Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸ್ತನ ಕ್ಯಾನ್ಸರ್ ಅನ್ನು ನಿಭಾಯಿಸಲು 10 ಮಾರ್ಗಗಳು
ನಿಮ್ಮ ಪ್ರೀತಿ ಪಾತ್ರರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆಂದು ನಿಮಗೆ ಗೊತ್ತಾದಲ್ಲಿ ಮುಂದೇನು ಎಂಬ ಆತಂಕ ಸಹಜವೇ. ಇದಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳೇನು ಎಂಬುದರ ಬಗೆಗೆ ನಿಮಗೆ ತಿಳಿದಿದೆಯೇ ಇದರ ಚಿಕಿತ್ಸೆ ಹೇಗೆಂಬುದರ ಬಗೆಗೆ ಮಾಹಿತಿ ಇದೆಯೇ? ನಿಮ್ಮ ಸಂಗಾತಿ ಈ ಕಾಯಿಲೆಯಿಂದ ಬಳಲುತ್ತಿದ್ದಾರೆಂದಲ್ಲಿ ಅವರಿಗೆ ಮುಕ್ತ ಪ್ರೀತಿ ನೀಡುವುದು ಅತ್ಯವಶ್ಯಕ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಶ್ವಾಸಕೋಶದ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು
ಅವರಿಗೆ ಬೆಂಬಲ ಮತ್ತು ತಿಳುವಳಿಕೆಯನ್ನು ಮಾರ್ಗದರ್ಶಿಸಬೇಕು. ಚಿಕಿತ್ಸೆಯಿಂದ ಮಾತ್ರ ಈ ರೋಗವನ್ನು ಗುಣಪಡಿಸದೆ ಪ್ರೀತಿಯ ಮಾತು ಅವರಿಗೆ ಬೇಕು. ಸಂಗಾತಿಯೊಂದಿಗೆ ರೋಗಿಯೂ ಕೂಡ ಕಂಗೆಡದೆ ಕೆಲವು ಮಹತ್ವಪೂರ್ಣ ವಿಧಾನಗಳನ್ನು ಅನುಸರಿಸಬೇಕು.ರೋಗಿಯು ಆತ್ಮವಿಶ್ವಾಸದಿಂದ ಮುನ್ನಡೆದು ಚಿಕಿತ್ಸೆಯನ್ನು ಎದುರಿಸಬೇಕು. ರೋಗಿಯು ತೆಗೆದುಕೊಳ್ಳಬೇಕಾದ ಕೆಲವು ತೀರ್ಮಾನಗಳು ಮತ್ತು ಅನುಸರಿಸಬೇಕಾದ ಸಲಹೆಗಳನ್ನು ಇಲ್ಲಿ ನೀಡುತ್ತಿದ್ದೇವೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆಯಿಲ್ ಪುಲ್ಲಿಂಗ್ ಆರೋಗ್ಯಕರ ಪ್ರಯೋಜನಗಳು

1.ನಿಮ್ಮ ಎಲ್ಲಾ ಪ್ರಶ್ನೆಗಳನ್ನು ಟಿಪ್ಪಣಿ ಮಾಡಿ:
ನಿಮ್ಮ ವೈದ್ಯರ ಎಲ್ಲಾ ಸಲಹೆಯನ್ನು ಪಡೆದುಕೊಂಡು ನಿಮ್ಮ ಎಲ್ಲಾ ಪ್ರಶ್ನೆಗಳನ್ನು ಟಿಪ್ಪಣಿ ಮಾಡಿಕೊಂಡು ವೈದ್ಯರನ್ನು ಭೇಡಿ ಮಾಡಿ. ಮಾಹಿತಿಯುಕ್ತ ಅಂಶಗಳನ್ನು ಸಂಗ್ರಹಿಸಿ. ನಿಮ್ಮ ವೈದ್ಯರೊಂದಿಗೆ ಚಿಕಿತ್ಸೆ ರೋಗಲಕ್ಷಣಗಳನ್ನು ಕುರಿತು ತಿಳಿದುಕೊಳ್ಳಿ

2.ನಿಮ್ಮ ವೈದ್ಯರನ್ನು ಆರಿಸುವಲ್ಲಿ ಸಮಯ ತೆಗೆದುಕೊಳ್ಳಿ:
ಸ್ತನ ಕ್ಯಾನ್ಸರ್ ಪರಿಣಿತ ವೈದ್ಯರು ಕ್ಯಾನ್ಸರ್ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಾರೆ ಮತ್ತು ಇತ್ತೀಚಿನ ಚಿಕಿತ್ಸಾ ವಿಧಾನಗಳನ್ನು ಅನುಸರಿಸಿ ರೋಗಿಗೆ ಆತ್ಮವಿಶ್ವಾಸವನ್ನು ಸ್ಫೂರ್ತಿಯನ್ನು ನೀಡುತ್ತಾರೆ. ಇಂತಹ ಕೇಂದ್ರಗಳು ಇತರ ವಿಶೇಷ ಸೇವೆಗಳನ್ನು ಒದಗಿಸುತ್ತವೆ ಅಂದರೆ ಫಿಸಿಕಲ್ ಥೆರಪಿ, ನ್ಯೂಟ್ರಿಶಿಯನ್ ಮತ್ತು ಸಮಾಜ ಕಾರ್ಯ.

3.ನಿಮ್ಮ ಸಂಗಾತಿಯಿಂದ ಬೆಂಬಲವನ್ನು ಪಡೆದುಕೊಳ್ಳಿ:
ನಿಮ್ಮ ವೈದ್ಯರಿಂದಲೇ ನೀವು ಸ್ತನ ಕ್ಯಾನ್ಸರ್ ರೋಗಿ ಎಂಬುದನ್ನು ತಿಳಿದೊಡನೆ ತುಂಬಾ ಕಷ್ಟವಾಗುತ್ತದೆ. ಮನೆಯವರೊಂದಿಗೆ ಈ ವಿಷಯವನ್ನೂ ಹೇಳುವುದಕ್ಕಿಂತಲೂ ನಮ್ಮಷ್ಟಕ್ಕೆ ಇದನ್ನು ಅರಗಿಸಿಕೊಳ್ಳುವುದು ಕಷ್ಟದ ವಿಷಯ. ನೀವು ಸ್ತನ ಕ್ಯಾನ್ಸರ್ ರೋಗಿ ಎಂದು ತಿಳಿದೊಡನೆ ಮನೆಯವರೊಂದಿಗೆ ಈ ವಿಷಯವನ್ನು ಹೇಗೆ ಹಂಚಿಕೊಳ್ಳುವುದು ಎಂಬ ಭಯ ನಿಮ್ಮನ್ನು ಕಾಡುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಸಂಗಾತಿ ಸಹಾಯಕ್ಕೆ ಬರಬಹುದು ಈ ರೋಗವನ್ನು ಕುರಿತಂತೆ ಅವರೊಂದಿಗೆ ಚರ್ಚಿಸಿ.

4.ಅಗತ್ಯವಿದ್ದಲ್ಲಿ ಧನ ಸಹಾಯ ಪಡೆಯಿರಿ
ನಿಮ್ಮ ಆಸ್ಪತ್ರೆ ಅಥವಾ ಚಿಕಿತ್ಸಾ ಕೇಂದ್ರಗಳು ಯಾರಾದರೂ ಸಾಮಾಜಿಕ ಕಾರ್ಯಕರ್ತರನ್ನು ಒಳಗೊಂಡಿರುತ್ತದೆ.ಇವರ ಸಹಾಯವನ್ನು ಪಡೆದುಕೊಂಡು ಸರಿಯಾದ ಚಿಕಿತ್ಸೆಯನ್ನು ಸ್ತನ ಕ್ಯಾನ್ಸರ್‌ಗಾಗಿ ನಿಮಗೆ ಪಡೆದುಕೊಳ್ಳಬಹುದು.

5.ಋತುಬಂಧ ಲಕ್ಷಣಗಳನ್ನು ಕುರಿತು ವೈದ್ಯರೊಂದಿಗೆ ಚರ್ಚಿಸಿ
ಕೀಮೋಥೆರಪಿ, ಅಂಡಾಶಯ ತೆಗೆಯುವುದು, ಹಾರ್ಮೋನ್ ಬದಲಾವಣೆಯನ್ನು ಮಾಡಿಕೊಂಡವರು ಋತುಬಂಧ ಲಕ್ಷಣಗಳನ್ನು ಅನುಭವಿಸುತ್ತಾರೆ. ಸುರಕ್ಷಿತವಾಗಿ ಈ ಸಮಸ್ಯೆಯನ್ನು ನಿಭಾಯಿಸುವುದು ಹೇಗೆ ಎಂಬುದನ್ನು ಕುರಿತು ವೈದ್ಯೊರೊಂದಿಗೆ ಚರ್ಚಿಸಿ.

6.ಆರೋಗ್ಯಕರ ಆಹಾರ ಪದ್ಧತಿಯನ್ನು ನಿರ್ಲಕ್ಷಿಸದಿರಿ
ರುಚಿ ಮತ್ತು ಗ್ರಹಿಸುವ ಶಕ್ತಿಯ ಮೇಲೆ ನಿಮ್ಮ ಕ್ಯಾನ್ಸರ್ ಚಿಕಿತ್ಸೆ ಪ್ರಭಾವ ಬೀರಬಹುದು. ಹಸಿಯಾದ ತರಕಾರಿಗಳನ್ನು ಬೇಯಿಸಿ ತಿನ್ನುವುದು ನಿಮಗೆ ಹೆಚ್ಚು ಅಪ್ಯಾಯಮಾನವಾಗಬಹುದು. ಸೂಪ್, ವೆಜಿಟೇಬಲ್ ಸ್ಟ್ಯೂ ಹಸಿ ಸಲಾಡ್‌ಗಿಂತ ಉತ್ತಮವಾಗಿರುತ್ತದೆ. ದಿನಕ್ಕೆ ಮೂರು ಬಾರಿ ತಿನ್ನುವುದಕ್ಕಿಂತ ಆಗಾಗ್ಗೆ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸುವುದು ನಿಮಗೆ ಹೆಚ್ಚು ಶಕ್ತಿಯನ್ನು ಮತ್ತು ಕಡಿಮೆ ನೌಸಿಯಾವನ್ನು ನೀಡುತ್ತದೆ. ಈ ಸಂದರ್ಭದಲ್ಲಿ ಅತಿಯಾದ ತೂಕವನ್ನು ಗಳಿಸಿಕೊಳ್ಳದಿರಿ.

7.ದುಗ್ಧರಸ ಅಡಚಣೆಯನ್ನು ನಿವಾರಿಸಲು ಕ್ರಮ ಕೈಗೊಳ್ಳಿ
ದುಗ್ಧರಸದ ಅಡಚಣೆಯು ಕ್ಯಾನ್ಸರ್ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿರುವಾಗ ಉಂಟಾಗುವ ಪರಿಣಾಮವಾಗಿದೆ. ತೋಳು, ಕೈ ಅಥವಾ ಎದೆಯ ಗೋಡೆಯ ಮೃದುವಾದ ಅಂಗಾಂಶಗಳು ಊದಿಕೊಳ್ಳುತ್ತವೆ. ಇದು ಜೀವ ವಿನಾಶಕವೇನೂ ಅಲ್ಲ ಆದರೆ ಚಿಕಿತ್ಸೆಯನ್ನು ಪಡೆಯಲೇ ಬೇಕು.

8.ವ್ಯಾಯಾಮವನ್ನು ಮಾಡಿ
ಚಿಕಿತ್ಸೆಯಿಂದ ಉಂಟಾಗುವ ದೈಹಿಕ ಮತ್ತು ಮಾನಸಿಕ ಪರಿಣಾಮಗಳನ್ನು ನಿಯಂತ್ರಿಸಲು ನಿಯಮಿತ ನಡಿಗೆ ಸಹಾಯ ಮಾಡುತ್ತದೆ. ಸ್ತನ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದುಕೊಳ್ಳುವವರಿಗೆ ಮೂಳೆಗಳ ಸ್ವಾಸ್ಥ್ಯಕ್ಕೆ ಹೆಚ್ಚಿನ ಗಮನ ನೀಡಬೇಕು

9.ನಿಮ್ಮ ಮೂಳೆಗಳ ಬಗ್ಗೆ ಕಾಳಜಿ ಇರಲಿ
ನಿಮ್ಮ ಜೀವನದುದ್ದಕ್ಕೂ ಮೂಳೆಗಳ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾಗಿದೆ. ನೀವು ಒಬ್ಬ ಮಹಿಳೆಯಾಗಿದ್ದು ಸ್ತನ ಕ್ಯಾನ್ಸರ್ ಚಿಕಿತ್ಸೆಯನ್ನು ಪಡೆಯುತ್ತಿದ್ದರೆ ಮೂಳೆಗಳ ಆರೋಗ್ಯ ತುಂಬಾ ಮುಖ್ಯವಾಗುತ್ತದೆ. ಕೆಲವೊಂದು ಸ್ತನ ಕ್ಯಾನ್ಸರ್ ಚಿಕಿತ್ಸೆಗಳು ಮೂಳೆಗಳ ನಷ್ಟಕ್ಕೆ ಕಾರಣವಾಗಬಹುದು ಎಂದು ಸಂಶೋಧನೆಗಳು ಹೇಳುತ್ತವೆ.

10.ಚಮತ್ಕಾರೀ ಕಾರ್ಯ ಮತ್ತು ಚಿಕಿತ್ಸೆ
ಕ್ಯಾನ್ಸರ್ ಚಿಕಿತ್ಸೆಯ ನಡುವೆಯೂ ಕೆಲವರಿಗೆ ಕೆಲಸ ಮಾಡುವ ಶಕ್ತಿ ಇರುತ್ತದೆ. ಆದರೂ ತಮ್ಮ ಕೆಲಸಗಳನ್ನು ಕಡಿಮೆ ಮಾಡಿಕೊಂಡು ವಿಶ್ರಾಂತಿ ತೆಗೆದುಕೊಳ್ಳುವುದು ಅತ್ಯವಶ್ಯಕ. ಕೆಲಸದಿಂದ ವಿಶ್ರಾಂತಿ ತೆಗೆದುಕೊಂಡು ನಿಮ್ಮ ಚಿಕಿತ್ಸೆಯ ನಂತರ ಪುನಃ ಕೆಲಸಕ್ಕೆ ಬಂದಾಗ ನಿಮ್ಮ ಗುರುತನ್ನು ನಿರ್ವಹಿಸಲು ವಿಶ್ರಾಂತಿಯು ಮಾಡಿರುವ ಸಹಾಯ ನಿಮ್ಮ ಗಮನಕ್ಕೆ ಬರಬಹುದು ಮತ್ತು ನಿಮ್ಮ ಆತ್ಮಾಭಿಮಾನ ಕೂಡ ಹೆಚ್ಚುತ್ತದೆ.



Click it and Unblock the Notifications