Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆಫೀಸ್‌ನಲ್ಲಿ ನಿದ್ದೆ ಬರುತ್ತಿದೆಯಾ? ಹಾಗಾದರೆ ಇಲ್ಲಿದೆ ಸೂಕ್ತ ಸಲಹೆ!
ರಾತ್ರಿ ಸರಿಯಾಗಿ ನಿದ್ದೆ ಬರಲಿಲ್ಲ ಅಥವಾ ಯಾವುದೇ ಕಾರಣಕ್ಕೋ, ಪಾರ್ಟಿ ಮಾಡುತ್ತಿದ್ದರಿಂದ ನಿದ್ದೆ ಬಿಡಬೇಕಾಗಿರಬಹುದು. ಆದರೆ ನಿದ್ದೆ ಬಿಟ್ಟ ಮರುದಿನ ನಿಮಗೆ ತುಂಬಾ ಆಯಾಸ ಹಾಗೂ ನಿದ್ರೆ ಬರುವುದು ಸಹಜ. ನಿದ್ರೆ ಬರುತ್ತಿರುವಾಗ ನಿಮ್ಮ ದೇಹವನ್ನು ಎಚ್ಚರಿಕೆಯಿಂದ ಇರುವಂತೆ ಮಾಡುವುದು ತುಂಬಾ ಕಠಿಣ ಕೆಲಸ.
ಕೆಲವೊಮ್ಮೆ ಅತೀ ಅಗತ್ಯ ಕೆಲಸವನ್ನು ಮುಗಿಸಬೇಕಾಗಿರುವ ಕಾರಣ ಎಷ್ಟೇ ಸುಸ್ತಾಗಿ ನಿದ್ರೆ ಬಂದರೂ ಎಚ್ಚರವಾಗಿರಬೇಕು. ನಿದ್ರೆ ಬರುತ್ತಿರುವಾಗ ಮತ್ತು ಸುಸ್ತಾಗಿರುವಾಗ ಹೇಗೆ ಎಚ್ಚರಿಕೆಯಿಂದ ಇರಬಹುದು ಎನ್ನುವ ಬಗ್ಗೆ ಇಲ್ಲಿ ಹತ್ತು ಟಿಪ್ಸ್ ಗಳನ್ನು ನೀಡಲಾಗಿದೆ. ಇದು ನಿಮಗೆ ನೆರವಾಗುತ್ತದೆ ಎನ್ನುವ ಭರವಸೆಯಿದೆ.
ಆಫೀಸ್ ಸಮಯದಲ್ಲಿ ಕಾಡುವ ತಲೆನೋವಿಗೆ ಪರಿಹಾರ

ಸೂರ್ಯನ ನೈಸರ್ಗಿಕ ಬೆಳಕು
ಸೂರ್ಯನ ನೈಸರ್ಗಿಕ ಬೆಳಕು ಕ್ಷಿಪ್ರ ಮತ್ತು ಪರಿಣಾಮಕಾರಿಯಾಗಿ ಮೂಡ್ ನ್ನು ಹೆಚ್ಚಿಸುತ್ತದೆ. ಇದರಿಂದ ವಿಟಮಿನ್ ಡಿ ಉತ್ಪಾದನೆಯಾಗುತ್ತದೆ ಹಾಗೂ ನಿಮ್ಮ ಮೂಡ್ ಬದಲಾವಣೆ ತಡೆಯುತ್ತದೆ. ನಿದ್ರೆ ಬರುತ್ತಿರುವಾಗ ಸೂರ್ಯನ ಬೆಳಕು ನಿಮ್ಮನ್ನು ಎಚ್ಚರದಿಂದ ಇರುವಂತೆ ಮಾಡುತ್ತದೆ. ಕೋಣೆಯ ಕರ್ಟೈನ್ ತೆರೆಯಿರಿ ಮತ್ತು ಬೆಳಕು ಬರಲಿ.

ಹೆಚ್ಚು ನೀರು ಕುಡಿಯಿರಿ
ನೀವು ನಿರ್ಜಲೀಕರಣದಿಂದ ಬಳಲುತ್ತಿದ್ದರೆ ನಿಮಗೆ ಮತ್ತಷ್ಟು ಬಳಲಿದ ಭಾವನೆಯಾಗುತ್ತದೆ. ಪ್ರತೀ ದಿನ ಸಾಕಷ್ಟು ನೀರು ಕುಡಿಯುವುದು ತುಂಬಾ ಮುಖ್ಯ. ನಿದ್ರೆ ಅಥವಾ ಆಯಾಸವಾದಾಗ ಹೆಚ್ಚು ನೀರು ಕುಡಿದರೆ ಎಚ್ಚರಿಕೆಯಿಂದ ಇರಬಹುದು. ಬೇಸಿಗೆಯ ಕಾಲದಲ್ಲಿ ತಂಪಾದ ನೀರನ್ನು ಕುಡಿದರೆ ನೀವು ಬೇಗನೆ ಪುನಶ್ಚೇತನಗೊಳ್ಳಬಹುದು ಮತ್ತು ಇದು ಆಯಾಸವನ್ನು ಹೋಗಲಾಡಿಸುತ್ತದೆ.

ಸೂಕ್ತ ಆಹಾರ ತಿನ್ನಿ
ನಿಮಗೆ ನಿದ್ರೆಯ ಭಾವನೆಯಾಗುತ್ತಿದ್ದರೆ ಆಹಾರ ಕ್ರಮದ ಕಡೆ ಹೆಚ್ಚಿನ ಆದ್ಯತೆ ನೀಡಿ. ಉಪಹಾರ ತ್ಯಜಿಸಬೇಡಿ ಮತ್ತು ಮಧ್ಯಾಹ್ನದ ಊಟದಲ್ಲಿ ಕೊಬ್ಬಿನಾಂಶವಿರುವ ಆಹಾರವನ್ನು ಹೆಚ್ಚು ಬಳಸಬೇಡಿ. ಪ್ರೋಟೀನ್ ಅಧಿಕವಾಗಿರುವ ಆಹಾರಗಳನ್ನು ಸಣ್ಣ ಪ್ರಮಾಣದಲ್ಲಿ ತಿನ್ನುತ್ತಾ ಇರಿ. ಕಾಫಿ ಮತ್ತು ಎನರ್ಜಿ ಡ್ರಿಂಕ್ಸ್ ನ್ನು ಕಡೆಗಣಿಸಿ.

ನಡೆದಾಡಿ
ಸುಮ್ಮನೆ ಕುಳಿತುಕೊಂಡರೆ ನಿಮಗೆ ಎಚ್ಚರಿಕೆಯಿಂದ ಇರಲು ಸಾಧ್ಯವಿಲ್ಲ. ನಿಮಗೆ ನಿದ್ರೆ ಬರುತ್ತಿದ್ದರೆ ಆಗ ಎಲ್ಲಾ ಕೆಲಸವನ್ನು ಬಿಟ್ಟು ಒಂದು ಸುತ್ತು ನಡೆದಾಡಿ ಬನ್ನಿ. ನಿದ್ರೆ ಬರುತ್ತಿದ್ದರೆ ಮತ್ತು ತುಂಬಾ ಆಯಾಸವಾಗಿದ್ದರೆ ನಡೆದಾಡಿಕೊಂಡು ಬಂದರೆ ತುಂಬಾ ಪರಿಣಾಮಕಾರಿ. ನೀವು ಕಚೇರಿಯಲ್ಲಿದ್ದು, ಹೆಚ್ಚು ದೂರ ಹೋಗಲು ಸಾಧ್ಯವಿಲ್ಲವೆಂದಾದರೆ ಕುರ್ಚಿಯಿಂದ ಎದ್ದು ಬೇರೆ ಕಡೆ ಹೋಗಿ ಅಥವಾ ನಿಮ್ಮ ಸಹೋದ್ಯೋಗಿಯ ಬಳಿಗೆ ಹೋಗಿ.

ದೀರ್ಘವಾಗಿ ಉಸಿರಾಡಿ
ಈ ಉಸಿರಾಟದ ತಂತ್ರವು ನಿಮಗೆ ಎಚ್ಚರಿಕೆಯಿಂದ ಇರಲು ನೆರವಾಗಲಿದೆ. ಉಸಿರಾಡಲು ಆರಂಭಿಸಿ, ಮೂಗಿನ ಮೂಲಕ ಉಸಿರಾಡಿ ನಿಮ್ಮ ಹೊಟ್ಟೆಯನ್ನು ಹಿಂದಕ್ಕೆ ತೆಗೆದುಕೊಂಡು ಉಸಿರಾಡಿ. ವೇಗವಾಗಿ ಮಾಡುವುದರಿಂದ ನೀವು ಎಚ್ಚರಿಕೆಯಿಂದ ಇರಬಹುದು. ವಿರಾಮದ ಸಮಯದಲ್ಲಿ ನೀವು ಇದನ್ನು ಮಾಡಬಹುದು.

ಸಂಗೀತ ಕೇಳಿ
ಎದ್ದು ಕುಣಿದಾಡಬೇಕು ಎನ್ನುವಂತಹ ಸಂಗೀತ ಕೇಳುವುದರಿಂದ ನೀವು ಕ್ಷಿಪ್ರವಾಗಿ ಎಚ್ಚರಿಕೆಯಿಂದ ಇರಬಹುದು. ಆರಾಮವಾಗಿ ಮತ್ತು ಕ್ಲಾಸಿಕ್ ಮ್ಯೂಸಿಕ್ ಕೇಳಬೇಡಿ. ಇದರಿಂದ ನೀವು ಮತ್ತಷ್ಟು ನಿದ್ರೆಗೆ ಜಾರಬಹುದು. ನಾನು ಇದೇ ವಿಧಾನವನ್ನು ಬಳಸುವುದು ಮತ್ತು ಇದು ನಿಜವಾಗಿಯು ಕೆಲಸ ಮಾಡುತ್ತದೆ.

30 ನಿಮಿಷಗಳಿಗೊಮ್ಮೆ ಚುರುಕಾಗಿ
ಕಂಪ್ಯೂಟರ್ ಅಥವಾ ಟಿವಿ ಮುಂದೆ ದಿನವಿಡಿ ಕಳೆಯುವುದರಿಂದ ನಿಮಗೆ ತುಂಬಾ ಆಯಾಸ ಮತ್ತು ನಿದ್ರೆ ಆವರಿಸಬಹುದು. ನಿಮ್ಮ ಭಾವನೆಗಳನ್ನು ಎಚ್ಚರಿಕೆಯಿಂದಿರಿಸಲು ನೀವು ಚಟುವಟಿಕೆಯಿಂದ ಇರಬೇಕು. 30 ನಿಮಿಷಗಳಿಗೊಮ್ಮೆ ಎದ್ದು ನಿಮ್ಮ ಕಾಲುಗಳನ್ನು ಅಲುಗಾಡಿಸಿ ಆಗ ದಿನವಿಡಿ ನೀವು ಉಲ್ಲಾಸದಿಂದ ಇರಬಹುದು.

ತಾಜಾ ಗಾಳಿ
ತುಂಬಾ ನಿದ್ರೆ ಬರುತ್ತಿದ್ದರೆ ಆಗ ತಾಜಾ ಗಾಳಿಯನ್ನು ಪಡೆಯುವುದರಿಂದ ನೀವು ಹೆಚ್ಚು ಎಚ್ಚರಿಕೆಯಿಂದ ಇರಬಹುದು. ನೀವು ಕಚೇರಿಯಲ್ಲಿದ್ದರೆ ಕಿಟಕಿ ತೆರೆಯಿರಿ, ವಿರಾಮ ಅಥವಾ ಲಂಚ್ ವೇಳೆ ಹೊರಗಡೆ ಸುತ್ತಾಡಿಕೊಂಡು ಬನ್ನಿ. ನೀವು ಕಾರಿನಲ್ಲಿದ್ದರೆ ಕಿಟಕಿ ತೆರಯಿರಿ. ಆಗ ನಿಮಗೆ ತಾಜಾ ಗಾಳಿ ಬರುತ್ತದೆ.

ಸ್ನಾನ ಮಾಡಿ
ನೀವು ಮನೆಯಿಂದಲೇ ಕೆಲಸ ಮಾಡುತ್ತಿದ್ದರೆ ಮತ್ತು ಎಚ್ಚರಿಕೆಯಿಂದ ಇರಬೇಕೆಂದರೆ ಸ್ನಾನ ಮಾಡಿ. ಕಚೇರಿಯಲ್ಲಿದ್ದರೆ ಸ್ನಾನ ಮಾಡಲು ಸಾಧ್ಯವಾಗುವುದಿಲ್ಲ. ಈ ವೇಳೆ ತಂಪಾದ ನೀರಿನಿಂದ ನಿಮ್ಮ ಮುಖ ತೊಳೆಯಿರಿ ಮತ್ತು ಎಚ್ಚರಿಕೆಯಿಂದ ಇರಬಹುದು. ಇದನ್ನು ಮಾಡುವುದು ತುಂಬಾ ಕಠಿಣ. ಆದರೆ ಇದು ನಿದ್ರೆಯಿಂದ ನಿಮ್ಮನ್ನು ಕಾಪಾಡುತ್ತದೆ.

ಸ್ವಲ್ಪ ನಿದ್ರೆ ಮಾಡಿ
ನಿದ್ರೆ ಬರುತ್ತಿರುವಾಗ ಮತ್ತು ಆಯಾಸವಾಗಿರುವಾಗ ಎಚ್ಚರಿಕೆಯಿಂದ ಇರಬೇಕೆಂದರೆ ಪ್ರತಿಯೊಬ್ಬರಿಗೂ ನಿದ್ರೆ ಮಾಡಲು ಸಾಧ್ಯವಿಲ್ಲ. ಆದರೆ ಇದು ನಿಮಗೆ ನೆರವಾಗುತ್ತದೆ. ಕೇವಲ 10-15 ನಿಮಿಷ ನಿದ್ರೆ ಮಾಡಿದರೆ ಇದು ಅದ್ಭುತವನ್ನು ಮಾಡುತ್ತದೆ. ಕೆಲವು ಜನರು ನಿದ್ದೆ ಮಾಡಿದ ಬಳಿಕ ತುಂಬಾ ನಿದ್ರೆ ಬರುವಂತೆ ಕಾಣುತ್ತಾರೆ. ಇದನ್ನು ಹೋಗಲಾಡಿಸಲು ಸುಮಾರು 35 ನಿಮಿಷ ಬೇಕಾಗುತ್ತದೆ.



Click it and Unblock the Notifications
