ತೆಳ್ಳಗಿರುವವರ ಆಹಾರ ಕ್ರಮಗಳನ್ನು ನೀವೂ ತಿಳಿಯಬೇಕೇ?

ಹಂಚಿಕೊಳ್ಳಲು ಬಯಸದೇ ಇರುವ ಕೆಲವೊಂದು ರಹಸ್ಯಗಳನ್ನು ನಾವೆಲ್ಲರೂ ಹೊಂದಿರುವೆವು. ಆದರೆ ಇಂದಿನ ಬೋಲ್ಡ್ ಸ್ಕೈ ಲೇಖನ ನಿಮ್ಮನ್ನು ಆರೋಗ್ಯವಾಗಿರಿಸುವ ಮತ್ತು ನಿಮ್ಮಲ್ಲಿ ಚೈತನ್ಯವನ್ನುಂಟು ಮಾಡುವ ಕೆಲವೊಂದು ಗುಟ್ಟುಗಳನ್ನು ತಿಳಿಸಲಿದೆ. ಹೆಚ್ಚುವರಿ ನೀರು ಮತ್ತು ಸಾಕಷ್ಟು ವ್ಯಾಯಾಮವನ್ನು ಅವಲಂಬಿಸಿರುವ ಸಪೂರ ಮೈಸಿರಿಯವರ ಆಹಾರ ವಿಧಾನಗಳನ್ನು ಈ ಲೇಖನದಲ್ಲಿ ನಾವು ಹಂಚಿಕೊಳ್ಳುತ್ತಿದ್ದೇವೆ. ನೀವು ಈ ಎರಡೂ ಅಂಶಗಳಿಗೆ ಗಮನ ಕೊಡುವವರಾಗಿದ್ದಲ್ಲಿ ದಪ್ಪ ಎಂಬ ಚಿಂತೆಯೇ ನಿಮ್ಮನ್ನು ಕಾಡದು.

ಇದಕ್ಕಾಗಿ ನೀವು ಕೆಲವೊಂದು ಆಹಾರಗಳನ್ನು ತ್ಯಾಗ ಮಾಡಬೇಕಾದ್ದು ಅತ್ಯವಶ್ಯಕವಾಗಿದೆ. ದಪ್ಪ ಇದ್ದ ಹೆಚ್ಚಿನ ಜನರು ವಾರದಲ್ಲೊಮ್ಮೆ ಈ ನೀರು ಡಯೆಟ್ ಅನ್ನು ಅನುಸರಿಸಿ ತಮ್ಮ ಹೆಚ್ಚುವರಿ ತೂಕವನ್ನು ಕಳೆದುಕೊಂಡಿದ್ದಾರೆ. ತಮ್ಮ ಸಂಪೂರ್ಣ ದೇಹದ ಅತ್ಯವಶ್ಯಕವಾದ ನೀರು ಮತ್ತು ಹೆಚ್ಚವರಿ ವ್ಯಾಯಾಮದ ಸಲಹೆಯೇ ತೆಳ್ಳಗಿರುವವರ ರಹಸ್ಯವಾಗಿದೆ ಎಂಬುದು ನಿಮಗೆ ಗೊತ್ತೇ?

ಮಾಂಸಾಹಾರಿ ಆಹಾರಗಳನ್ನು ಸೇವಿಸದೇ ಬರಿಯ ಸಸ್ಯಾಹಾರ ಮತ್ತು ಹಣ್ಣುಗಳನ್ನು ಸೇವಿಸುವುದು ತೆಳ್ಳಗಿರುವವರ ಇನ್ನೊಂದು ಗುಟ್ಟಾಗಿದೆ. ಹುರಿದ ತಿಂಡಿಗಳ ಬದಲಿಗೆ ಬೇಯಿಸಿದ ಆಹಾರ ಪದಾರ್ಥಗಳು ಹೆಚ್ಚುವರಿ ಕ್ಯಾಲೋರಿ ಆಹಾರದಿಂದ ಕಡಿಮೆ ಕ್ಯಾಲೋರಿ ಆಹಾರದ ಸೇವನೆ ಇವೇ ಮೊದಲಾದ ಅಸ್ತ್ರಗಳನ್ನು ತೆಳ್ಳಗಿರುವವರು ಪಾಲಿಸಿ ತಮ್ಮ ತೂಕವನ್ನು ಕಳೆದುಕೊಳ್ಳುತ್ತಿದ್ದಾರೆ ಈ ಸೂತ್ರಗಳು ತೂಕವನ್ನು ಸಮತೋಲನದಲ್ಲಿಟ್ಟು ನಿಮ್ಮನ್ನು ಸದೃಢ ಮತ್ತು ಆರೋಗ್ಯಕಾರಿಯನ್ನಾಗಿಸುತ್ತದೆ ದಪ್ಪ ಎಂಬ ಅಂಶವೇ ನಿಮ್ಮ ದೇಹದಲ್ಲಿ ತಲೆದೋರದಂತೆ ಈ ಆಹಾರ ಪದ್ಧತಿ ನಿಮ್ಮಲ್ಲಿ ಬದಲಾವಣೆಯನ್ನು ಮಾಡುತ್ತದೆ.ತೆಳ್ಳಗಿರುವವರು ಅನುಸರಿಸುವ ಕೆಲವೊಂದು ಆಹಾರ ಪದ್ಧತಿಗಳನ್ನು ಇಂದಿನ ಲೇಖನದಲ್ಲಿ ನಾವು ಹಂಚಿಕೊಳ್ಳುತ್ತಿದ್ದು ಇವುಗಳು ನಿಮಗೆ ಸಾಕಷ್ಟು ಪ್ರಯೋಜನಕಾರಿ ಅಂಶಗಳನ್ನು ಒದಗಿಸುವುದು ಖಂಡಿತ.

ಅವರೆಕಾಳಿನ ಭೂಗೋಳ, ಚರಿತ್ರೆ ಮತ್ತು ವರ್ತಮಾನ!

ನೀರಿನ ಡೋಸೇಜ್

ನೀರಿನ ಡೋಸೇಜ್

ನೀರಿನಿಂದ ಹೊಟ್ಟೆ ತುಂಬಿಸಿಕೊಳ್ಳುವುದು ನಿಮ್ಮ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ಪ್ರಯೋಜನಕಾರಿಯಾಗಿದೆ. ದಿನದಲ್ಲಿ ಕನಿಷ್ಟ ಪಕ್ಷ ಮೂರು ಲೀಟರ್‌ನಷ್ಟು ನೀರನ್ನು ಸೇವಿಸುವುದು ಅವರ ದೇಹ ತೂಕ ಕಳೆದುಕೊಳ್ಳುವಲ್ಲಿ ಸಹಕಾರಿಯಾದ ವಿಧಾನವಾಗಿದೆ. ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ನೀರು ಹೆಚ್ಚಿನ ಸಹಾಯವನ್ನು ಮಾಡುತ್ತದೆ ಮತ್ತು ನಿಮ್ಮನ್ನು ಆರೋಗ್ಯವಂತ ಹಾಗೂ ಕ್ರಿಯಾತ್ಮಕರನ್ನಾಗಿರಿಸುತ್ತದೆ.

ಸಿಟ್ರಸ್ ಅಂಶವುಳ್ಳ ಆಹಾರ ಸೇವನೆ

ಸಿಟ್ರಸ್ ಅಂಶವುಳ್ಳ ಆಹಾರ ಸೇವನೆ

ಸಿಟ್ರಸ್ ಅಂಶವುಳ್ಳ ಆಹಾರ ಪದಾರ್ಥಗಳನ್ನು ಸೇವಿಸುವುದು ತೆಳ್ಳಗಿರುವವರ ಇನ್ನೊಂದು ಆಹಾರ ಪದ್ಧತಿಯಾಗಿದೆ.

ಎಣ್ಣೆ ಆಹಾರ ಸೀಮಿತ

ಎಣ್ಣೆ ಆಹಾರ ಸೀಮಿತ

ಇವರು ಕೂಡ ಎಣ್ಣೆಯುಕ್ತ ಆಹಾರವನ್ನು ಸೇವಿಸುತ್ತಾರೆ ಆದರೆ ಎಷ್ಟು ಬೇಕೋ ಅಷ್ಟು ಮಾತ್ರ ಸೇವಿಸುತ್ತಾರೆ ಮತ್ತು ಸೀಮಿತವಾಗಿ ಇದನ್ನು ತೆಗೆದುಕೊಳ್ಳುತ್ತಾರೆ.

ಕಹಿ ಆಹಾರಗಳು ಅತ್ಯಗತ್ಯ

ಕಹಿ ಆಹಾರಗಳು ಅತ್ಯಗತ್ಯ

ಕಹಿಯುಳ್ಳ ಆಹಾರಗಳನ್ನು ಸೇವಿಸುವುದನ್ನು ಇವರು ನಿಷ್ಟೆಯಿಂದ ಅಭ್ಯಾಸ ಮಾಡಿಕೊಂಡಿರುತ್ತಾರೆ. ಈ ಆಹಾರವು ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸಿ ನಿಮ್ಮನ್ನು ದೈಹಿಕವಾಗಿ ಸದೃಢಗೊಳಿಸುತ್ತದೆ. ಇದು ನಿಮ್ಮ ದೇಹವನ್ನು ಆರೋಗ್ಯವಾಗಿರಿಸುವುದರೊಂದಿಗೆ ನಿಮ್ಮನ್ನು ರೋಗಗಳಿಂದ ದೂರವಿರಿಸುತ್ತದೆ.

ನಿಮ್ಮ ಊಟದತ್ತ ಗಮನ ಹರಿಸುವುದು

ನಿಮ್ಮ ಊಟದತ್ತ ಗಮನ ಹರಿಸುವುದು

ನೀವು ಏನನ್ನು ತಿನ್ನುತ್ತಿದ್ದೀರಿ ಎಂಬುದರ ಕಡೆಗೆ ಗಮನಕೊಡುವುದೂ ಕೂಡ ತೆಳ್ಳಗಿರುವವರ ದೇಹ ವಿನ್ಯಾಸದ ಅಂಶವಾಗಿದೆ. ನೀವು ರೂಪದರ್ಶಿಯರ ಕಡೆಗೆ ಗಮನ ಹರಿಸಿದರೆ ನಿಮಗೆ ಅರಿವಾಗುತ್ತದೆ ಏಕೆಂದರೆ ಅವರು ಹೆಚ್ಚು ತಿನ್ನುವುದೇ ಇಲ್ಲ! ನಿಯಮಿತ ಅಂತರಗಳನ್ನು ಇಟ್ಟು ಅವರು ಆಹಾರವನ್ನು ಸೇವಿಸುತ್ತಾರೆ. ಆದರೆ ಹಸಿವಾದಾಗಲೆಲ್ಲಾ ಇವರು ತಿನ್ನುವುದಿಲ್ಲ.

ಮಾಂಸಾಹಾರ ಬೇಡವೇ ಬೇಡ

ಮಾಂಸಾಹಾರ ಬೇಡವೇ ಬೇಡ

ಮಾಂಸಾಹಾರವು ನಿಮ್ಮ ದೇಹತೂಕವನ್ನು ಹೆಚ್ಚಿಸುತ್ತದೆ ಎಂಬುದು ಎಂದಿಗೂ ಸತ್ಯವಲ್ಲ. ಇದನ್ನು ಕೂಡ ಕನಿಷ್ಟವಾಗಿ ಸೇವಿಸುವುದು ನಿಮ್ಮ ದೇಹದಲ್ಲಿ ದೃಢತೆಯನ್ನು ಉಂಟುಮಾಡುತ್ತದೆ.

ಜೀವನಕ್ಕೆ ಅತ್ಯಗತ್ಯವಾಗಿರುವ ಕೆಲವೊಂದು ಆಯ್ಕೆಗಳು

ಜೀವನಕ್ಕೆ ಅತ್ಯಗತ್ಯವಾಗಿರುವ ಕೆಲವೊಂದು ಆಯ್ಕೆಗಳು

ನಿಮ್ಮ ಜೀವನದಲ್ಲಿ ನೀವು ಆಯ್ಕೆಮಾಡಬಹುದಾದ ಕೆಲವೊಂದು ಆರೋಗ್ಯಕರ ಆಯ್ಕೆಗಳಿವೆ. ಈಜುವುದು, ಏರೋಬಿಕ್ಸ್, ಯೋಗ, ಸೈಕ್ಲಿಂಗ್, ನೃತ್ಯ ಹೀಗೆ ದಪ್ಪಗಿರುವವರೂ ಮುಂತಾದ ವ್ಯಾಯಾಮಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನೀವು ತೆಳ್ಳಗಿರುವವರಂತೆ ದೇಹವಿನ್ಯಾಸವನ್ನು ಪಡೆದುಕೊಳ್ಳಬಹುದು.

ಸೂಕ್ತ ನಿದ್ದೆ

ಸೂಕ್ತ ನಿದ್ದೆ

ನಿದ್ದೆಯ ಕೊರೆತ ಕೂಡ ದೇಹತೂಕವನ್ನು ಹೆಚ್ಚಿಸುವಲ್ಲಿ ಪರಿಣಾಮ ಬೀರುತ್ತದೆ. ವಯಸ್ಕರಿಗೆ 7 ರಿಂದ 8 ಗಂಟೆಗಳಷ್ಟು ನಿದ್ದೆ ಅತೀ ಅಗತ್ಯವಾದುದು. ನೀವು ನಿದ್ದೆ ಕಡಿಮೆ ಮಾಡಿದಿರೆಂದರೆ ನಿಮ್ಮ ದೇಹವು ಆಲಸ್ಯಕ್ಕೆ ಒಳಪಡುತ್ತದೆ.

ಹೆಚ್ಚುವರಿ ತಿನ್ನುವುದು

ಹೆಚ್ಚುವರಿ ತಿನ್ನುವುದು

ಹೆಚ್ಚಾಗಿ ತಿನ್ನದಿರುವುದು ತೆಳ್ಳಗಿರುವವರ ದೇಹ ರಹಸ್ಯವಾಗಿದೆ. ಪ್ರತೀ ಎರಡು ಗಂಟೆಗಳಿಗೊಮ್ಮೆ ಆಹಾರ ಸೇವಿಸುವುದು ಇವೇ ಮೊದಲಾದ ಆಹಾರ ಪದ್ಧತಿಗಳನ್ನು ಅವರು ಅನುಸರಿಸುತ್ತಾರೆ.

 ನಿಯಮಿತ ವ್ಯಾಯಾಮ

ನಿಯಮಿತ ವ್ಯಾಯಾಮ

ಜಿಮ್‌ನಲ್ಲಿ ವ್ಯಾಯಾಮವನ್ನು ತ್ಯಜಿಸುವುದೂ ಕೂಡ ದೇಹದ ತೂಕವನ್ನು ಹೆಚ್ಚಾಗಿಸುತ್ತದೆ. ಜಿಮ್‌ನಲ್ಲಿ ಕೆಲವು ಗಂಟೆಗಳಷ್ಟು ಕಾಲ ವ್ಯಾಯಾಮ ಮಾಡುವುದು ನಿಯಮಿತವಾಗಿ ಈ ಪದ್ಧತಿಯನ್ನು ನಿರ್ವಹಿಸುವುದು ತೆಳ್ಳಗಿರುವವರ ದೇಹ ಸೌಂದರ್ಯದ ಗುಟ್ಟಾಗಿದೆ.

 ಊಟವನ್ನು ತ್ಯಜಿಸದಿರುವುದು

ಊಟವನ್ನು ತ್ಯಜಿಸದಿರುವುದು

ಸರಿಯಾದ ಸಮಯದಲ್ಲಿ ಸರಿಯಾದ ಆಹಾರವನ್ನು ಸೇವಿಸುವುದು ತೆಳ್ಳಗಿರುವವರ ನಿತ್ಯ ಕ್ರಮವಾಗಿದೆ. ಆಹಾರವನ್ನು ತಿನ್ನದಿರುವುದು ಇವೇ ಮೊದಲಾದ ಕೆಟ್ಟ ಅಭ್ಯಾಸಗಳನ್ನು ಇವರು ಮಾಡುವುದಿಲ್ಲ.

ಸಿಹಿ ತಿನ್ನದಿರುವುದು

ಸಿಹಿ ತಿನ್ನದಿರುವುದು

ತೆಳ್ಳಗಿರುವವರು ತಮ್ಮದೇ ಆಹಾರ ವಿಧಾನವನ್ನು ರೂಪಿಸಿಕೊಂಡು ಅದನ್ನು ಪಾಲಿಸಿಕೊಂಡು ಬರುತ್ತಾರೆ. ಸಿಹಿ ಅಂಶಗಳನ್ನು ಅವರು ಹೆಚ್ಚು ತಿನ್ನುವುದಿಲ್ಲ, ಚಾಕಲೇಟ್‌ಗಳನ್ನು ಅವರು ಮುಟ್ಟುವುದೇ ಇಲ್ಲ. ಹೀಗೆ ನಿಯಮಬದ್ಧವಾದ ಆಹಾರ ಕ್ರಮವನ್ನು ಅವರು ಅನುಸರಿಸಿಕೊಂಡಿರುತ್ತಾರೆ.


X
Desktop Bottom Promotion