಭಿಣೆ ಮಹಿಳೆಯರಿಗೆ ಪ್ರತಿಕೂಲ
ಅತಿಯಾಗಿ ತುಳಸಿ ಸೇವನೆಯಿಂದ ಗರ್ಭಿಣಿ ಮಹಿಳೆ ಮತ್ತು ಮಗುವಿನ ಮೇಲೆ ದೀರ್ಘಾವಧಿ ಪರಿಣಾಮ ಉಂಟುಮಾಡಬಹುದು. ಗರ್ಭಿಣಿ ಮಹಿಳೆಯರಲ್ಲಿ ತುಳಸಿಯು ಪ್ರತಿಕೂಲವನ್ನು ಉಂಟುಮಾಡಬಹುದು.
ತುಳಸಿಯು ಗರ್ಭಿಣಿ ಮಹಿಳೆಯರಲ್ಲಿ ಗರ್ಭಾಶಯದ ಕುಗ್ಗುವಿಕೆಯನ್ನು ಉತ್ತೇಜಿಸಬಹುದು. ಇದು ಮಗುವಿನ ಜನನದ ವೇಳೆ ಸಮಸ್ಯೆಗಳನ್ನು ಉಂಟುಮಾಡಬಹುದು.
ಲಕ್ಷಣಗಳು?
ಬೆನ್ನುನೋವು, ಸೆಳೆತ, ಅತಿಸಾರ ಮತ್ತು ರಕ್ತಸ್ರಾವ.
ನೈಸರ್ಗಿಕವಾದ ಯಾವುದೇ ವಸ್ತುವಾದರೂ ಅದರಲ್ಲಿ ಕೆಲವೊಂದು ಅಡ್ಡಪರಿಣಾಮಗಳಿರಬಹುದು. ಕೆಲವೊಂದು ರೋಗಗಳಿಗೆ ಇದು ಔಷಧಿಯಾಗಬಹುದು ಅಥವಾ ನಿವಾರಕವಾಗಬಹುದು. ಆದರೆ ಅದರಲ್ಲಿನ ಅಡ್ಡಪರಿಣಾಮಗಳನ್ನು ಕಡೆಗಣಿಸುವಂತಿಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications















