Latest Updates
-
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ!
ಆಲೂಗಡ್ಡೆಯನ್ನು 11 ಆರೋಗ್ಯಕರ ವಿಧಾನದಲ್ಲಿ ಬೇಯಿಸಿ ನೋಡಿ!
ವಾಸ್ತವವಾಗಿ ತರಕಾರಿಗಳ ಪೈಕಿ ಅಲೂಗಡ್ಡೆ ಅತ್ಯಂತ ಕೊಬ್ಬು ಹೆಚ್ಚಿಸುವ ತರಕಾರಿ. ಆದಾಗ್ಯೂ ನೀವು ಆಲೂಗಡ್ಡೆಯ ಅಭಿಮಾನಿಯಾಗಿದ್ದರೆ ನೀವು ನಿರಾಶೆಗೊಳ್ಳಬೇಕಾಗಿಲ್ಲ. ಅಲೂಗಡ್ಡೆಯನ್ನು ಬೇಯಿಸಲು ಕೆಲವು ಆರೋಗ್ಯಕರ ವಿಧಾನಗಳಿವೆ. ನಿಮಗೆ ಇಂತಹ ಕೊಬ್ಬು ಹೆಚ್ಚಿಸುವ ತರಕಾರಿಗಳನ್ನು ಬೇಯಿಸಲು ಆರೋಗ್ಯಕರ ವಿಧಾನಗಳು ತಿಳಿದಿದ್ದರೆ ನೀವು ಕಡಿಮೆ ಕ್ಯಾಲೋರಿ ಆಹಾರ ಸೇವಿಸಿ ಹೆಚ್ಚು ಕೊಬ್ಬಿನ ಪ್ರಭಾವದಿಂದ ಪಾರಾಗಬಹುದು.
ಸಿಹಿ ಆಲೂಗಡ್ಡೆ - ಗೆಣಸು - ಹೆಚ್ಚು ರೀತಿಯಲ್ಲಿ ಸಾಮಾನ್ಯ ಆಲೂಗಡ್ಡೆಗಿಂತ ಒಳ್ಳೆಯದು. ಆದ್ದರಿಂದ ಸಾಮಾನ್ಯ ಗೆಣಸನ್ನು ಆಲೂಗಡ್ಡೆಯ ಬದಲು ಬಳಸಿದರೆ ಒಂದು ರೀತಿಯಲ್ಲಿ ಖಚಿತವಾಗಿ ಒಳ್ಳೆಯದು. ನೀವು ಜಿಡ್ಡಿನ ಬದಲು ರುಚಿಕೊಡುವ ಸುವಾಸನೆಯನ್ನು ಸೇರಿಸಿ ಆಲೂಗಡ್ಡೆಯ ಸಣ್ಣ ಭಕ್ಷ್ಯಗಳನ್ನು ತಯಾರಿಸಿದರೆ ಅದು ಮತ್ತೊಂದು ಆಲೂಗಡ್ಡೆ ಬಳಸುವ ವಿಧಾನವಾಗುತ್ತದೆ. ಆಲೂಗಡ್ಡೆಯ ಸಿಪ್ಪೆಯನ್ನು ತೆಗೆಯದೇ ಬಳಸಿದರೆ ನೀವು ಆರೋಗ್ಯಕರ ಕಾರ್ಬೊಹೈಡ್ರೇಟ್ಸ್ ಇರುವ ಆಲೂಗಡ್ಡೆಗೆ ಪರಿವರ್ತಿಸುದಂತಾಗುತ್ತದೆ.
ಬೈ-ಟು ಕಾಫಿ ಹರಟೆ; ಹೆಂಗಸರು ಸಖತ್ ಫೇಮಸ್ಸು

ಎಣ್ಣೆಯ ಬಳಕೆ
ಫಾಸ್ಟ್ ಫೂಡ್ ಅಂಗಡಿಯಲ್ಲಿ ದೊರೆಯುವ ಫ್ರೆಂಚ್ ಫ್ರೈ ಅಥವ ಆಲೂಗಡ್ಡೆ ಚಿಪ್ಸ್ ಅನ್ನು ಹೆಚ್ಚಿನ ಪ್ರಮಾಣದ ಕೊಬ್ಬಿರುವ ಎಣ್ಣೆಯೊಂದಿಗೆ ಕರಿಯುವುದರಿಂದ ಅವುಗಳಲ್ಲಿ ಸಂಪೂರ್ಣವಾಗಿ ಟ್ರಾನ್ಸ್ ಕೊಬ್ಬು ತುಂಬಿರುತ್ತದೆ. ಆದರೆ ನೀವು ಎಣ್ಣೆಯೊಳಗೆ ಕರಿಯುವುದರ ಬದಲು ರಿಫ಼ೈನ್ಡ್ ಎಣ್ಣೆ ಬಳಸಿ ಕೈಯಾಡಿಸಿ ಹುರಿದರೆ ಅದರಲ್ಲಿ ಸಾಕಷ್ಟು ಕಡಿಮೆ ಕ್ಯಾಲೋರಿಗಳಿರುತ್ತದೆ.

ಬೇಯಿಸಿದ ಆಲೂಗಡ್ಡೆ
ನೀವು ಕೋಳಿ ಅಥವ ಮೀನು ಬೇಯಿಸುವಾಗ ಅದರಲ್ಲಿ ಸ್ವಲ್ಪ ಆಲೂಗಡ್ಡೆಯನ್ನು ಹಾಕಿ ಜೊತೆಯಲ್ಲಿ ಬೇಯಿಸಿ. ಬೇಯಿಸಿದ ಆಲೂಗಡ್ಡೆಯ ಮೇಲೆ ಎಣ್ಣೆ ಬಳಿಯಬೇಕಾಗಿಲ್ಲ ಅಥವ ಬೆಣ್ಣೆಯಲ್ಲಿ ಉರುಳಿಸಬೇಕಾಗಿಲ್ಲ. ಹೀಗೆ ಮಾಡಿದಾಗ ಆಲೂಗಡ್ಡೆಯಲ್ಲಿ ಆರೋಗ್ಯಕರ ಕಾರ್ಬ್ಸ್ ಇರುತ್ತದೆ.

ಬೆಳ್ಳುಳ್ಳಿ ಜೊತೆ ಹಿಸುಕಿದ (ಮ್ಯಾಶ್ ಮಾಡಿದ) ಆಲೂಗಡ್ಡೆ
ಹಿಸುಕಿದ ಆಲೂಗಡ್ಡೆಗೆ ರುಚಿ ಬರಬೇಕೆಂದು ಬೆಣ್ಣೆ ಹಾಕುವ ಬದಲು ತಾಜಾ ಬೆಳ್ಳುಳ್ಳಿ ತೊಳೆಗಳನ್ನು ಸೇರಿಸಿಕೊಂಡು ಮ್ಯಾಶ್ ಮಾಡಿರಿ. ಹಾಗೆ ಮಾಡುವುದರಿಂದ ಹೆಚ್ಚುವರಿ ಕ್ಯಾಲೋರಿಗಳನ್ನು ಸೇರಿಸದೇ ಮ್ಯಾಶ್ ಮಾಡಿದ ಆಲೂಗಡ್ಡೆ ಬಹಳ ರುಚಿಕರವಾಗಿರುತ್ತದೆ.

ಸುಟ್ಟ (ಗ್ರಿಲ್) ಆಲೂಗಡ್ಡೆ
ಸಿಪ್ಪೆಯನ್ನು ತೆಗೆಯದೆ ಆಲೂಗಡ್ಡೆಯನ್ನು ತೆರೆದ ಬೆಂಕಿಯಲ್ಲಿ ಸುಟ್ಟರೆ ಒಂದು ರುಚಿಕರವಾದ ಭಕ್ಷ್ಯವಾಗಿರುತ್ತದೆ. ಗ್ರಿಲ್ ಮಾಡುವಾಗ ಅದರಲ್ಲಿರುವ ಅಧಿಕ ಎಣ್ಣೆಯೆಲ್ಲ ಬೆಂಕಿಯಮೇಲೆ ಬಿದ್ದುಹೋಗುವುದರಿಂದ ಗ್ರಿಲ್ ಮಾಡಿದ ಆಲೂಗಡ್ಡೆ ಆರೋಗ್ಯಕರವಾಗಿಯೂ ಇರುತ್ತದೆ.

ಆಲಿವ್ ಎಣ್ಣೆಯನ್ನು ಸಿಂಪಡಿಸಿ ಬೇಯಿಸಿದ ಆಲೂಗಡ್ಡೆ
ವರ್ಜಿನ್ (ಪರಿಶುದ್ಧ) ಆಲಿವ್ ಎಣ್ಣೆಯು ಬಿಸಿಮಾಡದಿದ್ದಾಗ ಅತ್ಯಂತ ಆರೋಗ್ಯಕರವಾಗಿರುತ್ತದೆ. ಆದ್ದರಿಂದ ಬೇಯಿಸಿದ ಆಲೂಗಡ್ಡೆಯ ಮೇಲೆ ವರ್ಜಿನ್ ಆಲಿವ್ ಎಣ್ಣೆಯನ್ನು ಸಿಂಪಡಿಸಿ ಒಂದು ಆರೋಗ್ಯಕರ ತಿಂಡಿಯಂತೆ ಸೇವಿಸಿ.

ಬೇಯಿಸಿ ಹಿಸುಕಿದ ಸಿಹಿ ಆಲೂಗಡ್ಡೆ (ಗೆಣಸು)
ಸಿಹಿ ಆಲೂಗಡ್ಡೆ (ಗೆಣಸು) ಯಲ್ಲಿ ಸಾಮಾನ್ಯ ಆಲೂಗಡ್ಡೆಗಿಂತಾ ಹೆಚ್ಚು ಆರೋಗ್ಯ ಲಾಭಗಳಿವೆ. ಅದಕ್ಕಾಗಿಯೇ ಸಾಮಾನ್ಯ ಬೇಯಿಸಿ ಹಿಸುಕಿದ ಆಲೂಗಡ್ಡೆಗಿಂತಾ ಬೇಯಿಸಿ ಹಿಸುಕಿದ ಸಿಹಿ ಆಲೂಗಡ್ಡೆ ಹೆಚ್ಚು ಆರೋಗ್ಯಕರ.

ಆಲೂಗಡ್ಡೆ ಸಲಾಡ್
ತಾಜಾ ಮಸಾಲೆ ಸೊಪ್ಪು ಮತ್ತು ಬೇಯಿಸಿ ಸ್ಲೈಸ್ ಮಾಡಿದ ಆಲೂಗಡ್ಡೆ ಜೊತೆಗೆ ಇತರ ತರಕಾರಿಗಳು ಒಂದು ಉತ್ತಮ ಪೌಷ್ಟಿಕ ಸಲಾಡ್ ಆಗುತ್ತದೆ.

ಹುರಿದ ಅಲೂಗಡ್ಡೆ
ಸ್ವಲ್ಪ ಬ್ರೆಡ್ ಚೂರು (ಬ್ರೆಡ್ ಕ್ರಂಬ್ಸ್) ಮತ್ತು ರುಚಿಹರವಾದ ಮಸಾಲೆಗಳನ್ನು ಹುರಿದ ಆಲೂಗಡ್ಡೆಯ ಸಿಪ್ಪೆಯ ಜೊತೆ ಬಳಸಬಹುದು. ಆಲೂಗಡ್ಡೆಯ ಎಲ್ಲಾ ಪೋಷಕಾಂಶಗಳು ಅದರ ಸಿಪ್ಪೆಯಲ್ಲಿ ಕೇಂದ್ರೀಕೃತವಾಗಿ ಅಡಕವಾಗಿರುತ್ತದೆ ಮತ್ತು ಅದರಿಂದ ಹಸಿವು ನೀಗಿಸುವ ಗರಿಗರಿಯಾದ ತಿನಿಸನ್ನು ಸಹ ಮಾಡಬಹುದು.

ಆಲೂಗಡ್ಡೆ ಬಳಸಿದ ದೋಸೆ
ಆರೋಗ್ಯಕರವಾದ ಸಿಹಿ ಆಲೂಗಡ್ಡೆಯ ಜೊತೆ ಇತರ ಸರಿಹೊಂದುವ ತರಕಾರಿಗಳನ್ನು ಬಳಸಿ ಬ್ರೇಕ್ಫಾಸ್ಟಿಗೆ ದೋಸೆಯನ್ನು ಮಾಡಿಕೊಳ್ಳಬಹುದು. ಆದರೆ ಎಣ್ಣೆ ಅಂಶವನ್ನು ಆದಷ್ಟೂ ಕನಿಷ್ಟವಾಗಿ ಬಳಸುವುದನ್ನು ಖಚಿತಪಡಿಸಿಕೊಳ್ಳಿ.

ಸಿಹಿ ಆಲೂಗಡ್ಡೆಯ ಮೇಲೋಗರ
ನಮ್ಮ ಭಾರತದ ತರಕಾರಿ ಮೇಲೋಗರಗಳಲ್ಲಿ ಉಪಯೋಗಿಸುವ ಸಾಮಾನ್ಯ ಆಲ್ಲೂಗಡ್ಡೆಯ ಬದಲು ಸಿಹಿ ಆಲೂಗಡ್ಡೆಯನ್ನು ಬಳಸಿದರೆ ಅದೊಂದು ಆಲೂಗಡ್ಡೆಯನ್ನು ಆರೋಗ್ಯಕರವಾಗಿ ಬಳಸುವ ಖಚಿತವಾದ ವಿಧಾನವಾಗಿದೆ.

ಮುಳುಗಿಸಿ ತಯಾರಿಸಿದ ಆಲೂಗಡ್ಡೆ ತಿನಿಸನ್ನು ತಪ್ಪಿಸಿ
ಸಾಮಾನ್ಯವಾಗಿ ನಾವು ಬೆಂದ ಆಲೂಗಡ್ಡೆಯನ್ನು ಕ್ರೀಮ್ ಅಥವ ಚೀಸ್ ಗಳಲ್ಲಿ ಮುಳುಗಿಸಿ ಇಟ್ಟಿರುತ್ತೇವೆ. ಹಾಗೆ ಮಾಡುವುದಕ್ಕೆ ಬದಲು ಬೆಂದ ಅಲೂಗಡ್ಡೆಗೆ ಒಗ್ಗರಣೆ ಒಡ್ಡಿ ಬಳಸಿದರೆ ಸಾಕಷ್ಟು ಕ್ಯಾಲೋರಿಗಳ ಸೇವನೆಯನ್ನು ತಪ್ಪಿಸಬಹುದು.



Click it and Unblock the Notifications