ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸುವ 10 ಅತ್ಯುತ್ತಮ ಆಹಾರಗಳು

By Super

ಚಳಿಗಾಲದಲ್ಲಿ ಬೆಚ್ಚಗೆ ಹೊದ್ದುಕೊಂಡು ಬೆಂಕಿಯ ಶಾಖವನ್ನು ಆಸ್ವಾದಿಸುತ್ತಾ ಬಿಸಿಬಿಸಿಯಾದ ಮಸಾಲಾ ಟೀ ಹೀರುತ್ತಿದ್ದರೆ ಸ್ವರ್ಗವೇ ಧರೆಗಿಳಿದಂತಹ ಅನುಭವ. ವರ್ಷವಿಡೀ ಬಿಸಿಯ ಧಗೆಯಲ್ಲಿಯೇ ಇರುವ ನಗರಗಳ ಜನರು ವರ್ಷಕ್ಕೊಂದು ಬಾರಿಯಾದರೂ ಎತ್ತರದ ಪರ್ವತತಾಣಗಳಲ್ಲಿ ಕೆಲಕಾಲ ಕಳೆದು ಚಳಿಯ ಅನುಭವ ಅನುಭವಿಸದಿದ್ದರೆ ಏನನ್ನೋ ಕಳೆದುಕೊಂಡ ಭಾವನೆ.

ಕೆಲವೊಮ್ಮೆ ಬೆಚ್ಚಗಿನ ದಿರಿಸು ಧರಿಸಿಯೂ, ಬೆಂಕಿಯ ಶಾಖವನ್ನು ಸಾಕಷ್ಟು ಪಡೆದರೂ ದೇಹ ಶೀತ ನೆಗಡಿಯಿಂದ ಬಳಲಿ ಸುಸ್ತು, ತಲೆಸುತ್ತುವುದು ಮೊದಲಾದ ತೊಂದರೆಗಳನ್ನು ಎದುರಿಸಿದರೆ ಅದು ಚಳಿಯ ತಪ್ಪಲ್ಲ, ನಿಮ್ಮ ದೇಹದೊಳಗಿನ ಬಿಸಿ ಸಾಕಷ್ಟಿಲ್ಲದಿರುವುದೇ ಕಾರಣ. ಏಕೆಂದರೆ ಬಿಸಿರಕ್ತಪ್ರಾಣಿಗಳಾದ ನಮ್ಮ ಶರೀರ ಪ್ರತಿಕ್ಷಣ ಒಳಗಿನಿಂದ ಬೆಚ್ಚಗಿರುವುದು ಅವಶ್ಯ.

ಇದಕ್ಕಾಗಿ ಶರೀರ ಸದಾ ಕೆಲವು ಕ್ಯಾಲೋರಿಗಳನ್ನು ಸುಡುತ್ತಾ ಇರುತ್ತದೆ. ನಾವು ಸೇವಿಸುವ ಆಹಾರದಲ್ಲಿರುವ ಕ್ಯಾಲೋರಿಗಳು ಕಡಿಮೆ ಪ್ರಮಾಣದಲ್ಲಿದ್ದರೆ ಅವು ಕೆಲಕ್ಷಣಗಳಲ್ಲಿಯೇ ಉರಿದು ಖಾಲಿಯಾಗಿ ದೇಹಕ್ಕೆ ಶಾಖ ಉತ್ಪಾದಿಸಿಕೊಳ್ಳಲು ಅಥವಾ ತಕ್ಕ ಪ್ರಮಾಣದಲ್ಲಿ ಉತ್ಪಾದಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ವೈದ್ಯ ಲೋಕವನ್ನು ಅಚ್ಚರಿಗೊಳಿಸುವ ಹಳ್ಳಿ ಮದ್ದಿನ ಕಮಾಲು

ಹಾಗಾಗಿ ಚಳಿಗಾಲದಲ್ಲಿ ದೇಹ ಬೆಚ್ಚಗಿರಲು ನಮಗೆ ವಿಶೇಷ ಆಹಾರಗಳ ಅಗತ್ಯವಿದೆ. ಈ ಆಹಾರಗಳ ಮೂಲಕ ನಮ್ಮ ಕರುಳುಗಳು ಕ್ಯಾಲೋರಿಗಳನ್ನು ಒಮ್ಮೆಲೇ ನೀಡದೇ ನಿಧಾನವಾಗಿ ಬಿಡುಗಡೆ ಮಾಡುತ್ತವೆ. ಒಂದು ಮೇಣದಬತ್ತಿ ಬೆಂಕಿಗೆ ನಿಧಾನವಾಗಿ ಕರಗಿದ ಹಾಗೆ. ತನ್ಮೂಲಕ ದೇಹ ಹೆಚ್ಚು ಹೊತ್ತು ಬೆಚ್ಚರಿಗಲು ಹಾಗೂ ಆರೋಗ್ಯದಿಂದಿರಲು ಸಾಧ್ಯವಾಗುತ್ತದೆ. ವೈದ್ಯಕೀಯ ಭಾಷೆಯಲ್ಲಿ ಇದಕ್ಕೆ ಆಹಾರದ specific dynamic action ಎಂದು ಕರೆಯುತ್ತಾರೆ.

ಈ ವಿಶೇಷ ಆಹಾರಗಳಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟುಗಳಿದ್ದು ಪಚನಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ ಹಾಗೂ ಇದೇ ಕಾರಣದಿಂದ ಜೀವರಾಸಾಯನಿಕ ಕ್ರಿಯೆಯಲ್ಲಿ ಹೆಚ್ಚಳ ಕಂಡುಬರುತ್ತದೆ. ಚಳಿಗಾಲದಲ್ಲಿ ಕೆಳಗೆ ವಿವರಿಸಲಾದ ಹತ್ತು ಆಹಾರಗಳಲ್ಲಿ ಸೂಕ್ತವಾದುದನ್ನು ನಿಮ್ಮ ಆಹಾರದಲ್ಲಿ ಅಳವಡಿಸುವ ಮೂಲಕ ದೇಹವನ್ನು ಒಳಗಿನಿಂದ ಬಲಗೊಳಿಸಲು ಸಾಧ್ಯವಾಗುತ್ತದೆ. ಚಳಿಗಾಲದಲ್ಲಿ ದೇಹವನ್ನು ಹೆಚ್ಚು ಬಿಸಿಯಾಗಿಸುವ ಅಗತ್ಯವಿರುವುದರಿಂದ ಹೊಸ ಜೀವಕೋಶಗಳನ್ನು ಹೆಚ್ಚು ಹೆಚ್ಚಾಗಿ ಬೆಳೆಸುವ ಅಗತ್ಯವಿದೆ. ಈ ಆಹಾರಗಳು ಹೊಸ ಜೀವಕೋಶಗಳನ್ನು ಬೆಳೆಸುವಲ್ಲಿ ನೆರವಾಗುತ್ತವೆ.

ಲಿಂಬೆ ಜಾತಿಯ ಹಣ್ಣುಗಳು

ಲಿಂಬೆ ಜಾತಿಯ ಹಣ್ಣುಗಳು

ಲಿಂಬೆ ಜಾತಿಯ ಹಣ್ಣುಗಳು ಅಂದರೆ ಕಿತ್ತಳೆ, ಮೂಸಂಬಿ, ಚಕ್ಕೋತ, ಗಜಲಿಂಬೆ ಮೊದಲಾದವುಗಳಲ್ಲಿ ಪ್ರಮುಖವಾಗಿ ವಿಟಮಿನ್ ಸಿ. ಮತ್ತು ರೋಗಗಳಿಗೆ ಕಾರಣವಾಗುವ ವೈರಸ್ಸುಗಳಿಗೆ ಎದುರಾಗಿ ಹೋರಾಡಲು ನೆರವಾಗುವ ಫ್ಲೇವನಾಯ್ಡ್ ಎಂದ ಪೋಷಕಾಂಶಗಳಿವೆ. ಅಲ್ಲದೇ, ರಕ್ತದಲ್ಲಿನ ಕೆಟ್ಟ ಕೊಲೆಸ್ಟರಾಲ್ ಅನ್ನು ಹೊರಹಾಕಿ ದೇಹದಲ್ಲಿ ಉತ್ತಮ ಕೊಲೆಸ್ಟರಾಲ್ ಶೇಖರವಾಗುವಲ್ಲಿ ನೆರವಾಗುತ್ತವೆ. ಚಳಿಗಾಲದಲ್ಲಿ ಈ ಹಣ್ಣುಗಳ ಸೇವನೆ ದೇಹಕ್ಕೆ ಅತ್ಯುತ್ತಮವಾಗಿವೆ. ಆದರೆ ಇವುಗಳನ್ನು ತಾಜಾ ರೂಪದಲ್ಲಿ ಅಥವಾ ತಾಜಾ ಹಣ್ಣಿನಿಂದ ತೆಗೆದ ರಸವನ್ನು ಸೇವಿಸಿದರೆ ಉತ್ತಮ. ಬಾಟಲಿರೂಪದಲ್ಲಿರುವ ಅಥವಾ ಸಂಸ್ಕರಿಸಿದ ಜ್ಯೂಸ್ ಗಳು ಅಷ್ಟು ಪ್ರಯೋಜನಕಾರಿಯಲ್ಲ.

ಮೊಟ್ಟೆ ಮತ್ತು ಮಾಂಸ

ಮೊಟ್ಟೆ ಮತ್ತು ಮಾಂಸ

ನಿಮಗೆ ಚಳಿಯಾದಾಗ ಅಜ್ಜಿ ಚಿಕನ್ ಸೂಪ್ ಮಾಡಿಕೊಟ್ಟಿದ್ದುದು ನೆನಪಿದೆಯೇ? ಏಕೆಂದರೆ ಚಳಿಯಲ್ಲಿ ನಡುಗುತ್ತಾ ಬಂದಾಗ ದೇಹವನ್ನು ಒಳಗಿನಿಂದ ಬಿಸಿಮಾಡಲು ಚಿಕನ್ ಸೂಪ್ ಗಿಂತ ಇನ್ನೊಂದು ಮದ್ದಿಲ್ಲ ಎಂದು ನಮ್ಮ ಹಿರಿಯರಿಗೆ ತಿಳಿದಿತ್ತು. ಈ ಗುಟ್ಟು ಈಗ ವೈಜ್ಞಾನಿಕವಾಗಿ ಸರಿಯೆಂದು ಸಾಬೀತಾಗಿದೆ. ಕೋಳಿ ಮಾಂಸ ಒಂದು ಸುರಕ್ಷಿತವಾದ ಪ್ರೋಟೀನ್ ಆಗಿದ್ದು ಇದರಲ್ಲಿರುವ ಪೋಷಕಾಂಶಗಳು ಶೀತ ಮತ್ತು ಜ್ವರವನ್ನು ಶೀಘ್ರ ಹೋಗಲಾಡಿಸುವಲ್ಲಿ ನೆರವಾಗುತ್ತವೆ. ಮೊಟ್ಟೆ ಸಹಾ ಈ ನಿಟ್ಟಿನಲ್ಲಿ ಹಿಂದೆ ಬಿದ್ದಿಲ್ಲ. ಚಳಿಗಾಲದಲ್ಲಿ ಚಿಕನ್ ಸೂಪ್ ಮಾಡಿಕೊಳ್ಳುವಷ್ಟು ಸಮಯಾವಕಾಶವಿಲ್ಲದಿದ್ದಲ್ಲಿ ಮೊಟ್ಟೆಯನ್ನು ಬೇಯಿಸಿ ಅಥವಾ ಆಮ್ಲೆಟ್ ಮಾಡಿಕೊಂಡು ಕೊಂಚ ಕಾಳುಮೆಣಸಿನಪುಡಿಯೊಂದಿಗೆ ಸೇವಿಸುವುದರಿಂದ ತಕ್ಷಣ ಫಲಕಾಣಬಹುದು. ಚಳಿಗಾಲದಲ್ಲಿ ನಿಮ್ಮ ಆಹಾರದಲ್ಲಿ ಕೋಳಿಮಾಂಸ ಮತ್ತು ಮೊಟ್ಟೆಗಳು ಹೇರಳವಾಗಿರುವಂತೆ ನೋಡಿಕೊಳ್ಳಿ.

ಶುಂಠಿ ಮತ್ತು ಬೆಳ್ಳುಳ್ಳಿ

ಶುಂಠಿ ಮತ್ತು ಬೆಳ್ಳುಳ್ಳಿ

ಶೀತವಾದರೆ ಶುಂಠಿ ಹಾಕಿ ಬೇಯಿಸಿದ ಕಷಾಯ ಮಾಡಿಕೊಟ್ಟಿದ್ದು ನೆನಪಿದೆಯೇ? ಚಳಿಗಾಲಕ್ಕೆ ಹಸಿಶುಂಠಿ ಮತ್ತು ಬೆಳ್ಳುಳ್ಳಿ ಅತ್ಯುತ್ತಮವಾಗಿದೆ. ನಿಮ್ಮ ಆಹಾರಗಳಲ್ಲಿ ಶುಂಠಿ ಮತ್ತು ಬೆಳ್ಳುಳ್ಳಿಗಳನ್ನು ಬಳಸಲಾದ ಆಹಾರಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಿ. ಬಿಸಿಬಿಸಿಯಾದ ತಿಳಿಸಾರು (ರಸಂ), ಬಿಸಿಬಿಸಿ ಚಹಾದಲ್ಲಿ ಹಸಿಶುಂಠಿ, ಶುಂಠಿ ಮತ್ತು ಬೆಳ್ಳುಳ್ಳಿ ಬೆರೆಸಿದ ಚಟ್ನಿ, ಹಸಿಶುಂಠಿ-ಬೆಳ್ಳುಳ್ಳಿಯ ಮಿಶ್ರಣವನ್ನು ಉಪಯೋಗಿಸಿ ತಯಾರಿಸಿದ ಶ್ಯಾವಿಗೆ, ಮಾಂಸದ ಖಾದ್ಯಗಳು ಮೊದಲಾದವು ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಲು ಸಹಕರಿಸುತ್ತವೆ.

ಜೇನು

ಜೇನು

ಜೇನುತುಪ್ಪ ಸಹಾ ದೇಹದ ಬಿಸಿಯನ್ನು ಹೆಚ್ಚು ಹೊತ್ತು ಉಳಿಸಿಕೊಳ್ಳಲು ಸಹಕರಿಸುವ ಒಂದು ಅದ್ಭುತ ಆಹಾರವಾಗಿದೆ. ಶೀತ, ನೆಗಡಿ, ಕಫ ಮೊದಲಾದ ತೊಂದರೆಗಳಿಗೆ ಬಿಸಿನೀರಿನಲ್ಲಿ ಜೇನನ್ನು ಮಿಶ್ರಣಮಾಡಿ ಕುಡಿಯುವುದು ಉತ್ತಮವಾಗಿದೆ. ಚಳಿಗಾಲದಲ್ಲಿ ನಿಮ್ಮ ಆಹಾರಗಳಲ್ಲಿ ಉಪಯೋಗಿಸುವ ಸಕ್ಕರೆಯ ಬದಲಿಗೆ ಜೇನನ್ನು ಬಳಸುವುದು ಉತ್ತಮ. ಜೇನಿನ ಗುಣಮಟ್ಟವನ್ನು ಪರೀಕ್ಷಿಸಲೂ ಚಳಿಗಾಲ ಸಕಾಲವಾಗಿದೆ. ಏಕೆಂದರೆ ಸಾಮಾನ್ಯವಾದ ಚಳಿಯಲ್ಲಿ ಜೇನು ಅಪ್ಪಟವಾಗಿದ್ದರೆ ಹರಳುಗಟ್ಟುತ್ತದೆ.

ಹರಳುಗಟ್ಟದ ಜೇನು ಅಪ್ಪಟವಲ್ಲ ಎಂದು ಇದರಿಂದ ತಿಳಿಯಬಹುದು. ಹರಳುಗಟ್ಟಿದ ಜೇನನ್ನು ಹಾಗೇ ಸೇವಿಸಬಾರದು, ಏಕೆಂದರೆ ಈ ಹರಳುಗಳನ್ನು ಹೀರಲು ನಮ್ಮ ಕರುಳುಗಳು ಸೋಲುತ್ತವೆ. ಬದಲಿಗೆ ಹರಳುಗಟ್ಟಿದ ಜೇನಿನ ಬಾಟಲಿಯನ್ನು ಕೆಲವು ನಿಮಿಷಗಳವರೆಗೆ ಬಿಸಿನೀರಿನಲ್ಲಿ (ಕುದಿಯಬಾರದು) ಇಡುವ ಮೂಲಕ ಮತ್ತೆ ದ್ರವಗೊಳಿಸಬಹುದು.

ದಾಳಿಂಬೆ ಹಣ್ಣು

ದಾಳಿಂಬೆ ಹಣ್ಣು

ಸ್ವರ್ಗದ ಹಣ್ಣು ಎಂದು ಬಣ್ಣಿಸಲಾದ ಈ ಅಧ್ಬುತ ಹಣ್ಣಿನಲ್ಲಿ ಹೆಚ್ಚಿನ ಆಂಟಿ ಆಕ್ಸಿಡೆಂಟುಗಳೂ, ಕಬ್ಬಿಣ, ವಿಟಮಿನ್ ಸಿ ಮತ್ತ್ತುಪಾಲಿಫಿನಾಲ್ಸ್ ಎಂಬ ಪೋಷಕಾಂಶಗಳಿವೆ. ಚಳಿಯಿಂದ ದೇಹವನ್ನು ರಕ್ಷಿಸಿ ಶೀತ, ನೆಗಡಿ, ಜ್ವರ ಮೊದಲಾದ ತೊಂದರೆಗಳನ್ನು ದೇಹ ಎದುರಿಸಲು ಈ ಹಣ್ಣು ನೆರವಾಗುತ್ತದೆ. ರಕ್ತಸಂಚಾರ ಸುಗಮಗೊಂಡು ಧಮನಿಗಳಲ್ಲಿ ತಡೆಗಳಿದ್ದರೆ ತೊಡೆದು ಹಾಕುತ್ತದೆ. ಚಳಿಗಾಲಕ್ಕೆ ದಾಳಿಂಬೆಹಣ್ಣಿನ ಬೀಜಗಳನ್ನು ಹಸಿಯಾಗಿ ತಿನ್ನುವುದು ಅತ್ಯುತ್ತಮವಾಗಿದೆ. ಈ ಹಣ್ಣಿನ ಇನ್ನೊಂದು ವಿಶೇಷತೆ ಎಂದರೆ ಹಣ್ಣು ಚಿಕ್ಕದಿರಲಿ, ದೊಡ್ಡದಿರಲಿ, ಭಾರತದ್ದಿರಲಿ, ಈಜಿಪ್ಟ್ ನದ್ದೇ ಇರಲಿ, ಪ್ರತಿಯೊಂದು ಹಣ್ಣಿನಲ್ಲಿ ಸರಿಯಾಗಿ 840 ಬೀಜಗಳಿರುತ್ತವೆ. ದೊಡ್ಡ ಹಣ್ಣಿನಲ್ಲಿ ದೊಡ್ಡ ಬೀಜಗಳು, ಚಿಕ್ಕ ಹಣ್ಣಿನಲ್ಲಿ ಚಿಕ್ಕ ಬೀಜಗಳು, ಲೆಕ್ಕ ಮಾತ್ರ ಒಂದೇ. ಬೇಕಿದ್ದರೆ ಪರಾಮರ್ಶಿಸಿ ನೋಡಿ.

ಆಲುಗಡ್ಡೆ ಮತ್ತು ಗೆಣಸು

ಆಲುಗಡ್ಡೆ ಮತ್ತು ಗೆಣಸು

ಈ ಗಡ್ಡೆಗಳಲ್ಲಿ ಹಲವು ವಿಟಮಿನ್ ಮತ್ತು ಪ್ರೋಟೀನುಗಳಿವೆ. ಅಲ್ಲದೇ ಹಲವು ಆಂಟಿ ಆಕ್ಸಿಡೆಂಟುಗಳಿದ್ದು ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಲು ಮತ್ತು ಆರೋಗ್ಯವನ್ನು ಕಾಪಾಡಲು ನೆರವಾಗುತ್ತವೆ. ಸಾಮಾನ್ಯವಾಗಿ ಹೆಚ್ಚಿನ ಬೆಲೆಯ ಕಾರಣ ಉತ್ತಮ ಆಹಾರಗಳನ್ನು ದೂರಮಾಡುವವರಿಗೆ ಈ ಎರಡೂ ಗಡ್ಡೆಗಳು ಸುಲಭದರದಲ್ಲಿ ದೊರಕುತ್ತವೆ. ಇವುಗಳನ್ನು ಸಿಪ್ಪಿಸಹಿತ ಬೇಯಿಸಿ ಬಳಿಕ ಸಿಪ್ಪೆ ಸುಲಿದು ಇತರ ಖಾದ್ಯಗಳೊಡನೆ ಅಥವಾ ಗೆಣಸನ್ನು ಬಿಸಿಹಾಲು ಮತ್ತು ಜೇನಿನೊಡನೆ ಸೇವಿಸುವುದರಿಂದ ಉತ್ತಮ ಪರಿಣಾಮವನ್ನು ಪಡೆಯಬಹುದು.

ಮೊಸರು

ಮೊಸರು

ನಡುಗುವ ಚಳಿಯಲ್ಲಿ ತಣ್ಣನೆಯ ಮೊಸರು? ಕೊಂಚ ಆಭಾಸವೆಂಬಂತೆ ಕಂಡುಬಂದರೂ ಮೊಸರು ಚಳಿಗಾದಲ್ಲಿ ನಮ್ಮ ದೇಹಕ್ಕೆ ಅತ್ಯುತ್ತಮವಾದ ಒಂದು ಆಹಾರವಾಗಿದೆ. ಮೊಸರಿನಲ್ಲಿರುವ ಪ್ರೊಬಯಾಟಿಕ್ಸ್ (probiotics) ಎಂಬ ಬ್ಯಾಕ್ಟೀರಿಯಾಗಳು ನಮ್ಮ ಹೊಟ್ಟೆ ಮಾಡುವ ಅರ್ಧ ಕೆಲಸವನ್ನು ಈಗಾಗಲೇ ಮಾಡಿರುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ಇದರಲ್ಲಿರುವ ಪೋಷಕಾಂಶಗಳು ನಿಧಾನವಾಗಿ ಕರಗಿ ದೇಹವನ್ನು ಬೆಚ್ಚಗಿರಿಸಲು ನೆರವಾಗುತ್ತವೆ. ಮೊಸರನ್ನು ನೇರವಾಗಿಯೂ ಅಥವಾ ಇತರ ಖಾದ್ಯಗಳೊಂದಿಗೆ ಮಿಶ್ರಣ ಮಾಡಿಯೂ ಉಪಯೋಗಿಸಬಹುದು. ಒಂದು ವೇಳೆ ಮೊಸರಿನ ಸೇವನೆಯಿಂದ ಕಫ ಹೆಚ್ಚಾದರೆ ಅಂತಹವರು ಮೊಸರಿನ ಸೇವನೆಯನ್ನು ಚಳಿಗಾಲದಲ್ಲಿ ವರ್ಜಿಸಬೇಕು.

X
Desktop Bottom Promotion