ತಲೆಗೂದಲಿನ ಆರೋಗ್ಯ ವರ್ಧಕ 20 ಆಹಾರ

By Poornima Heggade

ಹೆಚ್ಚಿನ ಕ್ಯಾಲೊರಿ ಮತ್ತು ಎಣ್ಣೆ ಇರುವ ಪದಾರ್ಥಗಳು ನಿಮ್ಮ ಮೊಡವೆಗಳಲ್ಲಿ ಉರಿಯೂತ ಹಾಗೂ ಸೊಂಟದ ಸುತ್ತ ಬೊಜ್ಜನ್ನು ಹೆಚ್ಚಿಸುತ್ತದೆ ಎನ್ನುವುದು ಗೊತ್ತಿರುವ ವಿಚಾರವೇ. ಆದರೆ ಇದು ನಿಮ್ಮ ತಲೆಗೂದಲನ್ನು ಹಾಗೂ ತಲೆಬುರುಡೆಯ ಮೇಲೂ ಅಡ್ಡ ಪರಿಣಾಮ ಬೀರುತ್ತವೆ ಎಂಬುದು ನಿಮಗೆ ಗೊತ್ತಿತ್ತೇ? ನಿಜ ಎಣ್ಣೆಯುಕ್ತ ಹಾಗೂ ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿರುವ ಆಹಾರಗಳು ನಮ್ಮ ತಲೆಗೂದಲು ಹಾಗೂ ತಲೆಬುರುಡೆಗೆ ಮಾರಕ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕೂದಲು ಉದುರದಿರಲು ತೆಂಗಿನ ಹಾಲಿನಿಂದ ಮದ್ದು

ಪ್ರತಿಯೊಬ್ಬರಿಗೆ ತನಗೆ ಸುಂದರವಾಗಿ ಕಾಣುವ ಹಾಗೂ ಸದೄಢ ತಲೆಗೂದಲು ಬೇಕು ಎನ್ನುವ ಆಸೆ ಇರುತ್ತದೆ. ಆದರೆ ಎಲ್ಲರ ತಲೆಗೂದಲು ವರ್ಷಗಳು ಕಳೆದಂತೆ ತನ್ನ ಆರೋಗ್ಯವನ್ನು ಹಾಗೂ ಸೌಂದರ್ಯವನ್ನು ಕಳೆದುಕೊಳ್ಳುತ್ತವೆ. ಹೀಗಾಗಿ ನೀವು ಸೇವಿಸುವ ಆಹಾರದ ಬಗ್ಗೆ ಕಾಳಜಿ ವಹಿಸಿ.

ಇಂದು ಪೋಷಕಾಂಶ ತಜ್ಞೆ ಪ್ರಿಯಾ ಕಥ್ಪಾಲ್ ನಮ್ಮೊಂದಿಗೆ ನಮ್ಮ ಒಟ್ಟಾರೆ ಆರೋಗ್ಯಕ್ಕೆ ಸಹಕಾರಿಯಾಗಿರುವ ಕೆಲವು ಆಹಾರಗಳ ಬಗ್ಗೆ ಇಲ್ಲಿ ಹೇಳಿದ್ದಾರೆ. ನಿಮಗೆ ಸುಂದರವಾಗಿ ಕಾಣುವ ಆರೋಗ್ಯಕರ ಕೂದಲು ಬೇಕು ಎಂದಾದರೆ ಈ ಆಹಾರಗಳನ್ನು ಪ್ರಯತ್ನಿಸಿ ಹಾಗೂ ಬದಲಾವಣೆ ಕಾಣಿರಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತಲೆ ಹೊಟ್ಟಿನ ನಿವಾರಣೆಗೆ ಇಲ್ಲಿದೆ 7 ವಿಧಾನ

ಆರೋಗ್ಯಕರ ಆಹಾರ ಸಾಲ್ಮನ್ ಮೀನು

ಆರೋಗ್ಯಕರ ಆಹಾರ ಸಾಲ್ಮನ್ ಮೀನು

ವಿಟಮಿನ್ ಡಿ ಹಾಗೂ ಪೋಷಕಾಂಶಗಳು ನಮ್ಮ ತಲೆಗೂದಲು ಹಾಗೂ ತಲೆಬುರುಡೆಗಳಿಗೆ ಬಹಳ ಉಪಯುಕ್ತ ಆಹಾರ. ಸಾಲ್ಮನ್ ಮೀನು ಪೋಷಕಾಂಶಯುಕ್ತ, ಒಮೆಗಾ - 3 ಕೊಬ್ಬುಯುಕ್ತ ಆಹಾರ, ವಿಟಮಿನ್ ಡಿ ಇರುವ ಆಹಾರವಾಗಿದೆ. ಒಮೆಗಾ 3 ಪೋಷಕಾಂಶ ನಮ್ಮ ತಲೆಗೂದಲನ್ನು ತೇವವಾಗಿಡಾಲು ಹಾಗೂ ತಲೆಬುರುಡೆಯ ಆರೋಗ್ಯಕ್ಕೆ ಸಹಕಾರಿ. ಹೀಗಾಗಿ ಒಮೆಗಾ 3 ಇರುವ ಆಹಾರವನ್ನು ಹೆಚ್ಚಾಗಿ ಸೇವಿಸಿ.

ತಲೆಗೂದಲ ಆರೋಗ್ಯಕ್ಕೆ ದನದ ಮಾಂಸ

ತಲೆಗೂದಲ ಆರೋಗ್ಯಕ್ಕೆ ದನದ ಮಾಂಸ

ಮುಂಬಯಿಯ ಹೇರ್ ರಿವೈವ್ ನಲ್ಲಿ ಹೇರ್ ರಿಸ್ಟೊರೇಷನ್ ಹಾಗೂ ಸ್ಕಿನ್ ರೆಜುವೆನೇಷನ್ ಸರ್ಜನ್ ಆಗಿರುವ ಡಾ. ಸಂದೀಪ್ ಸುತ್ತಾರ್ ಹೇಳುವಂತೆ ನಿಮ್ಮಲ್ಲಿ ಕೊಲೆಸ್ಟರಾಲ್ ಸಮಸ್ಯೆ ಇಲ್ಲದೇ ಇದ್ದರೆ ನೀವು ದಿನಕ್ಕೆ ಎರಡು ಬಾರಿಯಾದರೂ ಮಾಂಸಾಹಾರವನ್ನು ಸೇವಿಸಬೇಕು. ಇವು ನಿಮ್ಮ ಕೂದಲಿನ ಆರೈಕೆಗೆ ಬೇಕಾಗಿರುವ ಎಲವನ್ನೂ ಹೊಂದಿವೆ. ಇದರಲ್ಲಿರುವ ಪೋಷಕಾಂಶಗಳು, ವಿಟಮಿನ್ ಬಿ, ಕಬ್ಬಿಣದ ಅಂಶ, ಸತು ಹಾಗೂ ಇನ್ನಿತರ ಪ್ರಮುಖ ಖನಿಜ ಲವಣಾಂಶಗಳು ನಮ್ಮ ಕೂದಲಿನ ಆರೈಕೆಗೆ ಬಹಳ ಉಪಯುಕ್ತ. ಡಾ. ಸಂದೀಪ್ ಇದರ ಜೊತೆಗೆ ತಲೆಗೆ ಸಂಬಂಧಿಸಿದಂತೆ ಬಹಳ ಉಪಯೋಗಗಳಿದ್ದರೂ ಇತರ ಆರೋಗ್ಯ ಕಾರಣಗಳಿಂದ ದನದ ಮಾಂಸವನ್ನು ನಿಯಮಿತವಾಗಿ ಸೇವಿಸಬೇಕೆಂದು ಸಲಹೆ ನೀಡುತ್ತಾರೆ.

ಆರೋಗ್ಯಕರ ಒಣದ್ರಾಕ್ಷಿ

ಆರೋಗ್ಯಕರ ಒಣದ್ರಾಕ್ಷಿ

ಒಣದ್ರಾಕ್ಷಿಯ ಸೇವನೆ ನಮ್ಮಲ್ಲಿ ಕೂದಲಿನ ರಚನೆ ಮತ್ತು ಕರುಳಿನ ಚಲನೆಯಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಕಬ್ಬಿಣದ ಅಂಶ ಹೆಚ್ಚಾಗಿರುವ ಕಾರಣ ಇದು ಕೂದಲಿನ ಉದುರುವಿಕೆ, ಕೂದಲಿನ ಹೊಳಪು ಕಳೆದುಕೊಳ್ಳುವುದು, ಹಾಗೂ ಬಣ್ಣ ಬದಲಾವಣೆಯನ್ನೂ ತಡೆಯುತ್ತದೆ.

ರುಚಿಯಷ್ಟೇ ಆರೋಗ್ಯ ಗ್ರೀನ್ ಟಿ

ರುಚಿಯಷ್ಟೇ ಆರೋಗ್ಯ ಗ್ರೀನ್ ಟಿ

ಪಾಲಿ ಫೆನೊಲ್ ಗಳು ಹೆಚ್ಚಾಗಿರುವ ಗ್ರೀನ್ ಟಿ ನಮ್ಮ್ ತಲೆಬುರುಡೆಗೆ ಬಹಳ ಸಹಕಾರಿ. ನಿಮ್ಮ ತಲೆಬುರುಡೆ ಆರೋಗ್ಯಕರವಾಗಿದ್ದರೆ ನಿಮ್ಮ ಕೂದಲಿನ ಒಟ್ಟಾರೆ ಆರೋಗ್ಯವೂ ಬಹಳ ಚೆನ್ನಾಗಿರುತ್ತದೆ. ಇದು ನಮ್ಮ ಕೂದಲಿಗೆ ಹೊಳಪು ಹಾಗೂ ತಲೆಹೊಟ್ಟನ್ನೂ ನಿವಾರಿಸುತ್ತದೆ. ಡಾ. ಸಂದೀಪ್ ಅವರು ಹೇಳುವಂತೆ ನಮ್ಮ ತೆಲೆಗೂದಲ ಆರೋಗ್ಯಕ್ಕೆ ಇದು ಒಂದು ಚಮತ್ಕಾರವೇ ಆಗಿದೆ. ನಿಮ್ಮ ಕೂದಲನ್ನು ಗ್ರೀನ್ ಟಿ ಯಿಂದ ತೊಳೆಯುವುದು ಅಥವಾ ನಿಮ್ಮ ತಲೆಬುರುಡೆಗೆ ಗ್ರೀನ್ ಟೀ ಯನ್ನು ಹಚ್ಚಿಕೊಳ್ಳುವುದು ಕೂಡ ಬಹಳ ಸಹಕಾರಿಯಾಗಿದೆ.

ಕಣ್ಣಿನ ಜೊತೆಗೆ ಕೂದಲಿಗೂ ಸಹಕಾರಿ ಕ್ಯಾರೆಟ್

ಕಣ್ಣಿನ ಜೊತೆಗೆ ಕೂದಲಿಗೂ ಸಹಕಾರಿ ಕ್ಯಾರೆಟ್

ಕ್ಯಾರೆಟ್‌ಗಳು ನಮ್ಮ ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಆದರೆ ಇದರಲ್ಲಿರುವ ವಿಟಮಿನ್ ಎ ಕೂದಲಿಗೂ ಸಹಾಯಕ. ಹೆಚ್ಚಿನ ವಿಟಮಿನ್ ಎ ನಮ್ಮ ತಲೆಬುರುಡೆಯಲ್ಲಿ ಸೆಬಮ್ ಎಣ್ಣೆಯನ್ನು ಹೆಚ್ಚಿಸುತ್ತದೆ. ಡಾ. ಸಂದೀಪ್ ಹೇಳುವಂತೆ ನಮ್ಮ ತಲೆಬುರುಡೆ ಮತ್ತು ಕೂದಲನ್ನು ತೇವವಾಗಿಡಲು ಈ ಸೇಬಮ್ ಎಣ್ಣೆ ಬಹಳ ಸಹಾಯಕ.

ವಿಟಮಿನ್ ಬಿ ಯುಕ್ತ ಮೊಟ್ಟೆಗಳು:

ವಿಟಮಿನ್ ಬಿ ಯುಕ್ತ ಮೊಟ್ಟೆಗಳು:

ನಮ್ಮ ತಲೆಗೂದಲ ಆರೈಕೆಗೆ ಬೇಕಾಗಿರುವ ಇನ್ನೊಂದು ಮುಖ್ಯ ವಿಟಮಿನ್ ಎಂದರೆ ವಿಟಮಿನ್ ಬಿ. ಇದು ನಮಗೆ ಮೊಟ್ಟೆಯಲ್ಲಿ ಹೇರಳವಾಗಿ ದೊರೆಯುತ್ತದೆ. ಇದರಲ್ಲಿರುವ ಬಯೊಟಿನ್ ನಮ್ಮ ಕೂದಲಿಗೆ ಹೊಳಪು ಹಾಗೂ ದೃಢತೆಯನ್ನು ನೀಡುತ್ತದೆ. ಇದು ಹೆಚ್ಚಿನ ಶಾಂಪೂ ಹಾಗೂ ಕಂಡೀಷನರ್ ಗಳಲ್ಲಿರುವ ಪ್ರಮುಖ ಅಂಶವಾಗಿದೆ. ಹಾಗೂ ಇದು ಮೊಟ್ಟೆಯಲ್ಲಿ ಹೇರಳವಾಗಿ ದೊರೆಯುತ್ತದೆ.

ಹಸಿರು ಸೊಪ್ಪು ಬಹಳ ಸಹಕಾರಿ

ಹಸಿರು ಸೊಪ್ಪು ಬಹಳ ಸಹಕಾರಿ

ಪಾಲಕ್, ಹೂಕೋಸಿಉ, ಲೆಟ್ಟುಸಸ್ ಗಳಂತಹ ಹಸಿರು ಸೊಪ್ಪುಗಳನ್ನು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಬಹಳ ಉತ್ತಮ. ಇವು ವಿಟಮಿನ್ ಸಿ ಮತ್ತು ಎ ಯಿಂದ ತುಂಬಿರುತ್ತವೆ ಹಾಗಾಗಿ ಇವುಗಳು ನಮ್ಮ ತಲೆಗೂದಲಿನ ಆರೋಗ್ಯಕ್ಕೆ ಬಹಳ ಸಹಕಾರಿ. ಸೆಬಮ್ ನಮ್ಮ ಕೂದಲಿನ ಆರೈಕೆಯಲ್ಲಿ ಬಹಳ ಸಹಕಾರಿ ಹಾಗೂ ಇದು ಹಸ್ರಿ ತರಕಾರಿಗಳಲ್ಲಿ ಇರುತ್ತದೆ.

ಕಂದು ಅಕ್ಕಿ ಆರೋಗ್ಯಕರ

ಕಂದು ಅಕ್ಕಿ ಆರೋಗ್ಯಕರ

ಪೋಷಕಾಂಶಗಳು, ವಿಟಮಿನ್ ಗಳು ಹಾಗೂ ನಾರಿನ ಅಂಶದಿಂದ ಶ್ರೀಮಂತವಾಗಿರುವ ಅಕ್ಕಿಯೆಂದರೆ ಬ್ರೌನ್ ರೈಸ್ ಅಥವಾ ಕಂದು ಅಕ್ಕಿ. ಇದು ನಮ್ಮ ತಲೆಗೂದಲಿಗೆ ನೆರವಾಗುವ ಜೊತೆಗೆ ಇದು ಬಹಳ ಕಾಲ ನಮಗೆ ಹಸಿವಾಗದೇ ಇಡುವ ಶಕ್ತಿ ಹೊಂದಿದ ಕಾರಣ ನಾವು ಸೇವಿಸುವ ಆಹಾರದ ಮೇಲೂ ಕಡಿವಾಣ ಹಾಕುತ್ತದೆ.

ಸಿಂಪಿಗಳು ಸಿಂಪ್ಲೀ ಸೂಪರ್ಬ್

ಸಿಂಪಿಗಳು ಸಿಂಪ್ಲೀ ಸೂಪರ್ಬ್

ಆಂಡ್ರೋಜೆನ್ ಹಾರ್ಮೋನಿನ ಕಡಿಮೆ ಉತ್ಪಾದನೆಯ ಕಾರಣ ನಮ್ಮಲ್ಲಿ ಕೂದಲು ಉದುರುವಿಕೆ ಹಾಗೂ ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸತುವಿನ ಅಂಶದಲ್ಲಿ ಶ್ರೀಮಂತವಾಗಿರುವ ಸಿಂಪಿಗಳು ನಮ್ಮ ಕೂದಲಿನ ಆರೈಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇದರ ಜೊತೆಗೆ ನಮ್ಮ ಕೂದಲಿನ ಹೊಳಪು ಕೂಡ ಕಾಪಾಡುವಲ್ಲಿ ಇವು ಪ್ರಮುಖ ಅಂಶ. ತಲೆಹೊಟ್ಟು ಕೂಡ ಇದರ ಸೇವನೆಯಿಂದ ಬಹಳ ಮಟ್ಟಿಗೆ ಹತೋಟಿಯಲ್ಲಿರುತ್ತದೆ.

ಆಕ್ರೂಡಗಳು ಆರೋಗ್ಯಕರ ಆಹಾರ

ಆಕ್ರೂಡಗಳು ಆರೋಗ್ಯಕರ ಆಹಾರ

ಇವು ನಮ್ಮ ಕೂದಲಿನ ಆರೈಕೆ ಮತ್ತು ಪೋಷಣೆಗೆ ಬಹಳವೇ ಸಹಕಾರಿಯಾದ ಆಹಾರ. ಒಮೆಗಾ 3 ಇವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಭ್ಯ. ಇದರ ಜೊತೆಗೆ ಬಯೋಟಿನ್, ವಿಟಮಿನ್ ಇ ಹಾಗೂ ಸತುವಿನ ಅಂಶವೂ ಹೆಚ್ಚಿದೆ. ಇವು ನಮ್ಮ ಕೂದಲನ್ನು ಸೂರ್ಯನ ಬೆಳಕಿನಲ್ಲಿ ಹೊಳಪು ಕಳೆದುಕೊಳ್ಳುವುದರಿಂದ ಕಾಪಾಡುತ್ತದೆ. ಹಾಗೂ ಕೂದಲಿನ ಬಣ್ಣವನ್ನು ಮಾಸದಂತೆ ಇಡುತ್ತದೆ.

ಮೃದು ಗಿಣ್ಣು ಕೂದಲಿನ ಆರೈಕೆಯಲ್ಲಿ ಬಹಳ ಮುಂದು

ಮೃದು ಗಿಣ್ಣು ಕೂದಲಿನ ಆರೈಕೆಯಲ್ಲಿ ಬಹಳ ಮುಂದು

ಗಿಣ್ಣು ಬಹಳ ಕಡಿಮೆ ಕೊಬ್ಬಿನ ಅಂಶ ಇರುವ ಆಹಾರ ಎನ್ನುವುದಷ್ಟೇ ಇದರ ಹೆಗ್ಗಳಿಕೆಯಲ್ಲ. ಇದರಲ್ಲಿ ಪೋಷಕಾಂಶಗಳೂ ಹೆಚ್ಚಿನ ಪ್ರಮಾಣದಲ್ಲಿವೆ. ನೀವು ಬಣ್ಣ ಮಾಸಿದ ಕೂದಲನ್ನು ಹೊಂದಬಾರದು ಎಂಬ ಆಸೆ ಇದ್ದರೆ ಗಿಣ್ಣನ್ನು ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿ.

ಹಸಿರು ಬಟಾಣಿ ಚಮತ್ಕಾರ

ಹಸಿರು ಬಟಾಣಿ ಚಮತ್ಕಾರ

ಹಸಿರು ಬಟಾಣಿ ರುಚಿಕರವಷ್ಟೇ ಅಲ್ಲ. ಇದರಲ್ಲಿ ನಮ್ಮ ಕೂದಲಿ ಆರೈಕೆಗೆ ಬೇಕಾದ ಹಲವು ಉಪಯುಕ್ತ ಪೋಷಕಾಂಶಗಳಿವೆ. ಕಬ್ಬಿಣದ ಅಂಶ, ಸತುವಿನ ಅಂಶ ಹೆಚ್ಚಿರುವ ಇದರಲ್ಲಿ ವಿಟಮಿನ್ ಬಿ ಯೂ ಹೇರಳವಾಗಿ ದೊರೆಯುತ್ತದೆ. ರುಚಿಗೆಂದು ಸೇವಿಸಿ ಕೂದಲನ್ನು ಚೆನ್ನಾಗಿಡುವ ನಿಮ್ಮ ಆಸೆಯಲ್ಲಿ ಹಸಿರು ಬಟಾಣಿ ಸದಾ ಮುಂದು.

ಅವರೆಕಾಯಿ ಆರೋಗ್ಯ

ಅವರೆಕಾಯಿ ಆರೋಗ್ಯ

ವಾರದಲ್ಲಿ ಮೂರರಿಂದ ನಾಲ್ಕು ಬಾರಿ ಅವರೆ ಕಾಳುಗಳನ್ನು ಸೇವಿಸಿದರೆ ನಿಮ್ಮ ಕೂದಲಿನ ಆರೋಗ್ಯಕ್ಕೆ ನಾನು ಗ್ಯಾರಂಟಿ ಎನ್ನುತ್ತಾರೆ ಪ್ರಿಯಾ. ಇವುಗಳಲ್ಲಿ ಫಾಲಿಕ್ ಆಮ್ಲ ಹೆಚ್ಚಿನ ಪ್ರಮಾಣದಲ್ಲಿದೆ. ಇದು ನಮ್ಮ ಕೂದಲಿಗೆ ಬೇಕಾದ ಮಟ್ಟಿನ ಆಮ್ಲಜನಕವನ್ನು ಒದಗಿಸುತ್ತದೆ. ಇದು ನಮ್ಮ ತಲೆಬುರುಡೆ ಮತ್ತು ಕೂದಲಿಗೆ ಬೇಕಾದ ಮಟ್ಟಿನ ಆಮ್ಲಜನಕವನ್ನು ಪೂರೈಸುತ್ತದೆ.

ಸಿಹಿ ಮೆಣಸಿನಕಾಯಿ !

ಸಿಹಿ ಮೆಣಸಿನಕಾಯಿ !

ಮೆಣಸಿನ ಹುಡಿ ಖಾರ ಎನ್ನುವುದು ಎಲ್ಲರಿಗೂ ಗೊತ್ತು ಆದರೇನಿದು ಸಿಹಿ ಎಂದುಕೊಂಡಿರಾ ? ಇದು ರುಚಿಯ ಬಗ್ಗೆಯಲ್ಲ ಅದರ ಆರೋಗ್ಯದ ಕಡೆಗೆ ಇರುವ ಪರಿಣಾಮದ ಬಗ್ಗೆ. ಇದರಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಹಾಗಾಗಿ ನಮ್ಮ ತಲೆಕೂದಲಿನ ಬುಡದಲ್ಲಿ ಸರಿಯಾದ ಆಮ್ಲಜನಕ ವರ್ಗಾವಣೆ ಆಗುತ್ತದೆ. ಇದು ಕೂದಲು ಉದುರುವಿಕೆಯನ್ನೂ ತಡೆಯುತ್ತದೆ.

ಏಕದಳ ಧಾನ್ಯಗಳ ಸಹಕಾರ

ಏಕದಳ ಧಾನ್ಯಗಳ ಸಹಕಾರ

ಇವುಗಳು ಪೋಷಕಾಂಶ ಮತ್ತು ಜೀವಸತ್ವಗಳಿಂದ ಶ್ರೀಮಂತ ಆಹಾರ. ಇವು ನಮ್ಮ ಒಟ್ಟಾರೆ ಆರೋಗ್ಯದ ಜೊತೆಗೆ ನಮ್ಮ ತಲೆಕೂದಲಿಗೂ ಬಹಳ ಸಹಕಾರಿ.

ಸಿಹಿಗೆಣಸು ಆರೋಗ್ಯಕ್ಕೂ ಸಿಹಿ

ಸಿಹಿಗೆಣಸು ಆರೋಗ್ಯಕ್ಕೂ ಸಿಹಿ

ಸಿಹಿಗೆನಸಿನಲ್ಲಿ ಬೀಟಾ ಕ್ಯಾರೋಟೇನ್ ಹೆಚ್ಚಿನ ಪ್ರಮಾಣದಲ್ಲಿದೆ. ಇದರಿಂದ ನಮ್ಮ ವಿಟಮಿನ್ ಎ ಯ ಕೊರತೆ ಕಡಿಮೆಯಾಗುತ್ತದೆ. ಕೂದಲು ಉದುರುವ ಸಾಧ್ಯತೆಗಳು ಕಡಿಮೆಯಾಗಿ ತಲೆಹೊಟ್ಟು ಕಡಿಮೆ ಆಗುವ ಜೊತೆಗೆ ಕೂದಲ ಬುಡದಲ್ಲಿ ಆಮ್ಲಜನಕದ ಪೂರೈಕೆಯೂ ಸರಿಯಾಗಿ ನಡೆಯುತ್ತದೆ.

ಬ್ಲೂಬೆರ್ರಿಗಳು

ಬ್ಲೂಬೆರ್ರಿಗಳು

ಈ ಹಣ್ಣುಗಳು ವಿಟಮಿನ್ ಸಿ ಯಿಂದ ಸಮೃದ್ಧವಾಗಿವೆ. ಇದರಲ್ಲಿಯೂ ಆಮ್ಲಜನಕ ಪೂರೈಕೆಯನ್ನು ಸುಗಮಗೊಳಿಸುವ ಅಂಶಗಳಿವೆ.

ಬೇಕನ್ ಬೇಕು

ಬೇಕನ್ ಬೇಕು

ಕ್ಯಾಲರಿಗಳನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವವರ ಪಾಲಿನ ಶತ್ರುವಾದರೂ ತಲೆಗೂದಲ ಅರೋಗ್ಯದ ದೃಷ್ಟಿಯಿಂದ ಬಹಳ ನೆರವಿಗೆ ಬರುತ್ತದೆ. ಇದನ್ನು ನಾಲ್ಕು ಔನ್ಸ್ ಗಳಿಗಿಂತ ಹೆಚ್ಚಾಗಿ ಸೇವಿಸಬಾರದು ಎಂದು ಡಾ. ಪ್ರಿಯಾ ಹೇಳುತ್ತಾರೆ. ಇದರಲ್ಲಿ ವಿಟಮಿನ್ ಬಿ ಪೋಷಕಾಂಶಗಳಿವೆ.

ಸೀಗಡಿಗಳು

ಸೀಗಡಿಗಳು

ಇವುಗಳು ರುಚಿಯಲ್ಲಷ್ಟೆ ನಿಮ್ಮನ್ನು ಖುಷಿಗೊಳಿಸುವುದಿಲ್ಲ ನಿಮ್ಮ ತಲೆಗೂದಲು ಹಾಗೂ ತಲೆಬುರುಡೆಯ ಆರೋಗ್ಯವನ್ನೂ ಸುಧಾರಿಸಿ ನಿಮ್ಮ ನೆರವಿಗೆ ಬರುತ್ತವೆ. ಇದರಲ್ಲಿ ವಿಟಮಿನ್ ಬಿ 12, ಸತು ವಿನ ಅಂಶವಿದೆ. ಇವು ನಮ್ಮ ತಲೆಗೂದಲನ್ನು ಉದುರದಂತೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವ ಅಂಶಗಳು

ಕುಂಬಳಕಾಯಿ ಬೀಜಗಳು

ಕುಂಬಳಕಾಯಿ ಬೀಜಗಳು

ಇವು ನಮ್ಮ ಕೇಶವರ್ಧನೆಗೆ ಸರಿಯಾದ ಆಹಾರ. ಇವು ನಮ್ಮ ಒಟ್ಟಾರೆ ಆಹಾರದ ಮೇಲೂ ಬಹಳ ಪರಿಣಾಮವನ್ನು ಹೊಂದಿವೆ. ಇವುಗಳಲಿ ಪ್ರೋಟೀನ್, ಒಮೆಗಾ 6 ಕೊಬ್ಬಿನ ಅಂಶ, ಸತು ಹಾಗೂ ಕಬ್ಬಿಣದ ಅಂಶವಿದೆ. ಇವೆಲ್ಲವೂ ನಮ್ಮ ಕೂದಲಿನ ಬೆಳವಣಿಗೆಯಲ್ಲಿ ಸಹಕರಿಸುವ ಅಂಶಗಳು.

X
Desktop Bottom Promotion