ತೂಕ ಇಳಿಸಲು ಇಲ್ಲಿದೆ 11 ಸಲಹೆಗಳು!

By Poornima heggade

ದೇಹದ ತೂಕವನ್ನು ಕಳೆದುಕೊಂಡು ಸಣ್ಣಗಾಗಿ/ ಸ್ಲೀಮ್ ಆಗಿ ಕಾಣಲು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಆದರೆ ಸಣ್ಣಗಾಗುವುದು ಒಂದು ರಾತ್ರಿಯ ಒಳಗೆ, ನಿಮ್ಮ ಜೀವನಶೈಲಿಯಲ್ಲಿ ಉಂಟಾಗುವ ನಾಟಕೀಯ ಬದಲಾವಣೆಯಲ್ಲ! ಸಣ್ಣಗಾಗುವುದು ದೇಹದಲ್ಲಿ ತೂಕ ಕಳೆದುಕೊಳ್ಳುವುದು ದೇಹದಲ್ಲಿನ ಬದಲಾವಣೆಯನ್ನು ಸ್ಪಷ್ಟವಾಗಿ ತಿಳಿಸುತ್ತದೆ.

ದೀರ್ಘಕಾಲದ ಯಶಸ್ಸಿಗೆ ಕಾರಣವಾಗುವ ತೂಕ ಕಳೆದುಕೊಳ್ಳಲು ಮಾಡಬಹುದಾದ ಕ್ರಮಗಳ ಬಗ್ಗೆ ಒಂದಿಷ್ಟು ಸಲಹೆಗಳು ನಿಮಗಾಗಿ:

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ತೂಕ ತಗ್ಗಲು ನೆರವಾಗುವ ಅಡುಗೆಮನೆ ಸಾಮಗ್ರಿಗಳು

1.ಸಕ್ರಿಯವಾಗಿರಿ.. ಏಕಕಾಲಕ್ಕೆ ಎಲ್ಲವನ್ನೂ ಮಾಡುವ ಆತುರ ಬೇಡ
ನೀವು ದುಬಾರಿ ಜಿಮ್ ಸದಸ್ಯತ್ವ ಅಥವಾ ವೈಯಕ್ತಿಕ ತರಬೇತುದಾರರನ್ನು ನೇಮಿಸಿಕೊಳ್ಳುವ ಅಗತ್ಯವಿಲ್ಲ. ಇದರ ಬದಲು ನೀವೇ ಒಂದೊಂದೇ ಅಭ್ಯಾಸವನ್ನು ಸಕ್ರಿಯವಾಗಿ ಆರಂಭಿಸಿ. ಮತ್ತು ನಿಧಾನವಾಗಿ ನೀವು ಪ್ರತಿ ದಿನ ಮತ್ತು ವಾರ ತೂಕ ಕಡಿಮೆ ಮಾಡುವ ವಿಧಾನಗಳನ್ನು ಹೆಚ್ಚಿಸುತ್ತಾ ಹೋಗಿ. ಉದಾಹರಣೆಗೆ ಯಾವುದಾದರೂ ಒಂದು ವಿಧಾನದ ಬದಲು ಯೋಗ, ಧ್ಯಾನ ಹೀಗೆ ಎರಡು ಮೂರು ವಿಧಾನಗಳನ್ನು ಅನುಸರಿಸಲು ಆರಂಭಿಸಬಹುದು. ಇದು ದೈಹಿಕ ತೂಕ ಕಡಿಮೆ ಮಾಡಲು ಅತ್ಯುತ್ತಮ ವಿಧಾನವಾಗಿದೆ.

11 tricks that'll change your shape

2.ಅಲ್ಪ ದೂರದ ಪ್ರಯಾಣಕ್ಕೆ ಕಾರಿನ ಬದಲು ನಡೆಗೆಯೇ ಉತ್ತಮ
ಮಕ್ಕಳನ್ನು ಶಾಲೆಗೆ ಬಿಡುವುದು, ಅಥವಾ ಮನೆಯ ಹತ್ತಿರ ಕೆಲಸಕ್ಕೆ ಹೋಗುವುದು, ಹೀಗೆ ಹತ್ತಿರದ ದೂರವನ್ನು ಕ್ರಮಿಸಲು ವಾಹನಗಳನ್ನು ಅವಲಂಬಿಸುವ ಬದಲು ನಡೆದುಕೊಂಡೆ ಹೋಗಿ. ಇದು ನಿಮ್ಮ ಫಿಟ್ನೆಸ್ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.

3.ಹೊಸ ' ವಿಧಾನ'ದಲ್ಲಿ ತೊಡಗಿ
ಯಶಸ್ವಿಯಾಗಿ ದೀರ್ಘಕಾಲ ತೂಕ ಕಳೆದುಕೊಳ್ಳುವುದು ಎಂದರೆ, ಕೇವಲ ವಿಭಿನ್ನವಾಗಿ ಆಹಾರ ಸೇವಿಸುವುದು ಮಾತ್ರವಲ್ಲ, ನೀವು ಜೀವನದಲ್ಲಿ ನೀವು ರೂಢಿಸಿಕೊಳ್ಳಬೇಕಾದ ಆರೋಗ್ಯಕರ ಹೊಸ ಅಭ್ಯಾಸವೂ ಹೌದು. ಇಂತಹ ಅಭ್ಯಾಸಗಳನ್ನು ರೂಢಿಸಿಕೊಂಡರೆ ನೀವು ಈ ಹವ್ಯಾಸ ನಿಮಗೆ ಗೊತ್ತಿಲ್ಲದ ಹಾಗೆ ನಿಮ್ಮ ದಿನದ ಕಾರ್ಯಗಳಲ್ಲಿ ಬೆರೆತುಹೋಗಿರುತ್ತದೆ. ಇದನ್ನೇ ಹೊಸ 'ವಿಧಾನದಲ್ಲಿ' ತೊಡಗುವುದು ಅಥವಾ ಬದಲಾಗುವುದು ಎಂದು ಕರೆಯಲಾಗುತ್ತದೆ.

4.ಸಣ್ಣ ಗುರಿಗಳನ್ನು ಬೇಹ ಮುಗಿಸಬೇಕೆಂಬ ಆತುರ ಬೇಡ
ದೇಹದ ತೂಕ ಕಳೆದುಕೊಳ್ಳುವುದು ನಿಮ್ಮ ಜೀವನ ಶೈಲಿಯಲ್ಲಿಯಲ್ಲಿನ ಬದಲಾವಣೆಯೇ ಹೊರತು ಸ್ವರ್ಧೆಯಲ್ಲ. ತೂಕ ಇಳಿಸುವ ನಿಮ್ಮ ಮುಂದಿನ ಗುರಿಯನ್ನು ಅತ್ಯಂತ ವೇಹವಾಗಿ ಮುಗಿಸುವ ಪ್ರಯತ್ನ ನಿಮಗೆ ಆತಂಕವನ್ನುಂಟು ಮಾಡಬಹುದು. ಇದು ದೇಹದಲ್ಲಿ ಸಾಕಷ್ಟು ಅಹಿತಕರ ಬದಲಾವಣೆಯನ್ನೂ ತರಬಹುದು. ಆದ್ದರಿಂದ ದೀರ್ಘಕಾಲದ ಫಲಿತಾಂಶಕ್ಕಾಗಿ ನಿಮ್ಮಿಂದ ಮಾಡಬಹುದಾದ ಗುರಿಯನ್ನಿಟ್ಟುಕೊಳ್ಳಿ.

ಇದು ನೀವು ಪ್ರತಿ ವಾರ ನೀವು ಎಷ್ಟು ತೂಕವನ್ನು ಕಳೆದುಕೊಳ್ಳಬೇಕು ಅಥವಾ ಒಂದು ಕಿಲೋ ತೂಕವನ್ನು ಮಾತ್ರ ಕಳೆದುಕೊಳ್ಳುವುದು ಈ ಬಗ್ಗೆ ಯೋಚಿಸಿ. ಇದರಿಂದ ನಿಮಗೇ ಗೊತ್ತಿಲ್ಲದ ಹಾಗೇ ನೀವು ಉತ್ತಮ ಫಲಿತಾಂಶವನ್ನು ಕಾಣಬಹುದು. ನೀವು ಕ್ರಮಿಸಿದ ದೂರವನ್ನು ನೀವೇ ಪರಿಶೀಲಿಸಬಹುದು.

5.ಪೂರ್ವ ಸಿದ್ಧತೆಯಿಲ್ಲದ ಆಹಾರ ಸೇವನೆಯ ಬದಲು ಯೋಜಿತ ಆಹಾರ ಸೇವನೆ
ನಿಮ್ಮ ಅಡುಗೆಮನೆಯಲ್ಲಿ (ಫ್ರಿಜ್ಡ್) ನಲ್ಲಿ ಯಾವುದೇ ಆಹಾರವಿಲ್ಲದಿದ್ದರೆ, ಅತಿಯಾಗಿ ಹಸಿದಿದ್ದರೆ ಮನೆಯಲ್ಲಿರುವ ಯಾವುದಾದರೂ ಆಹಾರವನ್ನು ಸೇವಿಸುತ್ತೀರಿ. ಇದರಿಂದ ನೀವು ತೂಕ ಕಳೆದುಕೊಳ್ಳಬೇಕು ಎನ್ನುವ ಗುರಿಯನ್ನು ಮುಟ್ಟಲು ಸಾಧ್ಯವಿಲ್ಲ. ಆದರಿಂದ ಮನೆಯಲ್ಲಿ ನಿಮಗೆ ಬೇಕಾದ ಆಹಾರವನ್ನು ಮೊದಲೇ ತಯಾರಿಸಿಕೊಳ್ಳಿ. ಇದು ನಿಮ ಆಹಾರ ಹಾಗೂ ಹಣ ಅನಗತ್ಯಚಾಗಿ ವೆಚ್ಚವಾಗುವುದನ್ನು ತಡೆಯುತ್ತದೆ. ಸೂಪರ್ ಮಾರ್ಕೆಟ್ ನಿಂದ ವಸ್ತುಗಳನ್ನು ತರುವಾಗಲೂ ನಿಮಗೆ ಬೇಕಾಗಿರುವ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳಿ. ಇದು ನೀವು ಅನಗತ್ಯವಾಗಿ ಜಂಕ್ ಆಹಾರಗಳನ್ನು ತಿನ್ನುವುದನ್ನು ತಪ್ಪಿಸುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ತೂಕ ಕಡಿಮೆ ಮಾಡಲು ಕ್ಯಾಬೇಜ್ ಕಾಳುಮೆಣಸು ಸೂಪ್

6.ಏಕಾಂಗಿತನಕ್ಕಿಂತ ಬೆಂಬಲ ಪಡೆಯುವುದು ಉತ್ತಮ

ದೇಹ ತೂಕವನ್ನು ಕಡಿಮೆಗೊಳಿಸಲು ಪ್ರಯತ್ನಪಡುತ್ತಿರುವವರ ಪೈಕಿ, ಯಾರು ಅದೇ ರೀತಿಯ ಮನಸ್ಥಿತಿಯನ್ನು ಹೊಂದಿರುವ ಇತರರೊಂದಿಗೆ ತೂಕ ಇಳಿಸಲು ಪ್ರಯತ್ನಿಸುತ್ತಾರೆ ಅವರು ಏಕಾಂಗಿಯಾಗಿ ಪ್ರಯತ್ನಪಟ್ಟವರಿಗಿಂತ ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ ಎಂಬುದು ಸಂಶೋಧನೆಯ ಮೂಲಕ ದೃಢಪಟ್ಟಿದೆ. ಆದರಿಂದ ಇಂತಹ ಗುಂಪಿಗೆ ಸೇರುವುದು ಉತ್ತಮ.

7.ಪ್ರತ್ಯೇಕ ಅಡುಗೆ ಮಾಡುವ ಬದಲು ಕುಟುಂಬದವರೂ ಸೇವಿಸುವ ಆರೋಗ್ಯಕರ ಆಹಾರ ತಯಾರಿಸಿ
ನಾವು ಡಯಟ್ ಆರಂಭಿಸಿದಾಗ ಕೆಲವೊಮ್ಮೆ ನಮ್ಮ ಮನೆಯ ಸದಸ್ಯರೂ ಕೂಡ ಅದನ್ನು ಸೇವಿಸಬೇಕೆಂದು ಆಶಿಸುತ್ತೇವೆ. ಆದರೆ ಅವರಿಗೆ ಒತ್ತಾಯಪೂರ್ವಕವಾಗಿ ಸಲಾಡ್ ನಂತಹ ಆಹಾರವನ್ನು ಸೇವಿಸಲು ನೀಡುವುದು ಅವರಿಗೆ ಕಿರಿಕಿರಿಯನ್ನುಂಟು ಮಾಡಬಹುದು. ಅವರು ಅವರ ಇಷ್ಟದ ಆಹಾರವನ್ನು ಸೇವಿಸುತ್ತಿರುವಾಗ ನೀವು ನೀಡುವ ಈ ಸಲಾಡ್ ಅವರಿಗೆ ಇಷ್ಟವಾಗದೇ ಹೋಗಬಹುದು.

ಆದರೆ ನೀವು ನಿಮ್ಮ ಆಹಾರ ಬೇಯಿಸುವ ರೀತಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ, ಅಂದರೆ ಮೇಲೋಗರ ರಿಂದ ಶಾವಿಗೆ ಬೊಲೊಗ್ನೀಸ್ ನಂತಹ ಆಹಾರವನ್ನು ತಯಾರಿಸಿದರೆ ನಿಮ್ಮ ಕುಟುಂಬದ ಎಲ್ಲಾ ಸದಸ್ಯರೂ ಆನಂದಿಸಬಹುದು, ಮತ್ತು ಎಲ್ಲರೂ ನಿಮ್ಮ ಹೊಸ ಆರೋಗ್ಯಕರ ಪಾಕವಿಧಾನದ ಲಾಭ ಪಡೆಯಬಹುದು.

8.ಟಿವಿ ಮುಂದೆ ಕುಳಿತು ಆಹಾರ ಸೇವಿಸುವುದರ ಬದಲಿಗೆ ಊಟದ ಟೇಬಲ್ ನಲ್ಲಿ ಆಹಾರ ಮಾಡಿ
ನೀವು ಪ್ರತ್ಯೇಕವಾಗಿ ಟಿವಿ ನೋಡುತ್ತ ಆಹಾರ ಸೇವಿಸುವುದು ನಿಮ್ಮ ಡಯಟ್ ನಿಯಮವನ್ನು ಮುರಿಯಬಹುದು. ಏಕೆಂದರೆ ಟಿವಿಯನ್ನು ನೋಡುವಾಗ ತಿನ್ನುವುದರ ಬಗ್ಗೆ ಗಮನವಿರುವುದಿಲ್ಲ. ಬದಲಿಗೆ ಊಟದ ಟೆಬಲ್ ನಲ್ಲಿ ಮನೆಯ ಇತರ ಸದಸ್ಯರೊಂದಿಗೆ ಆಹಾರ ಸೇವಿಸಿದರೆ, ನೀವು ತಿನ್ನುವುದರ ಬಗ್ಗೆ ನಿಮಗೂ ಹಾಗೂ ಮನೆಯವರಿಗೂ ಗಮನವಿರುತ್ತದೆ.

9.ಬೇರೆಯವರನ್ನು ನೋಡಿ ಅಸೂಯೆಪಡುವ ಬದಲು ಪ್ರೇರೇಪಣೆ ಪಡೆಯಿರಿ
ಬೇರೆಯವರ ಯಶಸ್ಸನ್ನು ನೋಡಿ ಅಸೂಯೆ ಪಡುವುದರ ಬದಲಾಗಿ ಅವರ ಯಶಸ್ಸು ನಿಮ್ಮ ಗುರಿಯನ್ನು ಸಾಧಿಸಲು ಪ್ರೇರೇಪಣೆಯನ್ನು ನೀಡಲಿ. '"ನನ್ನ ಗುರಿಯನ್ನು ತಲುಪಲು ನಾನು ತೆಗೆದುಕೊಂಡ ಮೊದಲ ಹೆಜ್ಜೆಯಾವುದು ಮತ್ತು ಯಶಸ್ವಿ ವ್ಯಕ್ತಿ ತೆಗೆದುಕೊಂಡ ಹೆಜ್ಜೆಯಾವುದು?" ಎಂಬಂತಹ ಸಕಾರಾತ್ಮಕ ಚಿಂತನೆಗಳನ್ನು ಮಾಡಿ. ಜೊತೆಗೆ ಅವರ ಸಹಾಯ, ಬೆಂಬಲವನ್ನೂ ನೀವು ಕೇಳಬಹುದು.

ರೋಜರ್ ಬ್ಯಾನಿಸ್ಟೆರ್ ಎನ್ನುವವರು, ಮೊದಲ ಬಾರಿಗೆ ನಾಲ್ಕು ಮೈಲಿ ತಡೆಗೋಡೆಯನ್ನು (barrier) ಯನ್ನು ಮೊದಲ ಬಾರಿಗೆ ದಾಟಿ ದಾಖಲೆ ನಿರ್ಮಿಸಿದನು. ನಂತರ ಇತರ 37 ಜನರು ಕೂಡ ಇದನ್ನು ಮಾಡಿದರು ಎಂದರೆ ನೀವು ನಂಬುತ್ತೀರೆ?

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಮುಳ್ಳುಸೌತೆ ಜ್ಯೂಸ್‌ನ 8 ಆರೋಗ್ಯಕಾರಿ ಪ್ರಯೋಜನೆಗಳು

10.ಸ್ವಯಂ ಅನುಮಾನದ ಬದಲಿಗೆ ಸ್ವಯಂ ನಂಬಿಕೆ ಬೆಳೆಸಿಕೊಳ್ಳಿ

ನಾನು ನಮ್ಮನ್ನು ಮೊದಲು ವಿಮರ್ಶೆ ಮಾಡಿಕೊಳ್ಳಬೇಕು. ಇದರಿಂದ ನಮ್ಮ ವೈಫಲ್ಯದ ಬಗ್ಗೆ ಸುಲಭವಾಗಿ ಗಮನಹರಿಸಬಹುದು. ನಮ್ಮ ಯಶಸ್ಸನ್ನು ನಾವೇ ಗುರುತಿಸುವುದರ ಮೂಲಕ ನಮ್ಮ ಮೇಲೆ ನಾವೇ ನಂಬಿಕೆಯನ್ನಿಡುವುದರ ಮೂಲಕ ಇನ್ನಷ್ಟು ಸಾಧನೆಗಳನ್ನು ಮಾಡಲು ಸಾಧ್ಯ. ಆದ್ದರಿಂದ ಇದನ್ನು ಇಂದೇ ಆರಂಭಿಸಿ, ನಿಮ್ಮನ್ನು ನೀವು ಪ್ರೀತಿಸುವುದು, ನಿಮಗೆ ನೀವೇ ಸ್ನೇಹಿತರಂತೆ ವರ್ತಿಸುವುದು, ನಿಮ್ಮೊಂದಿಗೆ ನೀವೆ ಮಾತನಾಡುವುದರ ನಿಮ್ಮನ್ನು ನೀವೇ ಆರೈಕೆ ಮಾಡಿಕೊಳ್ಳಬಹುದು.

11.ಇಷ್ಟವಾದ ಆಹಾರವನ್ನು ಹೊರಗಡೆ ತಿನ್ನುವ ಬದಲು ಮನೆಯಲ್ಲಿಯೇ ತಯಾರಿಸಿ
ಇದು, ಚೀನಿಯಿರಲಿ, ಭಾರತೀಯದ್ದಾಗಿರಲಿ, ಮೀನಿರಲಿ,ಚಿಪ್ಸ್ ಇರಲಿ ನೀವು ತೂಕವನ್ನು ಇಳಿಸಲು ಬಯಸುವಿರಾದರೆ ನಿಮ್ಮ ಇಷ್ಟದ ಆಹಾರಗಳಿಂದ ದೂರವಿರಬೇಕು. ಹೊರಗಡೆ ಹೋಟೆಲ್ ಗಳಲ್ಲಿ ತಿನ್ನುವುದಕ್ಕಿಂತ ನೀವು ಮನೆಯಲ್ಲಿಯೇ ಆಹಾರಗಳನ್ನು ತಯಾರಿಸಿ ಸೇವಿಸುವುದು ಉತ್ತಮ. ಇದು ಆಹಾರ ಹಾಳಾಗುವುದು ಮಾತ್ರವಲ್ಲದೆ ನಿಮ್ಮ ಹಣ ವೆಚ್ಚವಾಗುವುದನ್ನೂ ತಡೆಯುತ್ತದೆ.

ತೂಕ ಇಳಿಸಲು ಪ್ರಯತ್ನಿಸುವಾಗ ಮೊದಲು ನೀವು ಈ ಎಲ್ಲಾ ಪದ್ಧತಿಗಳನ್ನು ನಿಮ್ಮ ಜೀವನ ಶೈಲಿಯಲ್ಲಿ ಅಳವಡಿಸಿಕೊಳ್ಳಲು ಆರಂಭಿಸಬೇಕು. ಇಲ್ಲವಾದಲ್ಲಿ ಯಶಸ್ಸು ನಿಮಗೆ ದೂರದಬೆಟ್ಟದಂತೆ ಕಾಣಿಸಬಹುದು!

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

X
Desktop Bottom Promotion