Latest Updates
-
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್!
ಆಹಾರಕ್ರಮದಲ್ಲಿ ತಿನ್ನಲು ಆರೋಗ್ಯಕರವಾದ 20 ಸೊಪ್ಪುಗಳು
ನಮ್ಮ ಆಹಾರದಲ್ಲಿ ಹಸಿರು ಸೊಪ್ಪು ಮತ್ತು ತರಕಾರಿಗಳನ್ನು ಬಳಸಿಕೊಂಡರೆ ಆರೋಗ್ಯದ ಸಮಸ್ಯೆಗಳನ್ನು ನಾವು ಅರ್ಧಭಾಗದಷ್ಟು ಪರಿಹರಿಸಬಹುದೆಂದು ಮತ್ತೆ ಮತ್ತೆ ಕೇಳುತ್ತಾ ಮತ್ತು ಓದುತ್ತಾ ಇರುತ್ತೇವೆ. ಹೀಗಿರುವಾಗ ಆಹಾರಕ್ರಮದಲ್ಲಿ ತಿನ್ನಲು ಅರೋಗ್ಯಕರವಾದ ಸೊಪ್ಪುಗಳ ಬಗ್ಗೆ ತಿಳಿದುಕೊಳ್ಳಲು ಅರ್ಥವಿದೆ. ಸಾಂಪ್ರದಾಯಿಕವಾಗಿ ನಮ್ಮ ಆಹಾರದ ಭಾಗವಾಗಿ ಕೆಲವು ಅರೋಗ್ಯಕರ ಸೊಪ್ಪುಗಳಿವೆ.
ಉದಾಹರಣೆಗೆ, ಪಾಲಕ್ ಸೊಪ್ಪು ರುಚಿಕರವಾದ ಭಕ್ಷ್ಯಗಳನ್ನು ತಯಾರಿಸಲು ಪ್ರಮುಖ ಘಟಕವಾಗಿ ಬಹಳ ಕಾಲದಿಂದಲೂ ಬಳಸುತ್ತಾರೆ. ಈ ಆರೋಗ್ಯಕರ ಸೊಪ್ಪುಗಳು ನಮ್ಮ ದಿನನಿತ್ಯದ ಆಹಾರಕ್ರಮದಲ್ಲಿ ವಿವಿಧ ರೂಪಗಳಲ್ಲಿ ಸೇರಿಕೊಂಡಿವೆ.
ಕೆಲವು ತಿನ್ನಲು ಬಳಸುವ ಸೊಪ್ಪುಗಳು ಗಿಡಮೂಲಿಕೆಗಳಾಗಿಯೂ ಮತ್ತು ಮಸಾಲೆ ಸೊಪ್ಪುಗಳಾಗಿಯೂ ಇವೆ. ಆಹಾರವನ್ನು ಅಲಂಕರಿಸಲು ಥೈಮ್, ಪಾರ್ಸ್ಲಿ ಮತ್ತು ಪುದೀನ ಸೊಪ್ಪುಗಳನ್ನು ನಾವೆಲ್ಲರೂ ಬಳಸುತ್ತೇವೆ. ಈ ಗಿಡಮೂಲಿಕೆಯ ಸೊಪ್ಪುಗಳನ್ನು ಔಷಧವಾಗಿಯೂ ಬಳಸುತ್ತೇವೆ. ಉದಾಹರಣೆಗೆ, ತುಳಸಿ ಎಲೆಯನ್ನು ಕೆಮ್ಮು ಮತ್ತು ಶೀತವನ್ನು ಗುಣಪಡಿಸಲು ಬಳಸುತ್ತೇವೆ. ನಾವು ಆಹಾರಕ್ಕೆಂದು ಬಳಸುವ ಆರೋಗ್ಯಕರ ಸೊಪ್ಪುಗಳೆಲ್ಲವೂ ಹಸಿರು ಬಣ್ಣದಾಗಿರುವುದಿಲ್ಲ.
ಎಲ್ಲಾ ಹಸಿರುಬಣ್ಣದ ಸೊಪ್ಪುಗಳು ಮಾತ್ರ ಆರೋಗ್ಯಕರ ತರಕಾರಿಯೆಂದು ನಾವೆಂದುಕೊಂಡಿದ್ದೇವೆ. ಆದರೆ ಕೆಂಪು ಬಣ್ಣದ ತರಕಾರಿಗಳು ಮತ್ತು ಗಿಡಮೂಲಿಕೆಗಳಲ್ಲಿ ಅನೇಕ ಅನನ್ಯ ಆರೋಗ್ಯ ಲಾಭಗಳಿವೆ. ಹಾಗಾಗಿ ಕೆಂಪು ಬಣ್ಣದ ತರಕಾರಿಗಳಲ್ಲಿ ಅಮರಾಂತಸ್ ಸೊಪ್ಪು ಆರೋಗ್ಯಕರ ಆಹಾರಗಳಲ್ಲಿ ಸೇರಿಕೊಂಡಿದೆ.

ಪಾರ್ಸ್ಲಿ
ಪಾರ್ಸ್ಲಿ ಸೊಪ್ಪು ಸ್ಥಳೀಯ ಕೊತ್ತಂಬರಿ ಜಾತಿಯಾಗಿದ್ದು ಅದರ ಎಲೆಗಳಿಗಿಂತ ದೊಡ್ಡದಾಗಿರುತ್ತವೆ. ಇದು ಒಂದು ಅತ್ಯಂತ ಅರೋಗ್ಯಕರ ಗಿಡಮೂಲಿಕೆಯಾಗಿದೆ. ಈ ಆರೋಗ್ಯಕರ ಸೊಪ್ಪಿನ ಉಪಯೋಗದಿಂದ ಜೀವಾಣುವಿನಲ್ಲಿ ಉತ್ಪತ್ತಿಯಾಗುವ ವಿಷ (ಟಾಕ್ಸಿನ್) ವನ್ನು ಹೊರದೂಡಿ ಮೂತ್ರಪಿಂಡದ ಕಾರ್ಯವನ್ನು ಸುಧಾರಿಸಲು ಸಹಾಯಮಾಡುತ್ತದೆ.

ಮೆಂತೆ ಸೊಪ್ಪು
ಮೆಂತೆ ಸೊಪ್ಪು ಹಸಿರುಬಣ್ಣದಲ್ಲಿರುತ್ತದೆ ಮತ್ತು ಅದು ಎರಡು ಮುಖ್ಯ ಪೌಷ್ಟಿಕತೆಯ ಪ್ರಯೋಜನಗಳನ್ನು ಹೊಂದಿರುವ ತರಕಾರಿ - ಒಂದು ಕಬ್ಬಿಣಾಂಶದ ಸಮೃದ್ಧ ಮೂಲ ಮತ್ತು ವಿಟಮಿನ್ ಕೆ. ಇದಲ್ಲದೆ ಮೆಂತೆ ಸೊಪ್ಪು ಮಧುಮೇಹವಿರುವವರಿಗೆ ಬಹಳ ಒಳ್ಳೆಯದು.

ಪಾಲಕ್ ಸೊಪ್ಪು
ಸೊಪ್ಪಿನ ತರಕಾರಿಗಳಲ್ಲಿ ಪಾಲಕ್ ಸೊಪ್ಪು ಒಂದು ಅತ್ಯಂತ ಉತ್ತಮ ಸೊಪ್ಪು. ವಿಟಮಿನ್ ಕೆ ಮತ್ತು ಕಬ್ಬಿಣಾಂಶಕ್ಕೆ ಇದು ಸಮೃದ್ಧ ಮೂಲ ಮತ್ತು ಸಾಕಷ್ಟು ನಾರಿನಾಂಶದ ಆಹಾರ.

ಎಲೆಕೋಸು
ಎಲೆಕೋಸನ್ನು ನಾವು ಎರಡು ತರಹ ಬಳಸಬಹುದು - ಬೇಯಿಸಿ ಮತ್ತು ಬೇಯಿಸದೆ. ಇದರಲ್ಲೂ ವಿಟಮಿನ್ ಸಿ ಸಮೃದ್ಧವಾಗಿದ್ದು ನಿಮ್ಮ ಕರುಳಿನ ಚಲನೆಯನ್ನು ಸರಿತೂಗಿಸಿ ಮಲವಿಸರ್ಜನೆಗೆ ಸಹಾಯಮಾಡುತ್ತದೆ.

ಸಾಸಿವೆ ಸೊಪ್ಪು
ಸಾಸಿವೆ ಸೊಪ್ಪು ಭಾರತದಲ್ಲಿ ಒಂದು ಪ್ರಸಿದ್ಧ ಸೊಪ್ಪಿನ ತರಕಾರಿ. ಸಾಸಿವೆ ಗಿಡದ ಸೊಪ್ಪು ಮಸಾಲೆಯುಕ್ತ ಪರಿಮಳವನ್ನು ಹೊಂದಿದ್ದು ಅದರಲ್ಲಿರುವ ಅಧಿಕ ಪ್ರಮಾಣದ ವಿಟಮಿನ್ ಎ ನಿಮ್ಮ ಚರ್ಮ ಮತ್ತು ಕಣ್ಣುಗಳ ಆರೋಗ್ಯವನ್ನು ಸುಧಾರಿಸುತ್ತದೆ. ಅದರಲ್ಲಿ ಉತ್ಕರ್ಷಣ ಅಂಶವು (ಆಂಟಿಆಕ್ಸಿಡೆಂಟ್) ಹೇರಳವಾಗಿದೆ.

ಪುದೀನ ಸೊಪ್ಪು
ಬಾಯಿಯಿಂದ ಕೆಟ್ಟ ವಾಸನೆ ಬೀರುತ್ತಿರುವವರಿಗೆ ಪುದೀನ ಸೊಪ್ಪು ಆಹ್ಲಾದಕರ ಉಸಿರು ಬಿಡುವುದಕ್ಕೆ ಅನುಕೂಲಮಾಡುತ್ತದೆ. ಅದು ಹೊಟ್ಟೆಯೊಳಗಿರುವ ಸ್ಥಿತಿಯನ್ನು ತಂಪಾಗಿರಲು ಸಹಾಯಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಲೆಟ್ಟ್ಯೂಸ್:
ಲೆಟ್ಟ್ಯೂಸ್ ಸಲಾಡ್‌ಗಳಲ್ಲಿ ಬಳಸುವ ಒಂದು ತರಕಾರಿ. ಅದು ಕುರುಕುಲಾದ ರುಚಿ ಹೊಂದಿದ್ದು ಹಸಿಯಾಗಿ ತಿನ್ನಲು ಬಹಳ ಚೆನ್ನಾಗಿರುತ್ತದೆ. ಲೆಟ್ಟ್ಯೂಸಿನಲ್ಲಿ ಬಹುತೇಕ ಶೂನ್ಯ ಕೊಬ್ಬು ಇರುತ್ತದೆ ಮತ್ತು ಪ್ರಮುಖ ಪೌಷ್ಟಿಕಾಂಶಗಳು ಅಧಿಕ ಪ್ರಮಾಣದಲ್ಲಿರುತ್ತವೆ.

ಕರಿಬೇವು
ಕರಿಬೇವಿನಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನಗಳಿರುತ್ತವೆ ಮತ್ತು ಇದರಿಂದ ಅಜೀರ್ಣ ಸಮಸ್ಯೆಯನ್ನು ತಡೆಯಬಹುದು ಹಾಗೂ ಶರೀರದ ತೂಕವನ್ನು ಕಡಿಮೆಮಾಡಿಕೊಳ್ಳುವುದಕ್ಕೆ ಸಹಾಯಮಾಡುತ್ತದೆ.

ಶತಾವರಿ (ಆಸ್ಪರಾಗಸ್)
ಶತಾವರಿಯು ವಿಟಮಿನ್ ಸಿ ಮತ್ತು ಇ ಇವುಗಳಿಗೆ ಒಂದು ಸಮೃದ್ಧ ಮೂಲ. ಅದರಲ್ಲಿ ಫೋಲಿಕ್ ಆಮ್ಲ ಅಧಿಕವಾಗಿರುತ್ತದೆ. ಶತಾವರಿಯು ನಿಮ್ಮ ಗಂಟಲು ಕ್ಯಾನ್ಸರ್ ವಿರುದ್ಧ ರಕ್ಷಿಸುತ್ತದೆ.

ಕೆಂಪು ಅಮರಾಂತ್
ಕೆಂಪು ಅಮರಾಂತ್ ಅನ್ನು ಸಲಾಡಿನಲ್ಲಿ ಸೇರಿಸಿದಾಗ ಒಳ್ಳೆಯ ರುಚಿಯನ್ನು ಅನುಭವಿಸಬಹುದು. ಈ ತರಕಾರಿಯಲ್ಲಿರುವ ಕ್ಯಾಲ್ಸಿಯುಮ್ ಹಾಲಿನಲ್ಲಿರುವುದಕ್ಕಿಂತಾ ಎರಡುಪಟ್ಟು ಅಧಿಕವಾಗಿರುತ್ತದೆ ಮತ್ತು ಸತು (ಜಿಂಕ್) ಅಂಶವು ಮೊಟ್ಟೆಯಲ್ಲಿರುವುದಕ್ಕಿಂತ ಮತ್ತೂ ಹೆಚ್ಚು ಇರುತ್ತದೆ.

ತುಳಸಿ ಎಲೆಗಳು
ತುಳಸಿ ಎಲೆಗಳು ನೋಯುತ್ತಿರುವ ಗಂಟಲು, ಕೆಮ್ಮು ಮತ್ತು ಶೀತಕ್ಕೆ ಒಂದು ನೈಸರ್ಗಿಕ ಔಷಧಿ. ತುಳಸಿಯು ಉರಿಯೂತದ ಮತ್ತು ಬ್ಯಾಕ್ಟೀರಿಯ ವಿರೋಧಿ ಗುಣಗಳನ್ನು ಅಧಿಕವಾಗಿ ಹೊಂದಿದೆ.

ಡಾಂಡೇಲಿಯನ್ - ಒಂದು ರೀತಿಯ ಗಿಡಮೂಲಿಕೆ
ಡಾಂಡೇಲಿಯನ್ ಸಮೃದ್ಧ ಕ್ಯಾಲ್ಸಿಯಮ್ ಮತ್ತು ಕಬ್ಬಿಣಾಂಶ ಹೊಂದಿರುವುದಕ್ಕೆ ಹೆಸರಾಗಿದೆ. ಅದರಲ್ಲಿ ಮ್ಯಾಂಗನೀಸ್, ಫಾಸ್ಫರಸ್ ಮತ್ತು ಪೊಟ್ಯಾಸಿಯುಮ್ ಅಂಶಗಳು ಸಹ ಇರುತ್ತವೆ.

ಹಸಿರು ಈರುಳ್ಳಿ
ಹಸಿರು ಈರುಳ್ಳಿಯು ಸಮೃದ್ಧ ಉತ್ಕರ್ಷಣ (ಆಂಟಿಆಕ್ಸಿಡೆಂಟ್) ದ ಮೂಲ. ಅವು ಅನೇಕ ರೀತಿಯ ಕ್ಯಾನ್ಸರ್ ವಿರುದ್ಧ ನಿಮ್ಮನ್ನು ರಕ್ಷಿಸುತ್ತವೆ. ಹಸಿರು ಈರುಳ್ಳಿಯನ್ನು ಬಳಸಿ ನಿಮ್ಮ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆಮಾಡಬಹುದು.

ಕೊಲ್ಲಾರ್ಡ್ ಗ್ರೀನ್ಸ್
ಕೊಲ್ಲಾರ್ಡ್ ಗ್ರೀನ್ಸ್ ಅಂದರೆ ಹಲವು ದಳಗಳುಳ್ಳ ಅಮೇರಿಕ ಮೂಲದ ಹಸಿರು ಸೊಪ್ಪು. ಇದರಲ್ಲಿ ವಿಟಮಿನ್ ಸಿ ಅತ್ಯಂತ ಹೆಚ್ಚು ಪ್ರಮಾಣದಲ್ಲಿರುತ್ತದೆ. ಹಾಗಿರುವುದರಿಂದ ನಿಮ್ಮ ಪ್ರತಿರಕ್ಷಣೆ (ಇಮ್ಮ್ಯೂನಿಟಿ) ಇದರ ಉಪಯೋಗದಿಂದ ಹೆಚ್ಚಿಸಬಹುದು ಮತ್ತು ಅನೇಕ ಸಣ್ಣ ಸಣ್ಣ ರೋಗಗಳ ವಿರುದ್ಧ ರಕ್ಷಣೆ ಪಡೆಯಬಹುದು.

ಒರೆಗಾನೋ
ಸಸ್ಯಾಹಾರಿಗಳಿಗೆ ಒರೆಗಾನೋ ಬಹುಶಃ ಒಮೇಗಾ-೩ ಕೊಬ್ಬಿನ ಆಮ್ಲಗಳಿರುವ ಎಲೆಗಳಲ್ಲಿ ಏಕಮಾತ್ರ ಮೂಲವಾಗಿದೆ. ಅದರಲ್ಲಿ ಸಾಕಷ್ಟು ವಿಟಮಿನ್ ಕೆ ಮತ್ತು ಉತ್ಕರ್ಷಣ ನಿರೋಧಕಗಳಿವೆ.

ಕೇಲ್
ಕೇಲ್ ಸೊಪ್ಪಿನಲ್ಲಿ ಗೋಮಾಂಸದಲ್ಲಿರುವುದಕ್ಕಿಂತಾ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣಾಂಶವಿರುವುದರಿಂದ ನಿಮಗೆ ವಿವಿಧ ಖನಿಜಗಳ ಉತ್ತೇಜನವನ್ನು ಕೊಡುತ್ತದೆ. ಕೇಲಿನಲ್ಲಿ ಶೂನ್ಯ ಟ್ರಾನ್ಸ್ ಕೊಬ್ಬು ಮತ್ತು ಕೊಲೆಸ್ಟರಾಲ್ ಇದೆ. ಅದು ನಿಮ್ಮ ಹೊಟ್ಟೆ ಬೇಗ ತುಂಬಲು ಅವಕಾಶಮಾಡಿ ನಿಮ್ಮ ತೂಕವು ಕಡಿಮೆಯಾಗಲು ಸಹಾಯಮಾಡುತ್ತದೆ.

ಥೈಮ್
ಇದು ಒಂದು ಅಲಂಕಾರಿಕ ಮತ್ತು ಔಷಧೀಯ ಸಸ್ಯ. ಇದು ನಿಮ್ಮ ಜೀರ್ಣಕ್ರಿಯೆಗೆ ಅನುಕೂಲಕರ ಸಸ್ಯವಾಗಿದೆ. ಅದರಲ್ಲೂ ಕೆಂಪು ಮಾಂಸವನ್ನು ಜೀರ್ಣಿಸಿಕೊಳ್ಳುವುದಕ್ಕೆ ಉಪಯುಕ್ತವಾಗಿದೆ. ಇದು ನಿಮ್ಮ ಕರುಳಿನ ಚಲನೆಗಳು ಸುಧಾರಿಸಲು ಸಹಾಯಮಾಡಿ ವಾಯು ಸೇರುವುದನ್ನು ತಪ್ಪಿಸುತ್ತದೆ.

ವೀಳ್ಯದೆಲೆ
ಭಾರತದಲ್ಲಿ ಊಟಮಾಡಿದನಂತರ ಬಾಯಿ ಸ್ವಚ್ಛಗೊಳಿಸಲು ವೀಳ್ಯದೆಲೆಯನ್ನು ಬಳಸುತ್ತಾರೆ. ವೀಳ್ಯದೆಲೆಯು ನಿಮ್ಮ ಜೀರ್ಣಕ್ರಿಯೆ ಸರಾಗವಾಗಲು ಸಹಾಯಮಾಡುತ್ತದೆ. ಇದು ಉಸಿರಾಟದ ರೋಗಗಳ ವಿರುದ್ಧ ರಕ್ಷಣೆ ನೀಡುತ್ತದೆ.

ರೋಸ್ಮರಿ (ಸೂಜಿಯ ಮಾದರಿ ಎಲೆಗಳು)
ಗಿಡಮೂಲಿಕೆಯಾದ ರೋಸ್ಮರಿ ನೋವು ಬಿಡುಗಡೆಗೆ ಒಂದು ನೈಸರ್ಗಿಕ ಔಷಧಿ ಮತ್ತು ಮೈಗ್ರೇನ್ ತಲೆನೋವನ್ನು ಗುಣಪಡಿಸಲು ಸಹಾಯಮಾಡುತ್ತದೆ. ರೋಸ್ಮರಿಯಿಂದ ನಿಮ್ಮ ಜ್ಞಾಪಕಶಕ್ತಿ ಮತ್ತು ಇಮ್ಮ್ಯೂನಿಟಿ ಹೆಚ್ಚಿಸಲು ಸಹಾಯವಾಗುತ್ತದೆ.

ಚಾರ್ಡ್ (ಸಾಮಾನ್ಯವಾಗಿ ಮೆಡಿಟರೇನಿಯನ್ ಅಡುಗೆಗೆ ಬಳಸುವ ಒಂದು ಎಲೆ ಹಸಿರು ತರಕಾರಿ)
ಇದರಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಕೆ ಇರುತ್ತದೆ. ಇದರಲ್ಲಿ ಬಹಳ ಕಡಿಮೆ ಕ್ಯಾಲೋರಿ ಇರುವುದರಿಂದ ನಿಮ್ಮ ತೂಕವಿಳಿಸಲು ಒಂದು ಒಳ್ಳೆಯ ತರಕಾರಿ.



Click it and Unblock the Notifications











