ಈರುಳ್ಳಿಯನ್ನು ಸೇವಿಸಲು ನಿಮಗಿರುವ 5 ಕಾರಣಗಳು

By Gururaja Achar

ಹಸಿಯೇ ಇರಲಿ ಅಥವಾ ಬೇಯಿಸಿದ್ದೇ ಆಗಿರಲಿ, ಈರುಳ್ಳಿಯು ಅತ್ಯ೦ತ ಸ್ವಾಧಿಷ್ಠಭರಿತವಾದುದಾಗಿದ್ದು, ಈರುಳ್ಳಿಯನ್ನು ಹೆಚ್ಚಾಗಿ ಸೇವಿಸುವ ಜನರಿಗೆ, ಈರುಳ್ಳಿ ರಹಿತವಾದ ಆಹಾರಪದಾರ್ಥಗಳನ್ನು ಸೇವಿಸುವುದನ್ನು ಕಲ್ಪಿಸಿಕೊಳ್ಳಲೂ ಸಹ ಬಲು ಕಷ್ಟವಾಗುತ್ತದೆ.

ಆರೋಗ್ಯದ ದೃಷ್ಠಿಯಿ೦ದಲೂ ಕೂಡ, ಈರುಳ್ಳಿಯು ಅತ್ಯುತ್ತಮವಾದ ಆಹಾರ ಪದಾರ್ಥವಾಗಿದೆ. ಇದಕ್ಕೆ ಪೂರಕವಾದ ಕೆಲವು ಕಾರಣಗಳನ್ನು ಈ ಕೆಳಗೆ ನೀಡಲಾಗಿದೆ.

5 reasons you need to eat onions

1. ನಿಮ್ಮ ಹೃದಯವನ್ನು ಆರೋಗ್ಯವಾಗಿಡುತ್ತದೆ:
ಅನೇಕ ವಿಧದ ಹೃದ್ರೋಗಗಳಿಗೆ ಕೊಲೆಸ್ಟೆರಾಲ್ ಮೂಲ ಕಾರಣವಾಗಿದ್ದು, ಅದರಲ್ಲೂ ಇಂದಿನ ದಿನಮಾನಗಳಲ್ಲಿ ಹೃದ್ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿರುವ ಈ ಸಂದರ್ಭದಲ್ಲಂತೂ ಕೊಲೆಸ್ಟೆರಾಲ್ ಮಟ್ಟವನ್ನು ನಿಯoತ್ರಣದಲ್ಲಿಡುವುದು ಅತೀ ಅವಶ್ಯಕವಾಗಿದೆ. ಈರುಳ್ಳಿಗಳು ಗಂಧಕದ ಸಂಯುಕ್ತದಿಂದ ಸಮೃದ್ಧವಾಗಿದ್ದು, ಅವು ರಕ್ತದಲ್ಲಿನ ಕೊಲೆಸ್ಟೆರಾಲ್ ಹಾಗೂ triglyceride ಗಳ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತವೆ. ಇತರ 8 ಪ್ರಾಕೃತಿಕ ಕೊಲೆಸ್ಟೆರಾಲ್ ನಿಯಂತ್ರಕಗಳ ಬಗ್ಗೆಯೂ ತಿಳಿದುಕೊಳ್ಳಿರಿ.

2. ನಿಮ್ಮ ರೋಗನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ:
ಅನ್ನಾಂಗಗಳು ಮತ್ತು antioxidants, ಅದರಲ್ಲೂ ವಿಶೇಷವಾಗಿ ನೀರುಳ್ಳಿಯಲ್ಲಿರುವ C ಅನ್ನಾಂಗವು ನಿಮ್ಮ ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ವೈದ್ಯರನ್ನು ದೂರವಿರಿಸಲು ನೆರವಾಗುತ್ತದೆ. ಸುಧಾರಿತ ರೋಗನಿರೋಧಕ ವ್ಯವಸ್ಥೆಯ ಕಾರಣದಿಂದ ನಿಮ್ಮ ಶರೀರವು ರೋಗಗಳ ವಿರುದ್ಧ ಅಂತರಿಕ ನಿರೋಧಕ ಶಕ್ತಿಯನ್ನು ಹೊಂದುವುದರಿಂದ, ನಿಮ್ಮ ಶರೀರವು ಒಂದಷ್ಟು ರೋಗಗಳು ಮತ್ತು ಸೋಂಕುಗಳನ್ನು ಪರಿಣಾಮಕಾರಿಯಾಗಿ ದೂರವಿಡಬಲ್ಲದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಸ್ಪ್ರಿಂಗ್ ಈರುಳ್ಳಿ ತಿನ್ನಿ, 12 ಆರೋಗ್ಯ ಲಾಭ ಪಡೆಯಿರಿ

3. ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ:
ಈರುಳ್ಳಿಗಳಲ್ಲಿರುವ Quercetin ಎಂಬ ಸಂಯುಕ್ತವು ಒಂದು ನಿದ್ರಾಕಾರಕವಾಗಿದ್ದು, ಇದು ನೋವು, ಖಿನ್ನತೆ, ಮತ್ತು ಉದ್ವೇಗಗಳನ್ನು ಕಡಿಮೆ ಮಾಡಲು ನೆರವಾಗುತ್ತವೆ. ಈ ಕಾರಣದಿಂದ, ಒಂದು ವೇಳೆ, ನೀವು ನಿಮ್ಮ ಉದ್ಯೋಗದ ವೇಳೆ ಅತೀ ಕಠಿಣವಾಗಿ ದುಡಿದಿದ್ದರೆ, ಅಂದು ನೀವು ನಿಮ್ಮ ಆಹಾರದೊಂದಿಗೆ ನೀರುಳ್ಳಿಯ ಕೆಲವು ಹಸಿಯಾದ ಚೂರುಗಳನ್ನು ಸೇವಿಸಲು ಪ್ರಯತ್ನಿಸಿರಿ. ನಿದ್ರಾಹೀನತೆಯಿಂದ ಬಳಲುವವರೂ ಕೂಡ ಇದರಿಂದ ಪ್ರಯೋಜನವನ್ನು ಪಡೆಯಬಹುದು.

4. ಕ್ಯಾನ್ಸರ್ ನಿಂದ ರಕ್ಷಿಸುತ್ತದೆ:
ಶರೀರದ ಜೀವಕೋಶಗಳ free radical ಗಳಿಗೆ ಉಂಟಾಗುವ ಹಾನಿಯಿಂದಾಗಿ ಸಾಮಾನ್ಯವಾಗಿ ಕ್ಯಾನ್ಸರ್ ರೋಗವು ತಲೆದೋರುತ್ತದೆ. ನೀರುಳ್ಳಿಗಳಲ್ಲಿರುವ ಆಂಟಿಆಕ್ಸಿಡೆಂಟ್ ಗಳು ಈ ಹಾನಿಯನ್ನು ತಡೆಗಟ್ಟುವ ಮೂಲಕ, ನೀರುಳ್ಳಿಯನ್ನು ಕ್ಯಾನ್ಸರ್ ಅನ್ನು ದೂರವಿರಿಸುವ ಒಂದು ಆರೋಗ್ಯಕರ ಅಹಾರಪದಾರ್ಥವನ್ನಾಗಿ ಮಾಡುತ್ತವೆ. ಕ್ಯಾನ್ಸರ್ ಅನ್ನು ದೂರವಿರಿಸುವ ಇತರ ಅನೇಕ ಆಹಾರಪದಾರ್ಥಗಳ ಬಗ್ಗೆಯೂ ಸಹ ಓದಿ ತಿಳಿದುಕೊಳ್ಳಿರಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಮುಳ್ಳುಸೌತೆಕಾಯಿಯಲ್ಲಿರುವ ಕೆಲವು ಅಚ್ಚರಿಯ ಗುಣಗಳು

5. ನಿಮ್ಮ ತ್ವಚೆಯ ಆರೋಗ್ಯಕ್ಕೆ ಹೇಳಿ ಮಾಡಿಸಿದಂತಿದೆ ಈ ಈರುಳ್ಳಿ:
ಈರುಳ್ಳಿಗಳಲ್ಲಿರುವ ಆಂಟಿಆಕ್ಸಿಡೆಂಟ್‌ಗಳು, ವಯಸ್ಸಾದಂತೆಲ್ಲ ನಿಮ್ಮ ಚರ್ಮವು ಸುಕ್ಕಾಗುವುದನ್ನು ತಡೆಯಬಲ್ಲದು. ಮಾತ್ರವಲ್ಲ, ನೀರುಳ್ಳಿಯಲ್ಲಿರುವ ಸೂಕ್ಷ್ಮಾಣು ಪ್ರತಿಭಂದಕ, ಬ್ಯಾಕ್ಟೀರಿಯಾ ನಿರೋಧಕ, ಹಾಗೂ ಉರಿಶಮನಕಾರಿ ಗುಣಗಳಿಂದಾಗಿ, ನೀರುಳ್ಳಿಯು ಮೊಡವೆಗಳ ಚಿಕಿತ್ಸೆಯಲ್ಲಿಯೂ ಬಲು ಪ್ರಯೋಜನಕಾರಿಯಾಗಿದೆ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

X
Desktop Bottom Promotion