Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತೂಕ ಇಳಿಸುವ ಈ ಪರಿಣಾಮಕಾರಿ ವಿಧಾನಗಳನ್ನು ಅನುಸರಿಸಿದ್ದೀರಾ?
ತೂಕ ಇಳಿಸಿಕೊಳ್ಳಬೇಕೆಂಬ ನಮ್ಮ ಪ್ರಯತ್ನವನ್ನು ಬಿಟ್ಟೂ ಬಿಡದೆ ಮಾಡುತ್ತಾ. ಕಠಿಣ ಪಥ್ಯ ಕ್ರಮಗಳನ್ನು ಅನುಸರಿಸಿ, ಡಯೆಟೀಷಿಯನ್‌ಗಳ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುತ್ತಾ ಬಂದಿದ್ದರೂ ತೂಕದಲ್ಲಿ ಯಾವುದೇ ಮಾರ್ಪಾಡು ಕಾಣುತ್ತಿಲ್ಲವೇ?
ಹಾಗಿದ್ದರೆ ನೀವು ಅನುಸರಿಸುತ್ತಿರುವ ಕ್ರಮಗಳು ಸರಿಯಾಗಿವೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುವುದು ಅತೀ ಅಗತ್ಯವಾಗಿದೆ. ನೀವು ಅನುಸರಿಸುವ ಕ್ರಮಗಳನ್ನು ಸ್ವಲ್ಪ ದಿನ ಮಾತ್ರವೇ ಪಾಲಿಸಿ ನಂತರ ಅದನ್ನು ತ್ಯಜಿಸಿದಲ್ಲಿ ನಿಮಗೆ ಧನಾತ್ಮಕ ಫಲಿತಾಂಶ ದೊರೆಯುವುದು ಅಸಾಧ್ಯದ ಮಾತಾಗಿದೆ.
ಇಂದಿನ ಲೇಖನದಲ್ಲಿ ನಿಮ್ಮ ತೂಕ ಇಳಿಕೆಯ ಕೆಲವೊಂದು ಪರಿಣಾಮಕಾರಿ ಅಂಶಗಳತ್ತ ನಾವು ಗಮನ ನೀಡಿ ಇಲ್ಲಿ ಸಲಹೆಗಳನ್ನು ನೀಡುತ್ತಿದ್ದೇವೆ. ಈ ಸಲಹೆಗಳನ್ನು ನೀವು ನಿಯಮಿತವಾಗಿ ಪಾಲಿಸುತ್ತಾ ಬಂದಲ್ಲಿ ನಿಮ್ಮಲ್ಲಿ ಚಮತ್ಕಾರೀ ಗುಣಗಳು ಉಂಟಾಗುವುದು ನೂರಕ್ಕೆ ನೂರು ಸತ್ಯ.
ಹೊಟ್ಟೆಯ ಬೊಜ್ಜನ್ನು ಕರಗಿಸಲು ಅತ್ಯುತ್ತಮ ವ್ಯಾಯಾಮಗಳು
ಬರಿಯ ವ್ಯಾಯಮ ಮಾತ್ರವಲ್ಲದೆ ತಿನ್ನುವ ಆಹಾರ ಕೂಡ ನಿಮ್ಮ ತೂಕ ಇಳಿಕೆಯ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಂಶವನ್ನು ನೀವು ಗಮನಿಸಿದ್ದೀರಾ? ಎಷ್ಟು ಬೇಕಾದರೂ ತಿಂದು ಅದನ್ನು ಕರಗಿಸುವ ಸಾಕಷ್ಟು ವ್ಯಾಯಾಮ ಮಾಡಿದಾಗ ನಿಮ್ಮ ದೇಹದಲ್ಲಿನ ಶಕ್ತಿ ನಷ್ಟವಾಗುತ್ತದೆ ಹೊರತು ದೇಹದ ಮೇಲೆ ಇದು ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಹಾಗಿದ್ದರೆ ಈ ಎಲ್ಲಾ ಅಂಶಗಳನ್ನು ತಿಳಿದುಕೊಂಡು ತೂಕವನ್ನು ಹೇಗೆ ಕಳೆದುಕೊಳ್ಳಬೇಕೆಂಬ ಅತಿ ಸರಳ ಪದ್ಧತಿಗಳನ್ನು ನಾವು ಇಲ್ಲಿ ನೀಡುತ್ತಿದ್ದೇವೆ.

ವ್ಯಾಯಾಮ
ವ್ಯಾಯಾಮವು ದೇಹಕ್ಕೆ ಪರಿಣಾಮಕಾರಿ ಪ್ರಭಾವವನ್ನು ಉಂಟುಮಾಡುತ್ತದೆ. ತೂಕವನ್ನು ಕಡಿಮೆ ಮಾಡಲು ಇದು ಸುಲಭ ವಿಧಾನವಾಗಿದೆ. ವೇಗದ ಫಲಿತಾಂಶವನ್ನು ನೀವು ನಿರೀಕ್ಷಿಸುತ್ತೀರಿ ಎಂದಾದಲ್ಲಿ, ನೀವು ತರಬೇತಿದಾರರಿಂದ ತರಬೇತಿಯನ್ನು ಪಡೆದುಕೊಳ್ಳಬೇಕಾಗುತ್ತದೆ.

ಸೂಕ್ತವಾಗಿ ವಿಶ್ರಾಂತಿ ಪಡೆದುಕೊಳ್ಳಿ
ಸೂಕ್ತವಾದ ವಿಶ್ರಾಂತಿ ಅತೀ ಅಗತ್ಯ. ನೀವು ಸರಿಯಾಗಿ ವಿಶ್ರಾಂತಿ ಪಡೆದುಕೊಳ್ಳುತ್ತಿಲ್ಲ ಎಂದಾದಲ್ಲಿ ಕೂಡ ನಿಮ್ಮ ದೇಹ ಸರಿಯಾಗಿ ಪ್ರತಿಕ್ರಿಯಿಸಲಾರದು. ಆದ್ದರಿಂದ ಸೂಕ್ತ ವಿಶ್ರಾಂತಿ ಮತ್ತು ಉತ್ತಮ ವ್ಯಾಯಾಮ ಅತೀ ಅಗತ್ಯವಾದುದು.

ಬೇಗ ಊಟ
ನೀವು ಬೇಗನೇ ಮಲಗುತ್ತೀರಿ ಎಂದಾದಲ್ಲಿ ರಾತ್ರಿಯ ಊಟವನ್ನು ಕೂಡಲೇ ಮುಗಿಸಿ. ನೀವು ಹಾಸಿಗೆಗೆ ಹೋಗುವ ಎರಡು ಗಂಟೆಗೆ ಮೊದಲು ನಿಮ್ಮ ರಾತ್ರಿಯ ಊಟವನ್ನು ಮುಗಿಸಿ.

ಕಡಿಮೆ ಸಕ್ಕರೆ
ನೀವು ತೆಗೆದುಕೊಳ್ಳುವ ಸಕ್ಕರೆ ಪ್ರಮಾಣವನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ, ಅಲ್ಲದೆ ಜೇನು ಅಧಿಕವಾಗಿ ಬಳಸಿ

ಆಹಾರ ಪೂರ್ವ ಸಿಹಿ
ಆಹಾರವನ್ನು ನೀವು ನಂತರ ತೆಗೆದುಕೊಳ್ಳುವವರಾಗಿದ್ದರೆ ಆಹಾರಕ್ಕಿಂತ ಮೊದಲಿನ ಸಿಹಿಯನ್ನು ಬಳಸದಿರಿ.

ಉಪಹಾರ ಅತೀ ಅಗತ್ಯ
ನಿಮ್ಮ ಉಪಹಾರವನ್ನು ಎಂದಿಗೂ ತ್ಯಜಿಸದಿರಿ. ನೀವು ಉತ್ತಮವಾಗಿ ಆರೋಗ್ಯಕರವಾಗಿ ಇರಬೇಕು ಎಂದಾದಲ್ಲಿ ಉತ್ತಮ ಉಪಹಾರವನ್ನು ತೆಗೆದುಕೊಳ್ಳುವುದು ಅತೀ ಅಗತ್ಯ.

ಮಿತ ರಾತ್ರಿಯೂಟ
ರಾತ್ರಿ ಸಮಯದಲ್ಲಿ ಅಧಿಕ ಆಹಾರ ಸೇವಿಸಿ ಮಲಗುವುದು ನಿಮ್ಮಲ್ಲಿ ತೂಕವನ್ನು ಹೆಚ್ಚಿಸುತ್ತದೆ. ಆದ್ದರಿಂದ ರಾತ್ರಿಯೂಟ ಎಂದಿಗೂ ಮಿತವಾಗಿರಬೇಕು. ರಾತ್ರಿ ಸಮಯದಲ್ಲಿ ನಿಮಗೆ ಹೆಚ್ಚಿನ ಶಕ್ತಿಯ ಅವಶ್ಯಕತೆ ಇಲ್ಲವಾಗಿರುವುದರಿಂದ ರಾತ್ರಿ ಕಡಿಮೆ ಪ್ರಮಾಣದಲ್ಲಿ ಸೇವಿಸಿ.

ಹೆಚ್ಚು ಪ್ರೋಟೀನ್
ನಿಮ್ಮ ಸ್ನಾಯುಗಳ ಬೆಳವಣಿಗೆಗೆ ಅತ್ಯಂತ ಉಪಯೋಗಕಾರಿಯಾಗಿರುವ ಪ್ರೋಟೀನ್‌ಗಳನ್ನು ಸೇವಿಸಿ. ಗ್ಲುಕೋಸ್ ಪ್ರಮಾಣವನ್ನು ಕಡಿಮೆ ಮಾಡಿ ಕ್ಯಾಲೋರಿಗಳಲ್ಲಿ ಸ್ಥಿರವಾಗಿರಿ.

ಆರೋಗ್ಯಕರ ಕರಿದ ತಿಂಡಿ
ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಸೇವಿಸುವ ಹಂಬಲ ಕೆಲವರಲ್ಲಿ ಇರುತ್ತದೆ. ಇದರ ಬದಲಿಗೆ ನಟ್ಸ್, ಹಣ್ಣುಗಳನ್ನು ಹೆಚ್ಚು ಸೇವಿಸಿ.

ಹೆಚ್ಚು ತಿನ್ನಿ ಕುಡಿಯದಿರಿ
ಹಣ್ಣುಗಳ ರಸವನ್ನು ಕುಡಿಯುವುದಕ್ಕಿಂತ ಅವನ್ನೇ ನೇರವಾಗಿ ಸೇವಿಸಿ. ಹಣ್ಣುಗಳ ರಸದಲ್ಲಿರುವ ಫೈಬರ್ ಅಂಶವು ದೇಹಕ್ಕೆ ಒಳಿತು ಮತ್ತು ರಸದ ಸಕ್ಕರೆ ಕೂಡ ಹೆಚ್ಚು ಪರಿಣಾಮಕಾರಿ.

ತಾಜಾ ಸೇವಿಸಿ
ಎಂದಿಗೂ ಮನೆಯಲ್ಲಿ ತಯಾರಿಸಿರುವುದಕ್ಕೆ ಹೆಚ್ಚಿನ ಆದ್ಯತೆ ನೀಡಿ. ತಾಜಾ ಬೇಯಿಸಿದ, ಯಾವುದೇ ಕಲಬೆರಕೆಗಳಿಲ್ಲದ ಯಾವುದೇ ಹೆಚ್ಚುವರಿ ಬಣ್ಣಗಳನ್ನು ಬಳಸದ ಆಹಾರವನ್ನು ಅಧಿಕವಾಗಿ ಸೇವಿಸಿ.

ಹೊರಗೆ ಕಡಿಮೆ ತಿನ್ನಿ
ನೀವು ಹೋಟೆಲ್ ಅಥವಾ ಯಾವುದಾದರೂ ಪಾರ್ಟಿಯಂತಹ ಕಾರ್ಯಕ್ರಮಗಳಿಗೆ ಹೋದಾಗ ಅಲ್ಲಿನ ಆಹಾರಗಳನ್ನು ಆದಷ್ಟು ಕಡಿಮೆ ಸೇವಿಸಿ. ಹೆಚ್ಚಿನ ಎಣ್ಣೆ, ಉಪ್ಪು ಸಕ್ಕರೆ ಮತ್ತು ಇತರ ಆಹಾರ ಪದಾರ್ಥಗಳು ಸೇರಿರುವ ತಿಂಡಿಯನ್ನು ಸೇವಿಸದಿರಿ. ಹೊರಗೆ ಸೇವಿಸುವ ಪ್ರಮಾಣ ಕಡಿಮೆಯಾಗಿರಲಿ.

ಸಿದ್ಧ ಆಹಾರಗಳು ಬೇಡ
ಎಂದಿಗೂ ಪ್ಯಾಕ್ ಮಾಡಿದ ಆಹಾರ ಪದಾರ್ಥ ದೇಹಕ್ಕೆ ಅಷ್ಟು ಒಳ್ಳೆಯದಾಗಿರುವುದಿಲ್ಲ. ರೆಡಿ ಟು ಈಟ್‌ನಂತಹ ಸಿದ್ಧ ಆಹಾರಗಳನ್ನು ಸೇವಿಸದಿರಿ. ಹೆಚ್ಚು ಎಣ್ಣೆ ಮತ್ತು ಸೋಡಿಯಮ್ ಅಂಶ ಅಧಿಕವಾಗಿರುವ ಆಹಾರಗಳು ಬೇಡ.

ಆಹಾರ ನಿಯತಕಾಲಿಕೆ
ಆಹಾರದ ಕುರಿತ ಬರವಣಿಗೆಗಳು ನಿಮ್ಮ ದೇಹ ತೂಕವನ್ನು ಇಳಿಸುವಲ್ಲಿ ಪರಿಣಾಮಕಾರಿಯಾಗಿ ಪಾತ್ರ ವಹಿಸುತ್ತವೆ. ನೀವು ಆಹಾರವನ್ನು ಹೇಗೆ ತೆಗೆದುಕೊಳ್ಳಬೇಕೆಂಬ ಮಾಹಿತಿಯನ್ನು ಈ ನಿಯತಕಾಲಿಕೆಗಳು ನಿಮಗೆ ಒದಗಿಸುತ್ತವೆ.

ಹೊಟ್ಟೆ ತುಂಬುವವರೆಗೆ ಸೇವಿಸದಿರಿ
ನಿಮ್ಮ ಹೊಟ್ಟೆ ತುಂಬುವವರೆಗೆ ಸೇವಿಸುವುದನ್ನು ಬಿಟ್ಟು ಬಿಡಿ. ನಿಮಗೆ ಇನ್ನೂ ಬೇಕು ಎಂದೆನಿಸಿದ ಸಂದರ್ಭದಲ್ಲೇ ತಿನ್ನುವುದನ್ನು ನಿಲ್ಲಿಸಿ.



Click it and Unblock the Notifications