Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ತಣ್ಣೀರು ಸ್ನಾನದ 12 ಪ್ರಯೋಜನಗಳು ನಿಮಗೆ ಗೊತ್ತೇ?
ನಾವು ಆರೋಗ್ಯವಾಗಿರಲು ದೇಹದ ಒಳಗಿನ ಮತ್ತು ಹೊರಗಿನ ಸ್ವಚ್ಛತೆ ಅತೀ ಮುಖ್ಯವಾದುದು. ಈ ಸ್ವಚ್ಛತೆಯಲ್ಲಿ ಸ್ನಾನ ಪ್ರಮುಖ ಪಾತ್ರವಹಿಸುತ್ತದೆ. ಮಾನವನ ಜೀವನದಲ್ಲಿ ಸ್ನಾನ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಸ್ನಾನಕ್ಕೆ ಬಳಸುವ ನೀರು ಕೂಡ ನಮ್ಮ ಸ್ವಚ್ಛತೆ ಹಾಗೂ ಆರೋಗ್ಯಕ್ಕೆ ಪ್ರಮುಖವಾಗಿರುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ತಣ್ಣೀರು ಸ್ನಾನ ನಿಮ್ಮ ಆರೋಗ್ಯ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸುವ ಕಾರ್ಯವನ್ನು ತಣ್ಣೀರು ಮಾಡುತ್ತದೆ.
ಬಿಸಿನೀರ ಸ್ನಾನ ದೇಹಕ್ಕೆ ಅಲ್ಪ ಚೇತೋಹಾರಿತನವನ್ನು ನೀಡುತ್ತದೆ ಆದರೆ ತಣ್ಣೀರು ಸ್ನಾನ ನಿಮ್ಮ ಆಂತರಿಕ ಮತ್ತು ಬೌದ್ಧಿಕ ಸ್ವಾಸ್ಥ್ಯಕ್ಕೆ ಮುಖ್ಯವಾಗಿರುತ್ತದೆ. ನೀವು ತಂಪು ವಾತಾವರಣದಲ್ಲಿ ಇರುವವರಾಗಿದ್ದಲ್ಲಿ ತಣ್ಣೀರು ಸ್ನಾನ ನಿಯಮಿತವಾಗಿ ಮಾಡಬೇಕೆಂದಿಲ್ಲ. ಆದರೆ ಬೇಸಿಗೆ ಮತ್ತು ನಿಮಗೆ ಸೆಖೆ ಉಂಟಾಗಿದ್ದಾಗ ತಣ್ಣೀರು ಸ್ನಾನಕ್ಕೆ ಆದ್ಯತೆ ನೀಡಿ.
ಊಟ ಮಾಡುವಾಗ ನಾವೇಕೆ ನೆಲದ ಮೇಲೆ ಕುಳಿತುಕೊಳ್ಳಬೇಕು?
ಇಂದಿನ ಲೇಖನದಲ್ಲಿ ತಣ್ಣೀರು ಸ್ನಾನದ ಮಹತ್ವಕ್ಕಿರುವ ಕೆಲವೊಂದು ಅಂಶಗಳತ್ತ ಗಮನ ಹರಿಸೋಣ ಮತ್ತು ಅದು ಏಕೆ ಪ್ರಮುಖವಾದುದು ಎಂಬುದನ್ನು ತಿಳಿದುಕೊಳ್ಳೋಣ

ರೋಗನಿರೋಧಕ ಶಕ್ತಿ ಹೆಚ್ಚಳ
ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ತಣ್ಣೀರಿಗಿದೆ. ತಣ್ಣೀರು ಸ್ನಾನದಿಂದ ನಿಮ್ಮ ಬಿಳಿ ರಕ್ತಕಣಗಳು ಹೆಚ್ಚು ಕಾರ್ಯತತ್ಪರವಾಗಿ ವೈರಸ್ ವಿರುದ್ಧ ಹೋರಾಡುತ್ತದೆ.

ಶೀತದಿಂದ ಮುಕ್ತಿ
ತಣ್ಣೀರು ಸ್ನಾನದಿಂದ ದೇಹದ ಒಳಗೆ ತಂಪು ಉಂಟಾಗಿ ಸಾಮಾನ್ಯ ಶೀತದಿಂದ ನಿಮಗೆ ತ್ವರಿತ ಉಪಶಮನ ದೊರೆಯುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.

ತೂಕ ಇಳಿಕೆಗೆ ಸಹಕಾರಿ
ತಣ್ಣೀರು ಸ್ನಾನದಿಂದ ನಿಮ್ಮ ತೂಕ ಇಳಿಯುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ. ತಣ್ಣೀರು ದೇಹದ ಅಧಿಕ ಕೊಬ್ಬನ್ನು ನಿವಾರಿಸಿ ನಿಮಗೆ ಸುಂದರ ಕಾಯವನ್ನು ನೀಡುತ್ತದೆ.

ರಕ್ತ ಪರಿಚಲನೆಯ ಅಭಿವೃದ್ಧಿ
ರಕ್ತ ಪರಿಚಲನೆಯ ತೊಂದರೆ ಇರುವವರು ನಿತ್ಯವೂ ತಣ್ಣೀರು ಸ್ನಾನ ಮಾಡುವುದು ಉತ್ತಮವಾಗಿರುತ್ತದೆ. ಆರ್ಗನ್‌ಗಳು ಮತ್ತು ತ್ವಚೆಯ ನಡುವೆ ಇರುವ ರಕ್ತ ಪರಿಚಲನೆ ಸಮಸ್ಯೆಯನ್ನು ತಣ್ಣೀರು ದೂರ ಮಾಡುತ್ತದೆ.

ಚಯಾಪಚಯ ಸುಧಾರಣೆ
ತಣ್ಣೀರು ಸ್ನಾನ ಚಯಾಪಚಯ ವ್ಯವಸ್ಥೆಯ ಅಭಿವೃದ್ಧಿಗೆ ಕಾರಣವಾಗುತ್ತದೆ.

ಒತ್ತಡ ನಿವಾರಣೆ
ತಣ್ಣೀರು ಸ್ನಾನದಿಂದ ಮನಸ್ಸು ಪ್ರಪುಲ್ಲವಾಗುತ್ತದೆ ಮತ್ತು ಒತ್ತಡ ನಿವಾರಣೆಯಾಗುತ್ತದೆ ಹಾಗೂ ದೇಹ ಚಟುವಟಿಕೆಯಿಂದ ಕೂಡಿರುತ್ತದೆ.

ನಿಮ್ಮ ಟೆಂಪರೇಚರ್ ನಿಯಂತ್ರಿಸುತ್ತದೆ
ಬೇಸಿಗೆಯಲ್ಲಿ ಸಾಮಾನ್ಯವಾಗಿ ನೀವು ವಿಪರೀತ ಬೆವರುತ್ತೀರಿ ಈ ಬೆವರುವಿಕೆಯನ್ನು ಕಡಿಮೆ ಮಾಡಲು ತಣ್ಣೀರು ಉತ್ತಮವಾಗಿರುತ್ತದೆ.

ಶ್ವಾಸಕೋಶಗಳಿಗೆ ಉತ್ತಮ
ತಣ್ಣೀರು ಶ್ವಾಸಕೋಶಗಳಿಗೆ ಉತ್ತಮವಾದುದು. ಇದು ನಿಮ್ಮ ಶ್ವಾಸಕೋಶವನ್ನು ತೆರೆದು ಒಂದು ವಿಧದ ವ್ಯಾಯಾಮವನ್ನು ನೀಡುತ್ತದೆ.

ಶಕ್ತಿ ಹೆಚ್ಚಿಸುತ್ತದೆ
ನಿಮಗೆ ತುಂಬಾ ಸುಸ್ತಾಗಿದ್ದರೆ ತಣ್ಣೀರು ಸ್ನಾನವನ್ನು ಮಾಡಿ. ಮಧ್ಯಾಹ್ನದ ನಂತರ ತಣ್ಣೀರು ಸ್ನಾನ ಮಾಡುವುದು ದೇಹಕ್ಕೆ ಉಲ್ಲಾಸವನ್ನು ನೀಡುತ್ತದೆ.

ನಿಮ್ಮ ಹಾರ್ಮೋನ್‌ಗಳಿಗೆ ಉತ್ತಮ
ನಿಮ್ಮ ಹಾರ್ಮೋನ್ ವೃದ್ಧಿಯಲ್ಲಿ ತಣ್ಣೀರು ಪ್ರಮುಖ ಪಾತ್ರ ವಹಿಸುತ್ತದೆ.

ತ್ವಚೆಗೆ ಉತ್ತಮ
ನಿಮ್ಮ ತ್ವಚೆಯ ಆರೋಗ್ಯ ಮತ್ತು ಹೊಳಪನ್ನು ಹೆಚ್ಚಿಸಲು ತಣ್ಣೀರು ಸ್ನಾನ ಉತ್ತಮವಾಗಿದೆ.

ಇನ್‌ಫರ್ಟಿಲಿಟಿ ಸಮಸ್ಯೆಗಳು
ಪುರುಷರಲ್ಲಿ ಕಂಡುಬರುವ ಇನ್‌ಫರ್ಟಿಲಿಟಿ ಸಮಸ್ಯೆಗಳನ್ನು ದೂರಮಾಡುವಲ್ಲಿ ತಣ್ಣೀರು ಸಹಕಾರಿಯಾಗಿದೆ.



Click it and Unblock the Notifications
