Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅರಶಿನದ ಆರೋಗ್ಯಕಾರಿ ಪ್ರಯೋಜನಗಳು
ನಮ್ಮ ದೈನಂದಿನ ಚಟುವಟಿಕೆಗೆ ಆಹಾರ ಹೇಗೆ ಸಹಕಾರಿಯೋ ಅದೇ ರೀತಿ ಆಹಾರ ತಯಾರಿಯಲ್ಲಿ ಬಳಸುವ ವಸ್ತುಗಳೂ ಕೂಡ ನಮ್ಮ ದೇಹಕ್ಕೆ ದಿವ್ಯೌಷಧವಾಗಿದೆ. ಅಡುಗೆ ಮನೆಯಲ್ಲಿ ಹೆಚ್ಚು ಬಳಕೆಯಾಗುವ ಕೆಲವೊಂದು ಪದಾರ್ಥಗಳು ನಮ್ಮ ದಿನನಿತ್ಯದ ಆರೋಗ್ಯಕ್ಕೆ ಸಹಕಾರಿ. ಇಂದು ನಾವಿಲ್ಲಿ ಅರಶಿನದ ಬಗೆಗೆ ಕೆಲವೊಂದು ಮಹತ್ವದ ಸಂಗತಿಯನ್ನು ಹೇಳುತ್ತಿದ್ದೇವೆ. ಅರಶಿನವನ್ನು ಆಹಾರ ತಯಾರಿಯಲ್ಲಿ ಬಳಸದೇ ಇರುವವರು ಇದರ ಪ್ರಯೋಜನಗಳನ್ನು ಅರಿತು ಇಂದೇ ಇದರ ಬಳಕೆಯನ್ನು ಮಾಡಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕಂಪ್ಯೂಟರ್ ಬಳಕೆದಾರರಿಗೆ ಕಣ್ಣಿನ ಕಾಳಜಿಯ ಟಿಪ್ಸ್
ಹಸಿ ಮತ್ತು ಹುಡಿ ಮಾಡಿದ ಅರಶಿನ ಅಥವಾ ಹಳದಿ ಸರ್ವರೋಗಕ್ಕೂ ಪರಿಹಾರಕವಾಗಿದೆ. ಬರೀ ಅಡುಗೆಮನೆಯಲ್ಲಿ ಮಾತ್ರ ಇದರ ಬಳಕೆಯಲ್ಲ ನಮ್ಮ ಪ್ರತೀ ಚಟುವಟಿಕೆಯಲ್ಲೂ ಇದು ಕಾರ್ಯವ್ಯಾಪಿಯಾಗಿದೆ. ಸುಟ್ಟ ಗಾಯಗಳಿಂದ ನಮ್ಮ ದೇಹವನ್ನು ಅರಶಿನ ಕಾಪಾಡುತ್ತದೆ.

ಮುಖದ ಸೌಂದರ್ಯಕ್ಕೂ ಇದರ ಕೊಡುಗೆ ಅಪಾರ. ಶುಭ ಸಮಾರಂಭಗಳಲ್ಲಿ ಅರಶಿನವಿಲ್ಲದೆ ಕಾರ್ಯ ನಡೆಯುವುದೇ ಇಲ್ಲ ಎಂದೇ ಹೇಳಬಹುದು. ಹಾಗಿದ್ದರೆ ಅರಶಿನದ ಮಹತ್ವದ ಪ್ರಯೋಜನಗಳು ಯಾವುವು ಎಂಬುದನ್ನು ನೋಡೋಣ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನಾಲಿಗೆ ಸ್ವಚ್ಛತೆಗೆ ಪ್ರಮುಖ 10 ಸಲಹೆಗಳು!
1.ಗಾಯ ಮತ್ತು ಸುಟ್ಟ ನೋವುಗಳಿಂದ ನಮ್ಮನ್ನು ರಕ್ಷಿಸುವ ಅರಶಿನ ನೈಸರ್ಗಿಕ ಆಂಟಿಸೆಪ್ಟಿಕ್ ಮತ್ತು ಬ್ಯಾಕ್ಟಿರಿಯಾ ವಿರೋಧಿ ಅಂಶವಾಗಿದೆ.
2.ಜಠರವನ್ನು ನೈಸರ್ಗಿವಾಗಿ ಶುದ್ಧ ಮಾಡುವಲ್ಲಿ ಅರಶಿನದ ಪಾತ್ರ ಹಿರಿದು.
3.ಮೆದುಳಿನಲ್ಲಿ ರಚಿತವಾದ ಅಮ್ಲೋಯ್ಡ್ ಲೋಳೆಯನ್ನು ತೆಗೆದುಹಾಕಿ ಅಲ್ಙೀಮೀರ್ ರೋಗದ ಪ್ರಕ್ರಿಯೆಯನ್ನು ನಿರ್ಬಂಧಿಸಿ ಮೆದುಳನ್ನು ಆರೋಗ್ಯವಾಗಿರಿಸುತ್ತದೆ.
4. ಕ್ಯಾನ್ಸರ್‌ನ ಹಲವು ಬಗೆಗಳಲ್ಲಿ ಸಂಭವಿಸುವ ಸ್ಥಾನಾಂತರಗಳನ್ನು (ದ್ವಿತೀಯ ಹಾನಿಕಾರಕ ಟ್ಯೂಮರ್) ಅರಶಿನ ತೊಡೆದುಹಾಕುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಚಿಕನ್‌ಗುನ್ಯಾಕ್ಕೆ ಪರಿಣಾಮಕಾರಿ ಮನೆಮದ್ದು
5.ಇದೊಂದು ನೈಸರ್ಗಿಕ ಉರಿಯೂತ ವಿರೋಧಿ ಶಕ್ತಿಯಾಗಿದ್ದು ಹಲವಾರು ರೋಗಕ್ಕೆ ಉರಿಯೂತ ವಿರೋಧಿ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ. ಇದರಿಂದ ಯಾವುದೇ ಹಾನಿ ಸಂಭವಿಸುವುದಿಲ್ಲ.
6.ಅರಶಿನ ನೈಸರ್ಗಿಕ ನೋವು ನಿವಾರಕವಾಗಿದ್ದು ಸಿಒಎಕ್ಸ್-2 ಇದರಲ್ಲಿದೆ (ಉರಿಯೂತ ವಿರೋಧಿ).
7.ಇದು ಕೊಬ್ಬನ್ನು ಕರಗಿಸುವ ಗುಣವನ್ನು ಹೊಂದಿದ್ದು ತೂಕ ನಿಯಂತ್ರಣಕ್ಕೆ ಸಹಕಾರಿ.
8.ಖಿನ್ನತೆಯ ಚಿಕಿತ್ಸೆಗಾಗಿ ಚೀನಾದಲ್ಲಿ ಅರಶಿನವನ್ನು ಬಳಸಲಾಗುತ್ತದೆ.
9.ಅರಶಿನ ನೈಸರ್ಗಿಕ ಉರಿಯೂತ ನಿವಾರಕವಾಗಿರುವುದರಿಂದ ಸಂಧಿವಾತಕ್ಕೆ ಇದನ್ನು ಬಳಸಲಾಗುತ್ತದೆ.
10.ಅರಶಿನವು ಪಾಕ್ಲಿಟೇಕ್ಸಲ್‌ನೊಂದಿಗೆ ಕೀಮೋಥೆರಪಿಯ ಪರಿಣಾಮಗಳನ್ನು ಹೆಚ್ಚಿಸುತ್ತದೆ ಮತ್ತು ಅಡ್ಡಪರಿಣಾಮಗಳನ್ನು ಕಡಿಮೆ ಮಾಡುತ್ತದೆ.
11.ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‌ಗೆ ಉತ್ತಮ ಔಷಧಿ ಅರಶಿನವಾಗಿದೆ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ.
12.ಮಲ್ಟಿಮಲ್ ಮೈಲೋಮಾ (ಕ್ಯಾನ್ಸರ್ ಪ್ಲಾಸ್ಮಾ ಕೋಶಗಳು) ವನ್ನು ತೊಡೆದುಹಾಕುವಲ್ಲಿ ಅರಶಿನದ ಮಹತ್ವದ ಕುರಿತು ಸಂಶೋಧನೆಗಳು ಜಾರಿಯಲ್ಲಿದೆ.
13.ಟ್ಯೂಮರ್‌ನಲ್ಲಿ ಉಂಟಾಗುವ ಹೊಸ ರಕ್ತ ಕಣಗಳ ಬೆಳವಣಿಗೆಯನ್ನು ಅರಶಿನವು ನಿಲ್ಲಿಸುತ್ತದೆ.
14.ಗಾಯ ಒಣಗುವುದರಲ್ಲಿ ಮತ್ತು ಹೊಸ ಚರ್ಮ ಬರುವಂತೆ ಮಾಡುವಲ್ಲಿ ಅರಶಿನದ ಪಾತ್ರ ಹಿರಿದಾದುದು.
15.ಸೋರಿಯಾಸಿಸ್ ಹಾಗೂ ಇತರ ಚರ್ಮ ರೋಗಗಳನ್ನು ಉಪಚರಿಸುವಲ್ಲಿ ಅರಶಿನ ಸಹಾಯ ಮಾಡುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಜೀರ್ಣಕ್ರಿಯೆ ಸುಧಾರಿಸುವ ಉತ್ತಮ ಆಹಾರಗಳು
16.ಎದೆ ನೋವಿಗಾಗಿ ಮತ್ತು ಹೊಟ್ಟೆ ನೋವು ನಿವಾರಣೆಗಾಗಿ ಚೀನಾದಲ್ಲಿ ಅರಶಿನವನ್ನು ಬಳಸುತ್ತಾರೆ.
17.ಸಾಮಾನ್ಯ ಉರಿಯೂತ ಪರಿಸ್ಥಿತಿಗಳನ್ನು ಉಪಚರಿಸಲು ಭಾರತದಲ್ಲಿ ಅರಶಿನ ಉಪಯೋಗಕಾರಿಯಾಗಿದೆ.
18 ಹೊಟ್ಟೆಯ ಅಲ್ಸರ್ ಅನ್ನು ನಿವಾರಣೆ ಮಾಡಲು ಅರಶಿನ ಸಹಕಾರಿಯಾಗಿದೆ.
19.ಇಲಿಗಳಲ್ಲಿರುವ ಬಹು ಸ್ಕೆಲೋರಿಸೀಸ್ (ರೋಗವನ್ನು ಹರಡಬಲ್ಲ ಗುಣ) ಬೆಳವಣಿಗೆಯನ್ನು ನಿಧಾನವಾಗಿಸುವ ಗುಣ ಅರಶಿನಕ್ಕಿದೆ ಎಂಬುದನ್ನು ಕಂಡುಹಿಡಿಯಲಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications